ರಾಷ್ಟ್ರೀಯ ನ್ಯೂಸ್

ಏರ್ ಇಂಡಿಯಾ ಕೋ-ಪೈಲಟ್ ಕ್ಲೈವ್ ಕುಂದರ್ ಅಂತ್ಯಕ್ರಿಯೆ- ಕುಟುಂಬದಿಂದ ಅಂತಿಮ ವಿದಾಯ

(ನ್ಯೂಸ್ ಕಡಬ) newsksdaba.com ಜೂ. 19. ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಮೃತಪಟ್ಟ ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರದಂದು ಬೆಳಗ್ಗೆ ಮುಂಬೈನಲ್ಲಿರುವ ಅವರ ಮನೆಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹ-ಪೈಲಟ್ ಮೃತದೇಹವನ್ನು ಹೊತ್ತ ಶವಪೆಟ್ಟಿಗೆಯನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿಸಿ, ಗೋರೆಗಾಂವ್ (ಪಶ್ಚಿಮ)ನ ರಾಮ ಮಂದಿರ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಕ್ಲೈವ್ ಕುಂದರ್ ತಮ್ಮ ವೃದ್ಧ ಪೋಷಕರು ಮತ್ತು ತಂಗಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು, ಪಾರ್ಥಿವ ಶರೀರವನ್ನು ಕ್ಲೈವ್ […]

ಏರ್ ಇಂಡಿಯಾ ಕೋ-ಪೈಲಟ್ ಕ್ಲೈವ್ ಕುಂದರ್ ಅಂತ್ಯಕ್ರಿಯೆ- ಕುಟುಂಬದಿಂದ ಅಂತಿಮ ವಿದಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ

(ನ್ಯೂಸ್ ಕಡಬ) newsksdaba.com ಜೂ. 19. ಇಂದು ದೇಶದ ವಿವಿಧ ಭಾಗದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಹಲವಾರು ಕಾರಣಗಳಿಗೆ ಈ ಚುನಾವಣೆಗಳು ಏರ್ಪಟ್ಟಿದ್ದು, ಬೆಳಿಗ್ಗೆಯಿಂದ ಮತದಾನ ಪ್ರಾರಂಭವಾಗಿದೆ. ಎಲೆಕ್ಷನ್ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇದೇ ತಿಂಗಳ 23 ರಂದು ಫಲಿತಾಂಶ ಹೊರಬರಲಿದೆ. ಕೇರಳದ ನೀಲಂಬೂರ್, ಪಂಜಾಬ್ ನ ನಲೂಧಿಯಾನ ವೆಸ್ಟ್, ಪಶ್ಚಿಮ ಬಂಗಾಳದ ಕಲಿಗಂಜ್ ಹಾಗೂ ಗುಜರಾತ್ ನ ಕಡಿ ಮತ್ತು ವಿಸವಾದರ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ದೇಶದ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ Read More »

ರಾಷ್ಟ್ರೀಯ ನ್ಯೂಸ್

2ನೇ ಮತ್ತು 4ನೇ ಶನಿವಾರ ರಜೆ ಇಲ್ಲ- ಎಲ್ಲಾ ದಿನವೂ ಕಛೇರಿಗಳು ಕಾರ್ಯ ನಿರ್ವಹಿಸಬೇಕು ಸುಪ್ರೀಂ ಕೋರ್ಟ್ ಆದೇಶ

(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಎರಡು ಮತ್ತು ನಾಲ್ಕನೇ ಶನಿವಾರದ ರಜೆಯ ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, 2025ರ ಪ್ರಕಾರ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳು ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ. ಸುಪ್ರೀಂ ಕೋರ್ಟ್ ನಿಯಮಗಳ ಆದೇಶ II, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು

2ನೇ ಮತ್ತು 4ನೇ ಶನಿವಾರ ರಜೆ ಇಲ್ಲ- ಎಲ್ಲಾ ದಿನವೂ ಕಛೇರಿಗಳು ಕಾರ್ಯ ನಿರ್ವಹಿಸಬೇಕು ಸುಪ್ರೀಂ ಕೋರ್ಟ್ ಆದೇಶ Read More »

ರಾಷ್ಟ್ರೀಯ ನ್ಯೂಸ್

ತಂದೆ-ಮಗ ಒಟ್ಟಿಗೇ ಕಾನ್ ಸ್ಟೇಬಲ್ ಗಳಾಗಿ ಆಯ್ಕೆ

(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಪೊಲೀಸ್ ಪರೀಕ್ಷೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಪಾಸಾಗಿದ್ದು, ಅಲ್ಲದೆ ಇಬ್ಬರೂ ಜೊತೆಯಾಗಿ ನೇಮಕಾತಿಯನ್ನು ಪಡೆದಿರುವ ಅಪರೂಪದ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಹಾಪುರದ ನಿವೃತ್ತ ಯೋಧ ಯಶ್ಪಾಲ್ ಸಿಂಗ್ ಮತ್ತು ಅವರ 21 ವರ್ಷದ ಮಗ ಶೇಖರ್ ಎರಡೂವರೆ ವರ್ಷಗಳ ತಯಾರಿಯ ನಂತರ ಯುಪಿ ಪೊಲೀಸ್ ಪರೀಕ್ಷೆಯನ್ನು ಒಟ್ಟಿಗೆ ಪಾಸ್ ಮಾಡಿ ಇದೀಗ ಪೊಲೀಸ್ ಕಾನ್ಸ್ಟೇಬಲ್‌ಗಳಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಗೃಹ

ತಂದೆ-ಮಗ ಒಟ್ಟಿಗೇ ಕಾನ್ ಸ್ಟೇಬಲ್ ಗಳಾಗಿ ಆಯ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಪರೇಷನ್ ಸಿಂಧು ಯುದ್ದಪೀಡಿತ ಇರಾನ್ ನಿಂದ 110 ಭಾರತೀಯರ ರಕ್ಷಣೆ

(ನ್ಯೂಸ್ ಕಡಬ) newskadaba.com ಜೂ. 19. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಅತಂತ್ರ ಸ್ಥಿತಿಯಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಆಪರೇಷನ್ ಸಿಂಧು ಕಾರ್ಯಾಚರಣೆಯ ಮೊದಲ ಭಾಗವಾಗಿ, ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 110 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಗುರುವಾರ ಮುಂಜಾನೆ ಅರ್ಮೇನಿಯಾದ ಯೆರೆವಾನ್ ನಿಂದ ದೆಹಲಿಗೆ ಕರೆ ತರಲಾಯಿತು. ಭಾರತೀಯ ರಾಜತಾಂತ್ರಿಕ ಕಚೇರಿಯ ಸಂಘಟಿತ ಪ್ರಯತ್ನದ ಫಲವಾಗಿ ಟೆಹರಾನ್ ನಲ್ಲಿ ವಾಸವಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ

ಆಪರೇಷನ್ ಸಿಂಧು ಯುದ್ದಪೀಡಿತ ಇರಾನ್ ನಿಂದ 110 ಭಾರತೀಯರ ರಕ್ಷಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೆಹಲಿ ಸ್ವಾತಂತ್ರ್ಯ ದಿನಾಚರಣೆ ಕರ್ನಾಟಕ ರಾಯಭಾರಿಯಾಗಿ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ನೇಮಕ

(ನ್ಯೂಸ್ ಕಡಬ) newsksdaba.com ಜೂ. 19. ಈ ಬಾರಿ ದೆಹಲಿಯಲ್ಲಿ ನಡೆಯಿರುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ಕರ್ನಾಟಕದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಓರ್ವರಾಗಿ ಪುತ್ತೂರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಅವರು ಆಯ್ಕೆಯಾಗಿದ್ದಾರೆ. ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ ಇದರ ವತಿಯಿಂದ ದೇಶದ ಪ್ರತೀ ರಾಜ್ಯದಿಂದ 15 ವರ್ಷದಿಂದ 28

ದೆಹಲಿ ಸ್ವಾತಂತ್ರ್ಯ ದಿನಾಚರಣೆ ಕರ್ನಾಟಕ ರಾಯಭಾರಿಯಾಗಿ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ನೇಮಕ Read More »

ರಾಷ್ಟ್ರೀಯ ನ್ಯೂಸ್

ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..!

(ನ್ಯೂಸ್ ಕಡಬ) newskadaba.com ಜೂ. 19. ಯುವತಿಯೋರ್ವಳು ಪ್ರಿಯಕರನೊಂದಿಗೆ ಹೋಟೆಲ್‌ನ ರೂಂ ನಲ್ಲಿ ಮೋಜು ಮಾಡುತ್ತಿರುವ ವೇಳೆ ಸಡನ್‌ ಆಗಿ ಪತಿಯ ಆಗಮಿಸಿದ್ದು, ಆಘಾತಕ್ಕೊಳಗಾದ ಪತ್ನಿ ತಕ್ಷಣವೇ ಹೋಟೆಲ್‌ನ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಸದ್ಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಮೋಜು ಮಾಡಲು ಹೋಟೆಲ್‌ ರೂಮ್ ಗೆ ತಲುಪಿದ್ದು, ಆದರೆ ಆಕೆಯ ಪತಿ ಪೊಲೀಸರೊಂದಿಗೆ ಆಕೆಯ ಹಿಂದಿನಿಂದ ಬರುತ್ತಿರುವುದು ಅವಳ

ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..! Read More »

ರಾಷ್ಟ್ರೀಯ ನ್ಯೂಸ್

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ

(ನ್ಯೂಸ್ ಕಡಬ) newskadaba.com ಜೂ. 18. ಇನ್ನುಮುಂದೆ ಹೆದ್ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರದಂದು ಘೋಷಣೆ ಮಾಡಿದೆ. ಈ ಕುರಿತು X ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, 2025ರ ಆಗಸ್ಟ್ 15ರಿಂದ ಜಾರಿಗೆ ಬರುವಂತೆ ಒಂದು ವರ್ಷಕ್ಕೆ ಈ ಪಾಸ್‌ ನ ಬೆಲೆ 3,000 ರೂ.ಗಳಾಗಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಫಾಸ್ಟ್ಟ್ಯಾಗ್ ಪಾಸ್ ಕಾರುಗಳು, ಜೀಪ್

FASTag ಆಧಾರಿತ ವಾರ್ಷಿಕ ಪಾಸ್ ಘೋಷಿಸಿದ ಕೇಂದ್ರ ಸರಕಾರ ಆ.15ರಿಂದ ಜಾರಿಗೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Death, deadbody, Waterfall

ಎಸಿ ಸ್ಫೋಟ- ಕೇರಳದ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಜೂ. 18. ಕೊಠಡಿಯಲ್ಲಿನ ಎಸಿ ಸ್ಫೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಎರ್ನಾಕುಲಂನ ಪರವೂರ್‌ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ ಎಂದು ಗುರುತಿಸಲಾಗಿದೆ.

ಎಸಿ ಸ್ಫೋಟ- ಕೇರಳದ ಯುವಕ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಚಿವ ಪ್ರಿಯಾಂಕ್ ಖರ್ಗೆ ವಿದೇಶ ಪ್ರವಾಸಕ್ಕೆ ಕೇಂದ್ರ ನಿರಾಕರಣೆ

(ನ್ಯೂಸ್ ಕಡಬ) newskadaba.com ಜೂ. 18. ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ಬಾಸ್ಟ್ನ್ ನಲ್ಲಿ ನಡೆಯಲಿರುವ ‘ಬಯೋ-2025’ ಸಮಾವೇಶದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.   ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ಯಾರಿಸ್‌ನಲ್ಲಿರುವ ಪ್ರಿಯಾಂಕ್‌ ಖರ್ಗೆ ಅವರು ಜೂ.16 ರಿಂದ 19ರವರೆಗೆ ಬಾಸ್ಟನ್‌ನಲ್ಲಿ ನಡೆಯುತ್ತಿದ್ದ ಬಯೋ-2025 ಸಮಾವೇಶದಲ್ಲಿ ಭಾಗವಹಿಸಲು ತೆರಳಬೇಕಿತ್ತು. ರಾಜ್ಯ ಐಟಿ-ಬಿಟಿ ಇಲಾಖೆಯ ಅಧಿಕಾರಿಗಳು

ಸಚಿವ ಪ್ರಿಯಾಂಕ್ ಖರ್ಗೆ ವಿದೇಶ ಪ್ರವಾಸಕ್ಕೆ ಕೇಂದ್ರ ನಿರಾಕರಣೆ Read More »

ರಾಷ್ಟ್ರೀಯ ನ್ಯೂಸ್
Scroll to Top