ಕೊರೋನಾ ಸೋಂಕಿಗೆ ಕಡಬ ತಾಲೂಕಿನಲ್ಲಿ ಇಂದು ಇಬ್ಬರು ಬಲಿ ➤ 89 ವರ್ಷದ ಪುರುಷ ಹಾಗೂ 53 ವರ್ಷದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಕೋವಿಡ್ ಸೋಂಕಿಗೆ ಕಡಬ ತಾಲೂಕಿನಲ್ಲಿ ಇಂದು ಎರಡನೇ ಬಲಿಯಾಗಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಮೃತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.

ಮೃತರನ್ನು ಬೆಳಂದೂರು ಗ್ರಾಮದ ಅಬೀರ ನಿವಾಸಿ 57 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌.

 

 

 

Scroll to Top