ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ರೆಫ್ರಿಜರೇಟರ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಕಾಸರಗೋಡು – ಕಾಞಾಂಗಾಡ್ ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ನಡೆದಿದೆ.

ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗಲಿದ ಪರಿಣಾಮ ಬೆಂಕಿ ತಗಲಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಕಂಟೈನರ್ ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಹಾನಿಗೊಳಗಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದರು.

Scroll to Top