ಕರ್ನಾಟಕ

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ► ಶ್ರೀ ಧರ್ಮಪಾಲನಾಥ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ – ವೈಭವದ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.16. ಒಕ್ಕಲಿಗ ಗೌಡ ಸೇವಾ ಸಂಘ ಕಡಬ ವಲಯ, ಯುವ ಒಕ್ಕಲಿಗ ಗೌಡ ಸಂಘ ಇದರ ಆಶ್ರಯದಲ್ಲಿ ಸಂಘದ ನೂತನ ಸಮಿತಿಯ ಪದಗ್ರಹಣ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭವು ಕಡಬ ಒಕ್ಕಲಿಗ ಗೌಡ ಸಮಾಜ ಮಂದಿರದಲ್ಲಿ ಭಾನುವಾರದಂದು ಬಹಳ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಕಡಬದ ಪಂಜ ಕ್ರಾಸ್ ರಸ್ತೆಯ ಬಳಿಯಲ್ಲಿ ಪೂರ್ಣ ಕುಂಭ ಸ್ವಾಗತ ನೀಡಿ ಬಳಿಕ […]

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ► ಶ್ರೀ ಧರ್ಮಪಾಲನಾಥ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ – ವೈಭವದ ಮೆರವಣಿಗೆ Read More »

ಕರ್ನಾಟಕ

ದುರಸ್ತಿಗೊಂಡ ಬಿಸಿಲೆ ಘಾಟ್ ರಸ್ತೆ – ವಾಹನ ಸಂಚಾರಕ್ಕೆ ಮುಕ್ತ ► ಸುಬ್ರಹ್ಮಣ್ಯದಿಂದ ಬಿಸಿಲೆ‌ ಮೂಲಕ ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.15. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಸಂಪರ್ಕ ಕಡಿತಗೊಂಡಿದ್ದ ಸುಬ್ರಹ್ಮಣ್ಯ – ಬಿಸಿಲೆ ರಸ್ತೆಯು ಶುಕ್ರವಾರದಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸಂಚಾರ ಆರಂಭಗೊಂಡಿದೆ. ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿ ಜನಸಂಪರ್ಕ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಒಂದೆಡೆ ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಗಳು ಕೂಡಾ ಗುಡ್ಡ ಕುಸಿದಿದ್ದರಿಂದ ಚಾರ್ಮಾಡಿ ಘಾಟ್ ರಸ್ತೆ ಮಾತ್ರ ಸಂಚಾರಕ್ಕೆ ಅನಿವಾರ್ಯವಾಗಿತ್ತು. ಈ‌ ನಡುವೆ ಬಿಸಿಲೆ ರಸ್ತೆಯ

ದುರಸ್ತಿಗೊಂಡ ಬಿಸಿಲೆ ಘಾಟ್ ರಸ್ತೆ – ವಾಹನ ಸಂಚಾರಕ್ಕೆ ಮುಕ್ತ ► ಸುಬ್ರಹ್ಮಣ್ಯದಿಂದ ಬಿಸಿಲೆ‌ ಮೂಲಕ ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭ Read More »

ಕರ್ನಾಟಕ

ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ನಿಷೇಧ ► ಮೂರು ದಿನಗಳ ಹಿಂದಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದ್ದ ಸಂಪಾಜೆ ಘಾಟ್ ರಸ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.15. ಪ್ರಾಕೃತಿಕ ವಿಕೋಪದಿಂದಾಗಿ ಕುಸಿದಿದ್ದರಿಂದಾಗಿ ಬಂದಾಗಿದ್ದ ಸಂಪಾಜೆ ಘಾಟ್ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿ‌ ಕೊಟ್ಟಿದ್ದರಾದರೂ, ಶನಿವಾರದಿಂದ ಮತ್ತೆ ಸಂಚಾರ ನಿಷೇಧಿಸಲಾಗಿದೆ. ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ನಡುವೆ ರಸ್ತೆ ದುರಸ್ತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಮುಂದಿನ ಆದೇಶದವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿ ಕೊಡಗು ಜಿಲ್ಲಾಧಿಕಾರಿ ಅದೇಶಿಸಿದ್ದಾರೆ. ರಸ್ತೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಲಿದ್ದಾರೆ. ಬಳಿಕ

ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ನಿಷೇಧ ► ಮೂರು ದಿನಗಳ ಹಿಂದಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದ್ದ ಸಂಪಾಜೆ ಘಾಟ್ ರಸ್ತೆ Read More »

ಕರ್ನಾಟಕ

ಕಡಬ: ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ಕಳೆದ ಮಾರ್ಚ್ ತಿಂಗಳಲ್ಲಿ ನಾಪತ್ತೆಯಾಗಿದ್ದ ಯುವತಿಯನ್ನು ಆಕೆಯ ಪ್ರಿಯಕರನೊಂದಿಗೆ ಕಡಬ ಪೊಲೀಸರು ಪತ್ತೆ ಹಚ್ಚಿದ್ದಾರೆ. 2018 ಮಾರ್ಚ್ ತಿಂಗಳಿನಲ್ಲಿ ಠಾಣಾ ವ್ಯಾಪ್ತಿಯ ಕುಂತೂರು ಗ್ರಾಮದ ಗುತ್ತುಪಾಲ್ ನಿವಾಸಿ ನಂದಿನಿ(22) ನಾಪತ್ತೆಯಾಗಿದ್ದರು. ಅದೇ ಸಮಯದಲ್ಲಿ ಆಕೆಯ ಸಂಬಂಧಿಕ ಅದೇ ಊರಿನ ನಾಗೇಶ ಎಂಬಾತನೂ ನಾಪತ್ತೆಯಾಗಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು, ಇವರನ್ನು ಕಡಬ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಚಂದ್ರಿಕಾ ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಉಪ್ಪುಂದದಲ್ಲಿ ಬುಧವಾರದಂದು ಪತ್ತೆ ಹಚ್ಚಿ

ಕಡಬ: ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಪತ್ತೆ Read More »

ಕರ್ನಾಟಕ

ಕ್ರೈಸ್ತ ಧರ್ಮಗುರು ವಂ| ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ ವಿಧಿವಶ ► ಇಚಿಲಂಪಾಡಿ, ಸಂಪ್ಯಾಡಿ, ನೆಲ್ಯಾಡಿ, ಪದವು ಸೇರಿದಂತೆ ಕರಾವಳಿಯ ಹಲವೆಡೆ ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚಿನ ವಿವಿಧ ದೇವಾಲಯಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂದನೀಯ ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ (88) ಭಾನುವಾರದಂದು ಬೆಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ದಿ|ವಿ.ಐ. ಐಸ್ಸಾಕ್ ಹಾಗೂ ದಿ|ಬೀನಾಮ್ಮ ಐಸ್ಸಾಕ್ ರವರ ಹಿರಿಯ ಪುತ್ರರಾದ ಇವರು ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರ ವಹಿಸಿದ್ದರು. 18 ವರ್ಷಗಳ ಕಾಲ ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಧರ್ಮಗುರುಗಳಾಗಿ ಸೇವೆ

ಕ್ರೈಸ್ತ ಧರ್ಮಗುರು ವಂ| ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ ವಿಧಿವಶ ► ಇಚಿಲಂಪಾಡಿ, ಸಂಪ್ಯಾಡಿ, ನೆಲ್ಯಾಡಿ, ಪದವು ಸೇರಿದಂತೆ ಕರಾವಳಿಯ ಹಲವೆಡೆ ಸೇವೆ Read More »

ಕರ್ನಾಟಕ

ಉಪ್ಪಿನಂಗಡಿ: ಹಗಲು ಹೊತ್ತಿನಲ್ಲಿ ಜವಳಿ ಅಂಗಡಿಯಿಂದ ಜರ್ಕೀನ್ ಕದ್ದ ► ರಾತ್ರಿಯಲ್ಲಿ ಅದೇ ಜರ್ಕೀನ್ ತೊಟ್ಟು ಜವಳಿ ಅಂಗಡಿಯ ಮಾಲಕರಲ್ಲಿ ಲಿಫ್ಟ್ ಕೇಳಿದ ► ಕೊನೆಗೇನಾಯ್ತು ಗೊತ್ತೇ…?? ಸ್ವಾರಸ್ಯಕರ ಘಟನೆ..!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.08. ಮಾರಾಟಕ್ಕೆಂದು ಅಂಗಡಿಯ ಮುಂದೆ ತೂಗುಹಾಕಿದ್ದ ಬೆಲೆಬಾಳುವ ಜರ್ಕೀನ್ ಕದ್ದ ಕಳ್ಳನೋರ್ವ ಅದೇ ಅಂಗಡಿಯ ಮಾಲಕರ ಕಾರಿಗೆ ಕೈ ಹಿಡಿದು ಲಿಫ್ಟ್ ಕೇಳಿ ಪೊಲೀಸರ ಅತಿಥಿಯಾದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ‌. ಕರ್ವೇಲ್ ನಿವಾಸಿ ಅಬೂಬಕ್ಕರ್ ಎಂಬವರ ‘ನಿಹಾ ಡ್ರೆಸ್ಸಸ್ಸ್’ ಎಂಬ ಜವಳಿ ಅಂಗಡಿಯೆದುರು ಉತ್ತಮ ಗುಣಮಟ್ಟದ ಜರ್ಕಿನ್‌ವೊಂದನ್ನು ತೂಗು ಹಾಕಲಾಗಿತ್ತು. ಸಂಜೆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಖತರ್ನಾಕ್ ಕಳ್ಳನೋರ್ವ ಇದನ್ನು ಎಗರಿಸಿದ್ದ. ರಾತ್ರಿ ಅಂಗಡಿ

ಉಪ್ಪಿನಂಗಡಿ: ಹಗಲು ಹೊತ್ತಿನಲ್ಲಿ ಜವಳಿ ಅಂಗಡಿಯಿಂದ ಜರ್ಕೀನ್ ಕದ್ದ ► ರಾತ್ರಿಯಲ್ಲಿ ಅದೇ ಜರ್ಕೀನ್ ತೊಟ್ಟು ಜವಳಿ ಅಂಗಡಿಯ ಮಾಲಕರಲ್ಲಿ ಲಿಫ್ಟ್ ಕೇಳಿದ ► ಕೊನೆಗೇನಾಯ್ತು ಗೊತ್ತೇ…?? ಸ್ವಾರಸ್ಯಕರ ಘಟನೆ..!! Read More »

ಕರ್ನಾಟಕ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಈ ವರ್ಷ ಮಳೆ ಬೇಗನೆ ಆರಂಭವಾಗಿದ್ದಲ್ಲದೇ ಬಿರುಸಿನ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಕಂಡುಬಂದಿದೆ. ನಿರಂತರ ಸುರಿದ ಮಳೆಯಿಂದ ರೈತರಿಗೆ ಸಕಾಲದಲ್ಲಿ ಔಷಧ ಸಿಂಪರಣೆ ಮಾಡಲಾಗದೇ ಕೊಳೆ ರೋಗ ಉಲ್ಭಣಿಸಿ ಹಾನಿ ಅನುಭವಿಸುವಂತಾಗಿದೆ. ಮಳೆ ಕಡಿಮೆಯಾಗುತ್ತಿದ್ದರೂ ಕೊಳೆ ರೋಗದ ಹಾನಿ ಇಲ್ಲಿಗೆ ಮುಗಿದಿಲ್ಲ. ಹೀಗೆ ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಿಕೆ ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು. ಅಡಿಕೆ ಗೊನೆಗಳಿಗೆ ಬೋರ್ಡೋದ್ರಾವಣ ಸಿಂಪಡಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದಲ್ಲಿ, ಅವಶ್ಯಕತೆಯಿದ್ದಲ್ಲಿ ಮತ್ತೊಮ್ಮೆ

ಅಡಿಕೆ ಮರಕ್ಕೆ ಕೊಳೆರೋಗ ಬಾಧಿಸಿದೆಯೇ..? ► ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಯಬೇಕೇ..? Read More »

ಕರ್ನಾಟಕ

ಹೆಜಮಾಡಿ ಬೀಚ್ ಗೆ ಹರಿದು ಬಂದ ರಾಶಿ ರಾಶಿ ಸಿಲ್ವರ್ ಮೀನುಗಳು ► ಪುಕ್ಕಟೆ ಮೀನಿಗಾಗಿ ಊರ ಜಾತ್ರೆಯಂತಾದ ಉಡುಪಿಯ ಕಡಲ ಕಿನಾರೆ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಸೆ.06. ಹೆಜಮಾಡಿ ಕೋಡಿಯಲ್ಲಿ ಬುಧವಾರದಂದು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ರಾಶಿ ರಾಶಿ ಸಿಲ್ವರ್ ಫಿಶ್ (ಬೊಳೆಂಜರ್ ಮೀನು) ಕಡಲ ಕಿನಾರೆಯಲ್ಲಿ ಬಂದಿದ್ದರಿಂದ ಊರವರಿಗೆ ಮೀನಿನ ಸುಗ್ಗಿ ಉಂಟಾಗಿದೆ. ಹೆಜಮಾಡಿ ಕೋಡಿಯ ಎಲ್ಲೆಡೆ ಸಿಲ್ವರ್ ಮೀನುಗಳು ರಾಶಿಯಾಗಿ ದಡ ಸೇರುತ್ತಿರುವುದು ಕಂಡುಬಂದಿದ್ದು, ಆಸುಪಾಸಿನ ಊರಿನವರು ಪುಕ್ಕಟೆ ಮೀನು ಪಡೆದುಕೊಂಡು ಹೋಗುತಿದ್ದಾರೆ. ಬುಧವಾರ ಬೆಳಗ್ಗೆಯಿಂದ ಮೀನುಗಾರಿಕೆಗೆ ಬಲೆ ಬೀಸಲು ಆರಂಭಿಸುತಿದ್ದಂತೆಯೇ ರಾಶಿರಾಸಿ ಮೀನುಗಳು ದಡಸೇರಿದೆ. ಸುದ್ದಿ ತಿಳಿದ ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಫಲಿಮಾರು, ಮುಲ್ಕಿ

ಹೆಜಮಾಡಿ ಬೀಚ್ ಗೆ ಹರಿದು ಬಂದ ರಾಶಿ ರಾಶಿ ಸಿಲ್ವರ್ ಮೀನುಗಳು ► ಪುಕ್ಕಟೆ ಮೀನಿಗಾಗಿ ಊರ ಜಾತ್ರೆಯಂತಾದ ಉಡುಪಿಯ ಕಡಲ ಕಿನಾರೆ Read More »

ಕರ್ನಾಟಕ

ಅಂತೂ ಇಂತೂ ಶಿರಾಡಿ ಘಾಟ್ ಲಘು ವಾಹನ ಸಂಚಾರಕ್ಕೆ ಅಸ್ತು ► ಯಾವೆಲ್ಲಾ ವಾಹನಗಳು ಸಂಚರಿಸಬಹುದೆಂದು ಗೊತ್ತೇ..?

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.05. ಅಂತೂ ಇಂತೂ ರಸ್ತೆ ತಡೆಯಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ಮಂಗಳೂರು-ಹಾಸನ ಮಾರ್ಗದ ಶಿರಾಡಿ ಘಾಟ್ ರಸ್ತೆಯು ಬುಧವಾರದಿಂದ ಲಘು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ಬಂದ್ ಆಗಿದ್ದರಿಂದ ಮಂಗಳೂರಿನಿಂದ ರಾಜ್ಯ ರಾಜಧಾನಿಯ ಸಂಪರ್ಕಕ್ಕೆ ಚಾರ್ಮಾಡಿ ಘಾಟ್ ರಸ್ತೆಯನ್ನೇ ಅವಲಂಬಿಸಬೇಕಾಗಿತ್ತು. ಇದೀಗ ಬೆಂಗಳೂರು – ಮಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯಲ್ಲಿ ಬೈಕ್, ಕಾರು ಹಾಗೂ ಟೆಂಪೋ ಟ್ರಾವೆಲರ್ ನಂತಹ ಲಘು ವಾಹನ

ಅಂತೂ ಇಂತೂ ಶಿರಾಡಿ ಘಾಟ್ ಲಘು ವಾಹನ ಸಂಚಾರಕ್ಕೆ ಅಸ್ತು ► ಯಾವೆಲ್ಲಾ ವಾಹನಗಳು ಸಂಚರಿಸಬಹುದೆಂದು ಗೊತ್ತೇ..? Read More »

ಕರ್ನಾಟಕ

ಇನ್ಮುಂದೆ ಆಧಾರ್ ತಿದ್ದುಪಡಿಗಾಗಿ ಅಲೆದಾಟಕ್ಕೆ ಬ್ರೇಕ್ ► ಇಂದಿನಿಂದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್ ತಿದ್ದುಪಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.05. ಆಧಾರ್ ನೋಂದಣಿಗಾಗಿ ಸಾರ್ವಜನಿಕರು ಜಿಲ್ಲೆಯ ವಿವಿಧ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದು, ಇನ್ನೂ ನೋಂದಣಿಯಾಗದೆ ಇರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಸೆಪ್ಟಂಬರ್ 5 ರಿಂದ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆಧಾರ್ ತಿದ್ದುಪಡಿ ಮಾಡಲೂ ಅವಕಾಶ ಕಲ್ಪಿಸಲಾಗಿದ್ದು, ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಇನ್ಮುಂದೆ ಆಧಾರ್ ತಿದ್ದುಪಡಿಗಾಗಿ ಅಲೆದಾಟಕ್ಕೆ ಬ್ರೇಕ್ ► ಇಂದಿನಿಂದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್ ತಿದ್ದುಪಡಿ Read More »

ಕರ್ನಾಟಕ
Scroll to Top