ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 01. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಂದ ಕೆಳಕಂಡ ಯೋಜನೆಗಳಿಗೆ 2026-27ನೇ ಸಾಲಿನಲ್ಲಿ ಸಾಲ ಸಹಾಯಧನ ಸೌಲಭ್ಯ ಪಡೆಯಲು https://kmdconline.karnataka.gov.in ಆನ್‍ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 17. ಅರ್ಜಿದಾರರು ತಹಶೀಲ್ದಾರರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ […]

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಆಟೋ ಪ್ರಯಾಣಿಕರ ಗಮನಕ್ಕೆ: ದಕ್ಷಿಣ ಕನ್ನಡದಲ್ಲಿ ಬದಲಾಯಿತೇ ಆಟೋ ಭಾಡಿಗೆ? ಕನಿಷ್ಠ ದರ 40 ರೂ. ನಿಗದಿ

(ನ್ಯೂಸ್‌ ಕಡಬ) newskadaba.com,  ಸೆ.01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ ಪ್ರಯಾಣಕ್ಕೆ ಕನಿಷ್ಟ 40 ರೂ. ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಟ ಮೂವರು ಪ್ರಯಾಣಿಕರು ಪ್ರಯಾಣಿಸಬಹುದುದಾಗಿದೆ. ಪರಿಷ್ಕೃತ ದರದ ಪ್ರಕಾರ , ಮೊದಲ 1.5 ಕಿ.ಮೀ ಬಳಿಕ ಪ್ರತಿ  ಕಿ.ಮೀಗೆ 20 ರೂ ದರ ಪಾವತಿಸಬೇಕು. ಈ ದರವೂ ಗರಿಷ್ಟ ಮೂವರು ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಆಟೋದಲ್ಲಿ ಮೊದಲ 10 ನಿಮಿಷ ಕಾಯುವಿಕೆ ಉಚಿತವಾಗಿರುತ್ತದೆ. ಬಳಿಕ ಪ್ರತಿ ೧೫

ಆಟೋ ಪ್ರಯಾಣಿಕರ ಗಮನಕ್ಕೆ: ದಕ್ಷಿಣ ಕನ್ನಡದಲ್ಲಿ ಬದಲಾಯಿತೇ ಆಟೋ ಭಾಡಿಗೆ? ಕನಿಷ್ಠ ದರ 40 ರೂ. ನಿಗದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ. 4, 7 ರಂದು ವಿಶೇಷ ಸೇವೆಗಳು ರದ್ದು: ದರ್ಶನಕ್ಕೆ ಅವಕಾಶ

(ನ್ಯೂಸ್‌ ಕಡಬ) newskadaba.com,  ಸೆ.01: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಿ-ಏಕಾದಶಿ ವ್ರತಗಳ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ 4 ಮತ್ತು 7 ರಂದು ಆಶ್ಲೇಷಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕದಂತಹ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ. ವಿಶೇಷ ಸೇವೆಗಳು ಲಭ್ಯವಿಲ್ಲದಿದ್ದರೂ, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀದೇವರ ದರ್ಶನ ಪಡೆಯಲು ಹಾಗೂ ದಿನನಿತ್ಯದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ಅಡಚಣೆ ಇರುವುದಿಲ್ಲ.ಮಹಾಪೂಜೆ, ಶೇಷಸೇವೆ, ಅಭಿಷೇಕ ಮತ್ತು ಅರ್ಚನೆ ಸೇರಿದಂತೆ ನಿತ್ಯದ ಎಲ್ಲಾ ಪೂಜಾ ವಿಧಿವಿಧಾನಗಳು ತಡೆರಹಿತವಾಗಿ ನಡೆಯಲಿವೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ. 4, 7 ರಂದು ವಿಶೇಷ ಸೇವೆಗಳು ರದ್ದು: ದರ್ಶನಕ್ಕೆ ಅವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 01. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಮೌಲಾನ ಆಜಾದ್ ಮಾದರಿ ಶಾಲೆಗೆ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ ಮಾಸಿಕ ರೂ.14000 ನೀಡಲಾಗುತ್ತದೆ.   ಹೆಚ್ಚಿನ ಮಾಹಿತಿಗೆ ಶಾಲೆಯ ಮುಖ್ಯ ಶಿಕ್ಷಕ (ದೂರವಾಣಿ ಸಂ: 7022125839) ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ ₹9.50 ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ಸೆ.01: ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ರೂ. 9.50 ಹೆಚ್ಚಿಸಲಾಗಿದೆ.ದರ ಏರಿಕೆಯಿಂದಾಗಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬೇಕರಿ ಮಾಲೀಕರಿಗೆ ನಿರ್ವಹಣಾ ವೆಚ್ಚ ಹೆಚ್ಚಾಗುವ ಆತಂಕ ಎದುರಾಗಿದೆ. 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಕೆಜಿ ಹಾಗೂ 10 ಕೆಜಿ ಸಿಲಿಂಡರ್ ದರಗಳೂ ಸ್ಥಿರವಾಗಿವೆ.5 ಕೆಜಿ ನಾನ್-ಡೊಮೆಸ್ಟಿಕ್ (ವಾಣಿಜ್ಯ) ಸಿಲಿಂಡರ್ ದರ ರೂ. 762 ರಿಂದ ರೂ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ ₹9.50 ಹೆಚ್ಚಳ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಿಸ್ ಮಾಡ್ದೆ ಓದಿ: ಸೆಪ್ಟೆಂಬರ್ 1ರಿಂದ ಇಂಟರ್ನ್ಯಾಷನಲ್ ಫ್ಲೈಟ್, ITR ಮತ್ತು LPG ನಿಯಮಗಳಲ್ಲಿ ಬಿಗ್ ಚೇಂಜ್!

(ನ್ಯೂಸ್‌ ಕಡಬ) newskadaba.com,  ಆ.31: ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವವರು 2026-27ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.ಸೆಪ್ಟೆಂಬರ್ 1ರಿಂದ ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕರು ವಲಸೆ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗೆ ಸ್ಟಾಂಪ್ ಹಾಕಿಸುವುದು ಅಗತ್ಯವಿಲ್ಲ. ಮೊಬೈಲ್‌ನಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ತೋರಿಸಬಹುದು. ಎಲ್​​ಪಿಜಿ ಗ್ರಾಹಕರು ಆಗಸ್ಟ್ 31ರೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಸಬ್ಸಿಡಿ ಮತ್ತು ನಿರಂತರ ಸೇವೆ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ.₹3 ಕೋಟಿ ಅಥವಾ ಅದಕ್ಕಿಂತ

ಮಿಸ್ ಮಾಡ್ದೆ ಓದಿ: ಸೆಪ್ಟೆಂಬರ್ 1ರಿಂದ ಇಂಟರ್ನ್ಯಾಷನಲ್ ಫ್ಲೈಟ್, ITR ಮತ್ತು LPG ನಿಯಮಗಳಲ್ಲಿ ಬಿಗ್ ಚೇಂಜ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನ್ನಭಾಗ್ಯ ಯೋಜನೆ: ಆಗಸ್ಟ್ ತಿಂಗಳು ರಾಜ್ಯ ಸರ್ಕಾರದ ಉಚಿತ ಅಕ್ಕಿ ಇಲ್ಲ

(ನ್ಯೂಸ್‌ ಕಡಬ) newskadaba.com,  ಆ.31: ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ ಅಕ್ಕಿ ವಿತರಣೆಗೆ ಹಿನ್ನಡೆಯಾಗಿದೆ. ಈ ತಿಂಗಳು ರಾಜ್ಯ ಸರ್ಕಾರದ ಪಾಲಿನ ಉಚಿತ ಅಕ್ಕಿ ಸಿಗುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಪಾಲಿನ 4 ಕೆಜಿ ಅಕ್ಕಿ ಮತ್ತು 6 ಕೆಜಿ ರಾಗಿಯನ್ನು ಮಾತ್ರ ಪಡಿತರದಾರರಿಗೆ ವಿತರಿಸಲಾಗುತ್ತಿದೆ. ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಪೂರ್ಣ 10 ಕೆಜಿ ಉಚಿತ ಅಕ್ಕಿ ವಿತರಣೆ ನಿಯಮಿತವಾಗಿ ಮರುಆರಂಭಗೊಳ್ಳಲಿದೆ ಎಂದು ರೇಷನ್ ಅಂಗಡಿ ಮಾಲೀಕರು ತಿಳಿಸಿದ್ದಾರೆ.   ಆಹಾರ

ಅನ್ನಭಾಗ್ಯ ಯೋಜನೆ: ಆಗಸ್ಟ್ ತಿಂಗಳು ರಾಜ್ಯ ಸರ್ಕಾರದ ಉಚಿತ ಅಕ್ಕಿ ಇಲ್ಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏಕರೂಪದ IST ಜಾರಿ: 180 ದಿನಗಳಲ್ಲಿ ದೇಶಾದ್ಯಂತ ಒಂದೇ ‘ಭಾರತೀಯ ಪ್ರಮಾಣಿತ ಸಮಯ’ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಆ.31: ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026’ ಅಧಿಸೂಚನೆ ಹೊರಡಿಸಿದ್ದು, 180 ದಿನಗಳ ಒಳಗೆ ದೇಶಾದ್ಯಂತ ಏಕರೂಪದ ‘ಭಾರತೀಯ ಪ್ರಮಾಣಿತ ಸಮಯ ಅನುಷ್ಠಾನಗೊಳ್ಳಲಿದೆ. ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ತಗ್ಗಿಸಿ, ಭಾರತದ ಸ್ವದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆಯಾದ NavIC ಹಾಗೂ ಅನುಮೋದಿತ ಸಮಯ ಮೂಲಗಳನ್ನು ಬಳಸಿಕೊಂಡು ನಿಖರ ಸಮಯ ಪ್ರಸಾರ ಮಾಡಲಾಗುತ್ತದೆಬ್ಯಾಂಕಿಂಗ್, ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿಮಾನಯಾನ, ವಿದ್ಯುತ್ ಶಕ್ತಿ ವ್ಯವಸ್ಥೆ ಮತ್ತು

ಏಕರೂಪದ IST ಜಾರಿ: 180 ದಿನಗಳಲ್ಲಿ ದೇಶಾದ್ಯಂತ ಒಂದೇ ‘ಭಾರತೀಯ ಪ್ರಮಾಣಿತ ಸಮಯ’ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ರೋಬೋಟಿಕ್ ಕಲಿಕೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಆ. 31. ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್(CBE) ಹಾಗೂ STEM ರೋಬೋಟಿಕ್ಸ್ ಇದರ ನೇತೃತ್ವದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ, ಕಡಬದಲ್ಲಿ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ ರೋಬೋಟಿಕ್ ಎಂಬ ಹೊಸ ಕಲಿಕಾ ಮಾದರಿಯನ್ನು ಸೇರಿಸಲಾಗಿದೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಅದರ ವ್ಯಾಪ್ತಿಯನ್ನು ಪರಿಗಣಿಸಿ ಸಲುವಾಗಿ ಹೊಸ ಕಲಿಕಾ ಮಾದರಿಯನ್ನು ರೋಬೋಟಿಕ್ ಮುಖಾಂತರ ನೀಡಲಾಗಿದೆ. ನವಯುಗದ ತಂತ್ರಜ್ಞಾನವನ್ನು ಮಕ್ಕಳಿಗೆ ಕಲಿಸುವ ಸಲುವಾಗಿ ರೋಬೋಟಿಕ್ಸ್ ಹಾಗೂ ಎಐ ಎಂಬ ನವೀನ ಮಾದರಿಯು

ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ರೋಬೋಟಿಕ್ ಕಲಿಕೆ ಉದ್ಘಾಟನೆ Read More »

ಕರಾವಳಿ

ಚೆಸ್ ಪಂದ್ಯಾಟ ಕಡಬ ಸೈಂಟ್ ಆನ್ಸ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಆ. 31. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ  17ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಾತ್ವಿಕ್ ರೈ ಹಾಗೂ 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ರೈ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ವಂದನೀಯ  ಫಾ. ಪೌಲ್ ಪ್ರಕಾಶ್ ಡಿಸೋಜ ಹಾಗೂ ಪ್ರಾಂಶುಪಾಲರಾದ ವಂದನೀಯ ಫಾ.ಸುನಿಲ್ ಪ್ರವೀಣ್ ಪಿಂಟೋ ಅವರು ಅಭಿನಂದನೆಗಳನ್ನು

ಚೆಸ್ ಪಂದ್ಯಾಟ ಕಡಬ ಸೈಂಟ್ ಆನ್ಸ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್
Scroll to Top