ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಾಸರಗೋಡು: ವ್ಯಕ್ತಿಯ ಗಂಟಲಿನಲ್ಲಿ ಆಮ್ಲೆಟ್ ಸಿಲುಕಿ ಸಾವು – News Kadaba

ಕಾಸರಗೋಡು: ವ್ಯಕ್ತಿಯ ಗಂಟಲಿನಲ್ಲಿ ಆಮ್ಲೆಟ್ ಸಿಲುಕಿ ಸಾವು

(ನ್ಯೂಸ್‌ ಕಡಬ) newskadaba.com,  ಸೆ.23  ಕಾಸರಗೋಡು: ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನದ ನಿವಾಸಿ ಮತ್ತು ಬರಡ್ಕದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ ವಿನ್ಸೆಂಟ್ ತನ್ನ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ. ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣ ಕುಂಬ್ಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರಲ್ಲಿ ಅವರು ತಲುಪುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ, ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಬದಿಯಡ್ಕ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಅವಿವಾಹಿತರು ಎನ್ನಲಾಗಿದೆ

Scroll to Top