ಕರ್ನಾಟಕ

ಪ್ರೇಮಿಗಳ ದಿನಕ್ಕೆ ಕೇಂದ್ರ ಸರಕಾರ ರಜೆ ಘೋಷಿಸಲು ವಾಟಾಳ್ ನಾಗರಾಜ್ ಆಗ್ರಹ ► ಕುರಿಗಳಿಗೆ ಮದುವೆ ಮಾಡುವ ಮೂಲಕ ‘ವ್ಯಾಲೆಂಟೈನ್ಸ್ ಡೇ’ ಆಚರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.14. ಪ್ರೀತಿಸಿ ಮದುವೆಯಾಗುವ ಜೋಡಿಗೆ ರಾಜ್ಯ ಸರ್ಕಾರ 50 ಸಾವಿರದಿಂದ 1 ಲಕ್ಷ ಪ್ರೋತ್ಸಾಹ ಧನ ನೀಡಲಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಬುಧವಾರ ಕುರಿಗಳಿಗೆ ಮದುವೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿ ಮಾತನಾಡಿದ ವಾಟಾಳ್ ನಾಗರಾಜ್, ಪ್ರೇಮಿಗಳ ದಿನವನ್ನು ನಾವು ವಿರೋಧಿಸಬಾರದು. ಪ್ರೇಮಿಗಳ ದಿನದಂದು ಕೇಂದ್ರ ಸರ್ಕಾರ ಒಂದು ದಿನ ರಜೆ ಘೋಷಿಸಬೇಕು. ಪ್ರೀತಿಗೆ ಯಾವುದೇ ಜಾತಿ […]

ಪ್ರೇಮಿಗಳ ದಿನಕ್ಕೆ ಕೇಂದ್ರ ಸರಕಾರ ರಜೆ ಘೋಷಿಸಲು ವಾಟಾಳ್ ನಾಗರಾಜ್ ಆಗ್ರಹ ► ಕುರಿಗಳಿಗೆ ಮದುವೆ ಮಾಡುವ ಮೂಲಕ ‘ವ್ಯಾಲೆಂಟೈನ್ಸ್ ಡೇ’ ಆಚರಣೆ Read More »

ಕರ್ನಾಟಕ

ಮೊಬೈಲ್ ಚಾರ್ಜಿಂಗ್ ಪ್ಲಗ್ ತೆಗೆಯುವಾಗ ವಿದ್ಯುತ್ ಶಾಕ್ ► ಯುವಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಫೆ.13. ಮೊಬೈಲ್ ಚಾರ್ಜಿಂಗ್‌ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಸ್ಪರ್ಶವಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಶ್ರೀರಂಗಪಟ್ಟಣದ ತಾಲೂಕಿನ ಬಸವಪುರ ನಿವಾಸಿ ಸಾಗರ್ (20) ಎಂದು ಗುರುತಿಸಲಾಗಿದೆ. ಗೂಡ್ಸ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಸಾಗರ್ ಇಂದು ಬಾಡಿಗೆಗಾಗಿ ಬಂದಿದ್ದ ವೇಳೆ ಮೊಬೈಲ್ ಚಾರ್ಜ್ ಇಲ್ಲದ ಕಾರಣ ಮೈಸೂರು-ಬನ್ನೂರು ರಸ್ತೆಯಲ್ಲಿರುವ ದೇವೇಗೌಡ ವೃತ್ತದ ಸಮೀಪವಿರುವ ಸಿಮೆಂಟ್ ಅಂಗಡಿಯಲ್ಲಿ ಚಾರ್ಜಿಗೆ ಇಟ್ಟಿದ್ದ ಎನ್ನಲಾಗಿದೆ. ಬಾಡಿಗೆಗೆ ಹೋಗಲು ಅಣಿಯಾದ ಈತ

ಮೊಬೈಲ್ ಚಾರ್ಜಿಂಗ್ ಪ್ಲಗ್ ತೆಗೆಯುವಾಗ ವಿದ್ಯುತ್ ಶಾಕ್ ► ಯುವಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ರಾಜ್ಯದ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ► ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಗೆ ಪ್ರತ್ಯುತ್ತರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ನಾನು ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದು, 13 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಒಟ್ಟು ಆಸ್ತಿಯ ಲೆಕ್ಕ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ ತಮ್ಮಂದಿರ ಎಲ್ಲ ಆಸ್ತಿಯ ವಿವರವನ್ನೂ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗಿತ್ತು. ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾಗಿದ್ದು, ಈಗ ಕುಟುಂಬದ

ರಾಜ್ಯದ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ► ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಸಮೀಕ್ಷೆಗೆ ಪ್ರತ್ಯುತ್ತರ Read More »

ಕರ್ನಾಟಕ

ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.13. ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ‌ ಚಿಕ್ಕಮಗಳೂರಿನಲ್ಲಿ ಸೋಮವಾರದಂದು ನಡೆದಿದೆ. ಮೃತ ಬಾಲಕನನ್ನು ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಸಮೀಪದ ನಿವಾಸಿ ದುರ್ಗಾ ಪ್ರಸಾದ್ ಎಂಬವರ ಪುತ್ರ ಅನೀಶ್ (3) ಎಂದು ಗುರುತಿಸಲಾಗಿದೆ.‌ಅನೀಶ್ ನನ್ನು ಮನೆಯಲ್ಲಿ ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿದ್ದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಸಿರುಗಟ್ಟಿ ಮಗು ಮೃತಪಟ್ಟರೆನ್ನಲಾಗಿದೆ.

ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು Read More »

ಕರ್ನಾಟಕ

ಮಲ್ಪೆ: ಬೈಕ್ – ಬಸ್ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಫೆ.12. ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರದಂದು ಮಲ್ಪೆಯಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ಹೆಬ್ರಿಯ ಸೋಮೇಶ್ವರ ನಿವಾಸಿ ಮಂಜುನಾಥ್ ನಾಯ್ಕ್ (26) ಎಂದು ಗುರುತಿಸಲಾಗಿದೆ. ಇವರು ಸಂಚರಿಸುತ್ತಿದ್ದ ಬೈಕಿಗೆ ಮಲ್ಪೆ ಬೀಚ್ ಬಳಿಯ ವಡಂಬಾಂಡೇಶ್ವರ ಎಂಬಲ್ಲಿ ಬಸ್ ಢಿಕ್ಕಿಯಾದುದರಿಂದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟರು. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಮಲ್ಪೆ: ಬೈಕ್ – ಬಸ್ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ತೆಂಗಿನ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.11. ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿದ ಪರಿಣಾಮ ಶಿಕ್ಷಕಿಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಹಿರೇಮಗಳೂರು ನಿವಾಸಿ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯ ಶಿಕ್ಷಕಿ ನವ್ಯಶ್ರೀ (28) ಎಂದು ಗುರುತಿಸಲಾಗಿದೆ. ನವ್ಯಶ್ರೀ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದು, ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದ ಅವರಿಗೆ ತಕ್ಷಣವೇ ಅಲ್ಲಿದ್ದ ಶಿಕ್ಷಕರು

ತೆಂಗಿನ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು Read More »

ಕರ್ನಾಟಕ

ವೇಶ್ಯಾವಾಟಿಕೆ ಅಡ್ಡೆಗೆ ಸಿಸಿಬಿ ಪೊಲೀಸರಿಂದ ದಾಳಿ ► ವೇಶ್ಯೆಯರೊಂದಿಗೆ ಸಿಕ್ಕಿಬಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10. ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭವಾದೊಡನೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರೋರ್ವರು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪೊಲೀಸ್ ಬಲೆಗೆ ಬೀಳುವವುದರ ಮೂಲಕ ಪಕ್ಷಕ್ಕೆ ಮುಜುಗರದ ಪರಿಸ್ಥಿತಿ ತಂದೊಡ್ಡಿದ್ದಾರೆ. ಬೆಂಗಳೂರಿನ ದೊಡ್ಡ ಬಿದರಕಲ್ಲಿನ ಲಾಡ್ಜ್ ಒಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕಾಂಗ್ರೆಸ್ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಸೇರಿದಂತೆ ನಾಲ್ವರು ಸಿಕ್ಕಿಬಿದ್ದಿದ್ದಾರೆನ್ನಲಾಗಿದೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದ್ದು, ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕರೊಬ್ಬರ ಆಪ್ತರಾಗಿರುವ ರಾಮಕೃಷ್ಣಯ್ಯ ಹಾಗೂ ಇನ್ನೋರ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು

ವೇಶ್ಯಾವಾಟಿಕೆ ಅಡ್ಡೆಗೆ ಸಿಸಿಬಿ ಪೊಲೀಸರಿಂದ ದಾಳಿ ► ವೇಶ್ಯೆಯರೊಂದಿಗೆ ಸಿಕ್ಕಿಬಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ Read More »

ಕರ್ನಾಟಕ

ಸ್ಥಳೀಯ ಸುದ್ದಿಗಳಲ್ಲಿ ಒಂದು ಹೊಸ ಮೈಲಿಗಲ್ಲು ► ಕನಿಷ್ಠ ಅಂತರದಲ್ಲಿ ಗರಿಷ್ಠ ಓದುಗರ ಬಳಗದೊಂದಿಗೆ ‘ನ್ಯೂಸ್ ಕಡಬ’ ಸುದ್ದಿ ಜಾಲತಾಣ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಸ್ಥಳೀಯ ಸುದ್ದಿಗಳಿಗೆ ಮಹತ್ವವನ್ನು ನೀಡಿ ಕಡಬ ತಾಲೂಕನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸುದ್ದಿ ಸಂಸ್ಥೆ ‘newskadaba.com’ ಇದೀಗ ಹೊಸತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. 2016 ರ ಜೂನ್ 03 ರಂದು ಆರಂಭವಾದ ಈ ಸಂಸ್ಥೆಯು ಕೆಲವೇ ತಿಂಗಳುಗಳಲ್ಲಿ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ 2017 ಜೂನ್ 07 ರಂದು ನೂತನ ತಂತ್ರಜ್ಞಾನದೊಂದಿಗೆ ಆರಂಭಗೊಂಡು ಇದೀಗ ಕಡಬ ಪರಿಸರದಲ್ಲಿ ಮನೆಮಾತಾಗಿದೆ. ಆರಂಭದಲ್ಲಿ ಒಂದು ಸಾವಿರದಿಂದ ಎರಡು ಸಾವಿರದಷ್ಟಿದ್ದ ನಮ್ಮ ಓದುಗರ

ಸ್ಥಳೀಯ ಸುದ್ದಿಗಳಲ್ಲಿ ಒಂದು ಹೊಸ ಮೈಲಿಗಲ್ಲು ► ಕನಿಷ್ಠ ಅಂತರದಲ್ಲಿ ಗರಿಷ್ಠ ಓದುಗರ ಬಳಗದೊಂದಿಗೆ ‘ನ್ಯೂಸ್ ಕಡಬ’ ಸುದ್ದಿ ಜಾಲತಾಣ Read More »

ಕರ್ನಾಟಕ

ನಿರುದ್ಯೋಗ ಸಮಸ್ಯೆಯೇ…? ನಿಮಗಾಗಿ ಕಾಯುತ್ತಿವೆ ಸಾವಿರಾರು ಉದ್ಯೋಗಗಳು ► ಫೆ.17 ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ‘ದಿಶಾ ಕೆರಿಯರ್ ಫೆಸ್ಟ್’

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ನಿರುದ್ಯೋಗಿ ಯುವಜನತೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಫೆಬ್ರವರಿ 17 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳ ‘ದಿಶಾ ಕ್ಯಾರಿಯರ್ ಫೆಸ್ಟ್’ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಿರಲಿದ್ದು, ಜಿಲ್ಲೆಯ ಯುವಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಂದ ಡಾ.ಎಂ.ಆರ್. ರವಿ ಕರೆ ನೀಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರುದ್ಯೋಗ ಸಮಸ್ಯೆಯೇ…? ನಿಮಗಾಗಿ ಕಾಯುತ್ತಿವೆ ಸಾವಿರಾರು ಉದ್ಯೋಗಗಳು ► ಫೆ.17 ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ‘ದಿಶಾ ಕೆರಿಯರ್ ಫೆಸ್ಟ್’ Read More »

ಕರ್ನಾಟಕ

ತನ್ನ ಸಹಪಾಠಿಗಳ ನಿಂದನೆ ಮೇಘನಾ ಆತ್ಮಹತ್ಯೆಗೆ ಮುಳುವಾಯ್ತಾ.? ► ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.09. ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಪಾಲ್ಗೊಂಡು ಸೋತಿದ್ದ ಹಿನ್ನೆಲೆಯಲ್ಲಿ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನ 2 ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ(18) ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದ್ದು, ತನ್ನ ಸಹಪಾಠಿಗಳೇ ಬೈದು ನಿಂದಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ವಿಜೇತ ಪಕ್ಷದವರು ಹಂಗಿಸಿದ್ದ ಕಾರಣ ಬೇಸರಗೊಂಡು ಮೇಘನಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು. ಆದರೆ ಮೇಘನಾ ಸಹಪಾಠಿಗಳಾದ

ತನ್ನ ಸಹಪಾಠಿಗಳ ನಿಂದನೆ ಮೇಘನಾ ಆತ್ಮಹತ್ಯೆಗೆ ಮುಳುವಾಯ್ತಾ.? ► ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ Read More »

ಕರ್ನಾಟಕ
Scroll to Top