ಖಾಸಗಿ ಬಸ್ ಒಂದು ಪಲ್ಟಿಯಾಗಿ ಐವರ ಮರಣ, ಗಾಯಗೊಂಡ 20ಕ್ಕೂ ಹೆಚ್ಚು ಜನ

(ನ್ಯೂಸ್ ಕಡಬ) newskadaba.com  ತುಮಕೂರು, .30  ಖಾಸಗಿ ಬಸ್ ಪಲ್ಟಿಯಾಗಿ ಐವರು ದುರ್ಮರಣಕ್ಕೀಡಾಗಿ, 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ದುರ್ಘಟನೆ ಕೊರಟಗೆರೆ, ಜೆಟ್ಟಿ ಅಗ್ರಹಾರದ ಬಳಿ ಇಂದು ನಡೆದಿದೆ.

ಜೆಟ್ಟಿ ಅಗ್ರಹಾರದ ಸಮೀಪ ಕೊರಟಗೆರೆಯಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳುಗಳ ಪೈಕಿ ಮೂವರು ಗಂಭೀರ  ಸ್ಥಿತಿಯಲ್ಲಿದ್ದಾರೆ ಎಂದು  ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top