ಅಕ್ರಮವಾಗಿ ಜಿಂಕೆಗಳನ್ನು ಕೊಂದು ಅಡುಗೆ ಮಾಡುತ್ತಿದ್ದ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, ಜ. 08. ಜಿಂಕೆಗಳನ್ನು ಅಕ್ರಮವಾಗಿ ಕೊಂದು ಅದರ ಅಡಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ವಿದ್ಯಾಸಾಗರ್, ರವೀಂದ್ರ, ಯಶೋಧರ, ಪ್ರಸನ್ನ, ಸುಜಿತ್ ಹಾಗೂ ಕುಶಾಲಪ್ಪ ಎಂದು ಗುರುತಿಸಲಾಗಿದೆ. ಆರೋಪಿಗಳು ಬಂಡೀಪುರ ಹುಲಿಧಾಮದ ಅರಣ್ಯ ಪ್ರದೇಶದಿಂದ ಬಂದೂಕಿನಿಂದ ಮೂರು ಜಿಂಕೆ ಹಾಗೂ ಒಂದು ಮೊಲವನ್ನು ಅಕ್ರಮವಾಗಿ ಕೊಂದು ತಂದು ಅಡುಗೆ ಮಾಡುತ್ತಿದ್ದ ಸಂದರ್ಭ ಇವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ಹಾಗೂ […]

ಅಕ್ರಮವಾಗಿ ಜಿಂಕೆಗಳನ್ನು ಕೊಂದು ಅಡುಗೆ ಮಾಡುತ್ತಿದ್ದ ಆರು ಮಂದಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉ.ಪ್ರದೇಶದಲ್ಲಿ ಭೀಕರ ಅತ್ಯಾಚಾರ ➤ ಅತ್ಯಾಚಾರವೆಸಗಿ ಟೆರೇಸ್ ನಿಂದ ತಳ್ಳಿ ಹಾಕಿದ ವಿಕೃತ ಕಾಮಿ..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಜ. 08. ಉತ್ತರಪ್ರದೇಶದಲ್ಲಿ ಮಹಿಳೆಯ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಮೊರದಾಬಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಪಾಪಿಯೋರ್ವ ಟೆರೇಸ್ ನಿಂದ ಆಕೆಯನ್ನು ತಳ್ಳಿ ಹಾಕಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಯುವತಿಯ ತಂದೆ ದೂರು ನೀಡಿದ್ದು, ಟೆರೇಸ್ ಮೂಲಕ ಮಗಳ ಕೋಣೆಗೆ ನುಗ್ಗಿ ಗನ್ ಹಿಡಿದು ಹೆದರಿಸಿ ಅತ್ಯಾಚಾರ ಎಸಗಿದ್ದು, ಈಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ಟೆರೇಸ್ ನಿಂದ ತಳ್ಳಿ ಹಾಕಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಯುವತಿಯ

ಉ.ಪ್ರದೇಶದಲ್ಲಿ ಭೀಕರ ಅತ್ಯಾಚಾರ ➤ ಅತ್ಯಾಚಾರವೆಸಗಿ ಟೆರೇಸ್ ನಿಂದ ತಳ್ಳಿ ಹಾಕಿದ ವಿಕೃತ ಕಾಮಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕಡಲತೀರದಲ್ಲಿ ಮದ್ಯ ಸೇವಿಸುತ್ತಿದ್ದ70 ಕ್ಕೂ ಅಧಿಕ ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ಕಡಲತೀರಗಳಲ್ಲಿ  ತೊಂದರೆ ಮಾಡುತ್ತಿದ್ದ 70 ಕ್ಕೂ ಅಧಿಕ ಮಂದಿಯನ್ನು ನಗರ ಪೊಲೀಸರು  ವಶಕ್ಕೆ ಪಡೆದಿದ್ದಾರೆ. ನಾಲ್ಕು ಪ್ರಮುಖ ಕಡಲತೀರಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅನೇಕ ಜನರು ಮದ್ಯ ಸೇವಿಸಿ ಉಪಟಳ ಮಾಡುತ್ತಿರುವುದನ್ನು ಸ್ಥಳೀಯರ ದೂರುಗಳ ಆಧಾರದ ಮೇಲೆ ಸಬ್ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 70 ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಐದಾರು ಜನರನ್ನು ಹೊರತುಪಡಿಸಿ, ಉಳಿದೆಲ್ಲರೂ ಮದ್ಯ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.

ಮಂಗಳೂರು: ಕಡಲತೀರದಲ್ಲಿ ಮದ್ಯ ಸೇವಿಸುತ್ತಿದ್ದ70 ಕ್ಕೂ ಅಧಿಕ ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಲ್ಮಂಜ: ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆ ➤ಹಕ್ಕಿ ಜ್ವರ ಶಂಕೆ..!

(ನ್ಯೂಸ್ ಕಡಬ) newskadaba.com ಕಲ್ಮಂಜ, ಜ. 08. ಇಲ್ಲಿನ ನಿಡಿಗಲ್ ಎಂಬಲ್ಲಿ ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮೃತದೇಹಗಳು ಸಂಪೂರ್ಣವಾಗಿ ಕೊಳೆತ ಕಾರಣ ಪರೀಕ್ಷೆಗೆ ಕಳಿಸಲು ಅಸಾಧ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಮಂಜ: ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆ ➤ಹಕ್ಕಿ ಜ್ವರ ಶಂಕೆ..! Read More »

ಕರಾವಳಿ, ಕರ್ನಾಟಕ

ಬಂಟ್ವಾಳಕ್ಕೆ ನಿಯೋಜನೆಗೊಂಡಿದ್ದ ತಹಶೀಲ್ದಾರ್ ಅನಿತಾಲಕ್ಷ್ಮಿ ಮರಳಿ ಸುಳ್ಯಕ್ಕೆ…!

(ನ್ಯೂಸ್ ಕಡಬ) newskadaba.com ಸುಳ್ಯ, ಜ. 08. ಚುನಾವಣಾ ಸಂದರ್ಭ ಬಂಟ್ವಾಳಕ್ಕೆ ನಿಯೋಜಿಸಲಾಗಿದ್ದ ಸುಳ್ಯ ತಹಶೀಲ್ದಾರ್ ಆಗಿದ್ದ ಅನಿತಾಲಕ್ಷ್ಮಿಯವರು ಮತ್ತೆ ಸುಳ್ಯಕ್ಕೆ ತಹಶೀಲ್ದಾರ್ ಆಗಿ ಬಂದಿದ್ದು, ನೂತನ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ.

ಬಂಟ್ವಾಳಕ್ಕೆ ನಿಯೋಜನೆಗೊಂಡಿದ್ದ ತಹಶೀಲ್ದಾರ್ ಅನಿತಾಲಕ್ಷ್ಮಿ ಮರಳಿ ಸುಳ್ಯಕ್ಕೆ…! Read More »

ಕರಾವಳಿ, ಕರ್ನಾಟಕ

ಪುತ್ತೂರು: ರಿಕ್ಷಾ ಹಾಗೂ ಕಾರು ನಡುವೆ ಅಪಘಾತ ➤ ರಿಕ್ಷಾ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 08. ರಿಕ್ಷಾ ಹಾಗೂ ಕಾರು ನಡುವೆ ಅಪಘಾತ ಸಂಬವಿಸಿದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ನಿಧಾನವಾಗಿ ಚಲಿಸಿದ ಕಾರಣ ಹಿಂದಿನಿಂದ ಬಂದ ರಿಕ್ಷಾ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಗಾಯಗೊಂಡು ರಿಕ್ಷಾದ ಎದುರು ಹಾಗೂ ಕಾರಿನ ಹಿಂಬಾಗಕ್ಕೆ ಹಾನಿಯಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ರಿಕ್ಷಾ ಹಾಗೂ ಕಾರು ನಡುವೆ ಅಪಘಾತ ➤ ರಿಕ್ಷಾ ಚಾಲಕನಿಗೆ ಗಾಯ Read More »

ಕರಾವಳಿ

ಕೋಳಿಜ್ವರ ರೋಗದ ನಿಯಂತ್ರಣದ ಬಗ್ಗೆ ಎಚ್ಚರ ವಹಿಸಿ ➤ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ಕೋಳಿಶೀತ ಜ್ವರದ ರೋಗದ ಬಗ್ಗೆ ಸಾರ್ವಾಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ರೋಗ ಹರಡದಂತೆ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಸೂಚಿಸಿದರು. ಅವರು ಮಂಗಳವಾರ ತಮ್ಮ ಕಛೇರಿ ಸಭಾಂಗಣದಲ್ಲಿ ಕೋಳಿಜ್ವರ ರೋಗದ ಹರಡುವಿಕೆ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಕದ ರಾಜ್ಯವಾದ ಕೇರಳದ ಕೊಟ್ಟಾಯಂ ಮತ್ತು ಅಲಾಪುಳ್ಳ ಜಿಲ್ಲೆಯಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ ಹಕ್ಕಿಜ್ವರ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈ ರೋಗ ಹರಡುವ ಸಾಧ್ಯತೆ

ಕೋಳಿಜ್ವರ ರೋಗದ ನಿಯಂತ್ರಣದ ಬಗ್ಗೆ ಎಚ್ಚರ ವಹಿಸಿ ➤ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ Read More »

ಕರಾವಳಿ, ಕರ್ನಾಟಕ

ಹಳ್ಳಕ್ಕೆ ಬಿದ್ದ ಟೆಂಪೋ ಟ್ರಾವೆಲ್ಲರ್ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 08. ಟೆಂಪೊವೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ನಡೆದಿದೆ. ಮೃತಪಟ್ಟವರನ್ನು ಸುಬ್ರಹ್ಮಣ್ಯ, ಅಮರಾವತಿ ಹಾಗೂ ಕೋಕಿಲಾ ಎಂದು ಗುರುತಿಸಲಾಗಿದೆ. ಟಿಟಿ ವಾಹನವು ತಮಿಳುನಾಡಿನ ತಿರುಪೂರ್ ನಿಂದ ಮೈಸೂರಿಗೆ ತೆರಳುತ್ತಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ.

ಹಳ್ಳಕ್ಕೆ ಬಿದ್ದ ಟೆಂಪೋ ಟ್ರಾವೆಲ್ಲರ್ ➤ ಮೂವರ ದುರ್ಮರಣ Read More »

ಕರಾವಳಿ, ಕರ್ನಾಟಕ

ಸುಳ್ಯ: ಭಾರೀ ಮಳೆಗೆ ರಸ್ತೆ ಕುಸಿತ

(ನ್ಯೂಸ್ ಕಡಬ) newskadaba.com ಕಲ್ಲಪಳ್ಳಿ, ಜ. 08. ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಸುಳ್ಯ ಪಾಣತ್ತೂರು ರಸ್ತೆಯ ಬದಿಯು ಕುಸಿದಿದ್ದು ಪಾಡಿಕೊಚ್ಚಿ ಕ್ರಾಸ್ ಬಳಿ ಸೇತುವೆಯು ಉದ್ದಕ್ಕೆ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ರಸ್ತೆಯ ಕೆಳಭಾಗದಲ್ಲಿ ಪ್ರಪಾತ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನ ಸಂಚರಿಸುತ್ತಿರುವುದರಿಂದ ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುಳ್ಯ: ಭಾರೀ ಮಳೆಗೆ ರಸ್ತೆ ಕುಸಿತ Read More »

ಕರಾವಳಿ, ಕರ್ನಾಟಕ

ಫೋನ್ ಪೇ ಗ್ರಾಹಕರಿಗೆ ಬಂಪರ್ ಆಫರ್ ➤ ಅದೇನೆಂಬ ಕುತೂಹಲವೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಜ.08. ಡಿಜಿಟಲ್ ತಂತ್ರಜ್ಞಾನದೊಂದಿಗೆ ಹಣವನ್ನು ವರ್ಗಾಯಿಸಬಲ್ಲ ಸೌಲಭ್ಯವನ್ನು ಕಲ್ಪಿಸಿರುವ ಫೋನ್ ಪೇ ಸಂಸ್ಥೆಯು ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ಹೊರತಂದಿದೆ. ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇದ್ದು, 18 ವರ್ಷದಿಂದ 50 ವರ್ಷ ವಯಸ್ಸಿನವರಿಗೆ ಫೋನ್ ಪೇ ಕಂಪೆನಿಯು ಲೈಫ್ ಐಸಿಐಸಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ವಿಶೇಷ ಇನ್ಸೂರೆನ್ಸ್ ಯೋಜನೆಯನ್ನು ಕಲ್ಪಿಸಿದ್ದು, 1 ಲಕ್ಷದಿಂದ 20 ಲಕ್ಷದವರೆಗೆ ವಿಮೆ ಪಾಲಿಸಿ ಪಡೆಯಬಹುದಾಗಿದೆ. ಕೇವಲ 149 ರೂಪಾಯಿ ಪಾವತಿಸುವ ಮೂಲಕ

ಫೋನ್ ಪೇ ಗ್ರಾಹಕರಿಗೆ ಬಂಪರ್ ಆಫರ್ ➤ ಅದೇನೆಂಬ ಕುತೂಹಲವೇ..? Read More »

ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top