ರಾಷ್ಟ್ರೀಯ ನ್ಯೂಸ್

ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದುರ್ಮರಣ

(ನ್ಯೂಸ್ ಕಡಬ) newskadaba.com ಮುಂಬೈ, ಜ. 15.‌ ಗಾಳಿಪಟ ಹಾರಿಸುವ ವೇಳೆ ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕಾಂಡಿವಾಲಿ ಎಂಬಲ್ಲಿ ನಡೆದಿದೆ. ಬಾಲಕ ಗಾಳಿಪಟ ಹಾರಿಸುತ್ತಿದ್ದ ವೇಳೆ ದಾರ ಕತ್ತರಿಸಲ್ಪಟ್ಟು ಅದು ಸೆಗಣಿ ಗುಂಡಿಗೆ ಬಿದ್ದಿತ್ತು. ಅದನ್ನು ಮೇಲೆತ್ತಲೆಂದು ಬಾಲಕ ಬಗ್ಗಿದಾಗ ಆಕಸ್ಮತ್ತಾಗಿ ಗುಂಡಿಗೆ ಬಿದ್ದಿದ್ದಾನೆ. ಸಮೀಪದಲ್ಲಿಯೇ ಕಟ್ಟಡ ಕಾರ್ಮಿಕರು ಬಾಲಕನ ಬೊಬ್ಬೆ ಕೇಳಿ ಓಡಿ ಬಂದರೂ ಗುಂಡಿಯಿಂದ ಮೇಲೆತ್ತಲು ಸಾಧ್ಯವಾಗಿಲ್ಲ. ಗುಂಡಿ ಬಹಳ ಆಳವಾಗಿದ್ದು, ಊರವರು, ಪೊಲೀಸರು ಮತ್ತು […]

ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದುರ್ಮರಣ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್…!

(ನ್ಯೂಸ್ ಕಡಬ) newskadaba.com ಲಕ್ನೋ, ಜ. 15. ಸಹೋದ್ಯೋಗಿಯೋರ್ವ ತನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾನ್‌ಸ್ಟೇಬಲ್ ದೂರು ದಾಖಲಿಸಿದ್ದಾರೆ. ಪೊಲೀಸ್ ಕಾನ್ ಸ್ಟೇಬಲ್ ಓರ್ವ ತನ್ನ ಮನೆಯನ್ನು ತೋರಿಸುವುದಾಗಿ ಹೇಳಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದು, ಅಲ್ಲದೇ ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಕೆ ನೀಡಿದ್ದಾನೆ ಎಂದು ಮಹಿಳಾ ಕಾನ್ ಸ್ಟೇಬಲ್ ದೂರು ನೀಡಿದ್ದಾರೆ. ಆರೋಪಿ ಪೊಲೀಸ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದಾದ್ಯಂತ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಮೊಟ್ಟೆ, ಕೋಳಿ ಮಾರಾಟ ನಿಷೇಧ..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಹಾಗೂ ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೇ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲೂ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ನಿಷೇಧ ಮಾಡಲಾಗಿದೆ. ಚೆನ್ನಾಗಿ ಬೆಂದ ಮೊಟ್ಟೆ ಹಾಗೂ ಕೋಳಿಯನ್ನು ಸೇವಿಸಿ, ಅರೆಬೆಂದ ಮಾಂಸವನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ ಎಂದು ದೆಹಲಿಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಹಕ್ಕಿಜ್ವರ ಪ್ರಮಾಣ ಹೆಚ್ಚುತ್ತಿರುವ

ದೇಶದಾದ್ಯಂತ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಮೊಟ್ಟೆ, ಕೋಳಿ ಮಾರಾಟ ನಿಷೇಧ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಲ್ಸ್ ಪೊಲಿಯೋ ಕಾರ್ಯಕ್ರಮ ಜ.31ಕ್ಕೆ ಮುಂದೂಡಿಕೆ ➤ ಆರೋಗ್ಯ ಇಲಾಖೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ದೇಶದಾದ್ಯಂತ ಜನವರಿ 17ರಂದು ನಿಗದಿಯಾಗಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಜನವರಿ 31ಕ್ಕೆ ಮುಂದೂಡಲಾಗಿದೆ. ಜನವರಿ 16ರಂದು ‘ಕೋವಿಡ್‌ 19’ ವಿರುದ್ಧದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರಪತಿ ಕಚೇರಿಯೊಂದಿಗೆ ಸಮಾಲೋಚಿಸಿ ಪೋಲಿಯೊ ಲಸಿಕಾ ದಿನವನ್ನು ಜನವರಿ 31 ಕ್ಕೆ ಮುಂದೂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪಲ್ಸ್ ಪೊಲಿಯೋ ಕಾರ್ಯಕ್ರಮ ಜ.31ಕ್ಕೆ ಮುಂದೂಡಿಕೆ ➤ ಆರೋಗ್ಯ ಇಲಾಖೆ ಸ್ಪಷ್ಟನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈತ ಸಂಘದಿಂದ ಜ. 26ರಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ಗಣರಾಜ್ಯೋತ್ಸವದಂದು ಹರಿಯಾಣ- ದೆಹಲಿ ಗಡಿಯಲ್ಲಿ ಮಾತ್ರ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಜ. 26ರಂದು ಎರಡು ಗಡಿಗಳಲ್ಲಿ ಮತ್ರವೇ ಟ್ರ್ಯಾಕ್ಟರ್ ರ್ಯಾಲಿ ನಡೆಯುತ್ತದೆ ಹೊರತು ಕೆಂಪುಕೋಟೆಯಲ್ಲಿ ಅಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಸ್ಪಷ್ಟೀಕರಿಸಿದ್ದಾರೆ.

ರೈತ ಸಂಘದಿಂದ ಜ. 26ರಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 14. ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ‌. ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇವರು ಸೋಮವಾರದಂದು ಪತಿ ಹಾಗೂ ತನ್ನ ಮೊದಲ ಗಂಡನಿಗೆ ಜನಿಸಿದ 7 ವರ್ಷದ ಮಗಳೊಂದಿಗೆ ರೈಲಿನಲ್ಲಿ ಚಲಿಸುತ್ತಿದ್ದ ವೇಳೆ ದಂಪತಿ ರೈಲಿನ ಬಾಗಿಲಿನ ಹತ್ತಿರ ನಿಂತಿದ್ದರು. ಈ ವೇಳೆ ಪತಿಯು ಪತ್ನಿಯನ್ನೇ ಹೊರದಬ್ಬಿದ್ದಾನೆ. ಇದನ್ನು ಗಮನಿಸಿದ ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಮಹಿಳೆಯನ್ನು

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊರೋನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳನ್ನು ಮತ್ತೆ ತೆರೆಯುವಂತೆ ಸುಪ್ರೀಂ ಕೋರ್ಟ್ ಸೂಚನೆ…!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ಜ. 31ರ ಹೊತ್ತಿಗೆ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆಯನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ಕೈಗೊಳ್ಳುವಂತೆ ಆದೇಶ ನೀಡಿದೆ. ಕೊರೋನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂಗನವಾಡಿಗಳು ಇನ್ನೂ ಆರಂಭಗೊಳ್ಳದ ಕಾರಣ ಅಂಗನವಾಡಿ ಕೇಂದ್ರಗಳನ್ನು ಮತ್ತೆ ತೆರೆದು ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸುವ ಅವಶ್ಯಕತೆ ಇದೆ ಎಂದು ಹೇಳಿದೆ.

ಕೊರೋನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳನ್ನು ಮತ್ತೆ ತೆರೆಯುವಂತೆ ಸುಪ್ರೀಂ ಕೋರ್ಟ್ ಸೂಚನೆ…! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಾಂಧಿ ಪ್ರತಿಮೆಯಲ್ಲಿ ಬಿಜೆಪಿ ಧ್ವಜ ಹಾರಾಟದ ಹಿನ್ನೆಲೆ ➤ ಆರೋಪಿಯು ಮಾನಸಿಕ ಅಸ್ವಸ್ಥನೆಂದ ಪೊಲೀಸರು

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್, ಜ. 14. ಗಾಂಧಿ ಪ್ರತಿಮೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೊಪಿಯನ್ನು ಪಾಲಕ್ಕಾಡ್‌ ನ ತಿರುನೆಲ್ಲೈ ಮೂಲದ ಬಿನೀಶ್‌ ಎಮದು ಗುರುತಿಸಲಾಗಿದೆ. ಆರೊಪಿಯು ಶನಿವಾರದಂದು  ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರ ಸಭೆ ಗೋಡೆಯ ಮೂಲಕ ಏರಿ ಗಾಂಧಿ ಪ್ರತಿಮೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುತ್ತಿರುವುದು ಹತ್ತಿರದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿತ್ತು. ಈ ಕುರಿತಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಗೆ ಮಾನಸಿಕ ಸಮಸ್ಯೆಗಳಿವೆ ಎಂದು

ಗಾಂಧಿ ಪ್ರತಿಮೆಯಲ್ಲಿ ಬಿಜೆಪಿ ಧ್ವಜ ಹಾರಾಟದ ಹಿನ್ನೆಲೆ ➤ ಆರೋಪಿಯು ಮಾನಸಿಕ ಅಸ್ವಸ್ಥನೆಂದ ಪೊಲೀಸರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದುಬೈನಿಂದ ಸುಮಾರು 85 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ಹಾಗೂ ಸರಕು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಜ. 14. ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಅವರಿಂದ ಸುಮಾರು 85 ಲಕ್ಷ ರೂ. ಮೌಲ್ಯದ ಸರಕುಗಳನ್ನು ವಶಕ್ಕೆ ಪಡೆದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈನಿಂದ ಆಗಮಿಸಿದ ಇಬ್ಬರು ಪ್ಯಾಣಿಕರಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರಿಬ್ಬರೂ ಕೂಡಾ ಗುದನಾಳದಲ್ಲಿ ಗೋಲ್ಡ್ ಪೇಸ್ಟ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಹಾಗೂ ಲಗೇಜ್ ತಪಾಸಣೆಯ ವೇಳೆ 72.6 ಲಕ್ಷ ರೂ ಮೌಲ್ಯದ 1.42 ಕೆಜಿ ಚಿನ್ನ, 12.4 ಲಕ್ಷದ ಸಿಗರೇಟ್, ಸ್ಮಾರ್ಟ್

ದುಬೈನಿಂದ ಸುಮಾರು 85 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ಹಾಗೂ ಸರಕು ಸಾಗಾಟ ➤ ಇಬ್ಬರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೈಕಾಲು ಕಟ್ಟಿಹಾಕಿ ಅತ್ಯಾಚಾರವೆಸಗಿದ ರೀತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಜ. 14. ಕೈಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಿದ ಸ್ಥಿತಿಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹವು ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆ ನೀರಿನಲ್ಲಿ ಪತ್ತೆಯಾಗಿದೆ. ಈ ವಿದ್ಯಾರ್ಥಿನಿ ಗೊಡ್ಡಾ ಜಿಲ್ಲೆಯವರಾಗಿದ್ದು, ಇಲ್ಲಿನ  ಹಜಾರಿಬಾಗ್  ವೈದ್ಯಕೀಯ  ಕಾಲೇಜಿನಲ್ಲಿ  ವ್ಯಾಸಂಗ ಮಾಡುತ್ತಿದ್ದರು.  ಯುವತಿಯ ಮೃತದೇಹವನ್ನು ಕಂಡ ದಾರಿಹೋಕರು ಪೊಲಿಸರಿಗೆ ವಿಚಾರ ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ ಪೊಲೀಸರು ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ತನಿಖೆ ನಡೆಸುತ್ತಿರುವುದಾಗಿ ಡಿಐಜಿ ಎ.ವಿ ಓಂಕಾರ್‌ ತಿಳಿಸಿದ್ದಾರೆ.

ಕೈಕಾಲು ಕಟ್ಟಿಹಾಕಿ ಅತ್ಯಾಚಾರವೆಸಗಿದ ರೀತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top