ಕರ್ನಾಟಕ

ಶಿರಾಡಿ: ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಾರೆಂಬ ಆರೋಪ ► ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆಂದ ಚಾಲಕ ► ಡಿಸಿಗಲ್ಲ, ನಿಮ್ಮಪ್ಪಂಗೆ ಹೇಳೆಂದ ಪೊಲೀಸಪ್ಪ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.01. ಶಿರಾಡಿ ಘಾಟ್ ನಲ್ಲಿ ಹಣ ಪಡೆದು ವಾಹನಗಳನ್ನು ಬಿಡುವುದರ ಬಗ್ಗೆ ಡಿಸಿ ಗೆ ದೂರು ನೀಡುತ್ತೇನೆ ಎಂದು ಪೊಲೀಸರಲ್ಲಿ ಹೇಳಿದ ಟ್ರಕ್ ಚಾಲಕರೊಬ್ಬರಲ್ಲಿ ಪೊಲೀಸ್ ಸಿಬ್ಬಂದಿಯೋರ್ವ ಡಿಸಿಗಲ್ಲ… ನಿಮ್ಮಪ್ಪನಿಗೆ ಹೇಳು ಎಂದು ಉದ್ದಟತನದಿಂದ ವರ್ತಿಸಿದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಶಿರಾಡಿಘಾಟ್ ರಸ್ತೆ ಬಂದ್​ ಆಗಿರುವುದರಿಂದ ಹಲವು ಟ್ರಕ್ ಚಾಲಕರು ಅನ್ನ ನೀರಿಲ್ಲದೇ ಟ್ರಕ್​ಗಳ ಕೆಳಗೆ ಪ್ಲಾಸ್ಟಿಕ್ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ. ಹೀಗಿರುವಾಗ ಪೊಲೀಸರು ಹಣ ಪಡೆದು ಕೆಲವು ವಾಹನಗಳನ್ನ […]

ಶಿರಾಡಿ: ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಾರೆಂಬ ಆರೋಪ ► ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆಂದ ಚಾಲಕ ► ಡಿಸಿಗಲ್ಲ, ನಿಮ್ಮಪ್ಪಂಗೆ ಹೇಳೆಂದ ಪೊಲೀಸಪ್ಪ Read More »

ಕರ್ನಾಟಕ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ 

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.01. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನ. ಆನ್ ಲೈನ್ ಮೂಲಕ www.ssp.karnataka.gov.in ಅರ್ಜಿ ಸಲ್ಲಿಸಬಹುದಾಗಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹವಿರುತ್ತಾರೆ. ಕೇಂದ್ರ ಪುರಸ್ಕೃತ ವಿದ್ಯಾರ್ಥಿವೇತನ ದರಗಳು: 1 ರಿಂದ 10 ತರಗತಿವರೆಗೆ ರೂ. 1500/-, ರಾಜ್ಯ ಪುರಸ್ಕೃತ ವಿದ್ಯಾರ್ಥಿವೇತನ ದರಗಳು: 1 ರಿಂದ 5 ನೇ ತರಗತಿವರೆಗೆ ರೂ. 750/-,

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ  Read More »

ಕರ್ನಾಟಕ

ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದ ಮತ್ತು ಮಳೆ ಕಡಿಮೆಯಾಗದ ಹಿನ್ನೆಲೆ ► ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಸೆ.07 ರ ವರೆಗೆ ನಿಷೇಧ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ.01. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಆಗಮನ ಹಾಗೂ ವಾಸ್ತವ್ಯ‌ ನಿಷೇಧವನ್ನು ಸೆಪ್ಟೆಂಬರ್ 07 ರವರೆಗೆ ವಿಸ್ತರಿಸಿ‌ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಪ್ರವಾಸಿಗರು ಬಂದು ವಾಸ್ತವ್ಯ‌ ಮಾಡುವಂತಿಲ್ಲ ಎಂದು ಆಗಸ್ಟ್ 31 ರವರೆಗೆ ನಿಷೇಧ ಹೇರಲಾಗಿತ್ತು. ಇದೀಗ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ ಹಾಗೂ ಮಳೆ ಕಡಿಮೆಯಾಗದ ಕಾರಣ ಸೆಪ್ಟೆಂಬರ್

ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದ ಮತ್ತು ಮಳೆ ಕಡಿಮೆಯಾಗದ ಹಿನ್ನೆಲೆ ► ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಸೆ.07 ರ ವರೆಗೆ ನಿಷೇಧ ಮುಂದುವರಿಕೆ Read More »

ಕರ್ನಾಟಕ

ನೆರೆ ಬಂದ‌ ನಾಡಲ್ಲಿ ಶ್ರಮದಾನದ ನೆರವು ನೀಡಿದ ಕಳಾರದ ಯುವಕರು

(ನ್ಯೂಸ್ ಕಡಬ) newskadaba.com ಕಡಬ, ಆ.28. ತೀವ್ರ ನೆರೆಯಿಂದಾಗಿ ಕೊಚ್ಚಿ ಹೋದ ಕೊಡಗಿನ ಮದೆನಾಡು ಪ್ರದೇಶದಲ್ಲಿ ಕಳಾರದ ಯುವಕರ ತಂಡವೊಂದು ಸೇವೆಗೈಯುವುದರ ಮೂಲಕ ಮಾನವೀಯ ಕಾರ್ಯವನ್ನು ಮಾಡಿದೆ. ತೀವ್ರವಾಗಿ ಸುರಿದ ಮಳೆ ಮತ್ತು ಗುಡ್ಡ ಹಾಗು ನೆಲ ಕುಸಿತದ ಕಾರಣದಿಂದಾಗಿ ಹಲವಾರು ಪ್ರದೇಶದಲ್ಲಿ ಅಪಾರವಾದ ನಾಶ ನಷ್ಟವಾಗಿ ಜನತೆ ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೆಲವರು ಮನೆ ಆಸ್ತಿ ಕೃಷಿ ಮುಂತಾದವುಗಳನ್ನು ಕಳೆದುಕೊಂಡು ಆಧಾರವಿಲ್ಲದೆ ರೋಧಿಸುತ್ತಿದ್ದಾರೆ. ಇದೀಗ ಕೆಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಅಲ್ಲಿನ ಜನರ ಸಂಕಷ್ಟಗಳು

ನೆರೆ ಬಂದ‌ ನಾಡಲ್ಲಿ ಶ್ರಮದಾನದ ನೆರವು ನೀಡಿದ ಕಳಾರದ ಯುವಕರು Read More »

ಕರ್ನಾಟಕ

ಕಡಬ ತಾಲೂಕು ಉದ್ಘಾಟನಾ ಪ್ರಕ್ರಿಯೆಯ ಹಿನ್ನೆಲೆ ► ಭೂಮಿ ಕೇಂದ್ರದಲ್ಲಿ ಸೆ.03 ರ ವರೆಗೆ ಪಹಣಿ ಪತ್ರ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.28. ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿರುವ ಕಾರಣ ಸುಳ್ಯ ಹಾಗೂ ಪುತ್ತೂರಿನ ಕೆಲವು ಗ್ರಾಮಗಳನ್ನು ಕಡಬ ಭೂಮಿ ಕೇಂದ್ರಕ್ಕೆ ಸೇರ್ಪಡೆ ಗೊಳಿಸಲಿರುವುದರಿಂದ ಸಾಫ್ಟ್‌ವೇರ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಆಗಸ್ಟ್ 28 ರಿಂದ ಸೆಪ್ಟೆಂಬರ್ 03 ರ ವರೆಗೆ ಕಡಬ ಭೂಮಿ ಕೇಂದ್ರದಲ್ಲಿ ಪಹಣಿ ಪತ್ರ ದೊರೆಯುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಕಡಬ ತಾಲೂಕು ತಹಶೀಲ್ದಾರರಾದ ಜಾನ್ ಪ್ರಕಾಶ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬ ತಾಲೂಕು ಉದ್ಘಾಟನಾ ಪ್ರಕ್ರಿಯೆಯ ಹಿನ್ನೆಲೆ ► ಭೂಮಿ ಕೇಂದ್ರದಲ್ಲಿ ಸೆ.03 ರ ವರೆಗೆ ಪಹಣಿ ಪತ್ರ ನಿಲುಗಡೆ Read More »

ಕರ್ನಾಟಕ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು ► ಯಾಕೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.27. ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮಾದಕ ವಸ್ತು ಗಾಂಜಾ ಸೇವನೆ ಕುರಿತ ಪ್ರಚೋದನೆ ನೀಡುವ ಹಾಡು, ಸಾಹಿತ್ಯ ರಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. 2015 ರ ಜುಲೈನಲ್ಲಿ ‘ಅಂತ್ಯ’ ಹೆಸರಿನ ವಿಡಿಯೋವೊಂದನ್ನು ಟ್ಯೂಬ್‌ನಲ್ಲಿ ಹಾಕಲಾಗಿದ್ದು, ಇದುವರೆಗೂ ಈ ಹಾಡನ್ನು 90 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಹಾಡಿನಿಂದ ಪ್ರಚೋದನೆಗೆ ಒಳಗಾಗಿ ಯುವ ಸಮೂಹ ಮಾದಕ ವಸ್ತುವಾದ ಗಾಂಜಾ ಸೇವನೆಗೆ ಒಳಗಾಗುವ ಸಾಧ್ಯತೆ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು ► ಯಾಕೆಂದು ಗೊತ್ತೇ…? Read More »

ಕರ್ನಾಟಕ

►► Big Shocking News ಕೊಚ್ಚಿಹೋದ ಕೊಡಗಿನಲ್ಲಿ ಭೂಮಿಯಡಿಯಿಂದ ನೀರು ಹರಿಯುವ ಸದ್ದು..!! ► ಭಯಾನಕ ಘಟನೆ ಮಾಸುವ ಮುನ್ನವೇ ಪರಿಸರದ ಜನತೆ ಸುಸ್ತೋ ಸುಸ್ತು..!!

(ನ್ಯೂಸ್ ಕಡಬ) newskadaba.com ಸುಳ್ಯ, ಆ.27. ತೀವ್ರ ಮಳೆಯಿಂದಾಗಿ ಕೊಡಗು ಜಿಲ್ಲೆಯ ವಿವಿಧೆಡೆ ಕೊಚ್ಚಿಹೋಗಿ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ಮಾಸುವ ಮುನ್ನವೇ ಇದೀಗ ಭೂಮಿಯ ಒಳಗಿಂದ ನೀರು ಹರಿಯುವ ಶಬ್ದ ಕೇಳಿ ಬಂದಿದ್ದು ಮಡಿಕೇರಿ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ತಾಲೂಕಿನ ಕರಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆತ್ತುಕಾಯ ಸಮೀಪದ ಕುಂಡತ್ತಿಕಾನ ನಿವಾಸಿ ಕೇಶವನಾಯ್ಕ್ ಎಂಬವರ ಮನೆಯ ಹಿಂಭಾಗದಲ್ಲಿ ಭೂಮಿಯ ಒಳಗಿನಿಂದ ನೀರು ಹರಿಯುವ ಶಬ್ದವು ಭಾನುವಾರ ರಾತ್ರಿಯಿಂದ ಕೇಳಿ ಬರುತ್ತಿದೆ. ಇದರಿಂದಾಗಿ ಸ್ಥಳೀಯರು

►► Big Shocking News ಕೊಚ್ಚಿಹೋದ ಕೊಡಗಿನಲ್ಲಿ ಭೂಮಿಯಡಿಯಿಂದ ನೀರು ಹರಿಯುವ ಸದ್ದು..!! ► ಭಯಾನಕ ಘಟನೆ ಮಾಸುವ ಮುನ್ನವೇ ಪರಿಸರದ ಜನತೆ ಸುಸ್ತೋ ಸುಸ್ತು..!! Read More »

ಕರ್ನಾಟಕ

ನಾಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆ ► ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.24. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಆ.25 ಶನಿವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆ.28 ರವರೆಗೆ ಭಾರೀ ಮಳೆಯಾಗಲಿದ್ದು, ಬೆಳಗಾವಿ, ಬೀದರ್‌, ಗುಲ್ಬರ್ಗಾ, ಸೇರಿದಂತೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಹಲವೆಡೆ ಈಗಾಗಲೇ ಸುರಿದಿರುವ

ನಾಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆ ► ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ Read More »

ಕರ್ನಾಟಕ

ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ► ದೇಣಿಗೆ ನೀಡುವಾಗ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.21. ಕೊಡಗಿನ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲೆಯ ವಿವಿಧೆಡೆ ನಕಲಿ ಅಕೌಂಟ್‌ಗಳ ಬಗ್ಗೆ ದೂರು ದಾಖಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ವಿವಿಧ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದು, ಸಾರ್ವಜನಿಕರು ಯಾವುದೇ ಖಾಸಗಿ ವ್ಯಕ್ತಿಗಳಿಗೆ ನಗದು ರೂಪದಲ್ಲಿ ದೇಣಿಗೆ ನೀಡಬೇಡಿ ಎಂದಿರುವ ಅವರು ಹಣ ನೀಡುವುದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಹಣ ವರ್ಗಾಯಿಸುವಂತೆ

ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ► ದೇಣಿಗೆ ನೀಡುವಾಗ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ Read More »

ಕರ್ನಾಟಕ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.17. ತೀವ್ರ ಮಳೆಯಿಂದಾಗಿ ತತ್ತರಿಸಿರುವ ಕರಾವಳಿಗೆ ರಾಜ್ಯ ರಾಜಧಾನಿಗೆ ಸಂಪರ್ಕಕ್ಕಾಗಿ ಇದ್ದ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಕುಸಿತಗೊಂಡು ಸಂಪರ್ಕ ಕಡಿತಗೊಂಡಿರುವುದರ ನಡುವೆ ಇದೀಗ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆಯು ಕುಸಿತದ ಭೀತಿಯಲ್ಲಿದೆ. ಚಾರ್ಮಾಡಿ ಘಾಟ್ ನ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸನ್ನಿವೇಶ ನಿರ್ಮಾಣವಾಗಿದ್ದು, ಇಲ್ಲಿ ಸಂಪೂರ್ಣ ಕುಸಿತವುಂಟಾದರೆ ಚಾರ್ಮಾಡಿ ಘಾಟ್ ರಸ್ತೆಯೂ ಹಲವಾರು ದಿನಗಳ ಕಾಲ ಬಂದ್ ಆಗುವ ಭೀತಿ ಎದುರಾಗಿದೆ. ಶಿರಾಡಿ ಮತ್ತು ಸಂಪಾಜೆ

ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ Read More »

ಕರ್ನಾಟಕ
Scroll to Top