ಕರ್ನಾಟಕ

ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪತ್ತೆ..!

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.05:  ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ.ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ದುರದೃಷ್ಟ 111 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.     ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಎಲ್ಲರಿಗೂ ಕಪ್ಪು […]

ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪತ್ತೆ..! Read More »

ಕರ್ನಾಟಕ

ಕೊರೋನಾ ಸೋಂಕಿಗೆ ಕಡಬ ತಾಲೂಕಿನಲ್ಲಿ ಇಂದು ಇಬ್ಬರು ಬಲಿ ➤ 89 ವರ್ಷದ ಪುರುಷ ಹಾಗೂ 53 ವರ್ಷದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಕೋವಿಡ್ ಸೋಂಕಿಗೆ ಕಡಬ ತಾಲೂಕಿನಲ್ಲಿ ಇಂದು ಎರಡನೇ ಬಲಿಯಾಗಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಮೃತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಮೃತರನ್ನು ಬೆಳಂದೂರು ಗ್ರಾಮದ ಅಬೀರ ನಿವಾಸಿ 57 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌.      

ಕೊರೋನಾ ಸೋಂಕಿಗೆ ಕಡಬ ತಾಲೂಕಿನಲ್ಲಿ ಇಂದು ಇಬ್ಬರು ಬಲಿ ➤ 89 ವರ್ಷದ ಪುರುಷ ಹಾಗೂ 53 ವರ್ಷದ ಮಹಿಳೆ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಎಸ್ಸಾರ್ಟಿಸಿ ರಾಜ್ಯದ ಕೈ ತಪ್ಪಿಲ್ಲ… ಇದು ನಮ್ಮದೇ ಆಸ್ತಿ..! ➤ KSRTC ಎಂಡಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.05. ಕೆಎಸ್ಸಾರ್ಟಿಸಿ ನಮ್ಮದೇ ಆಸ್ತಿಯಾಗಿದ್ದು, ಈ ಬಗ್ಗೆ ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಮತ್ತು ಕೇರಳ ನಡುವಿನ ಕೆಎಸ್ಸಾರ್ಟಿಸಿ ಟ್ರೇಡ್‌ಮಾರ್ಕ್‌ ಪ್ರಕರಣದಲ್ಲಿ ಕೇಂದ್ರ ಟ್ರೇಡ್‌ಮಾರ್ಕ್‌ ರಿಜಿಸ್ಟ್ರಿ ಅಥವಾ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯು ಯಾವುದೇ ಆದೇಶ ಹೊರಡಿಸಿಲ್ಲ. ಕೆಎಸ್ಸಾರ್ಟಿಸಿಯು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ 2010ರಲ್ಲಿ ಅರ್ಜಿ ಸಲ್ಲಿಸಿ, 2013ರಲ್ಲಿ ಅನುಮೋದನೆ ಪಡೆದುಕೊಂಡಿದ್ದು, 2023ರ ವರೆಗೆ ಇದರ ಅವಧಿ ಮುಂದುವರಿಯಲಿದೆ.

ಕೆಎಸ್ಸಾರ್ಟಿಸಿ ರಾಜ್ಯದ ಕೈ ತಪ್ಪಿಲ್ಲ… ಇದು ನಮ್ಮದೇ ಆಸ್ತಿ..! ➤ KSRTC ಎಂಡಿ ಸ್ಪಷ್ಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಾಕ್‍ಡೌನ್ ನಿಯಮ ಪಾಲನೆಯ ಜವಾಬ್ದಾರಿ ಪೊಲೀಸರಿಗೆ ಮಾತ್ರವೇ.? ➤ ಎಸಿ ಸೂಚನೆಯಂತೆ ಇಂದಿನಿಂದ ಅಲರ್ಟ್ ಆಗ್ತಾರಾ ಅಧಿಕಾರಿಗಳು..?

✍? ವಿಜಯ ಕುಮಾರ್ (ನ್ಯೂಸ್ ಕಡಬ) newskadaba.com ಕಡಬ, ಜೂ.04. ಹಲವಾರು ಕಾರಣಗಳಿಂದ ದಿನದಿಂದ ದಿನಕ್ಕೆ ಕಡಬ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಕೂಡ ಸಂಶಯ ಉಂಟಾಗುತ್ತಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಸರಕಾರ ಮತ್ತೆ ಲಾಕ್‍ಡೌನ್ ಮುಂದುವರಿಸಿ ಆದೇಶಿಸಿದೆ. ಸರಕಾರ ಯಾವುದೇ ಆದೇಶಗಳನ್ನು ಮಾಡಿದರೂ ಜನ ಅದನ್ನು ಯಥಾವತ್ತಾಗಿ ಪಾಲನೆ ಮಾಡುವುದಿಲ್ಲ, ಯಾಕೆಂದರೆ ಅಧಿಕಾರಿಗಳು ದಿನಂಪ್ರತಿ ಅದನ್ನು ಹೇಳುತ್ತಾ ಬರಬೇಕಾಗುತ್ತದೆ, ಆದರೆ ಇಲ್ಲಿ ಲಾಕ್‍ಡೌನ್

ಲಾಕ್‍ಡೌನ್ ನಿಯಮ ಪಾಲನೆಯ ಜವಾಬ್ದಾರಿ ಪೊಲೀಸರಿಗೆ ಮಾತ್ರವೇ.? ➤ ಎಸಿ ಸೂಚನೆಯಂತೆ ಇಂದಿನಿಂದ ಅಲರ್ಟ್ ಆಗ್ತಾರಾ ಅಧಿಕಾರಿಗಳು..? Read More »

ಕರಾವಳಿ, ಕರ್ನಾಟಕ, ವಿಶೇಷ ಲೇಖನಗಳು

ಬ್ರೇಕ್ ಎಂದು ಎಕ್ಸ್‌ಲೇಟರ್ ತುಳಿದ ಚಾಲಕಿ ➤ ಕ್ಷಣಮಾತ್ರದಲ್ಲಿ ಬಾವಿಯೊಳಗೆ ಬಿದ್ದ ಕಾರು

(ನ್ಯೂಸ್ ಕಡಬ) newskadaba.com ಉಡುಪಿ, ಜೂ.04. ಬ್ರೇಕ್ ಎಂದು ತಿಳಿದು ಎಕ್ಸಲೇಟರ್​ ತುಳಿದ ಪರಿಣಾಮ ಕಾರೊಂದು ಬಾವಿಯೊಳಗಡೆ ಬಿದ್ದ ಘಟನೆ ಉಡುಪಿಯಲ್ಲಿ‌ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ನಿವಾಸಿ ಶ್ರೀನಿವಾಸ ಅಡಿಗ ಎಂಬವರ ಸೊಸೆ ಕಾರನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಬ್ರೇಕ್ ಬದಲಿಗೆ ಎಕ್ಸಲೇಟರನ್ನು ತುಳಿದಿದ್ದು, ಈ ವೇಳೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಕಾರು ನೇರವಾಗಿ ಮನೆಯ ಬಾವಿಯೊಳಗೆ ಬಿದ್ದಿದೆ. ಗಂಭೀರತೆಯನ್ನು ಅರಿತ ಚಾಲಕಿಯು ತಕ್ಷಣವೇ ಕಾರಿನಿಂದ ಹೊರಗಡೆ ಹಾರಿದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ

ಬ್ರೇಕ್ ಎಂದು ಎಕ್ಸ್‌ಲೇಟರ್ ತುಳಿದ ಚಾಲಕಿ ➤ ಕ್ಷಣಮಾತ್ರದಲ್ಲಿ ಬಾವಿಯೊಳಗೆ ಬಿದ್ದ ಕಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಮನವಿ

(ನ್ಯೂಸ್ ಕಡಬ) Newskadaba.com ಸಿರುಗುಪ್ಪ, ಜೂ. 04. ವೈದ್ಯಕೀಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಅರೆವೈದ್ಯಕೀಯ ಕೋರ್ಸ್ ಗೆ ಪ್ರತ್ಯೇಕವಾಗಿ ಸರಕಾರದ ಮಂಡಳಿ ಇಲ್ಲದ ಕಾರಣ ಅರೆವೈದ್ಯಕೀಯ ಪದವೀಧರರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತದೆ.   ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ವರ್ಷಾನುವರ್ಷ

ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಮನವಿ Read More »

ಕರ್ನಾಟಕ

ರಮೇಶ್ ಜಾರಕಿಹೊಳಿಗೆ ಮತ್ತೆ ‘ಸೆಕ್ಸ್ ಸಿಡಿ’ ಕಂಟಕ ➤ ಸಂಪುಟ ಸೇರ್ಪಡೆಗೆ ಮುಳುವಾದ ಸಿಡಿ ಪ್ರಕರಣ

(ನ್ಯೂಸ್ ಕಡಬ) newskadaba com ಬೆಂಗಳೂರು, ಜೂ.04. ಸೆಕ್ಸ್ ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ನ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದ್ದು, ಸದ್ಯಕ್ಕೆ ಸಚಿವ ಸಂಪುಟಕ್ಕೆ ಸೇರಲು ತೆರೆಮರೆಯಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ. ಸಚಿವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದರಲ್ಲದೆ ಈ ಬಗ್ಗೆ ತೆರೆಮರೆಯ ಕಸರತ್ತು ನಡೆದಿತ್ತು. ಆದರೆ ಇದೀಗ ಸೆಕ್ಸ್ ಸಿಡಿ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಪ್ರಕ್ರಿಯೆಯನ್ನು ಎಸ್ಐಟಿಯು ಮುಂದೂಡಿದ್ದು,

ರಮೇಶ್ ಜಾರಕಿಹೊಳಿಗೆ ಮತ್ತೆ ‘ಸೆಕ್ಸ್ ಸಿಡಿ’ ಕಂಟಕ ➤ ಸಂಪುಟ ಸೇರ್ಪಡೆಗೆ ಮುಳುವಾದ ಸಿಡಿ ಪ್ರಕರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.04. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾದ ಘಟನೆ ಶುಕ್ರವಾರ ಸಂಜೆ ಬೆಂಗಳೂರಿನ ನೆಲಮಂಗಲ ಸಮೀಪ ನಡೆದಿದೆ. ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ವಾಪಾಸಾಗುತ್ತಿದ್ದ ವೇಳೆ ವಿಪರೀತ ಮಳೆಯ ಹಿನ್ನೆಲೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಇವರಿದ್ದ ಹೆಲಿಕಾಪ್ಟರ್ ನೆಲಮಂಗಲದ ಟಿ. ಬೇಗೂರು ಬಳಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶವಾಗಿದೆ. ಹೆಲಿಕಾಪ್ಟರ್ ನಲ್ಲಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ

ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪರಿಂದ ಗುಡ್ ನ್ಯೂಸ್ ➤ ಅದೇನೆಂದರೆ…!!

(ನ್ಯೂಸ್ ಕಡಬ) newskadaba.com ಬೆಳಗಾವಿ, ಜೂ.04. ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹತೋಟಿಗೆ ಬಂದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರದಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ. ಕೊರೋನಾ ಸೋಂಕಿನ ಆತಂಕ ಸುಧಾರಣೆ ಕಂಡರೆ ಮಾತ್ರ ಪರೀಕ್ಷೆ ನಡೆಸಲಾಗುವುದು. ನಿಯಂತ್ರಣಕ್ಕೆ ಬರದಿದ್ದರೆ ಪರೀಕ್ಷೆಯನ್ನು ರದ್ದು ಪಡಿಸಲಾಗುವುದು ಎಂದರು.      

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪರಿಂದ ಗುಡ್ ನ್ಯೂಸ್ ➤ ಅದೇನೆಂದರೆ…!! Read More »

ಕರ್ನಾಟಕ

ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ಇಲ್ಲಿನ ಕುಂಜತ್ತಬೈಲ್ ದೇವಿನಗರದಲ್ಲಿ ಮನೆಯೊಂದರ ಬಳಿ ಜುಗಾರಿ ಆಡುತ್ತಿದ್ದ 8 ಮಂದಿ ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಗಿಲ್ಬರ್ಟ್ ನೊರೊನ್ಹಾ, ರಾಜು, ರಿಜ್ವಾನ್, ಶಿವಾಜಿ, ಅಲೆಗ್ಸಾಂಡರ್, ತಂಗಸ್ವಾಮಿ, ಮಂಜುನಾಥ ಜಾಗೂ ಸ್ಟಿವಾರ್ಟ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಆಟಕ್ಕೆ ಬಳಸಿದ 13,775 ರೂ. ನಗದು ಸಹಿತ 15,225 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top