ಕರ್ನಾಟಕ

ತಾಯಂದಿರ ಮರಣ ಪ್ರಮಾಣ ಇಳಿಕೆಗೆ ‘Mission Zero’ ಪ್ರಾರಂಭ; ರಾಜ್ಯ ಸರ್ಕಾರ

(ನ್ಯೂಸ್‌ ಕಡಬ) newskadaba.com,  ನ.08: ರಾಜ್ಯದಲ್ಲಿ ತಾಯಂದಿರ ಮರಣವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಮಿಷನ್ ಝೀರೋ’ನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದರು. ವಿಕಾಸಸೌಧಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ತಾಯಂದಿರ ಮರಣ ಅನುಪಾತ (MMR) ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದ್ದರೂ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಂತಹ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯವು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದರು. […]

ತಾಯಂದಿರ ಮರಣ ಪ್ರಮಾಣ ಇಳಿಕೆಗೆ ‘Mission Zero’ ಪ್ರಾರಂಭ; ರಾಜ್ಯ ಸರ್ಕಾರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೆಡಿಎಸ್ ಪಕ್ಷದ ವಿವಿಧ ಸಮಿತಿಗಳಿಗೆ ನೇಮಕಾತಿ

(ನ್ಯೂಸ್‌ ಕಡಬ) newskadaba.com,  ನ.11  ಬೆಂಗಳೂರು: ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಆದೇಶ ಹೊರಡಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಪ್ರಮುಖರ ಸಮಿತಿ (ಕೋರ್ ಕಮಿಟಿ) ರಚಿಸಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಮಾಜಿ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರು ಕೋರ್ ಕಮಿಟಿ ನೂತನ ಅಧ್ಯಕ್ಷರಾಗಿದ್ದಾರೆ. ಶಿಸ್ತುಪಾಲನಾ ಸಮಿತಿ ಅಧ್ಯಕರಾಗಿ

ಜೆಡಿಎಸ್ ಪಕ್ಷದ ವಿವಿಧ ಸಮಿತಿಗಳಿಗೆ ನೇಮಕಾತಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಇಂದಿನ ಹವಾಮಾನ ಇಲಾಖೆ ವರದಿ

(ನ್ಯೂಸ್‌ ಕಡಬ) newskadaba.com,  ನ.11  ಬೆಂಗಳೂರು: ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ​ ಇರುತ್ತದೆಂದು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿಯ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಒಣ ಹವೆಯಿರಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗುವ ಸಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ದಕ್ಷಿಣ ಒಳನಾಡು ಪ್ರದೇಶದ

ಇಂದಿನ ಹವಾಮಾನ ಇಲಾಖೆ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದಲ್ಲಿ ಕ್ರಿಮಿನಲ್ಗಳು, ಭಯೋತ್ಪಾದಕರಿಗೆ ರಾಜಾಶ್ರಯ- ಸಿ.ಟಿ.ರವಿ

(ನ್ಯೂಸ್‌ ಕಡಬ) newskadaba.com,  ನ.08: ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ ದೊರಕುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೆಸಾರ್ಟ್‍ಗೆ ಹೋಗಬೇಕಾದ ಅವಶ್ಯಕತೆ ಇಲ್ಲ; ಜೈಲಿಗೆ ಹೋದರೆ ಸಾಕು. ನಿಮಗೆ ಗಾಂಜಾ, ಡ್ರಿಂಕ್ಸ್ (ದಾರೂ) ಸಿಗುತ್ತದೆ. ಬ್ಲೂಫಿಲಂ ನೋಡಬೇಕಾದರೆ ಅದೂ ಸಿಗುತ್ತದೆ. ಮೊಬೈಲ್‍ನಲ್ಲಿ ಮಾತನಾಡಲೂ ವ್ಯವಸ್ಥೆ ಇದೆ. ಇವರಿಗೆ ನಾಚಿಕೆ ಆಗಬೇಕಲ್ಲವೇ ಎಂದು ಆಕ್ಷೇಪಿಸಿದರು. ಭಯೋತ್ಪಾದಕನ ಕೈಗೆ ಮೊಬೈಲ್

ಕರ್ನಾಟಕದಲ್ಲಿ ಕ್ರಿಮಿನಲ್ಗಳು, ಭಯೋತ್ಪಾದಕರಿಗೆ ರಾಜಾಶ್ರಯ- ಸಿ.ಟಿ.ರವಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅತೀ ಶೀಘ್ರದಲ್ಲೇ ಕರ್ನಾಟಕದಲ್ಲಿ ಬರಲಿದೆ AI ದೂರು ವ್ಯವಸ್ಥೆ

(ನ್ಯೂಸ್‌ ಕಡಬ) newskadaba.com,  ನ.10 ಬೆಂಗಳೂರು:  ನೀರು ಸರಬರಾಜು, ವಿದ್ಯುತ್ ವ್ಯತ್ಯಯ, ಹದಗೆಟ್ಟ ರಸ್ತೆಗಳು ಅಥವಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಮಸ್ಯೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ದೂರು ಸಲ್ಲಿಸುವುದು ಸುಲಭವಾಗಲಿದೆ. ಕರ್ನಾಟಕ ಇ-ಗವರ್ನೆನ್ಸ್ ಕೇಂದ್ರವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ವ್ಯವಸ್ಥೆ ಡಿಸೆಂಬರ್‌ನಿಂದ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ. 2021 ರಿಂದ ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS) ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ವೆಬ್‌ಸೈಟ್ ಬಳಸಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಈ ನೂತನ

ಅತೀ ಶೀಘ್ರದಲ್ಲೇ ಕರ್ನಾಟಕದಲ್ಲಿ ಬರಲಿದೆ AI ದೂರು ವ್ಯವಸ್ಥೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಡಮಂಗಲ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಮನವಿ

(ನ್ಯೂಸ್‌ ಕಡಬ) newskadaba.com,  ನ.10 ಎಡಮಂಗಲ : ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಅವರು ಇಂದು ಎಡಮಂಗಲದಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಜೀವೇಂದ್ರ ಎಡಮಂಗಲ ಅವರು ಎಡಮಂಗಲ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸೌಲಭ್ಯ ನೀಡುವಂತೆ ಸಂಸದರನ್ನು ಒತ್ತಾಯಿಸಲು ಶಾಸಕರಿಗೆ ಮನವಿ ಸಲ್ಲಿಸಿದರು. ಎಡಮಂಗಲ ಪ್ರದೇಶದ ಜನತೆಗೆ ರೈಲು ಪ್ರಯಾಣದ ಅನುಕೂಲತೆ ಹೆಚ್ಚಿಸಲು ಈ ನಿಲುಗಡೆ ಅತ್ಯಂತ ಅಗತ್ಯ ಎಂದು ಜೀವೇಂದ್ರ ಅಭಿಪ್ರಾಯಪಟ್ಟರು. ಸ್ಥಳೀಯರು ಈ ಮನವಿಗೆ ಬೆಂಬಲ

ಎಡಮಂಗಲ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಮನವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಸೇವೆ ಸ್ಥಗಿತ

(ನ್ಯೂಸ್‌ ಕಡಬ) newskadaba.com,  ನ.08: ಸೋಮವಾರದಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ತೆರಳುವ ಎಲ್ಲಾ ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕೇರಳ ಐಷಾರಾಮಿ ಬಸ್ ಮಾಲೀಕರ ಸಂಘ ಪ್ರಕಟಿಸಿದೆ. ಸೋಮವಾರ ಸಂಜೆ 6 ಗಂಟೆಯಿಂದ ಟೂರಿಸ್ಟ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಐಷಾರಾಮಿ ಬಸ್ ಮಾಲೀಕರ ಸಂಘ, ಕೇರಳ ರಾಜ್ಯ ಸಮಿತಿ ತಿಳಿಸಿದೆ. ಎರಡೂ ರಾಜ್ಯಗಳು ಕಾನೂನುಬಾಹಿರ ರಾಜ್ಯದ ತೆರಿಗೆಗಳನ್ನು (Tax) ವಿಧಿಸುತ್ತಿದೆ. ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ ಪ್ರವಾಸಿ ಪರವಾನಗಿ (AITP) ಬಸ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ ನಂತರ

ಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಸೇವೆ ಸ್ಥಗಿತ Read More »

ಕರ್ನಾಟಕ

ಸುಳ್ಯ : ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ಪಂದ್ಯಾಟ

(ನ್ಯೂಸ್‌ ಕಡಬ) newskadaba.com,  ನ.10 ಸುಳ್ಯ: ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್, ಹಾಗೂ ಸೀನಿಯರ್ ವಿಭಾಗದ ಪುರುಷ ಮತ್ತು ಮಹಿಳೆಯರ ವೇಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ೨೦೨೫ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಸುಳ್ಯದ ಜೂನಿಯಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದೆ.ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು ಇವರ ಮೂಲಕ ಸುಳ್ಯದ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಇದರ ಸಂಘಟನಾ ಸಮಿತಿಯ ಸಹಯೋಗದಲ್ಲಿ

ಸುಳ್ಯ : ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ಪಂದ್ಯಾಟ Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಳೆದ ಒಂದೂವರೆ ದಶಕದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿತ

(ನ್ಯೂಸ್‌ ಕಡಬ) newskadaba.com,  ನ.10 ಬೆಂಗಳೂರು : ಉಚಿತ ಪ್ರವೇಶ, ಪ್ರತೀ ವರ್ಷ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ರಾಜ್ಯ ಸರ್ಕಾರ ನೀಡುತ್ತಿರುವ ಹಲವು ಯೋಜನೆಗಳ ನಡುವೆಯೂ ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಳೆದ ಒಂದೂವರೆ ದಶಕದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿದಿದೆ. 2010-11ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಪ್ರವೇಶ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಸುಮಾರು 55 ಲಕ್ಷದಷ್ಟಿತ್ತು. ಆದರೆ, ಇದು 2025-26ನೇ

ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಳೆದ ಒಂದೂವರೆ ದಶಕದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದು

(ನ್ಯೂಸ್‌ ಕಡಬ) newskadaba.com,  ನ.10  ಬೆಂಗಳೂರು: ‘ಆಪರೇಷನ್‌ ಬಿಪಿಎಲ್‌’ ಎಂಬ ಹೆಸರಿನಡಿ ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಸಹಸ್ರಾರು ಮಂದಿ ಬಡವರು ಪಡಿತರಕ್ಕಿಂತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲಾಗದೆ ತೊಂದರೆಗೊಳಗಾಗಿದ್ದಾರೆ.ಮಾನದಂಡ ಉಲ್ಲಂಘಿಸಿ ಅನರ್ಹರು ಪಡೆದಿದ್ದ ಸುಮಾರು 4.09 ಲಕ್ಷಕ್ಕೂ ಅಕ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್‌ ಆಗಿ ಪರಿವರ್ತಿಸಲಾಗಿದೆ. ಈ ಮೂಲಕ ಲಕ್ಷಾಂತರ ಸದಸ್ಯರ ಹೆಸರು ಡಿಲಿಟ್‌ ಮಾಡಲಾಗಿದೆ. ಇದು ಸರಕಾರಕ್ಕೆ ವರದಾನವಾದರೆ, ಗ್ರಾಹಕರಿಗೆ ಸಂಕಷ್ಟವಾಗಿದೆ.ಸರಕಾರದ ನಾನಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿರುವ

ರಾಜ್ಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top