ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.13. ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ‌ ಚಿಕ್ಕಮಗಳೂರಿನಲ್ಲಿ ಸೋಮವಾರದಂದು ನಡೆದಿದೆ.

ಮೃತ ಬಾಲಕನನ್ನು ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಸಮೀಪದ ನಿವಾಸಿ ದುರ್ಗಾ ಪ್ರಸಾದ್ ಎಂಬವರ ಪುತ್ರ ಅನೀಶ್ (3) ಎಂದು ಗುರುತಿಸಲಾಗಿದೆ.‌ಅನೀಶ್ ನನ್ನು ಮನೆಯಲ್ಲಿ ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿದ್ದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಸಿರುಗಟ್ಟಿ ಮಗು ಮೃತಪಟ್ಟರೆನ್ನಲಾಗಿದೆ.

Scroll to Top