ಮಲ್ಪೆ: ಬೈಕ್ – ಬಸ್ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com ಉಡುಪಿ, ಫೆ.12. ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರದಂದು ಮಲ್ಪೆಯಲ್ಲಿ ನಡೆದಿದೆ.







ಮೃತ ಬೈಕ್ ಸವಾರನನ್ನು ಹೆಬ್ರಿಯ ಸೋಮೇಶ್ವರ ನಿವಾಸಿ ಮಂಜುನಾಥ್ ನಾಯ್ಕ್ (26) ಎಂದು ಗುರುತಿಸಲಾಗಿದೆ. ಇವರು ಸಂಚರಿಸುತ್ತಿದ್ದ ಬೈಕಿಗೆ ಮಲ್ಪೆ ಬೀಚ್ ಬಳಿಯ ವಡಂಬಾಂಡೇಶ್ವರ ಎಂಬಲ್ಲಿ ಬಸ್ ಢಿಕ್ಕಿಯಾದುದರಿಂದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟರು. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.






error: Content is protected !!
Scroll to Top