ರಾಷ್ಟ್ರೀಯ ನ್ಯೂಸ್

ಬಹಿರ್ದೆಸೆಗೆಂದು ಹೋದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ➤ ತೀವ್ರ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಹನೂರು, ಜ. 18. ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ನಡೆದಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಚನ್ನಶೆಟ್ಟಿ(60) ಎಂದು ಹೇಳಲಾಗಿದೆ. ಇವರು ಇಂದು ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ ವೇಳೆ ಹಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹಿರ್ದೆಸೆಗೆಂದು ಹೋದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ➤ ತೀವ್ರ ಅಸ್ವಸ್ಥ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.18. ಹಲವು ಪ್ರಕರಣಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕುಂಬಳೆ ಕೊಯಿಪಾಡಿ ಕಡಪ್ಪುರದ ಆಸಿಫ್(28) ಎಂದು ಗುರುತಿಸಲಾಗಿದೆ. ಕುಂಬಳೆಯ ವ್ಯಕ್ತಿಯೋರ್ವನಿಂದ ಹತ್ತು ಸಾವಿರ ರೂ. ಹಣ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದನು. ಈತನು ಊರಿಗೆ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಲೆಕ್ಟ್ರಿಕ್ ಕೇಬಲ್ ತಾಗಿ ಬೆಂಕಿಗಾಹುತಿಯಾದ ಬಸ್..! ➤ 6 ಮಂದಿ ಸಹೀವ ದಹನ

(ನ್ಯೂಸ್ ಕಡಬ) newskadaba.com ಜೈಪುರ, ಜ. 17. ಬಸ್ ಗೆ ಇಲೆಕ್ಟ್ರಿಕಲ್ ಕೇಬಲ್ ತಾಗಿದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿ ಆರು ಮಂದಿ ಸಜೀವ ದಹನವಾದ ಘಟನೆ ರಾಜಸ್ಥಾನದ ಜಾಲೋರ್ ಎಂಬಲ್ಲಿ ನಡೆದಿದೆ. ಖಾಸಗಿ ಬಸ್ ಮಂಡೋರ್ ನಿಂದ ಬ್ಯಾವರ್ ಎಂಬಲ್ಲಿಗೆ ಹೋಗುತಿದ್ದ ವೇಳೆ ಮಹೇಶ್ ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಈ ಸಂದರ್ಭ ಬಸ್ ನ ಮೇಲ್ಭಾಗ ಎಲೆಕ್ಟ್ರಿಕ್ ಕೇಬಲ್ ಗೆ ತಾಗಿತ್ತು, ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಈ ಕೇಬಲ್ ನಲ್ಲಿ ವಿದ್ಯುತ್

ಇಲೆಕ್ಟ್ರಿಕ್ ಕೇಬಲ್ ತಾಗಿ ಬೆಂಕಿಗಾಹುತಿಯಾದ ಬಸ್..! ➤ 6 ಮಂದಿ ಸಹೀವ ದಹನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.17. ಮಂಗಳೂರು – ತಿರುವನಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಢ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯು ಪಾರ್ಸೆಲ್ ವಿಭಾಗದಲ್ಲಾಗಿದ್ದು, ಹೊಗೆಯನ್ನು ಗಮನಿಸಿದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಹತ್ತಿಕೊಂಡ ಭಾಗವನ್ನು ಬೇರ್ಪಡಿಸಲು ಸಾಧ್ಯವಾದುದರಿಂದ ಇತರ ಕಡೆಗಳಿಗೆ ಬೆಂಕಿ ಹರಡದಂತೆ ತಡೆಗಟ್ಟಲಾಯಿತು.

ಮಂಗಳೂರು- ತಿರುವನಂತಪುರಂ ರೈಲಿನಲ್ಲಿ ಬೆಂಕಿ ಅವಘಡ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತನ್ನಿಬ್ಬರು ಮಕ್ಕಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ…!

(ನ್ಯೂಸ್ ಕಡಬ) newskadaba.com ಮುಂಬೈ, ಜ. 16. ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಸ್ವತಃ ತಂದೆಯೇ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬರಳಕಿಗೆ ಬಂದಿದೆ. ತನ್ನ ಅವಳಿ ಮಕ್ಕಳ ಮೇಲೆ ನಾಲ್ಕು ವರ್ಷಗಳಿಂದಲೂ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆದರೆ, ತಮ್ಮ ತಂದೆಯ ಕೃತ್ಯವನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಮಕ್ಕಳು ಆತನ ಕೃತ್ಯಗಳನ್ನು ಸಹಿಸಿಕೊಂಡಿದ್ದರು. ಒಂದು ದಿನ ತಾಯಿಯು ಹೊರಗೆ ಹಾಲ್ ನಲ್ಲಿ ಮಲಗಿದ್ದ ವೇಳೆ ರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಮಗಳು

ತನ್ನಿಬ್ಬರು ಮಕ್ಕಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ…! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭ್ರಷ್ಟಾಚಾರ ಆರೋಪದಡಿ ತನ್ನ ಕೇಂದ್ರ ಕಛೇರಿಯ ಮೇಲೆಯೇ ದಾಳಿ ನಡೆಸಿದ ಸಿಬಿಐ…!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 16. ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಸಿಬಿಐ ಅಧಿಕಾರಿಗಳು ತನ್ನ ಕೇಂದ್ರ ಕಚೇರಿಯ ಮೇಲೆಯೇ ದಾಳಿ ನಡೆಸಿದ್ದಾರೆ. ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯೊಂದರಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿಡಿಎಸ್.ಪಿ ಸೇರಿದಂತೆ ನಾಲ್ವರ ಮೇಲೆ ಸಿಬಿಐ ದೂರು ದಾಖಲಿಸಿಕೊಂಡಿದೆ. ಸಿಬಿಐ ಡಿವೈಎಸ್ ಪಿ ಆರ್.ಕೆ ರಿಷಿ, ಆರ್.ಕೆ ಸಾಂಗ್ವಾನ್, ಸ್ಟೆನೊಗ್ರಾಫರ್ ಸಮೀರ್ ಕುಮಾರ್ ಸಿಂಗ್ ಮತ್ತು ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

ಭ್ರಷ್ಟಾಚಾರ ಆರೋಪದಡಿ ತನ್ನ ಕೇಂದ್ರ ಕಛೇರಿಯ ಮೇಲೆಯೇ ದಾಳಿ ನಡೆಸಿದ ಸಿಬಿಐ…! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಕಲ ಚೇತನ ಕೈದಿಯನ್ನು ಕೊಚ್ಚಿಗೆ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 16. ಕೇರಳ ಕೊಲಮಾಸೆರಿ ಎಂಬಲ್ಲಿ ಕಾಸಿಂ ಮಸೀದಿಯ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಜೂನ್ 25ರಂದು ವಿಕಲಚೇತನ ವ್ಯಕ್ತಿಯೋರ್ವನನ್ನು ಕೇಸ್ ನಂ: 567/2020 ರಂತೆ ಕಕ್ಕನಾಡಿನ ಜಿಲ್ಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಆರೋಪಿಯೊಂದಿಗೆ ಜೈಲಿನ ಅಧಿಕಾರಿಗಳು ಸಂವಹನ ನಡೆಸುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಜೈಲಿನಲ್ಲಿ ಆರೋಪಿಯು ಸಹ ಕೈದಿಗಳೊಂದಿಗೆ ಬೆರೆಯುತ್ತಿರಲಿಲ್ಲ. 2020ರ ಡಿಸೆಂಬರ್ 16ರಂದು ಆರೋಪಿಯನ್ನು ಖುಲಾಸೆಗೊಳಿಸಿ, ಡಿಸೆಂಬರ್ 17 ರಂದು ಆರೋಪಿಯನ್ನು ಪಲ್ಲುರುತಿ, ವಿಲಿ, ಕೊಚ್ಚಿಗೆ

ವಿಕಲ ಚೇತನ ಕೈದಿಯನ್ನು ಕೊಚ್ಚಿಗೆ ಸ್ಥಳಾಂತರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾರಕಾಸ್ತ್ರಗಳಿಂದ ಕೊಚ್ಚಿ ಸಹೋದರರಿಬ್ಬರ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಜ. 15. ಹಳೆ ವೈಷಮ್ಯದ ಕಾರಣ ಇಬ್ಬರು ಸಹೋದರರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಎಂಬಲ್ಲಿ ನಡೆದಿದೆ. ಮೃತರನ್ನು ನಿಲೇಶ್(39) ಹಾಗೂ ರಾಜಶೇಖರ (35) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದು, ಕೊಲೆಗೆ ಹಳೆ ವೈಷಮ್ಯವೇ ಕಾರಣವೆಂದು ಶಂಕಿಸಲಾಗಿದೆ. ಸದ್ಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಸಹೋದರರಿಬ್ಬರ ಬರ್ಬರ ಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 15. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮಂಗಲ್ಪಾಡಿ ಚುಕ್ರಿಯಡ್ಕದ ಅಬ್ದುಲ್ ಫಯಾಜ್ (22) ಎಂದು ಗುರುತಿಸಲಾಗಿದೆ. ಈತ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಸಂಶಯಗೊಂಡ ಅಬಕಾರಿ ದಳದ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಈತನ ಬಳಿ 128 ಗ್ರಾಂ ಗಾಂಜಾ ಪತ್ತೆಯಾಗಿದೆ. ಈತನ ಜೊತೆಗಿದ್ದ ಮತ್ತೋರ್ವ ನೌಫಾಲ್ ಎಂಬಾತ ಪರಾರಿಯಾಗಾಗಿದ್ದಾನೆ.  

ಕಾಸರಗೋಡು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೆಚ್ಚಿದ ಲೋನ್ ಆ್ಯಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳದ ➤ ನೂರಾರು ಆ್ಯಪ್ ಗಳನ್ನು ರದ್ದು ಮಾಡಿದ ಪ್ಲೇಸ್ಟೋರ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 15. ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಲೋನ್ ಆಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಬಳಕೆದಾರರ ದೂರುಗಳು ಮತ್ತು ಸರ್ಕಾರ ನೀಡಿದ ಎಚ್ಚರಿಕೆಯ ನೆಲೆಯಲ್ಲಿ ವೈಯಕ್ತಿಕ ಲೋಲ್ ಆಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ತಿಳಿಸಿದೆ. ಇಂತಹ ಆ್ಯಪ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರಚನೆ ಮಾಡಿ

ಹೆಚ್ಚಿದ ಲೋನ್ ಆ್ಯಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳದ ➤ ನೂರಾರು ಆ್ಯಪ್ ಗಳನ್ನು ರದ್ದು ಮಾಡಿದ ಪ್ಲೇಸ್ಟೋರ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top