ಕರ್ನಾಟಕ

ಕುಕ್ಕೇ ಸುಬ್ರಹ್ಮಣ್ಯ: ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ ➤ ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಕೊಡಮಾಡಿದ ಬ್ರಹ್ಮರಥದ ಸಮರ್ಪಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.02. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇಂದು (ಡಿಸೆಂಬರ್ 2) ಸೋಮವಾರ ಬೆಳಗ್ಗೆ 8.14ರ ಧನುರ್ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಸಲದ ವಿಶೇಷತೆಯೆಂದರೆ ಉದ್ಯಮಿಗಳಾದ ಮುತ್ತಪ್ಪ ರೈ ಹಾಗೂ ಅಜಿತ್ ಶೆಟ್ಟಿ ಕಡಬ ಅವರು ದಾನವಾಗಿ ನೀಡಿದ ನೂತನ ಬ್ರಹ್ಮರಥದಲ್ಲಿ ರಥೋತ್ಸವ ನಡೆಯಲಿದೆ. ಅದಕ್ಕಿಂತ ಮೊದಲು ಬ್ರಹ್ಮರಥದ ಸಮರ್ಪಣೆ ಕಾರ್ಯ ನಡೆಯಲಿದೆ. […]

ಕುಕ್ಕೇ ಸುಬ್ರಹ್ಮಣ್ಯ: ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ ➤ ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಕೊಡಮಾಡಿದ ಬ್ರಹ್ಮರಥದ ಸಮರ್ಪಣೆ Read More »

ಕರ್ನಾಟಕ

ಉಡುಪಿ: ಪತ್ನಿ, ಇಬ್ಬರು ಪುತ್ರರನ್ನು ಕೊಚ್ಚಿ ಬರ್ಬರ ಕೊಲೆ ➤ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಉಡುಪಿ, ನ.27. ವ್ಯಕ್ತಿಯೋರ್ವರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಎಂಬಲ್ಲಿ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ.   ಬೆಳ್ವೆ ಗ್ರಾಮದ ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯ ನಾರಾಯಣ ಭಟ್ ಅಲ್ಸೆ (52) ಎಂಬವರು ತನ್ನ ಪತ್ನಿ ಮಾನಸ(50), ಪುತ್ರರಾದ ಸುಧೀಂದ್ರ(14) ಮತ್ತು ಸುದೇಶ್ (8) ಎಂಬವರನ್ನು ಮಾರಕಾಯುಧದಿಂದ ಕೊಚ್ಚಿ ಕೊಂದು ನಂತರ

ಉಡುಪಿ: ಪತ್ನಿ, ಇಬ್ಬರು ಪುತ್ರರನ್ನು ಕೊಚ್ಚಿ ಬರ್ಬರ ಕೊಲೆ ➤ ಬಳಿಕ ಆತ್ಮಹತ್ಯೆಗೆ ಶರಣಾದ ವ್ಯಕ್ತಿ Read More »

ಕರ್ನಾಟಕ

ಬಿಬಿಎ ಪದವಿ ಪರೀಕ್ಷೆ – ಅಂತಿಮ ರ್ಯಾಂಕ್ ಪಟ್ಟಿ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.27. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಎಪ್ರಿಲ್/ಮೇ 2019ರ ಬಿಬಿಎ ಪರೀಕ್ಷೆಯ ವಿಜೇತ ವಿದ್ಯಾರ್ಥಿಗಳ ಅಂತಿಮ ರ್ಯಾಂಕ್ ಪಟ್ಟಿ ಪ್ರಕಟಿಸಲಾಗಿದೆ. ಮಂಗಳೂರು ಎಸ್.ಡಿ.ಎಂ ಕಾಲೇಜಿನ ದೀಕ್ಷಾ ವಿ ಪ್ರಥಮ ರ್ಯಾಂಕ್ – 93.06%, ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸ್ವಾತಿ ದ್ವಿತೀಯ ರ್ಯಾಂಕ್ – 92.22%, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ರೋಶನಿ ಎಂ.ವೈ ತೃತೀಯ ರ್ಯಾಂಕ್ – 91.16%, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಶಬನ ನಾಲ್ಕನೇ

ಬಿಬಿಎ ಪದವಿ ಪರೀಕ್ಷೆ – ಅಂತಿಮ ರ್ಯಾಂಕ್ ಪಟ್ಟಿ Read More »

ಕರ್ನಾಟಕ

ಗಸ್ತು ತಿರುಗುತ್ತಿದ್ದ ವೇಳೆ ವಿಷಜಂತು ಕಡಿತ ➤ ಪಂಜ ವಿಭಾಗದ ಅರಣ್ಯ ರಕ್ಷಕ ಭೀಮಪ್ಪ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.26. ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪಂಜ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಭೀಮಪ್ಪ ಇಲ್ಲಾಳರವರು ವಿಷ ಜಂತು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಭೀಮಪ್ಪರವರು 2009 ರಲ್ಲಿ ಪಂಜ ವಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ವಿಷ ಜಂತು ಕಡಿತಕ್ಕೊಳಗಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಸ್ತು ತಿರುಗುತ್ತಿದ್ದ ವೇಳೆ ವಿಷಜಂತು ಕಡಿತ ➤ ಪಂಜ ವಿಭಾಗದ ಅರಣ್ಯ ರಕ್ಷಕ ಭೀಮಪ್ಪ ಮೃತ್ಯು Read More »

ಕರ್ನಾಟಕ

ಕೇರಳ ರಾಜ್ಯಪಾಲರ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ನ.26. ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರು ನ. 30ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ರೈಲಿನ ಮೂಲಕ ಅಂದು ಬೆಳಿಗ್ಗೆ 5.15 ಕ್ಕೆ ನಗರಕ್ಕೆ ಆಗಮಿಸುವ ರಾಜ್ಯಪಾಲರು, 11 ಗಂಟೆಗೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆಯುವ ಮಂಗಳೂರು ಲಿಟರೆರಿ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಪರಾಹ್ನ 2.15 ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಕೇರಳ ರಾಜ್ಯಪಾಲರ ಪ್ರವಾಸ Read More »

ಕರ್ನಾಟಕ

ಕಡಬ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಸತೀಶ್ ಇನ್ನಿಲ್ಲ ➤ ಭಿಕ್ಷಾಟನೆಯ ಮೂಲಕ ಚಿರಪರಿಚಿತ ರಾಗಿದ್ದ ಸತೀಶ್

(ನ್ಯೂಸ್ ಕಡಬ) newskadaba.com ಕಡಬ, ನ.25. ಕಡಬ ಪರಿಸರದಲ್ಲಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸತೀಶ್ ಸೋಮವಾರದಂದು ನಿಧನರಾಗಿದ್ದಾರೆ. ಮೂಲತಃ ತುಮಕೂರು ನಿವಾಸಿಯಾಗಿದ್ದ ಸತೀಶ್ ಕಡಬದ ಟೋಮ್ ಬಝಾರ್ ಬಳಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಕಡಬ ಪರಿಸರದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಈತ ಸುಮಾರು 10 ವರ್ಷಗಳ ‌ಹಿಂದೆ ಕಡಬಕ್ಕೆ ಆಗಮಿಸಿದ್ದರು. ಈ ಹಿಂದೆ ಈತನ ಮನೆಯವರು ಕಡಬಕ್ಕೆ ಆಗಮಿಸಿ ಕುಶಲೋಪರಿ ವಿಚಾರಿಸಿದ್ದರು. ಸೋಮವಾರದಂದು ನಿಧನರಾದ ಇವರ ಮೃತದೇಹವನ್ನು ಟೋಮ್ ಬಝಾರ್ ಕಟ್ಟಡದ ಮಾಲಕ ತೋಮ್ಸನ್ ರವರ

ಕಡಬ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಸತೀಶ್ ಇನ್ನಿಲ್ಲ ➤ ಭಿಕ್ಷಾಟನೆಯ ಮೂಲಕ ಚಿರಪರಿಚಿತ ರಾಗಿದ್ದ ಸತೀಶ್ Read More »

ಕರ್ನಾಟಕ

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅಪಘಾತ ➤ ಮಾಣಿ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.25. ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಮಾಣಿ ನಿವಾಸಿ ಓರ್ವರು ಮೃತಪಟ್ಟು, ಸುಮಾರು 25 ಮಂದಿ ಗಾಯಗೊಂಡ ಘಟನೆ ಚನ್ನರಾಯಪಟ್ಟಣದ ಹಿರೇಸಾವೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಅಭಿಷೇಕ್ (29) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಿರೆಸಾವಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅಪಘಾತ ➤ ಮಾಣಿ ನಿವಾಸಿ ಮೃತ್ಯು Read More »

ಕರ್ನಾಟಕ

ಕುಕ್ಕೇ ಸುಬ್ರಹ್ಮಣ್ಯ: ವಾರ್ಷಿಕ ಜಾತ್ರೋತ್ಸವ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.24. ಕಾರ್ತಿಕ ಬಹುಳ ದ್ವಾದಶಿಯಾದ ಆದಿತ್ಯವಾರ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭವಾಯಿತು. ಎಲ್ಲಾ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಂಡಿದೆ. ಮುಂಜಾನೆ 8.33ರ ಧನುರ್ ಲಗ್ನ ಸುಮೂಹುರ್ತದಲ್ಲಿ ಕೊಪ್ಪರಿಗೆಗಳನ್ನು ಏರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈಧಿಕ ವಿದಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ

ಕುಕ್ಕೇ ಸುಬ್ರಹ್ಮಣ್ಯ: ವಾರ್ಷಿಕ ಜಾತ್ರೋತ್ಸವ ಆರಂಭ Read More »

ಕರ್ನಾಟಕ

ಪುತ್ತೂರು: ಡಬಲ್ ಮರ್ಡರ್ ಪ್ರಕರಣವನ್ನು ಭೇದಿಸಿದ ಪೊಲೀಸರು ➤ 24 ಗಂಟೆಗಳೊಳಗೆ ಆರೋಪಿ ಅಂದರ್ ➤ ಕೊಲೆಯ ಕಾರಣ ತಿಳಿದು ಬೆಚ್ಚಿಬಿದ್ದ ಸಾರ್ವಜನಿಕರು

ದಿನಾಂಕ 17.11.2019 ರಿಂದ 19.11.2019 ಬೆಳಿಗ್ಗೆ ಸುಮಾರು 09.00 ಗಂಟೆಯ ಅವಧಿಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಕುರಿಯ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿರುತ್ತಾರೆ. ದಿನಾಂಕ 17.11.2019 ರಂದು ರಾತ್ರಿ ಸುಮಾರು 11.00 ಗಂಟೆಗೆ ಆರೋಪಿ ಪುತ್ತೂರು ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ ( 29 ವರ್ಷ) ಎಂಬಾತನು ಕಳ್ಳತನದ ಉದ್ದೇಶದಿಂದ

ಪುತ್ತೂರು: ಡಬಲ್ ಮರ್ಡರ್ ಪ್ರಕರಣವನ್ನು ಭೇದಿಸಿದ ಪೊಲೀಸರು ➤ 24 ಗಂಟೆಗಳೊಳಗೆ ಆರೋಪಿ ಅಂದರ್ ➤ ಕೊಲೆಯ ಕಾರಣ ತಿಳಿದು ಬೆಚ್ಚಿಬಿದ್ದ ಸಾರ್ವಜನಿಕರು Read More »

ಕರ್ನಾಟಕ

ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚೂರಿ ಇರಿತ ➤ ಮದುವೆ ಕಾರ್ಯಕ್ರಮದಲ್ಲಿ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಮೈಸೂರು, ನ.18. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ಯುವಕನೋರ್ವ ಚೂರಿಯಿಂದ ಇರಿದ ಘಟನೆ ಭಾನುವಾರ ತಡರಾತ್ರಿ ಮೈಸೂರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ತನ್ವೀರ್ ಸೇಠ್ ರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ಮೈಸೂರಿನ ಗೌಸಿಯಾನಗರದ ನಿವಾಸಿ ಫರ್ಹಾನ್ ಎಂದು ಗುರುತಿಸಲಾಗಿದೆ. ಮೈಸೂರಿನ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಸಂಬಂಧಿಕರೋರ್ವರ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್ ಭಾಗವಹಿಸಿದ್ದ ವೇಳೆ ಯುವಕನೋರ್ವ ಏಕಾಏಕಿ ಅವರ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು

ಶಾಸಕ ತನ್ವೀರ್ ಸೇಠ್ ಕುತ್ತಿಗೆಗೆ ಚೂರಿ ಇರಿತ ➤ ಮದುವೆ ಕಾರ್ಯಕ್ರಮದಲ್ಲಿ ನಡೆದ ಘಟನೆ Read More »

ಕರ್ನಾಟಕ
Scroll to Top