ಕರ್ನಾಟಕ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರವು ನೌಕರರ ನಿವೃತ್ತಿ ವಯಸ್ಸಿನ ಮಿತಿ 65ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com,  ನ.18 ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ನಿಯಮಗಳಲ್ಲಿ ಇತ್ತೀಚೆಗೆ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ನಿವೃತ್ತಿ ಜೀವನಕ್ಕೆ ಸಹಾಯ ಮಾಡಲಿದೆ.ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು. ಐದನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಈ ನಿಯಮವನ್ನು 1998 ರಲ್ಲಿ ಜಾರಿಗೆ ತರಲಾಯಿತು. ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು 62 ಅಥವಾ 65 ಕ್ಕೆ ಹೆಚ್ಚಿಸಬಹುದು ಎನ್ನುವ […]

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರವು ನೌಕರರ ನಿವೃತ್ತಿ ವಯಸ್ಸಿನ ಮಿತಿ 65ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ನ.28 ರಂದು ಲೋಕಾಯುಕ್ತ ಜನಸಂಪರ್ಕ ಸಭೆ

(ನ್ಯೂಸ್‌ ಕಡಬ) newskadaba.com,  ನ.18 ಮಂಗಳೂರು: ಲೋಕಾಯುಕ್ತ ಜನ ಸಂಪರ್ಕ ಸಭೆ ನವೆಂಬರ್ 28 ರಂದು ಬೆಳಿಗ್ಗೆ 11 ಗಂಟೆಯಿಂದ ಕಡಬ ತಾಲೂಕು ಕಛೇರಿಯಲ್ಲಿ ಆಯೋಜಿಸಲಾಗಿದೆ.ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ನವೆಂಬರ್ 28 ರಂದು ರಂದು ಕಡಬ ತಾಲೂಕು ಕಛೇರಿ ಇಲ್ಲಿಗೆ ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ

ಕಡಬ: ನ.28 ರಂದು ಲೋಕಾಯುಕ್ತ ಜನಸಂಪರ್ಕ ಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆ ಯ ನಾಲ್ಕು ಕಬ್ಬಡ್ಡಿ ಪಟುಗಳು SGFI ಗೆ ಆಯ್ಕೆ ಗ್ರಾಮೀಣ ಮಕ್ಕಳ ಐತಿಹಾಸಿಕ ಸಾಧನೆ..ಕಬ್ಬಡಿ ಶಿಖರವೇರಿದ ಹಳ್ಳಿ ಕ್ರೀಡಾ ಪ್ರತಿಭೆಗಳು

(ನ್ಯೂಸ್‌ ಕಡಬ) newskadaba.com,  ನ.18 ಆಲಂಕಾರು :-ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ,36ನೇ ಅಖಿಲ ಭಾರತೀಯ ಖೇಲಖೂದ್,ಕಬ್ಬಡಿ ಟೂರ್ನಮೆಂಟ್ 2025-26 ಇದರ ವತಿಯಿಂದ ಭಾರತ ಭಾರತಿ ರೆಸಿಡೆನ್ಸಿಯಲ್ ಸಿ.ಬಿ.ಎಸ್.ಸಿ ಸ್ಕೂಲ್,ಜಾಮಟಿ,ಬೆತುಲ್,ಮಧ್ಯಪ್ರದೇಶ ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ರಾಷ್ಟ್ರ ಮಟ್ಟದ ಕಬ್ಬಡಿ ಫೈನಲ್ ಫೈಟ್ ನಲ್ಲಿ.. ಬಲಿಷ್ಠ ವೆಸ್ಟ್ ಯು.ಪಿ ವಿರುದ್ದ 36-35 ಅಂತರದ ಜಯದೊಂದಿಗೆ  ದಕ್ಷಿಣ ಮಧ್ಯ ಕ್ಷೇತ್ರ ತಂಡವು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ ರಾಷ್ಟ್ರೀಯ ಕಬ್ಬಡಿ ಟೂರ್ನಮೆಂಟ್ ಗೆ

ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆ ಯ ನಾಲ್ಕು ಕಬ್ಬಡ್ಡಿ ಪಟುಗಳು SGFI ಗೆ ಆಯ್ಕೆ ಗ್ರಾಮೀಣ ಮಕ್ಕಳ ಐತಿಹಾಸಿಕ ಸಾಧನೆ..ಕಬ್ಬಡಿ ಶಿಖರವೇರಿದ ಹಳ್ಳಿ ಕ್ರೀಡಾ ಪ್ರತಿಭೆಗಳು Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ರಸ್ತೆಗಡ್ಡವಾಗಿ ಬಿದ್ದ ದೂಪದ ಮರ

(ನ್ಯೂಸ್ ಕಡಬ) newskadaba.com ಕಡಬ, ನ.17. ದೂಪದ ಮರವೊಂದು ಮುರಿದು ರಸ್ತೆಗೆ ಬಿದ್ದ ಘಟನೆ ಕಡಬ ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಸೋಮವಾರ ಸಂಜೆ ನಡೆದಿದ್ದು, ಬೈಕ್ ಸವಾರ ಮತ್ತು ಬಸ್ಸೊಂದು ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ಸಂಭವಿಸಿದೆ. ಕಡಬದಿಂದ ಪಂಜ‌ ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಮರ ಬೀಳುವ ದೃಶ್ಯ ಸೆರೆಯಾಗಿದ್ದು, ಬೈಕ್ ಸವಾರ ಅದೃಷ್ಟವಶಾತ್ ಕೂದಳೆಲೆಯ ಅಂತರದಲ್ಲಿ ಪಾರಾಗಿರುವುದು ಕಂಡುಬಂದಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇದೇ ಪರಿಸರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮರ

ಕಡಬ: ರಸ್ತೆಗಡ್ಡವಾಗಿ ಬಿದ್ದ ದೂಪದ ಮರ Read More »

ಕರ್ನಾಟಕ

ರಾಜ್ಯದಲ್ಲಿ 2020 ರಿಂದ ಮಕ್ಕಳ ಮೇಲಿನ ಅಪರಾಧಗಳಲ್ಲಿ 63% ರಷ್ಟು ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ನ.17: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಕ್ಕಳ ಮೇಲಿನ ಅಪರಾಧಗಳು ತೀವ್ರವಾಗಿ ಹೆಚ್ಚಿದ್ದು, 2023 ರಲ್ಲಿ ರಾಜ್ಯದಲ್ಲಿ 8,929 ಪ್ರಕರಣಗಳು ದಾಖಲಾಗಿವೆ. 2022 ಕ್ಕೆ ಹೋಲಿಸಿ ದರೆ ಇದು ಶೇ 11.8 ರಷ್ಟು ಹೆಚ್ಚಳವಾಗಿದೆ. ಸಾಂಕ್ರಾಮಿಕ ರೋಗದ ನಂತರದ ವರ್ಷಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಇದು ಸುಧಾರಿತ ವರದಿ ಮಾಡುವಿಕೆ ಮತ್ತು ರಾಜ್ಯದಲ್ಲಿ ಮಕ್ಕಳು ಅಪಾಯಕ್ಕೀಡಾಗುವಿಕೆ ಮುಂದುವರಿದಿರುವುದನ್ನು ಸೂಚಿಸುತ್ತದೆ. ರಾಜ್ಯದ ಅಪರಾಧ ಪ್ರವೃತ್ತಿ ತೀವ್ರವಾಗಿ

ರಾಜ್ಯದಲ್ಲಿ 2020 ರಿಂದ ಮಕ್ಕಳ ಮೇಲಿನ ಅಪರಾಧಗಳಲ್ಲಿ 63% ರಷ್ಟು ಹೆಚ್ಚಳ Read More »

ಕರ್ನಾಟಕ

ರಾಜ್ಯದ 5 ಕಡೆಗಳಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್, ಡಿಫೆನ್ಸ್ ಪಾರ್ಕ್ ಸ್ಥಾಪನೆ-ಡಿ.ಕೆ.ಶಿ

(ನ್ಯೂಸ್‌ ಕಡಬ) newskadaba.com,  ನ.17: ರಾಜ್ಯದ ಐದು ಕಡೆಗಳಲ್ಲಿ ವಿಶ್ವ ದರ್ಜೆ ಗುಣಮಟ್ಟದ ಏರೋಸ್ಪೆಸ್ ಹಾಗೂ ರಕ್ಷಣಾ ಪಾರ್ಕ್ ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಸಾಮರ್ಥ್ಯವನ್ನು ಬಲಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಕೆ ಶಿವಕುಮಾರ್, ಕೌಶಲಯುಕ್ತ ಪ್ರತಿಭಾವಂತರಿಗೆ ಹೊಸ ಅವಕಾಶ ಸೃಷಿಸುವ ಮೂಲಕ ಏರೋಸ್ಪೆಸ್ ಹಾಗೂ ರಕ್ಷಣಾ ಸರಕುಗಳ ಉತ್ಪಾದನೆಯಲ್ಲಿ ರಾಜ್ಯದ ಮುಂಚೂಣಿಯನ್ನು

ರಾಜ್ಯದ 5 ಕಡೆಗಳಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್, ಡಿಫೆನ್ಸ್ ಪಾರ್ಕ್ ಸ್ಥಾಪನೆ-ಡಿ.ಕೆ.ಶಿ Read More »

ಕರ್ನಾಟಕ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: 21 ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿರುವ 500 ಸೂಪರ್ ವೈಸರ್ಸ್ !

(ನ್ಯೂಸ್‌ ಕಡಬ) newskadaba.com,  ನ. 17  ಬೆಂಗಳೂರು: 2004 ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಮಾರು 500 ಮೇಲ್ವಿಚಾರಕರಿಗೆ ಇದೂವರೆಗೂ ಒಂದೇ ಒಂದು ಬಡ್ತಿ ಸಿಕ್ಕಿಲ್ಲ, ಅವರಲ್ಲಿ 100 ಕ್ಕೂ ಹೆಚ್ಚು ಜನರು ಕೆಲವು ತಿಂಗಳುಗಳಲ್ಲಿ ನಿವೃತ್ತರಾಗಲಿದ್ದಾರೆ.ಈ ಮೇಲ್ವಿಚಾರಕರು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಂತಹ ಸರ್ಕಾರಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತಾರೆ.. ರಾಜ್ಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ಇತರ ಸರ್ಕಾರಿ ಯೋಜನೆಗಳನ್ನು ತಲುಪಿಸುತ್ತಾರೆ, ಅಂಗನವಾಡಿ ಕಾರ್ಯಕರ್ತರನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ತರಬೇತಿ ನೀಡುತ್ತಾರೆ. ಅವರನ್ನು ಕ್ಷೇತ್ರಮಟ್ಟದ ಕಾರ್ಯಕರ್ತರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: 21 ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿರುವ 500 ಸೂಪರ್ ವೈಸರ್ಸ್ ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಗಳನ್ನು ಮಾಡೆಲ್ ಮಾಡುವ ಆಸೆಗೆ ಬಿದ್ದು 3.74 ಲಕ್ಷ ರೂ. ಕಳೆದುಕೊಂಡ ತಾಯಿ

(ನ್ಯೂಸ್‌ ಕಡಬ) newskadaba.com,  ನ. 17  ಬೆಂಗಳೂರು: ಮಗಳನ್ನ ಮಾಡೆಲ್ ಮಾಡಲು ಹೋಗಿ ತಾಯಿ 3.74 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಚಿಕ್ಕ ವಯಸ್ಸಿನಲ್ಲೇ ಮಗಳನ್ನ ಮಾಡೆಲಿಂಗ್ ಮಾಡುವ ಆಸೆಗೆ ಬಿದ್ದು ಸುಮಾ ಎಂಬ ಮಹಿಳೆ 3.74 ಲಕ್ಷ ಹಣ ಕಳೆದುಕೊಂಡಿದ್ದಾರೆ. ಸುಮಾ ಸಾಮಾಜಿಕ ಜಾಲತಾಣದಲ್ಲಿ ಚೈಲ್ಡ್ ಮಾಡೆಲ್ ಆಡ್ ನೋಡಿದ್ದರು. ಲಿಟ್ಲ್ ನೆಸ್ಟ್ ಎಂಬ ಚೈಲ್ಡ್ ಮಾಡೆಲಿಂಗ್ ಲಿಂಕ್ ಫೇಸ್ ಬುಕ್‌ಪೇಜ್‌ನಲ್ಲಿ ಬಂದಿತ್ತು. ಕ್ಲಿಕ್ ಮಾಡಿದ್ದಾಗ ಲಿಂಕ್ ಮೂಲಕವೇ ಮಗುವಿನ ದಾಖಲಾತಿಗಳನ್ನ

ಮಗಳನ್ನು ಮಾಡೆಲ್ ಮಾಡುವ ಆಸೆಗೆ ಬಿದ್ದು 3.74 ಲಕ್ಷ ರೂ. ಕಳೆದುಕೊಂಡ ತಾಯಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೆಕ್ಕಾ ಯಾತ್ರೆ ವೇಳೆ ಭಾರತೀಯರ ಬಸ್ ಅಪಘಾತ ; 42 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ನ. 17  : ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳವಾದ ಮೆಕ್ಕಾದಲ್ಲಿ ಭಾರತೀಯ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿರುವ ದುರಂತ ಘಟನೆ ಸಂಭವಿಸಿದೆ. ಸೌದಿ ಅರೇಬಿಯಾದಲ್ಲಿ ಭಾರತದಿಂದ ಮೆಕ್ಕಾಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೆಕ್ಕಾದಿಂದ ಮದೀನಾಗೆ ಸಾಗುತ್ತಿದ್ದ ಮಾರ್ಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮಧ್ಯರಾತ್ರಿ 01:30 ರ ಸುಮಾರಿಗೆ ಭಾರತದಿಂದ ಮೆಕ್ಕಾಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆಡಿದೆ. ತಕ್ಷಣವೇ, ಬೆಂಕಿ ಹೊತ್ತಿಕೊಂಡು ಬಸ್ ಕೆಲವೇ ಸೆಕೆಂಡುಗಳಲ್ಲಿ ಸುಟ್ಟುಕರಕಲಾಗಿದೆ.

ಮೆಕ್ಕಾ ಯಾತ್ರೆ ವೇಳೆ ಭಾರತೀಯರ ಬಸ್ ಅಪಘಾತ ; 42 ಮಂದಿ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ; ಬಾಲಕ ಸಾವು, 5 ಮಂದಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ನ. 17 ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಣದು ಪಲ್ಟಿಯಾಗಿ, 12 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಲಾಯಿಲ ಗ್ರಾಮದ ಕುತ್ರೊಟ್ಟು-ಟಿ.ಬಿ. ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನವೆಂಬರ್ 16ರ ತಡರಾತ್ರಿ ಸಂಭವಿಸಿದೆ. ಮೃತನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಅವರ ಪುತ್ರ ತನ್ವಿತ್ (12) ಎಂದು ಗುರುತಿಸಲಾಗಿದೆ. ನಾವೂರಿನ ಶಶಿ ಎಂಬುವವರ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕಾಗಿ ತೆರಳುತ್ತಿದ್ದರು. ಅಪಘಾತದಲ್ಲಿ

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ; ಬಾಲಕ ಸಾವು, 5 ಮಂದಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top