ರಾಷ್ಟ್ರೀಯ ನ್ಯೂಸ್

ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ

(ನ್ಯೂಸ್‌ ಕಡಬ) newskadaba.com,  ಅ..24 ನವದೆಹಲಿ: ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳಿಗಾಗಿ, ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಗಿದೆ.ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಚಿಹ್ನೆಯನ್ನು ಪ್ರದಾನ ಮಾಡಿದರು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಪಡೆಯ ಹಲವಾರು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ […]

ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

(ನ್ಯೂಸ್‌ ಕಡಬ) newskadaba.com,  ಅ.23: ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳ ಇಂಡಿಯಾ ಬಣ ಗುರುವಾರ ಘೋಷಿಸಿದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದರು. ಈ ನಿರ್ಧಾರವನ್ನು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿದ್ದಾರೆ ಎಂದು ಪ್ರತಿಪಾದಿಸಿದರು. ಇಂಡಿಯಾ ಬಣವು ಬಿಹಾರದಲ್ಲಿ ಸರ್ಕಾರ

ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾಂಕಾಂಗ್ : ರನ್‌ವೇಯಿಂದ ಸಮುದ್ರಕ್ಕೆ ಜಾರಿದ ವಿಮಾನ, ಇಬ್ಬರು ಮೃತ್ಯು

(ನ್ಯೂಸ್‌ ಕಡಬ) newskadaba.com,  ಅ.20 ಹಾಂಕಾಂಗ್:‌ ಸೋಮವಾರ ಬೆಳಗಿನ ಜಾವ ದುಬೈನಿಂದ ಆಗಮಿಸುತ್ತಿದ್ದ ಸರಕು ಸಾಗಣೆ ವಿಮಾನವೊಂದು ಹಾಂಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಉರುಳಿ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಹಾಂಕಾಂಗ್ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ, ಈ ಘಟನೆ ಸುಮಾರು ಬೆಳಗಿನ ಜಾವ 3:50 ಕ್ಕೆ ಸಂಭವಿಸಿದೆ.ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆರಂಭಿಕ ಮಾಹಿತಿಯ ಆಧಾರದ ಮೇಲೆ ವಿಮಾನ ನಿಲ್ದಾಣದ ನೆಲದ ವಾಹನದಲ್ಲಿದ್ದ ಇಬ್ಬರು

ಹಾಂಕಾಂಗ್ : ರನ್‌ವೇಯಿಂದ ಸಮುದ್ರಕ್ಕೆ ಜಾರಿದ ವಿಮಾನ, ಇಬ್ಬರು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅ. 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ಪ್ರಾರಂಭ

(ನ್ಯೂಸ್‌ ಕಡಬ) newskadaba.com,  ಅ.18: ಏಕದಿನ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದೆ. ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೊಮ್ಮೆ ಸರಣಿಯಲ್ಲಿ ಆಡುವುದನ್ನು ಕಾಣಬಹುದು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಏಳು ತಿಂಗಳ ವಿರಾಮದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಭಾನುವಾರ (ಅಕ್ಟೋಬರ್ 19) ನಡೆಯಲಿದೆ. ಬೆಳಿಗ್ಗೆ

ಅ. 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ಪ್ರಾರಂಭ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

75 ಗಂಟೆಗಳಲ್ಲಿ 303 ಮಾವೋವಾದಿಗಳು ಶರಣು; ನಕ್ಸಲ್ ಮುಕ್ತ ಭಾರತದ ಭರವಸೆ ನೀಡಿದ ಮೋದಿ

(ನ್ಯೂಸ್‌ ಕಡಬ) newskadaba.com,  ಅ.18: ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ನಕ್ಸಲರು ಶಾಲೆಗಳು ಅಥವಾ ಆಸ್ಪತ್ರೆಗಳನ್ನು ನಿರ್ಮಿಸಲು ಬಿಡುತ್ತಿರಲಿಲ್ಲ. ವೈದ್ಯರನ್ನು ಚಿಕಿತ್ಸಾಲಯಗಳಿಗೆ ಪ್ರವೇಶಿಸಲು ಬಿಡುತ್ತಿರಲಿಲ್ಲ ಸಂಸ್ಥೆಗಳಿಗೆ ಬಾಂಬ್ ಹಾಕುತ್ತಿದ್ದರು. ಮಾವೋವಾದಿ ಭಯೋತ್ಪಾದನೆಯಿಂದ ಯುವಜನರಿಗೆ ಮಾಡಿದ ಅನ್ಯಾಯವಾಗುತ್ತಿತ್ತು. ನಾನು ಉದ್ರೇಕಗೊಳ್ಳುತ್ತಿದ್ದೆ, ಇದೇ ಮೊದಲ ಬಾರಿಗೆ ನನ್ನ ನೋವನ್ನು ಜಗತ್ತಿಗೆ ವ್ಯಕ್ತಪಡಿಸುತ್ತಿದ್ದೇನೆ ಎಂದು ಅವರು ಹೇಳಿದರು. ಈಗ, 303 ನಕ್ಸಲರು ಶರಣಾಗಿದ್ದಾರೆ

75 ಗಂಟೆಗಳಲ್ಲಿ 303 ಮಾವೋವಾದಿಗಳು ಶರಣು; ನಕ್ಸಲ್ ಮುಕ್ತ ಭಾರತದ ಭರವಸೆ ನೀಡಿದ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೆಹಲಿಯ ಶಾಲೆಗೆ ಹುಸಿ ಬಾಂಬ್‌ ಬೆದರಿಕೆ

(ನ್ಯೂಸ್‌ ಕಡಬ) newskadaba.com,  ಅ.17 ಹೊಸದಿಲ್ಲಿ: ಇತ್ತಿಚೇಗೆ ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ಬಾಂಬ್‌ ಅಳವಡಿಸಿರುವುದಾಗಿ ಹುಸಿ ಬೆದರಿಕೆ ಕರೆ ಹಾಗೂ ಇ-ಮೇಲ್‌ ಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸಹ ಖಾಸಗಿ ಶಾಲೆಯೊಂದಕ್ಕೆ ಶಾಲೆಯಲ್ಲಿ ಬಾಂಬ್‌ ಅಳವಡಿಸಿರುವುದಾಗಿ ಬೆದರಿಕೆ ಇಮೇಲ್‌ ಬಂದಿದೆ. ಈ ಬೆದರಿಕೆ ಇಮೇಲ್‌ ಕಳಿಸಿರುವುದು ಬೇರೆ ಯಾರೂ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ. ಯಾಕೆ ಈ ರೀತಿ ನಕಲಿ ಬಾಂಬ್‌ ಬೆದರಿಕೆ ಮಾಡಿದ್ದ ಎಂದು ಕೇಳಿದರೆ

ದೆಹಲಿಯ ಶಾಲೆಗೆ ಹುಸಿ ಬಾಂಬ್‌ ಬೆದರಿಕೆ Read More »

ರಾಷ್ಟ್ರೀಯ ನ್ಯೂಸ್

ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಗಣನೀಯ ಇಳಿಕೆ

(ನ್ಯೂಸ್‌ ಕಡಬ) newskadaba.com,  ಅ.16 ನವದೆಹಲಿ:  ದೇಶದಲ್ಲಿ ಈಗ ಕೇವಲ 3 ಜಿಲ್ಲೆಗಳಲ್ಲಿ ಮಾತ್ರ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದೆ. ಉಳಿದೆಡೆ ಬಹುತೇಕ ಸ್ತಬ್ಧವಾಗಿದೆ. ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿರುವ 3 ಸಿಪಿಐ ನಕ್ಸಲ್ ಪೀಡಿತ ಜಿಲ್ಲೆಗಳೆಂದರೆ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಕುರಿತು ಬುಧವಾರ(ಅ.15) ಮಾಹಿತಿ ನೀಡಿರುವ ಗೃಹ ಸಚಿವಾಲಯ, ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಯಶಸ್ವಿಯಾಗಿದ್ದು ಸುಮಾರು 88 ಸಿಪಿಐ ಮಾವೋವಾದಿ ಸದಸ್ಯರು ಶರಣಾಗಿದ್ದಾರೆ ಎಂದು ಹೇಳಿದೆ.

ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಗಣನೀಯ ಇಳಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..!

(ನ್ಯೂಸ್‌ ಕಡಬ) newskadaba.com ಅ. 15. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ. ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು. 99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಬಂಗಾರದ ಬೆಲೆ

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..! Read More »

ರಾಷ್ಟ್ರೀಯ ನ್ಯೂಸ್

ಹೃದಯಸ್ತಂಭನ: ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ..!

(ನ್ಯೂಸ್‌ ಕಡಬ) newskadaba.com ಅ. 15. ಆಯುರ್ವೇದ ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ(80) ಹೃದಯಸ್ತಂಭನದಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ರೈಲಾ ಒಡಿಂಗಾ ಅವರು ಆಯುರ್ವೇದ ಚಿಕಿತ್ಸೆಗೆಂದು ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂಗೆ ಬಂದಿದ್ದರು. ಇಂದು ಮುಂಜಾನೆ ವಾಕಿಂಗ್ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೃದಯಸ್ತಂಭನ: ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ..! Read More »

ರಾಷ್ಟ್ರೀಯ ನ್ಯೂಸ್

ಬೆಂಕಿ ಅನಾಹುತ; ಚಲಿಸುತ್ತಿದ್ದ ಬಸ್ ಗೆ ಬೆಂಕಿ ,20 ಜನ ಸಜೀವ ದಹನ

(ನ್ಯೂಸ್‌ ಕಡಬ) newskadaba.com,  ಅ.15  ಜೈಸಲೇರ್‌: ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌‍ ಹಠಾತ್ತನೆ ಹೊತ್ತಿ ಉರಿದು 20 ಜನರು ಸಜೀವ ದಹನವಾಗಿದ್ದು, 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 57 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌‍ ಜೈಸಲ್ಮೇರ್‌ನಿಂದ ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ವಾಹನದ ಹಿಂಭಾಗದಿಂದ ಹೊಗೆ ಹೊರಬರಲು ಪ್ರಾರಂಭಿಸಿತು.ಇದನ್ನು ಗಮನಿಸಿದ ಚಾಲಕ ಬಸ್‌‍ ಅನ್ನು ನಿಲ್ಲಿಸಿದನು, ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡಿ ಬಸ್‌‍ಗೆ ಆವರಿಸಿತು. ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳಿಗೆ

ಬೆಂಕಿ ಅನಾಹುತ; ಚಲಿಸುತ್ತಿದ್ದ ಬಸ್ ಗೆ ಬೆಂಕಿ ,20 ಜನ ಸಜೀವ ದಹನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top