ಆನೇಕಲ್‌ನಲ್ಲಿ ಅಮಾನವೀಯ ಕೃತ್ಯ; ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ

(ನ್ಯೂಸ್‌ ಕಡಬ) newskadaba.com,  ಸೆ.29 ಬೆಂಗಳೂರು: ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಿರುವ ಪತಿಯ ಮನೆಯರು, ಆಕೆಯ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.

ಆನೇಕಲ್‌ನ ನಾರಾಯಣಪುರದಲ್ಲಿ ಈ ನಡೆದಿದೆ. ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಪತಿ ಅರುಣ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ.5 ವರ್ಷಗಳ ಹಿಂದೆ ಅರುಣ್ ಜತೆ ಶ್ರೀಲಜಾ ಮದುವೆಯಾಗಿದ್ದರು. ದಂಪತಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ.

ಮದುವೆಯಾದ ಮೇಲೂ ಪತಿ ಹಾಗೂ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಗಂಡ ಶ್ರೀಲಜಾ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವೇಳೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕಳೆದ ಒಂದು ವಾರದ ಹಿಂದೆ ಶ್ರೀಲಜಾ ತವರು ಮನೆಗೆ ತೆರಳಿದ್ದರು. ಇದೀಗ ಮನೆಗೆ ಬಂದ ವೇಳೆ ಮನೆಗೆ ಸೇರಿಸಿದೆ ರಸ್ತೆ ಮೇಲು ಕೂದಲು ಹಿಡಿದು ಎಳೆದಾಡಿ, ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top