ಕರ್ನಾಟಕ

ಪಂಜ: ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಜೂ. 04. ಪಂಜ ವಲಯ ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ರವರು ಜೂ.1 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.   ಬಿ.ಎಸ್ಸಿ ಫಾರೆಸ್ಟ್ರಿ ವಿದ್ಯಾಭ್ಯಾಸವನ್ನು ಶಿರಸಿಯಲ್ಲಿ ಪೂರೈಸಿದ ಇವರು ಉತ್ತರಾಖಾಂಡ್ ನಲ್ಲಿ ತರಬೇತಿ ಪಡೆದಿದ್ದಾರೆ. ಬಳಿಕ 6 ತಿಂಗಳ ಕಾಲ ಬೇರೆ ಬೇರೆ ವಲಯದಲ್ಲಿ ಕ್ಷೇತ್ರ ಮಟ್ಟದ ತರಬೇತಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ತಿಂಗಳ ಕಾಲ ಪಂಜ ವಲಯದ ವಲಯ ಅರಣ್ಯಾಧಿಕಾರಿಯವರೊಂದಿ 6 ತಿಂಗಳು ಕ್ಷೇತ್ರ ಮಟ್ಟದ ತರಬೇತಿ ಪಡೆದ […]

ಪಂಜ: ಅರಣ್ಯ ಇಲಾಖೆಯ ಪ್ರೊಬೆಷನರಿ ವಲಯ ಅರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ಕರ್ತವ್ಯಕ್ಕೆ ಹಾಜರು Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ಈ ಬಾರಿ ವಿಭಿನ್ನವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ➤ ಶಿಕ್ಷಣ ಸಚಿವರಿಂದ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.04. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ವಿಜ್ಞಾನ, ಗಣಿತ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ಒಂದೇ ಪೇಪರ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದರು. ಒಟ್ಟು ಎರಡು ಪರೀಕ್ಷೆಗಳು ನಡೆಯಲಿದ್ದು, ಕೊರೋನಾ ಬಾಧಿತರಿಗೆ ಮತ್ತೊಂದು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಿಭಿನ್ನವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ➤ ಶಿಕ್ಷಣ ಸಚಿವರಿಂದ ಆದೇಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ➤ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.04. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ನೀಡಿರುವ ಸರಕಾರವು ಕೊರೋನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಪ್ರಥಮ ಪಿಯು ಪರೀಕ್ಷೆಯ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ನೇರವಾಗಿ ತೇರ್ಗಡೆಗೊಳಿಸಲಾಗುತ್ತದೆ. ಪರೀಕ್ಷೆಯ ಬಗ್ಗೆ ಸಮಾಧಾನವಿಲ್ಲದ ವಿದ್ಯಾರ್ಥಿಗಳಿಗೆ ತಡವಾಗಿ ಪರೀಕ್ಷೆ ನಡೆಸಲಾಗುವುದೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.      

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ➤ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಅಪರಿಚಿತ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿದ ಸೇವಾ ಭಾರತಿ ➤ ಕಡಬ ಪೊಲೀಸರ ಸಾಥ್

(ನ್ಯೂಸ್ ಕಡಬ) newskadaba.com ಕಡಬ, ಜೂ.04. ತಾಲೂಕಿನ ಮರ್ದಾಳ, ಕೋಡಿಂಬಾಳ ಹಾಗೂ ಕಡಬ ಪೇಟೆಯಲ್ಲಿ ಕಳೆದ ಮೂರು ದಿನಗಳಿಂದ ಅಲೆದಾಡುತ್ತಿದ್ದ ಅಪರಿಚಿತ ಮಹಿಳೆಯನ್ನು ಸೇವಾಭಾರತಿಯ ವತಿಯಿಂದ ಆಶ್ರಮಕ್ಕೆ ಕರೆದೊಯ್ಯಲಾಯಿತು. ಸುಮಾರು 35 ರಿಂದ 40 ವರ್ಷ ಪ್ರಾಯದ ಹಿಂದಿ ಭಾಷೆ ಮಾತನಾಡುವ ಮಹಿಳೆಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಿದ ನಂತರ ಸೇವಾಭಾರತಿಯ ಅಂಬ್ಯುಲೆನ್ಸ್ ನಲ್ಲಿ ಕೇರಳದ ದೈಗೋಳಿ ಎಂಬಲ್ಲಿನ ಸಾಯಿ ನಿಕೇತನ ಆಶ್ರಮಕ್ಕೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ

ಕಡಬ: ಅಪರಿಚಿತ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿದ ಸೇವಾ ಭಾರತಿ ➤ ಕಡಬ ಪೊಲೀಸರ ಸಾಥ್ Read More »

ಕರ್ನಾಟಕ

ತಹಶೀಲ್ದಾರ್ ಬಳಿ ಇಲ್ಲ ತಾಲೂಕು ವ್ಯಾಪ್ತಿಯ ಕೊರೋನಾ ಅಂಕಿ ಅಂಶ..! ಅಧಿಕಾರಿಗಳೇ ನಿರ್ಲಕ್ಷ್ಯಿಸಿದರೆ ಸಿಬಂದಿಗಳನ್ನು ಕೇಳುವವರು ಯಾರು?

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಆರೋಗ್ಯ ಇಲಾಖೆಯ ವರದಿಯಂತೆ ಜೂ.03ರಂದು ಕಡಬ ತಾಲೂಕು ವ್ಯಾಪ್ತಿಯ 98 ಮಂದಿಗೆ ಕೊರೊನಾ ದೃಢಪಟ್ಟಿದೆ. ಆದರೆ ಕಡಬ ತಹಶೀಲ್ದಾರ್ ಬಳಿ ಈ ಕುರಿತು ಯಾವುದೇ ಮಾಹಿತಿ ಇಲ್ಲದಿರುವುದು ಆಶ್ಚರ್ಯ ತಂದಿದೆ. ಕಡಬ ತಾಲೂಕಿನ ಕೊರೋನಾ ಅಂಕಿ ಅಂಶಗಳ ಬಗ್ಗೆ ತಹಶೀಲ್ದಾರ್ ಬಳಿ ಮಾಧ್ಯಮದವರು ಮಾಹಿತಿ ಕೇಳಿದರೆ ಅರೋಗ್ಯ ಇಲಾಖೆಯವರಿಂದ ಮಾಹಿತಿ ಪಡೆದುಕೊಳ್ಳಿ ಎನ್ನುವ ಉತ್ತರ ಬರುತ್ತದೆ. ತಾಲೂಕಿನ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು

ತಹಶೀಲ್ದಾರ್ ಬಳಿ ಇಲ್ಲ ತಾಲೂಕು ವ್ಯಾಪ್ತಿಯ ಕೊರೋನಾ ಅಂಕಿ ಅಂಶ..! ಅಧಿಕಾರಿಗಳೇ ನಿರ್ಲಕ್ಷ್ಯಿಸಿದರೆ ಸಿಬಂದಿಗಳನ್ನು ಕೇಳುವವರು ಯಾರು? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿ ಜನತೆಗೆ ಜೀವವಾಯು ಒದಗಿಸಿದ ಖ್ಯಾತ ನಟ ಸೋನು ಸೂದ್..! ➤ ರೈಲ್ವೇ ನಿಲ್ದಾಣದಲ್ಲಿ ಆರಂಭವಾಯಿತು ರ್ಯಾಪಿಡ್ ಆಕ್ಸಿಜನ್ ಕೇಂದ್ರ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ.03. ಖ್ಯಾತ ಬಾಲಿವುಡ್ ನಟ ಸೋನು ಸೂದ್ ಇವರ “ಸೂದ್ ಚಾರಿಟಿ” ವತಿಯಿಂದ ರ್ಯಾಪಿಡ್ ಆಕ್ಸಿಜನ್ ಕೇಂದ್ರವು ಈಗಾಗಲೇ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಆರಂಭಗೊಂಡಿದೆ. ಕೊರೋನಾ ಹಾವಳಿಯಿಂದಾಗಿ ಹಲವಾರು ರೋಗಿಗಳು ಸೋಂಕು ಪೀಡಿತರಾಗಿ ಉಸಿರಾಟದ ಸಮಸ್ಯೆಯಿಂದ ಜೀವಕಳೆದುಕೊಳ್ಳುತ್ತಿರುವ ಹಿನ್ನೆಲೆ, ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಕರ್ನಾಟಕ ರೈಲ್ವೇ ಪೊಲೀಸ್ ಇಲಾಖೆ ಕೂಡಾ ಕೈಜೋಡಿಸಿದೆ. ಅಲ್ಲದೇ

ಕರಾವಳಿ ಜನತೆಗೆ ಜೀವವಾಯು ಒದಗಿಸಿದ ಖ್ಯಾತ ನಟ ಸೋನು ಸೂದ್..! ➤ ರೈಲ್ವೇ ನಿಲ್ದಾಣದಲ್ಲಿ ಆರಂಭವಾಯಿತು ರ್ಯಾಪಿಡ್ ಆಕ್ಸಿಜನ್ ಕೇಂದ್ರ Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು..? ➤ ಕುತೂಹಲ ಮೂಡಿಸಿದೆ ಶಿಕ್ಷಣ ಸಚಿವರ ನಾಳೆಯ ಸುದ್ದಿಗೋಷ್ಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.03. ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮಂಡಳಿ ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದ್ದು, ರಾಜ್ಯದಲ್ಲಿಯೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ರದ್ದತಿಯ ಬಗ್ಗೆ ನಾಳೆ ಸ್ಪಷ್ಟವಾದ ನಿರ್ಧಾರ ಹೊರಬರಲಿದೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ನಾಳೆ (ಜೂ.04) ಬೆಳಗ್ಗೆ 10 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದು, ಶಿಕ್ಷಣ ಸಚಿವರು

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು..? ➤ ಕುತೂಹಲ ಮೂಡಿಸಿದೆ ಶಿಕ್ಷಣ ಸಚಿವರ ನಾಳೆಯ ಸುದ್ದಿಗೋಷ್ಟಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

BREAKING: ರಾಜ್ಯದಲ್ಲಿ ಮತ್ತೆ ಏಳು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಕೆ ➤ ಜೂ.14 ರ ವರೆಗೆ ಲಾಕ್‍ಡೌನ್ ಘೋಷಿಸಿದ ಸಿಎಂ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.03. ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಗುರುವಾರದಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜೂ.7ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಕೊರೋನ ಪ್ರಕರಣ ಇಳಿಮುಖವಾದರೂ ವೈರಾಣು ಹರಡುವ ಸರಪಳಿ ಮುಂದುವರಿದಿದ್ದು, ಮತ್ತೆ ಒಂದು ವಾರಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದೆ. ಹೀಗಾಗಿ ಜೂ.14ರ ಬೆಳಗ್ಗೆ 6 ಗಂಟೆ ವರೆಗೆ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಇರಲಿದೆ ಎಂದವರು

BREAKING: ರಾಜ್ಯದಲ್ಲಿ ಮತ್ತೆ ಏಳು ದಿನಗಳ ಕಾಲ ಲಾಕ್‍ಡೌನ್ ಮುಂದುವರಿಕೆ ➤ ಜೂ.14 ರ ವರೆಗೆ ಲಾಕ್‍ಡೌನ್ ಘೋಷಿಸಿದ ಸಿಎಂ ಯಡಿಯೂರಪ್ಪ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ತಂದೆ ಅಂತ್ಯಸಂಸ್ಕಾರ ಸಂದರ್ಭ ಹೃದಯಾಘಾತಕ್ಕೊಳಗಾಗಿ ಮಗ ಮೃತ್ಯು.!?

(ನ್ಯೂಸ್ ಕಡಬ) newskadaba,ವಿಟ್ಲ,ಜೂ.02: ಕೋವಿಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನಡೆಸುತ್ತಿರುವಾಗ ಆರೋಗ್ಯ ವ್ಯತ್ಯಯವಾಗಿ ಮಗನೂ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ನಡೆದಿದೆ.ಪುಣಚ ಗ್ರಾಮದ ನಿವಾಸಿ ಪ್ರೊಪೆಸರ್ ಭುಜಂಗ ಶೆಟ್ಟಿ ಹಾಗೂ ಅವರ ಶೈಲೇಶ್ ಒಂದೇ ದಿನ ಅನಾರೋಗ್ಯ ತುತ್ತಾಗಿ ಮೃತ ಪಟ್ಟವರು.   ತಂದೆಯ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಕೋವಿಡ್ ನಿಯಾಮಾವಳಿಯಂತೆ ನಡೆಯುತ್ತಿತ್ತು.ಈ ಸಂದರ್ಭ ಪುತ್ರ ಶೈಲೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.    

ವಿಟ್ಲ: ತಂದೆ ಅಂತ್ಯಸಂಸ್ಕಾರ ಸಂದರ್ಭ ಹೃದಯಾಘಾತಕ್ಕೊಳಗಾಗಿ ಮಗ ಮೃತ್ಯು.!? Read More »

ಕರಾವಳಿ, ಕರ್ನಾಟಕ

ಇಂದು ಏರಿಕೆಯಾಗದ ಪೆಟ್ರೋಲ್, ಡೀಸೆಲ್ ಬೆಲೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.02: ಬೆಂಗಳೂರು, ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಕಳೆದ 3 ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಕಳೆದೆರಡು ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಜೈಪುರದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿದೆ.     ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್

ಇಂದು ಏರಿಕೆಯಾಗದ ಪೆಟ್ರೋಲ್, ಡೀಸೆಲ್ ಬೆಲೆ Read More »

ಕರ್ನಾಟಕ
Scroll to Top