ಕರ್ನಾಟಕ

ಕೆಸಿಸಿ ಆರೋಗ್ಯ ಕಾರ್ಡ್ ಹೆಸರಿನಲ್ಲಿ ವಂಚನೆಯ ಆರೋಪ ➤ ನೋಂದಣಿ ಪ್ರತಿನಿಧಿಯನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು

ಕಡಬ, ನ. 13. ಸರಕಾರದ ಅನುಮತಿ ಇಲ್ಲದೆ ‘ಕೆಸಿಸಿ ಆರೋಗ್ಯ ಕಾರ್ಡ್’ ಎನ್ನುವ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಕಡಬ ಗ್ರಾ.ಪಂ. ಸಭಾಂಗಣದೊಳಗೆ ಪಂಚಾಯತ್‌ನ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಡ್ ನೋಂದಣಿ ಮಾಡುತ್ತಿದ್ದ ಪ್ರತಿನಿಧಿಯನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳವಾರದಂದು ಕಡಬದಲ್ಲಿ ನಡೆದಿದೆ. ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಕಡಬ ಗ್ರಾ.ಪಂ. ಕಚೇರಿಯಲ್ಲಿ ಆರೋಗ್ಯ ಕಾರ್ಡ್ ಮಾಡಿಕೊಡುವ ಬಗ್ಗೆ ಹಣ ಸಂಗ್ರಹಿಸಲಾಗುತ್ತಿತ್ತು. ಇದೇ ವೇಳೆ ಆಗಮಿಸಿದ ರೈತ ಸಂಘದ […]

ಕೆಸಿಸಿ ಆರೋಗ್ಯ ಕಾರ್ಡ್ ಹೆಸರಿನಲ್ಲಿ ವಂಚನೆಯ ಆರೋಪ ➤ ನೋಂದಣಿ ಪ್ರತಿನಿಧಿಯನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು Read More »

ಕರ್ನಾಟಕ

➤➤ Breaking News ನಾಳೆ ರಾಜ್ಯಾದ್ಯಂತ (ನ.09) ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ.08. ಅಯೋಧ್ಯೆಯ ರಾಮಮಂದಿರ ಮತ್ತು ಬಾಬರಿ ಮಸೀದಿ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಸುಪ್ರೀಂಕೋರ್ಟ್​ ಶನಿವಾರ ಬೆಳಿಗ್ಗೆ 10.30ಕ್ಕೆ ತೀರ್ಪು ನೀಡಲಿದ್ದು, ಆ ಪ್ರಯುಕ್ತ ನಾಳೆ ದ.ಕ. ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶನಿವಾರ ಬೆಳಿಗ್ಗೆಯೇ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ನ್ಯಾಯ ಪೀಠವು ತೀರ್ಪು ಹೊರಡಿಸಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ

➤➤ Breaking News ನಾಳೆ ರಾಜ್ಯಾದ್ಯಂತ (ನ.09) ಶಾಲಾ ಕಾಲೇಜುಗಳಿಗೆ ರಜೆ Read More »

ಕರ್ನಾಟಕ

ಅನುಮಾನಕ್ಕೀಡಾದ 7ನೇ ತರಗತಿ ಪಬ್ಲಿಕ್ ಪರೀಕ್ಷೆ

(ನ್ಯೂಸ್ ಕಡಬ) newskadaba.com   ಬೆಂಗಳೂರು, ನ.8   ಪಬ್ಲಿಕ್ ಪರೀಕ್ಷೆಯನ್ನು ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವುದು ರಾಜ್ಯ ಸರಕಾರದ ಚಿಂತನೆಯಾಗಿದ್ದು, ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ತರುವುದು ಅನುಮಾನವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಬೇಕಾದ ಯಾವುದೇ ಸಿದ್ಧತೆಯನ್ನು ಇನ್ನೂ ಮಾಡಿಕೊಂಡಿಲ್ಲ. ಈ ಸಂಬಂಧ ಸರಕಾರದಿಂದ ಅಧಿಕೃತ ಆದೇಶ ಅಥವಾ ನಿರ್ದೇಶನವೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಲುಪಿಲ್ಲ .  ಪರೀಕ್ಷೆಗೆ ಕೇವಲ 4  ತಿಂಗಳಿದ್ದು ಈ ಹಂತದಲ್ಲಿ ಹೊಸ ಪದ್ಧತಿ

ಅನುಮಾನಕ್ಕೀಡಾದ 7ನೇ ತರಗತಿ ಪಬ್ಲಿಕ್ ಪರೀಕ್ಷೆ Read More »

ಕರ್ನಾಟಕ

ಕಳವು ನ್ಯೂಸ್

(ನ್ಯೂಸ್ ಕಡಬ) newskadaba.com  ಬಂಟ್ವಾಳ,  ಅ.31    ಮಗಳ ಹೆರಿಗೆ ಆರೈಕೆಗೆಂದು ಮನೆಗೆ ಬೀಗ ಹಾಕಿ ದೇರಳಕಟ್ಟೆ ಆಸ್ಪತ್ರೆಗೆ ಹೋದವರು ಆರೈಕೆಯ ನಂತರ ಮನೆಗೆ ಬಂದಾಗ ಸುಮಾರು 60,000 ಮೌಲ್ಯದ ಚಿನ್ನಾಭರಣಗಳು ಕಾಣೆಯಾದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿ ನಡೆದಿದೆ. ಮೋಹಿನಿಯವರು 03.10.2019 ರಂದು ಮನೆಯಿಂದ ತೆರಳಿದ್ದು, 30.10.2019 ರಂದು ಬಂದು ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಹಿಂದಿನ ಬಾಗಿಲು ಸ್ವಲ್ಪ ತೆರೆದಿದ್ದು ನಂತರ ರೂಮಿನ ಒಳಗೆ ಬಂದು ನೋಡಿದಾಗ ಕಪಾಟು ತೆರೆದಿದ್ದು ಬಟ್ಟೆ ಬರೆ

ಕಳವು ನ್ಯೂಸ್ Read More »

ಕರ್ನಾಟಕ

ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅಪಘಾತ ➤ ಮೂವತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.30. ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಸ್ಲೀಪರ್ ಬಸ್ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ಅಪಘಾತಕ್ಕೀಡಾಗಿ 30 ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರದಂದು ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಪುತ್ತೂರು ಘಟಕದ ವತಿಯಿಂದ ಮಂಗಳವಾರ ರಾತ್ರಿ ಹೆಚ್ಚುವರಿ ಸ್ಲೀಪರ್ ಕೋಚ್ ಬಸ್ ಬೆಂಗಳೂರಿಗೆಂದು ಹೊರಟಿದ್ದು, ಬುಧವಾರ ಬೆಳಗಿನ ಜಾವ ನೆಲಮಂಗಲ ಸಮೀಪದ ಸೋಲೂರು ಎಂಬಲ್ಲಿ ಚಾಲಜನ ನಿಯಂತ್ರಣ

ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅಪಘಾತ ➤ ಮೂವತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ Read More »

ಕರ್ನಾಟಕ

ಭ್ರಷ್ಟರ ಹುಟ್ಟಡಗಿಸಿದ್ದ ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ➤ ಎಂ ವೆಂಕಟಾಚಲ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.30. ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹುಟ್ಟಡಗಿಸಿದ್ದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಬುಧವಾರದಂದು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದ ಎನ್. ವೆಂಕಟಾಚಲ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಅಲ್ಲಲ್ಲಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಲೋಕಾಯುಕ್ತ ಸಂಸ್ಥೆಗೆ ಮೆರುಗನ್ನು ನೀಡಿದ್ದರು‌. ಅಲ್ಲದೆ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವಿಧಿವಶರಾದರು.

ಭ್ರಷ್ಟರ ಹುಟ್ಟಡಗಿಸಿದ್ದ ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ➤ ಎಂ ವೆಂಕಟಾಚಲ ಇನ್ನಿಲ್ಲ Read More »

ಕರ್ನಾಟಕ

ಖಾಸಗಿ ಬಸ್ ಒಂದು ಪಲ್ಟಿಯಾಗಿ ಐವರ ಮರಣ, ಗಾಯಗೊಂಡ 20ಕ್ಕೂ ಹೆಚ್ಚು ಜನ

(ನ್ಯೂಸ್ ಕಡಬ) newskadaba.com  ತುಮಕೂರು, ಅ.30  ಖಾಸಗಿ ಬಸ್ ಪಲ್ಟಿಯಾಗಿ ಐವರು ದುರ್ಮರಣಕ್ಕೀಡಾಗಿ, 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ದುರ್ಘಟನೆ ಕೊರಟಗೆರೆ, ಜೆಟ್ಟಿ ಅಗ್ರಹಾರದ ಬಳಿ ಇಂದು ನಡೆದಿದೆ. ಜೆಟ್ಟಿ ಅಗ್ರಹಾರದ ಸಮೀಪ ಕೊರಟಗೆರೆಯಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳುಗಳ ಪೈಕಿ ಮೂವರು ಗಂಭೀರ  ಸ್ಥಿತಿಯಲ್ಲಿದ್ದಾರೆ ಎಂದು  ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  

ಖಾಸಗಿ ಬಸ್ ಒಂದು ಪಲ್ಟಿಯಾಗಿ ಐವರ ಮರಣ, ಗಾಯಗೊಂಡ 20ಕ್ಕೂ ಹೆಚ್ಚು ಜನ Read More »

ಕರ್ನಾಟಕ

ಕನ್ನಡವು ರೈಲ್ವೆ ಮಂಡಳಿಯ ಪ್ರಾದೇಶಿಕ ಭಾಷೆಯಾಗಿ ಜಾರಿಗೆ ತರಲು ಕ್ರಮ ➤ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ

(ನ್ಯೂಸ್ ಕಡಬ) newskadaba.com ಬೆಳಗಾವಿ, ಅ.29  ರಾಜ್ಯ ಭಾಷೆಯಾದ ಕನ್ನಡವನ್ನು ರೈಲ್ವೆ ಮಂಡಳಿಯ ಆಡಳಿತ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಯಾಗಿ ಜಾರಿಗೆ ತರಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದರು. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಬಲ್ಲ ಅಧಿಕಾರಿಗಳನ್ನೇ ರಾಜ್ಯದಲ್ಲಿ ನೇಮಕ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಸುರೇಶ ಅಂಗಡಿ ತಿಳಿಸಿದರು. ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಕನ್ನಡದಲ್ಲೇ ಮಾಹಿತಿ ನೀಡಲಾಗುತ್ತಿದೆ. ದೇಶದಲ್ಲಿರುವ ರೈಲು ನಿಲ್ದಾಣಗಳಿಗೆ ವಿದೇಶಿ ಜನರು

ಕನ್ನಡವು ರೈಲ್ವೆ ಮಂಡಳಿಯ ಪ್ರಾದೇಶಿಕ ಭಾಷೆಯಾಗಿ ಜಾರಿಗೆ ತರಲು ಕ್ರಮ ➤ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ Read More »

ಕರ್ನಾಟಕ

ಕರ್ನಾಟಕದಲ್ಲಿ ಬರಲಿವೆ ಮೂರು ಹೊಸ ವೈದ್ಯಕೀಯ ಕಾಲೇಜುಗಳು ➤ಕೇಂದ್ರದಿಂದ 325 ಕೋಟಿ ರೂ. ಅನುದಾನ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಅ.29  ನಮ್ಮ ರಾಜ್ಯದಲ್ಲಿ ಮೂರು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪ್ರತಿ ಕಾಲೇಜಿಗೆ 325 ಕೋಟಿ ರೂ. ಅನುದಾನ ಪ್ರಕಟಿಸಿದೆ. ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನೂತನ ಕಾಲೇಜುಗಳು ಸ್ಥಾಪನೆಯಾಗಲಿವೆ. ಇದಕ್ಕಾಗಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ವೆಚ್ಚ ಭರಿಸಬೇಕಿದೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಬರಲಿವೆ ಮೂರು ಹೊಸ ವೈದ್ಯಕೀಯ ಕಾಲೇಜುಗಳು ➤ಕೇಂದ್ರದಿಂದ 325 ಕೋಟಿ ರೂ. ಅನುದಾನ Read More »

ಕರ್ನಾಟಕ

ನಾಡಿಗೆ ಬಂದ ಕಾಡಾನೆ – ಉಪ ವಲಯ ಅರಣ್ಯಾಧಿಕಾರಿ ಮೇಲೆ ದಾಳಿ ➤ ಆನೆಯನ್ನು ಮರಳಿ ಕಾಡಿಗಟ್ಟುತ್ತಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.28. ಉಪ ವಲಯ ಅರಣ್ಯಾಧಿಕಾರಿ ಓರ್ವರ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಎಂಬಲ್ಲಿ ಕಾಡಾನೆಯೊಂದು ನಾಡಿಗೆ ಆಗಮಿಸಿದ್ದು, ಸೋಮವಾರದಂದು ಅರಣ್ಯಾಧಿಕಾರಿಗಳು ಆನೆಯನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದರು‌. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಚೇತನ್ ಮೇಲೆ ಆನೆಯು ದಾಳಿ ನಡೆಸಿದ್ದರಿಂದ, ಚೇತನ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಡಿಗೆ ಬಂದ ಕಾಡಾನೆ – ಉಪ ವಲಯ ಅರಣ್ಯಾಧಿಕಾರಿ ಮೇಲೆ ದಾಳಿ ➤ ಆನೆಯನ್ನು ಮರಳಿ ಕಾಡಿಗಟ್ಟುತ್ತಿದ್ದ ವೇಳೆ ಘಟನೆ Read More »

ಕರ್ನಾಟಕ
Scroll to Top