ಬೆಂಗಳೂರಿನಲ್ಲಿ ಘೋರ ದುರಂತ, ಕೆರೆಯಲ್ಲಿ ಮುಳುಗಿ ಇಬ್ಬರು ಬಲಿ



(ನ್ಯೂಸ್ಕಡಬ) newskadaba.com,  ಸೆ.29 ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೀನಿಗೆ ಬಲೆ ಹಾಕಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟದ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಮೃತಪಟ್ಟವರನ್ನು ಆನಂದ (32) ಹಾಗೂ ಅನಂತ (27) ಎಂದು ಗುರುತಿಸಲಾಗಿದೆ.







ಮೀನಿಗೆ ಬಲೆ ಹಾಕಲು ಇಬ್ಬರು ತೆಪ್ಪದಲ್ಲಿ ಕೆರೆಯ ಮಧ್ಯೆ ತೆರಳಿದ್ದಾರೆ. ಕೆರೆಯ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ಆನಂದ ನೀರಿಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದನನ್ನು ಮೇಲೆ ಎತ್ತಲು ಅನಂತ ಸಹ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆನಂದ್ ಮತ್ತು ಅನಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






error: Content is protected !!
Scroll to Top