ರಾಷ್ಟ್ರೀಯ ನ್ಯೂಸ್

ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ…!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 31. ಉತ್ತರಾಖಂಡ್‌ ನ ರೂರ್ಕಿ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಅವರ ಮೆದುಳು ಹಾಗೂ ಬೆನ್ನುಮೂಳೆಯ ಎಂಆರ್‌ಐ ಫಲಿತಾಂಶಗಳು ಸಾಮಾನ್ಯವಾಗಿದ್ದು, ಅವರ ಅವರ ಮುಖಕ್ಕೆ ಆದ ಗಾಯಗಳು ಹಾಗೂ ಸವೆತಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ. ಭಾರತದ ಸ್ಟಾರ್ ವಿಕೆಟ್‌ ಕೀಪರ್ ರಿಷಬ್ ಪಂತ್ ಅವರು, ಚಲಾಯಿಸುತ್ತಿದ್ದ ಕಾರು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ […]

ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶೂಟ್ ಮಾಡಿ ಜಿಮ್ ಮಾಲೀಕನ ಹತ್ಯೆ ➤ ಪೊಲೀಸರ ಹಾದಿ ತಪ್ಪಿಸಲು ಸಿಸಿಟಿವಿಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 31. ಜಿಮ್ ಮಾಲಕರೊಬ್ಬರನ್ನು ಶೂಟ್ ಮಾಡಿ ಹತ್ಯೆಗೈದ ಘಟನೆ ದೆಹಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ. ಹತ್ಯೆಯಾದವರನ್ನು ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅಗರ್ವಾಲ್ ಎನರ್ಜಿ ಜಿಮ್, ಸ್ಪಾ ಹಾಗೂ ಜಿಮ್ ಗೆ ಸಂಬಂಧಿಸಿದ ಅಂಗಡಿಯನ್ನು ಹೊಂದಿದ್ದು, ಶುಕ್ರವಾರದಂದು ರಾತ್ರಿ ಎಂಟು ಗಂಟೆಯ ವೇಳೆ ಗನ್ ಹಿಡಿದುಕೊಂಡು ಬಂದ ಅಪರಿಚಿತರು ಶೂಟ್ ಮಾಡಿ ಹತ್ಯೆಗೈದಿದ್ದಾರೆ. ಅಲ್ಲದೇ ಪೊಲೀಸರ ಹಾದಿ ತಪ್ಪಿಸಲು ಘಟನಾ ಸ್ಥಳದಲ್ಲಿನ ಸಿಸಿಟಿವಿಯನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಶೂಟ್ ಮಾಡಿ ಜಿಮ್ ಮಾಲೀಕನ ಹತ್ಯೆ ➤ ಪೊಲೀಸರ ಹಾದಿ ತಪ್ಪಿಸಲು ಸಿಸಿಟಿವಿಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಲಕನಿಗೆ ಹೃದಯಾಘಾತವಾಗಿ ಕಾರಿಗೆ ಢಿಕ್ಕಿ ಹೊಡೆದ ಬಸ್ ➤ 9 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಗುಜರಾತ್, ಡಿ. 31. ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾದ ಪರಿಣಾಮ 9 ಮಂದಿ ದಾರುಣ ಅಂತ್ಯ ಕಂಡ ಘಟನೆ ಗುಜರಾತ್ ನಲ್ಲಿ ವರದಿಯಾಗಿದೆ. 28 ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ 11 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿದ್ದವರು ಸೂರತ್ ನಲ್ಲಿನ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್ ಆಗುತ್ತಿದ್ದ ವೇಳೆ ಬಸ್ಸಿನ ಚಾಲಕನಿಗೆ ಹೃದಯಾಘಾತ ಸಂಭವಿಸಿ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಚಾಲಕನಿಗೆ ಹೃದಯಾಘಾತವಾಗಿ ಕಾರಿಗೆ ಢಿಕ್ಕಿ ಹೊಡೆದ ಬಸ್ ➤ 9 ಮಂದಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಕ್ಕಳಿಗೆ ಮಧುಮೇಹ ಖಾಯಿಲೆ ➤ ಮಕ್ಕಳನ್ನು ನದಿಗೆಸೆದು ದಂಪತಿ ಆತ್ಮಹತ್ಯೆ

(ನ್ಯೂಸ್  ಕಡಬ) newskadaba.com ಚೆನ್ನೈ, ಡಿ. 30. ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ತಮ್ಮಿಬ್ಬರು ಅಪ್ರಾಪ್ತ ಮಕ್ಕಳನ್ನು ನದಿಗೆ ದೂಡಿ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತರನ್ನು ಯುವರಾಜ್ (41), ಅವರ ಪತ್ನಿ ವನ್ವಿಜಿ (38) ಮತ್ತು ಅವರ ಮಕ್ಕಳಾದ ನಿತಿಶಾ (7), ಅಪ್ಸರಾ (4) ಎಂದು ಗುರುತಿಸಲಾಗಿದೆ. ದನ ಮೇಯಿಸುವವರು ನದಿಯಲ್ಲಿ ನಾಲ್ಕು ಶವ ತೇಲುತ್ತಿರುವುದನ್ನು ನೋಡಿ ಆತಂಕಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳೀಯ ಈಜುಗಾರರ ನೆರವಿನಿಂದ ಪೊಲೀಸರು

ಮಕ್ಕಳಿಗೆ ಮಧುಮೇಹ ಖಾಯಿಲೆ ➤ ಮಕ್ಕಳನ್ನು ನದಿಗೆಸೆದು ದಂಪತಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆ ಏರಿಕೆ

(ನ್ಯೂಸ್ ಕಡಬ) newskadaba.com ಚಂಡೀಗಢ, ಡಿ. 30. ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ. ದೇಶದಲ್ಲಿ ಅಳಿವಿನಂಚಿನಲ್ಲಿದ್ದ ಬಿಗ್ ಕ್ಯಾಟ್ಸ್ ಎಂಬ ಸಂತತಿಯು ಇದೀಗ ಏರಿಕೆಯತ್ತ ಸಾಗಿದ್ದು, ಹಿಮಚಿರತೆಗಳ ಕುರಿತು ನಡೆದ ಮೊದಲ ಅಧ್ಯಯನದಲ್ಲಿ ಈ ಮಹತ್ವದ ಅಂಶ ಬೆಳಕಿಗೆ ಬಂದಿದ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್-ಸ್ಪಿತಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸರ್ವೆಗಾಗಿ ನೇಮಕವಾಗಿದ್ದ ತಜ್ಞರ ತಂಡ ಈ ಕುರಿತು ಅಧ್ಯಯನ ನಡೆಸಿದೆ.

ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆ ಏರಿಕೆ Read More »

ರಾಷ್ಟ್ರೀಯ ನ್ಯೂಸ್

ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕುಳ್ಳಿರಿಸಿ ಜಾಲಿ ರೈಡ್ ಹೋದ ಯುವಕ- ಅಂದರ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಡಿ. 30. ಹಾಡಹಗಲೇ ಯುವಕನೋರ್ವ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಹೋಗಿರುವ ಘಟನೆ ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕುಳ್ಳಿರಿಸಿ ಜಾಲಿ ರೈಡ್ ಹೋದ ಯುವಕ- ಅಂದರ್ ➤ ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ➤ ಇಬ್ಬರು ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 30. ಆಕ್ಸಿಜನ್ ಸಿಲಿಂಡರ್ ಒಂದು ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಹೊರಗೆ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಆಸ್ಪತ್ರೆ ಹಾಗೂ ಸಮೀಪದ ಮನೆಗಳ ಗಾಜುಗಳು ಒಡೆದುಹೋಗಿದ್ದು, ಹಾಗೆಯೇ ಎರಡು ದೇಹಗಳು ಸಂಪೂರ್ಣ ಛಿದ್ರವಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಹಲವಾರು ಆಮ್ಲಜನಕ ಸಿಲಿಂಡರ್ ಗಳನ್ನು ಸಾಗಿಸುವ ಟ್ರಕ್ ಕೂಡ ರಸ್ತೆಯ ಮಧ್ಯದಲ್ಲಿ ನಿಂತಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ

ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ➤ ಇಬ್ಬರು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಪ್ಪಾಗಿ ಬರೆದಳೆಂದು ವಿದ್ಯಾರ್ಥಿನಿಯ ಕೈಮೂಳೆ ಮುರಿದ ಶಿಕ್ಷಕ…!

(ನ್ಯೂಸ್ ಕಡಬ) newskadaba.com ಭೋಪಾಲ್, ಡಿ. 30. ಗಿಳಿ ಎಂಬ ಪದವನ್ನು ಸರಿಯಾಗಿ ಬರೆಯದಕ್ಕೆ ಕೋಪಗೊಂಡ ಟ್ಯೂಶನ್ ಶಿಕ್ಷಕರೊಬ್ಬರು ಐದು ವರ್ಷದ ಬಾಲಕಿಯ ಕೈ ತಿರುವಿದ ಪರಿಣಾಮ ಬಾಲಕಿಯ ಕೈ ಮೂಳೆ ಮುರಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಶಿಕ್ಷಕ ಪ್ರಯಾಗ್ ವಿಶ್ವಕರ್ಮ ಎಂಬಾತನನ್ನು ಬಂಧಿಸಲಾಗಿದೆ. ಶಿಕ್ಷಕ ಬಾಲಕಿಯೊಂದಿಗೆ ಗಿಳಿ ಎಂಬುದಾಗಿ ಬರೆಯಲು ಹೇಳಿದ್ದು, ಆದರೆ ಈ ಪದವನ್ನು ಬರೆಯಲು ಬಾಲಕಿಗೆ ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕ ಆಕೆಯ ಕಪಾಳಕ್ಕೆ ಹೊಡೆದು ಬಳಿಕ ಕೈಯನ್ನು

ತಪ್ಪಾಗಿ ಬರೆದಳೆಂದು ವಿದ್ಯಾರ್ಥಿನಿಯ ಕೈಮೂಳೆ ಮುರಿದ ಶಿಕ್ಷಕ…! Read More »

ರಾಷ್ಟ್ರೀಯ ನ್ಯೂಸ್

ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಪ್ರಧಾನಿ ಮೋದಿ

 (ನ್ಯೂಸ್  ಕಡಬ) newskadaba.com ಹೊಸದಿಲ್ಲಿ, ಡಿ.30.  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಗುಜರಾತ್ ನ ಗಾಂಧಿನಗರದ ಸೆಕ್ಟರ್ 30 ರಲ್ಲಿರುವ ಹಿಂದೂ ಸ್ಮಶಾನದಲ್ಲಿ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ವಿಧಿವಿಧಾನಗಳ ಪ್ರಕಾರ ನೆರವೇರಿಸಿದರು. ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಸ್ಥರು ಮಾತ್ರವಲ್ಲದೆ, ಗುಜರಾತ್ ಮುಖ್ಯಮಂತ್ರಿ ಭೊಪೇಂದ್ರ ಪಟೇಲ್ ಕೂಡ ಗಾಂಧಿನಗರದಲ್ಲಿರುವ ಸ್ಮಶಾನದಲ್ಲಿ ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಪ್ರಾಧಾನಿಯವರು ಪಶ್ಚಿಮ ಬಂಗಾಳದದಲ್ಲಿ ಇಂದು 7,800 ಕೋಟಿ ರಾಪಾಯಿಗಳ ಅಭಿವೃದ್ಧಿ

ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಅಂಬಾನಿ ಮಗನನ್ನು ವರಿಸಲಿರುವ ರಾಧಿಕಾ ಮರ್ಚೆಂಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 30.  ರಿಲಾಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿಯ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್‌ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ಎಂಬ ಕಾರಣಕ್ಕಾಗಿಯೇ ರಾಧಿಕಾ ಮರ್ಚೆಂಟ್‌ ಹೆಚ್ಚು ಮನೆಮಾತಾಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಬಂಧದ ವದಂತಿಗಳು ಮೊದಲು ಹುಟ್ಟಿಕೊಂಡಿದ್ದು, ಅವರ ಒಂದೆರಡು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸದ್ಯದಲ್ಲೇ ರಾಧಿಕಾ ಮರ್ಚೆಂಟ್ ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ಎಂದು

ಅಂಬಾನಿ ಮಗನನ್ನು ವರಿಸಲಿರುವ ರಾಧಿಕಾ ಮರ್ಚೆಂಟ್ Read More »

ರಾಷ್ಟ್ರೀಯ ನ್ಯೂಸ್
Scroll to Top