ರಾಷ್ಟ್ರೀಯ ನ್ಯೂಸ್

ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 18. ನಟ ದರ್ಶನ್ ಅವರು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಡೇವಿಲ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅವರು ಶೂಟಿಂಗ್ ಮುಗಿದ ಬಳಿಕ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಜೊತೆಗಿದ್ದರು.

ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಏರ್ ಇಂಡಿಯಾ ವಿಮಾನ ಅಪಘಾತ ಮೃತ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ ಡಾ.ಸಂಶೀರ್

(ನ್ಯೂಸ್ ಕಡಬ) newskadaba.com ಜೂ. 18. ಗುಜರಾತ್‌ ನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಘೋಷಣೆ ಮಾಡುವ ಮೂಲಕ ಯುಎಇಯಲ್ಲಿರುವ ಭಾರತ ಮೂಲದ ವೈದ್ಯ ಸಂಶೀರ್ ಉದಾರತೆ ಮೆರೆದಿದ್ದಾರೆ. ಗುಜರಾತ್‌ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಪ್ರಯಾಣಿಕರ ಜೊತೆಗೆ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಅದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ

ಏರ್ ಇಂಡಿಯಾ ವಿಮಾನ ಅಪಘಾತ ಮೃತ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ ಡಾ.ಸಂಶೀರ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಮಾನ ದುರಂತ- ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಿದ ಕೇಂದ್ರ

(ನ್ಯೂಸ್ ಕಡಬ) newskadaba.com ಜೂ. 14. ಅಹಮ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪ್ರಮಾಣಿತ ನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಲು ಆದೇಶಿಸಿದೆ. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಸಮಿತಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಗೃಹ ಇಲಾಖೆಯ ಹೆಚ್ಚುವರಿ ಅಥವಾ ಜಂಟಿ ಕಾರ್ಯದರ್ಶಿ, ಗುಜರಾತ್ ಸರ್ಕಾರದ ಗೃಹ ಕಾರ್ಯದರ್ಶಿ, ಗೃಹ ಇಲಾಖೆಯ

ವಿಮಾನ ದುರಂತ- ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಿದ ಕೇಂದ್ರ Read More »

ರಾಷ್ಟ್ರೀಯ ನ್ಯೂಸ್

ವಿಮಾನ ದುರಂತ- ಮೋದಿ ಯಾಕೆ ರಾಜೀನಾಮೆ ಕೊಡಬೇಕು ಅವರೇನು ಪೈಲಟಾ? ಪಿಎಂ ಮೋದಿ ಪರ ಸಿಎಂ ಇಬ್ರಾಹಿಂ ಬ್ಯಾಟಿಂಗ್

(ನ್ಯೂಸ್ ಕಡಬ) newskadaba.com ಜೂ. 14.  ಗುರುವಾರದಂದು ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಮೃತಪಟ್ಟಿದ್ದು, ಈ ದುರಂತದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಹೀಗಾಗಿ ದುರಂತಕ್ಕೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂಬ ಮಾತುಗಳು ಸಹ ಕೇಳಿಬರುತ್ತಿದ್ದು, ಇದರ ನಡುವೆ ಮಾಜಿ ಶಾಸಕ ಸಿಎಂ ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟ್ ಬೀಸಿದ್ದಾರೆ. ಮೋದಿಯವರು ರಾಜೀನಾಮೆ ಕೊಡಬೇಕು

ವಿಮಾನ ದುರಂತ- ಮೋದಿ ಯಾಕೆ ರಾಜೀನಾಮೆ ಕೊಡಬೇಕು ಅವರೇನು ಪೈಲಟಾ? ಪಿಎಂ ಮೋದಿ ಪರ ಸಿಎಂ ಇಬ್ರಾಹಿಂ ಬ್ಯಾಟಿಂಗ್ Read More »

ರಾಷ್ಟ್ರೀಯ ನ್ಯೂಸ್
crime, arrest, suspected

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..!

(ನ್ಯೂಸ್ ಕಡಬ) newskadaba.com ಜೂ. 14. ತಾಯಿ ಜೀವಂತವಿರುವಾಗಲೇ ಪಾಪಿ ಪುತ್ರನೋರ್ವ ಆಸ್ತಿಗಾಗಿ ಸುಳ್ಳು ಅರ್ಜಿ ನೀಡಿ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಜೊತೆಗೆ ಮರಣ ಪ್ರಮಾಣಪತ್ರ ನೀಡಿದ ಪುರಸಭೆ ಅಧಿಕಾರಿಗೂ ನೋಟಿಸ್‌ ನೀಡಲಾಗಿದೆ. ಬಂಧಿತ ಆರೋಪಿಯನ್ನು ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಶೌಕತ್ ಅಲಿ ತಂದೆ ಅವರು 2001 ರಲ್ಲಿ ಮೃತಪಟ್ಟಿದ್ದು, ಪುತ್ರ ಹಾಗೂ ಆತನ ತಾಯಿ ಹೂರಾಂಬಿ ಜಂಗ್ಲಿ ಸಾಬ್ ಎಂಬವರ ಹೆಸರಿನಲ್ಲಿ 2

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ರೆಫ್ರಿಜರೇಟರ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಕಾಸರಗೋಡು – ಕಾಞಾಂಗಾಡ್ ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ನಡೆದಿದೆ. ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗಲಿದ ಪರಿಣಾಮ ಬೆಂಕಿ ತಗಲಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಕಂಟೈನರ್ ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಹಾನಿಗೊಳಗಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದರು.

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

24 ಗಂಟೆ ಮುನ್ನವೇ ಸೀಟು ಖಾತರಿ- ರೈಲ್ವೇ ಇಲಾಖೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 13. ಟಿಕೆಟ್‌ ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ರೈಲು ಹೊರಡುವ 24 ಗಂಟೆಗಳ ಮುನ್ನವೇ ಸೀಟು ಹಂಚಿಕೆ ಮಾಡಿ, ಖಚಿತಪಡಿಸುವ ವ್ಯವಸ್ಥೆಯನ್ನು ರೈಲ್ವೇ ಸಚಿವಾಲಯ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಇನ್ನು ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲಷ್ಟೇ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತಿದೆ. ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಆಸನಗಳನ್ನು ತ್ವರಿತವಾಗಿ ಖಚಿತಪಡಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ. ಪ್ರಯಾಣಿಕರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಈ ವ್ಯವಸ್ಥೆಯನ್ನು ರೈಲ್ವೆ

24 ಗಂಟೆ ಮುನ್ನವೇ ಸೀಟು ಖಾತರಿ- ರೈಲ್ವೇ ಇಲಾಖೆ Read More »

ರಾಷ್ಟ್ರೀಯ ನ್ಯೂಸ್

ವಯನಾಡಿನಲ್ಲಿ ರಾಡಾರ್ ಸ್ಥಾಪನೆಗೆ ಐಎಂಡಿ ನಿರ್ಧಾರ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 13. ಕಳೆದ ವರ್ಷ ಭೀಕರ ಭೂಕುಸಿತ ಸಂಭವಿಸಿ 400ಕ್ಕೂ ಹೆಚ್ಚು ಜನರು ಮೃತಪಟ್ಟ ಕೇರಳದ ವಯನಾಡು ಜಿಲ್ಲೆಯಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಸ್ಥಾಪಿಸಲು ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮುಖದಲ್ಲಿ ವಯನಾಡಿನ ಪುಲ್ಪಳ್ಳಿಯಲ್ಲಿರುವ ಪಳಸ್ಸಿರಾಜ ಕಾಲೇಜಿನಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಅಳವಡಿಸಲು ಐಎಂಡಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿದುಬಂದಿದೆ. 100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಎಕ್ಸ್-ಬ್ಯಾಂಡ್ ರಾಡಾರ್, ವಿಪತ್ತು ಪೀಡಿತ ಪಶ್ಚಿಮ ಘಟ್ಟ

ವಯನಾಡಿನಲ್ಲಿ ರಾಡಾರ್ ಸ್ಥಾಪನೆಗೆ ಐಎಂಡಿ ನಿರ್ಧಾರ Read More »

ರಾಷ್ಟ್ರೀಯ ನ್ಯೂಸ್

ಟ್ರಾಫಿಕ್ ನಲ್ಲಿ ಸಿಲುಕಿ ದುರಂತದಿಂದ ಪಾರಾದೆ- ಗದ್ಗದಿತರಾದ ಮಹಿಳೆ

(ನ್ಯೂಸ್ ಕಡಬ) newskadaba.com ಜೂ. 13. ಲಂಡನ್ ಗೆ ಹೊರಟಿದ್ದ ಅಹಮದಾಬಾದ್ ನ ಭೂಮಿ ಚೌಹಾಣ್ ಎಂಬ ಮಹಿಳೆಯೊಬ್ಬರು ಏರ್‌ ಇಂಡಿಯಾ ವಿಮಾನ ಅಪಘಾತದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಹೌದು, ಭೂಮಿ ಅವರು ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರಿಂದ ಅವರಿಗೆ ವಿಮಾನವೇರಲು ಅವಕಾಶ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ ಸುದ್ದಿ ಬಂದಿದ್ದು, ಮಹಿಳೆ ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ದುರಂತದ ವಿಚಾರ ಕೇಳಿ ನನಗೆ ಭಯವದಿಂದ

ಟ್ರಾಫಿಕ್ ನಲ್ಲಿ ಸಿಲುಕಿ ದುರಂತದಿಂದ ಪಾರಾದೆ- ಗದ್ಗದಿತರಾದ ಮಹಿಳೆ Read More »

ರಾಷ್ಟ್ರೀಯ ನ್ಯೂಸ್

ವಿಮಾನ ಪತನ- ಮೃತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

(ನ್ಯೂಸ್ ಕಡಬ) newskadaba.com ಜೂ. 13. ಗುಜಾರಾತ್ ನ ಅಹಮದಾಬಾದ್ ಬಳಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಟಾಟಾ ಗ್ರೂಪ್ ಕಂಪನಿಯು 1 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಕಂಪನಿ ಅಧ್ಯಕ್ಷ ಎನ್ ಚಂದ್ರಶೇಖರನ್ ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಕೂಡಾ ಟಾಟಾ ಗ್ರೂಪ್ ಭರಿಸಲಿದೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದರು. ಜೊತೆಗೆ ವಿಮಾನ ಪತನಗೊಂಡು ಬಿದ್ದ ಬಿಜೆ

ವಿಮಾನ ಪತನ- ಮೃತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ Read More »

ರಾಷ್ಟ್ರೀಯ ನ್ಯೂಸ್
Scroll to Top