ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 04. ಇಲ್ಲಿನ ಕುಂಜತ್ತಬೈಲ್ ದೇವಿನಗರದಲ್ಲಿ ಮನೆಯೊಂದರ ಬಳಿ ಜುಗಾರಿ ಆಡುತ್ತಿದ್ದ 8 ಮಂದಿ ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಗಿಲ್ಬರ್ಟ್ ನೊರೊನ್ಹಾ, ರಾಜು, ರಿಜ್ವಾನ್, ಶಿವಾಜಿ, ಅಲೆಗ್ಸಾಂಡರ್, ತಂಗಸ್ವಾಮಿ, ಮಂಜುನಾಥ ಜಾಗೂ ಸ್ಟಿವಾರ್ಟ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಆಟಕ್ಕೆ ಬಳಸಿದ 13,775 ರೂ. ನಗದು ಸಹಿತ 15,225 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Scroll to Top