ಕಾರಿನಲ್ಲಿ ದಂಪತಿಯ ನಿಗೂಢ ಸಾವು: ಘಟನಾ ಸ್ಥಳದಲ್ಲಿ ಪಿಸ್ತೂಲ್, ರಕ್ತಸಿಕ್ತ ಕೊಡಲಿ ಪತ್ತೆ; ಪೊಲೀಸರ ತನಿಖೆ ತೀವ್ರ
(ನ್ಯೂಸ್ ಕಡಬ) newskadaba.com, ಜೂ.26 ಮಧ್ಯಪ್ರದೇಶದ ಅಶೋಕನಗರದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ದಂಪತಿಯ ಮೃತದೇಹಗಳು ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ರಿತಿಕ್ ಸೋನಿ ಮತ್ತು ಮುಸ್ಕಾನ್ ಎಂದು ಗುರುತಿಸಲಾಗಿದೆ. ಕಾರಿನ ಚಾಲಕನ ಸೀಟಿನಲ್ಲಿದ್ದ ರಿತಿಕ್ ಶವದ ತಲೆಯಲ್ಲಿ ಗುಂಡೇಟು ಹಾಗೂ ಮುಖದ ಮೇಲೆ ಸುಟ್ಟ ಗಾಯಗಳಿದ್ದರೆ, ಪಕ್ಕದ ಸೀಟಿನಲ್ಲಿದ್ದ ಮುಸ್ಕಾನ್ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಬುಧವಾರ ಜಿಮ್‌ಗೆ ಹೋದ ಮುಸ್ಕಾನ್ ನಾಪತ್ತೆಯಾಗಿದ್ದಳು. ರಿತಿಕ್ 15 ದಿನಗಳ ಹಿಂದಷ್ಟೇ ಇಂದೋರ್‌ನಿಂದ ಮರಳಿದ್ದ. ಇವರಿಬ್ಬರೂ ಹಿಂದೆ ಇಂದೋರ್‌ನ ಖಾಸಗಿ […]








