ಕರ್ನಾಟಕ

ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.08:  ದ.ಕ. ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆ ಮುಂದುವರಿದಿದ್ದು, ನೆರೆ-ಪ್ರವಾಹ, ಗುಡ್ಡ ಕುಸಿತ, ಮನೆಗಳಿಗೆ ಹಾನಿ ಮೊದಲಾದವುಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.   ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸ್ನಾನಘಟ್ಟ ಐದನೇ ದಿನವೂ ಮುಳುಗಡೆಯಾಗಿದೆ. ಇಲ್ಲಿನ ಶೌಚಗೃಹ, ದೇವರ ಅವಭೃತ ಕಟ್ಟೆ ಭಾಗಶಃ ಮುಳುಗಡೆಗೊಂಡಿದೆ. ಡ್ರೆಸ್ಸಿಂಗ್ ರೂಂ, ಲಗೇಜ್ ಕೊಠಡಿ, ರಕ್ಷಕರ ಕೊಠಡಿ ಒಳಗೊಂಡ ಕಟ್ಟಡ ಜಲಾವೃತಗೊಂಡಿದೆ. […]

ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ Read More »

ಕರಾವಳಿ, ಕರ್ನಾಟಕ

ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.08: ಲಾಠಿ ಹಿಡಿದು ಟ್ರಾಫಿಕ್ ಕಂಟ್ರೋಲ್ ಮಾಡುವ ಪೋಲೀಸರು ಹಾರೆ, ಬುಟ್ಟಿ ಹಿಡಿದು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಇದು ಸಾಧ್ಯವಾಗಿದ್ದು ಬಿ.ಸಿ.ರೋಡಿನ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಾಡಿದ ಮಾದರಿ ಕಾರ್ಯದಿಂದಾಗಿ. ಭಾರೀ ಮಳೆಗೆ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳೆದ್ದು ವಾಹನ ಸವಾರರಿಗೆ ಭಾರೀ ಸಂಕಷ್ಟ ಎದುರಾಗಿತ್ತು. ಇದನ್ನೆಲ್ಲಾ ಕಂಡು ಸಂಚಾರ ನಿಯಂತ್ರಣ ಕರ್ತವ್ಯವನ್ನು ಮಾಡುವ ಪೊಲೀಸರೇ ಸ್ವತಃ ಹಾರೆ, ಬುಟ್ಟಿ ಹಿಡಿದು ಹೊಂಡಗಳನ್ನು ಮುಚ್ಚವ

ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ Read More »

ಕರಾವಳಿ, ಕರ್ನಾಟಕ

ಕಡಬ: ಅಂಚೆ ಕಚೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಆ.08:  ಕಳೆದ ದಿನ ಕಡಬ ಅಂಚೆ ಕಚೇರಿ ಸಿಬ್ಬಂದಿಗೆ ಕೊರೋನಾ ದೃಡಪಟ್ಟಿರುವ ಹಿನ್ನೆಲೆಯಲ್ಲಿ ಕಚೇರಿಯನ್ನು 48 ಗಂಟೆ ಸೀಲ್ ಡೌನ್ ಮಾಡಲಾಗಿದೆ. ಕಚೇರಿಯ 59 ವರ್ಷ ಸಿಬ್ಬಂದಿಯ ಕೊವೀಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.   ಈ ಹಿನ್ನಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕ ಮಾಹಿತಿ ಪಡೆಯಲಾಗುತ್ತಿದೆ. ಜೊತೆಗೆ ಕಚೇರಿಯನ್ನು 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.  

ಕಡಬ: ಅಂಚೆ ಕಚೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಏಲಕ್ಕಿಯಿಂದ ಹೀಗೆ ಮಾಡಿ ಕೆಟ್ಟ ದೋಷ ತೆಗೆದುಹಾಕಿ ಮತ್ತು ದಿನ ಭವಿಷ್ಯ

ಜನ ದೃಷ್ಟಿ, ಕೆಟ್ಟ ದೋಷಗಳು, ಮಾಂತ್ರಿಕ ರೂಪದ ಸಮಸ್ಯೆ ಇವುಗಳನ್ನು ಅನುಭವಿಸುತ್ತಿದ್ದರೆ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ, ದೀಪದಲ್ಲಿ ಏಲಕ್ಕಿಯನ್ನು ಹಾಕಿ ಇದರಿಂದ ದುಷ್ಟ ಭಾದೆಗಳಿಂದ ರಕ್ಷಣೆ ಸಿಗುವುದು. ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

ಏಲಕ್ಕಿಯಿಂದ ಹೀಗೆ ಮಾಡಿ ಕೆಟ್ಟ ದೋಷ ತೆಗೆದುಹಾಕಿ ಮತ್ತು ದಿನ ಭವಿಷ್ಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಭಾರೀ ಮಳೆಗೆ ಭೂಕುಸಿತಗೊಂಡ ಹಿನ್ನೆಲೆ ➤ ಆಗಸ್ಟ್ 11 ರ ವರೆಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.07. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಡಿ ಘಾಟ್ ನಲ್ಲಿ ಭೂ ಕುಸಿತಗೊಂಡು ರಸ್ತೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಆಗಸ್ಟ್ 11 ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು, ಆಗಸ್ಟ್ 04 ರಂದು ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಚಾರ್ಮಾಡಿ ಘಾಟ್ ನ ಹಲವೆಡೆ ಭೂಕುಸಿತಗೊಂಡು ರಸ್ತೆಯಲ್ಲಿ

ಭಾರೀ ಮಳೆಗೆ ಭೂಕುಸಿತಗೊಂಡ ಹಿನ್ನೆಲೆ ➤ ಆಗಸ್ಟ್ 11 ರ ವರೆಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ನಿಷೇಧ Read More »

ಕರ್ನಾಟಕ

ಬಂಟ್ವಾಳ: ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆಗೆ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಆ.07:  ದ. ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಶರೀಫ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ವರದಿಯಾಗಿದೆ.   ಆದರೆ ಆತ ಓಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರದ ನಿವಾಸಿಯಾದ

ಬಂಟ್ವಾಳ: ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆಗೆ ಯತ್ನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಆರ್.ಅಶೋಕ್ ಭೇಟಿ ➤ 5 ಕೋಟಿ ರೂ. ಘೋಷಣೆ

(ನ್ಯೂಸ್ ಕಡಬ) newskadaba.com ಉಡುಪಿ , ಆ.07:  ಉಡುಪಿ ಜಿಲ್ಲೆ ಪಡುಬಿದ್ರೆಯ ಕಡಲ್ಕೊರೆತ ಪ್ರದೇಶಕ್ಕೆ ಇಂದು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ನಿಧಿಯಿಂದ ತಲಾ ಐದು ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದರು.     ಸದ್ಯ ಉಡುಪಿ-ಮಂಗಳೂರು, ಕಾರವಾರ ಪ್ರವಾಸದಲ್ಲಿದ್ದೇನೆ. ಅಧಿಕಾರಿಗಳನ್ನು ಅಲರ್ಟ್ ಮಾಡಲು ಈ ಪ್ರವಾಸ ಕೈಗೊಂಡಿದ್ದು, ಯಾವುದೇ ಅಧಿಕಾರಿಗಳು ರಜೆ

ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಆರ್.ಅಶೋಕ್ ಭೇಟಿ ➤ 5 ಕೋಟಿ ರೂ. ಘೋಷಣೆ Read More »

ಕರಾವಳಿ, ಕರ್ನಾಟಕ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರಗೂ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.07:  ಕಳೆದ ಮೂರು ದಿನಗಳ ಹಿಂದಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ ಅವರ ಮಗ ಡಾ.ಯತೀಂದ್ರ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಗ ಡಾ.ಯತೀಂದ್ರ ಅವರಿಬ್ಬರಿಗೂ ಕೊರೋನಾ ಸೋಂಕು ತಗುಲಿದೆ.     ಈ ಕುರಿತಂತು ಟ್ವಿಟ್ ಮಾಡಿರುವ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ, ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರಗೂ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

2020-21ರ ಸಾಲಿನ ಅಧ್ಯಕ್ಷೆಯಾಗಿ ಲಯನ್ ಅರುಂಧತಿ ಶೆಟ್ಟಿ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು , ಆ.07: ಲಯನ್ಸ ಕ್ಲಬ್ ಕಂಕನಾಡಿ ಪಡೀಲಿನ 2020-21ರ ಸಾಲಿನ ಅಧ್ಯಕ್ಷೆಯಾಗಿ ಲಯನ್ ಅರುಂಧತಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.   ಕಾರ್ಯದರ್ಶಿಯಾಗಿ ಲಯನ್ ಎಸ್. ಎಂ. ಐರನ್ ರವರು ಮತ್ತು ಖಜಾಂಚಿಯಾಗಿ ಲಯನ್ ಮಾಧವ ಉಳ್ಳಾಲ್ ಅವರು ಆಯ್ಕೆಯಾಗಿದ್ದಾರೆ.  

2020-21ರ ಸಾಲಿನ ಅಧ್ಯಕ್ಷೆಯಾಗಿ ಲಯನ್ ಅರುಂಧತಿ ಶೆಟ್ಟಿ ಆಯ್ಕೆ Read More »

ಕರಾವಳಿ, ಕರ್ನಾಟಕ

ಆಗಸ್ಟ್‌ ೧೦ಕ್ಕೆ ಎಸ್ಎಸ್ಎಲ್‌ ಸಿ ಫಲಿತಾಂಶ ಪ್ರಕಟ➤ ಶಿಕ್ಷಣ ಸಚಿವರ ಅಧಿಕೃತ ಹೇಳಿಕೆ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಆ.7:  ಕೊರೊನಾದ ಮಧ್ಯೆ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರು ವಿದ್ಯಾರ್ಥಿಗಳಿಗೆ ಸರಕಾರ ಕೊನೆಗೂ ಫಲಿತಾಂಶದ ಸ್ಪಷ್ಟ ದಿನಾಂಕ ತಿಳಿಸಿದೆ. ಆಗಸ್ಟ್ 10 ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಲ್‌ ಸಿ ಪಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರವಿರೋಧ ಚರ್ಚೆಯ ನಡುವೆಯೇ ಜೂನ್ 25ರಿಂದ ಜುಲೈ 4ರವರೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಜ್ಯದಲ್ಲಿ ಎಸ್ಎಸ್ಎಲ್‌ ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಮೌಲ್ಯಮಾಪನ ಹಾಗೂ ಇತರೆ ಪ್ರಕ್ರಿಯೆಯು ಮುಗಿದಿರುವುದರಿಂದ ಆಗಸ್ಟ್

ಆಗಸ್ಟ್‌ ೧೦ಕ್ಕೆ ಎಸ್ಎಸ್ಎಲ್‌ ಸಿ ಫಲಿತಾಂಶ ಪ್ರಕಟ➤ ಶಿಕ್ಷಣ ಸಚಿವರ ಅಧಿಕೃತ ಹೇಳಿಕೆ Read More »

ಕರ್ನಾಟಕ
Scroll to Top