ಕರ್ನಾಟಕ

ನಾಳೆ (ಆ. 10) ಎಸ್ಸೆಸ್ಸೆಲ್ಸಿ ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.9, ರಾಜ್ಯದಾದ್ಯಂತ ಆಗಸ್ಟ್ 10ನೇ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಲಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆಗಸ್ಟ್ 10ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಾದ kseeb.kar.nic.in ಅಥವಾ karresults.nic.in ನಲ್ಲಿಯೂ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು ಎಂದರು. ಅಂದ ಹಾಗೇ ಈ ಬಾರಿಯೂ ಕೂಡ ಉತೀರ್ಣರಾದ ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಮೂಲಕ ಪರೀಕ್ಷೆಯ ಫಲಿತಾಂಶ ದೊರೆಯಲಿದೆ […]

ನಾಳೆ (ಆ. 10) ಎಸ್ಸೆಸ್ಸೆಲ್ಸಿ ಫಲಿತಾಂಶ Read More »

ಕರ್ನಾಟಕ

ಕಡಬ: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು ➤ ನಾಲ್ವರಿಗೆ ಗಾಯ, ಇಬ್ಬರಿಗೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಆ.09. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಮೀನಾಡಿ ನೈಲ ಕ್ರಾಸ್ ಬಳಿ ಭಾನುವಾರದಂದು ಸಂಭವಿಸಿದೆ. ಬೆಂಗಳೂರು ಮೂಲದ ನಾಲ್ವರು ಮಾರುತಿ ಎಸ್ಟೀಮ್ ಕಾರಿನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೀನಾಡಿ ಸಮೀಪದ ನೈಲ ಕ್ರಾಸ್ ಬಳಿಯ ತಿರುವಿನಲ್ಲಿ ಕಾರು ಚಾಲಕನ

ಕಡಬ: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು ➤ ನಾಲ್ವರಿಗೆ ಗಾಯ, ಇಬ್ಬರಿಗೆ ಗಂಭೀರ Read More »

ಕರಾವಳಿ, ಕರ್ನಾಟಕ

ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ ➤ ನೆಲ್ಯಾಡಿಯಲ್ಲಿ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಆ.9, ವರುಣನ ಅಬ್ಬರವು ದಿನೇ ದಿನೇ ಹೆಚ್ಚುತ್ತಿದ್ದು, ಹಲವೆಡೆ ಪ್ರಾಣ ಹಾನಿ ಸಂಭವಿಸುತ್ತಿವೆ. ಇದರ ನಡುವೆ ತಾಲೂಕಿನ ನೆಲ್ಯಾಡಿ ಸಮೀಪ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ತಾಲೂಕಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ವಿನೋದ ಮರಿಯ ಎಂಬವರ ಮನೆಯ ಮೇಲ್ಛಾವಣಿ ಹಾಗೂ ಶೌಚಾಲಯದ ಕಟ್ಟಡವು ಭಾರೀ ಗಾಳಿ ಮಳೆಗೆ ಭಾಗಶಃ ಹಾನಿಗೊಳಗಾಗಿದ್ದು, ಸುಮಾರು 30 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ ➤ ನೆಲ್ಯಾಡಿಯಲ್ಲಿ ಮನೆಗೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುಂಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 09, ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಚತ್ತಾರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪುಂಚತ್ತಾರು ರಾಮಣ್ಣ ಗೌಡ ಎಂಬವರ ಪುತ್ರಿ ನಳಿನಾಕ್ಷಿ (30) ಎಂದು ಗುರುತಿಸಲಾಗಿದೆ. ಇವರು ಮನೆಯ ಸಮೀಪದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ಮನೆಯವರು ಹುಡುಕಾಡಿದಾಗ ನೇಣು ಬಿಗಿದುಕೊಂಡಿದ್ದು ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುಂಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ

ವಶೀಕರಣ ಪ್ರಕ್ರಿಯೆಯಲ್ಲಿ ಇಷ್ಟದೇವತೆಗಳು, ಯಕ್ಷಿಣಿ, ಅಶ್ವಿನಿ ದೇವತೆಗಳು, ಕೃಷ್ಣ, ಪ್ರದ್ಯುಮ್ನ, ಕಾಳಿ ಹೀಗೆ ನಾನಾ ರೀತಿಯಾದಂತಹ ದೇವತೆಗಳನ್ನು ಅಧಿದೇವತೆ ಗಳನ್ನಾಗಿ ಪೂಜಿಸಿ ಆಹ್ವಾನಿಸಲಾಗುತ್ತದೆ. ಈ ವಿಧಾನದಿಂದ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಹಾಗೂ ನಿಮ್ಮ ಮನೋಕಾಮನೆಗಳು ಈಡೇರುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ,

ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬ: ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಆ.9, ಎಸ್ಡಿಪಿಐ ವತಿಯಿಂದ ಇಲ್ಲಿನ ಹಳೇಸ್ಟೇಷನ್ ಎಂಬಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನವು ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ತಾಲೂಕು ಅಧ್ಯಕ್ಷ ರಮ್ಲ ಸನ್ ರೈಸ್ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ಜನರಿಗೂ ತಲುಪಿಸುವ ಇಂತಹ ಮಾದರಿ ಕೆಲಸವನ್ನು ನಮ್ಮ ಪಕ್ಷವು ಆರಂಭದಿಂದಲೂ ರಾಜ್ಯಾದ್ಯಂತ ಮಾಡುತ್ತಿದೆ‌. ನಮ್ಮ ಕಾರ್ಯಕರ್ತರು ಮುಂದೆಯೂ ಇಂತಹ ಜನಪರ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದರು. ಅತಿಥಿಯಾಗಿ ಭಾಗವಹಿಸಿದ ಎಸ್ಡಿಪಿಐ ವಲಯ ಸಮಿತಿ ಸದಸ್ಯ ಹಂಝ ಮಾತನಾಡಿ,

ಕಡಬ: ಎಸ್ಡಿಪಿಐ ವತಿಯಿಂದ ಆಯುಷ್ಮಾನ್ ಅಭಿಯಾನ Read More »

ಕರಾವಳಿ, ಕರ್ನಾಟಕ

ತಲಕಾವೇರಿ ದುರಂತ ➤ ಪ್ರಧಾನ ಅರ್ಚಕರ ಅಣ್ಣ ‘ಆನಂದ ತೀರ್ಥ ಸ್ವಾಮಿ’ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ.08:  ಕಳೆದ ನಾಲ್ಕು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಕಣ್ಮರೆಯಾಗಿದ್ದರು. ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಂತ ರಕ್ಷಣಾ ಸಿಬ್ಬಂದಿಗಳಿಗೆ ಇದೀಗ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಸ್ವಾಮಿ(86) ಅವರ ಮೃತದೇಹ ಎಂದು ಹೇಳಲಾಗುತ್ತಿರುವ ಮೃತದೇಹ ಪತ್ತೆಯಾಗಿದೆ.       ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಐವರು ಕಣ್ಮರೆಯಾಗಿದ್ರು. ಸಚಿವ

ತಲಕಾವೇರಿ ದುರಂತ ➤ ಪ್ರಧಾನ ಅರ್ಚಕರ ಅಣ್ಣ ‘ಆನಂದ ತೀರ್ಥ ಸ್ವಾಮಿ’ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ

ಆಲೆಟ್ಟಿ: ಮದ್ಯರಾತ್ರಿ ಮನೆ ಹಿಂಬದಿಯ ಬರೆ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ದಂಪತಿ

(ನ್ಯೂಸ್ ಕಡಬ) newskadaba.com ಆಲೆಟ್ಟಿ, ಆ.08:  ಈಗಾಗಲೇ, ಕರಾವಳಿ ಗ್ರಾಮೀಣ ಭಾಗಗಳು ಮಳೆಯ ಅಬ್ಬರಕ್ಕೆ ನಲುಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿತಗೊಳ್ಳುತ್ತಿದೆ.  ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ಮೊರಂಗಲ್ಲು ಶಿವರಾಮ ರೈ ಯವರ ಮನೆ ಹಿಂಬದಿ ಭಾರಿ ಪ್ರಮಾಣದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗುಡ್ಡ ಕುಸಿತಗೊಂಡು ಅಪಾರ ಪ್ರಮಾಣದ ನಷ್ಟವಾಗಿದೆ.   ತಡರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಾಯಿ ಜೋರಾಗಿ ಬೊಗಳಿದಾಗ ಮನೆಯ ಒಳಗೆ ಮಲಗಿ ನಿದ್ರಿಸಿದ್ದ ಶಿವರಾಮ ರೈ ದಂಪತಿ ಯವರು  ಎಚ್ಚರಗೊಂಡು ಹೊರಗೆ

ಆಲೆಟ್ಟಿ: ಮದ್ಯರಾತ್ರಿ ಮನೆ ಹಿಂಬದಿಯ ಬರೆ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ದಂಪತಿ Read More »

ಕರಾವಳಿ, ಕರ್ನಾಟಕ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ➤ ಕಡಬದಲ್ಲಿ ಇಂದು 8 ಮಂದಿಯಲ್ಲಿ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಆ. 8, ಗ್ರಾಮೀಣ ಭಾಗದಲ್ಲಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸುತ್ತಿದ್ದು, ಇಂದೂ ಕೂಡಾ ಕಡಬದ ಒಂದೇ ಮನೆಯ ನಾಲ್ಕು ಮಂದಿಯಲ್ಲಿ ದೃಢಪಟ್ಟಿದೆ. ತಾಲೂಕಿನ ಕೋಡಿಂಬಾಳ ಗ್ರಾಮದ ಒಂದೇ ಮನೆಯ 75 ವರ್ಷದ ವೃದ್ಧ, 45 ವರ್ಷದ ವ್ಯಕ್ತಿ, 28 ವರ್ಷದ ಯುವತಿ ಮತ್ತು 67 ವರ್ಷದ ಮಹಿಳೆ ಹಾಗೂ ಕಾಣಿಯೂರು ಗ್ರಾಮದ ಕೈಮಜಲು ನಿವಾಸಿಗಳಾದ ಒಂದೇ ಮನೆಯ 65 ವರ್ಷದ ಮಹಿಳೆ, 23 ವರ್ಷದ ಯುವತಿ, 20 ವರ್ಷದ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ➤ ಕಡಬದಲ್ಲಿ ಇಂದು 8 ಮಂದಿಯಲ್ಲಿ ಸೋಂಕು ದೃಢ Read More »

ಕರಾವಳಿ, ಕರ್ನಾಟಕ

ಮಹಾಕುಸಿತಕ್ಕೆ ತುತ್ತಾಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಆ.08:  ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ಕಳೆದ ವರ್ಷದಂತೆ ಮಹಾಕುಸಿತಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಕೆಲದಿನಗಳಿಂದ ಘಾಟಿಯ ಕೆಲವೆಡೆ ಸಣ್ಣಪ್ರಮಾಣದಲ್ಲಿ ಕುಸಿತ ಆರಂಭಗೊಂಡಿದ್ದು, ಈಗ ಅಲೆಕಾನ್ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿಯೇ ಬಿರುಕು ಬಿಟ್ಟಿದೆ. ಮಲಯಮಾರುತ, ನಾಲ್ಕನೇ ತಿರುವು ಹಾಗೂ ಅಣ್ಣಪ್ಪ ಬೆಟ್ಟ- ಅಲೆಕಾನ್ ನಡುವೆ ಕೆಲದಿನಗಳಿಂದ ರಸ್ತೆ ಬದಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಶುಕ್ರವಾರ ಅಲೆಕಾನ್ ಸಮೀಪ ದರೆ ಕುಸಿದು ರಸ್ತೆಗೆ ಕಲ್ಲುಮಣ್ಣು ಮರ

ಮಹಾಕುಸಿತಕ್ಕೆ ತುತ್ತಾಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್ Read More »

ಕರಾವಳಿ, ಕರ್ನಾಟಕ
Scroll to Top