ರಾಷ್ಟ್ರೀಯ ನ್ಯೂಸ್

ನೋಟು ಅಮಾನ್ಯೀಕರಣ ➤ ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು!

(ನ್ಯೂಸ್ ಕಡಬ) newskadaba.com ನವದೆಹಲಿ,  ಜ. 01  ಕೇಂದ್ರ ಸರ್ಕಾರವು 2016ರಲ್ಲಿ 500 ರೂ. ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿತ್ತು. ಮೂಲಗಳ ಪ್ರಕಾರ, ನೋಟು ರದ್ದತಿ ತೀರ್ಪು ಎರಡು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ನವದೆಹಲಿ: 1,000 ರೂ. ಮತ್ತು 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ 2016ರ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. ಸುಪ್ರೀಂ ಕೋರ್ಟ್​ನ ಐವರು […]

ನೋಟು ಅಮಾನ್ಯೀಕರಣ ➤ ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಒಂದೇ ಮನೆಯ ನಾಲ್ವರು ನೀರುಪಾಲು  ➤ ಈಜಿ ದಡ ಸೇರಿದ 15 ವರ್ಷದ ಬಾಲಕಿ  

(ನ್ಯೂಸ್ ಕಡಬ) newskadaba.com ಛತ್ತೀಸ್ ಗಢ, ಡಿ. 31. ನೀರು ತುಂಬಿದ ಕಲ್ಲು ಕ್ವಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಛತ್ತೀಸ್ ಘಡದಲ್ಲಿ ಸಂಭವಿಸಿದೆ. ಘಟನೆಯಿಂದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 15 ವರ್ಷದ ಬಾಲಕಿಯೋರ್ವಳು ನೀರಿನಿಂದ ಈಜಿ ಬಂದು ದಡ ಸೇರಿದ್ದಾಳೆ ಎಂದು ತಿಳಿದುಬಂದಿದೆ.    

ಒಂದೇ ಮನೆಯ ನಾಲ್ವರು ನೀರುಪಾಲು  ➤ ಈಜಿ ದಡ ಸೇರಿದ 15 ವರ್ಷದ ಬಾಲಕಿ   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟಿ ತುನಿಷಾ ಆತ್ಮಹತ್ಯೆ ಪ್ರಕರಣ ➤ ನಟ ಶೀಜಾನ್ ಖಾನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 31. ಹಿಂದಿ ಕಿರುತೆರೆ ನಟಿ, ಮಾಡೆಲ್‌ ತುನಿಷಾ ಶರ್ಮಾ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಮತ್ತು ಪ್ರಕರಣದ ಪ್ರಮುಖ ಆರೋಪಿ ಆಕೆಯ ಪ್ರಿಯಕರ ಶೀಜಾನ್‌ ಖಾನ್‌ ಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಡಿ. 24ರಂದು ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಸಹ ನಟ ಶೀಜಾನ್‌ ಮೊಹಮ್ಮದ್‌ ಖಾನ್‌ ನನ್ನು ಪೊಲೀಸರು ಬಂಧಿಸಿದ್ದರು.

ನಟಿ ತುನಿಷಾ ಆತ್ಮಹತ್ಯೆ ಪ್ರಕರಣ ➤ ನಟ ಶೀಜಾನ್ ಖಾನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಧಾರ್ ಕಾರ್ಡ್ ಬಳಸುವಾಗ ಎಚ್ಚರ ವಹಿಸಿ  ➤ ಸರಕಾರ ಸೂಚನೆ                            

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 31. ಅನ್ಯ ಉದ್ದೇಶಗಳಿಗೆ ಆಧಾರ್‌ ಕಾರ್ಡ್‌ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ವಿಶಿಷ್ಟ ಗುರುತಿನ ಪ್ರಾಧಿಕಾರ ದೇಶದ ನಾಗರಿಕರಿಗೆ ಸೂಚನೆ ನೀಡಿದ್ದು, ಸರಕಾರದ ಹಲವು ಸೌಲಭ್ಯ ಪಡೆಯುವ ಜತೆಗೆ ಬೇರೆ ಬೇರೆ ಸೇವೆ ಹಾಗೂ ಸೌಕರ್ಯ ಪಡೆದುಕೊಳ್ಳಲು ನಾಗರಿಕರು ಆಧಾರ್‌ ಕಾರ್ಡ್‌ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ಯುಐಡಿಎಐ ಎಚ್ಚರಿಸಿದೆ. ಆಧಾರ್‌ ಸಂಖ್ಯೆ ನೀಡುವಾಗ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಜತೆಗೆ ಬ್ಯಾಂಕ್‌ ಅಕೌಂಟ್‌, ಮೊಬೈಲ್‌

ಆಧಾರ್ ಕಾರ್ಡ್ ಬಳಸುವಾಗ ಎಚ್ಚರ ವಹಿಸಿ  ➤ ಸರಕಾರ ಸೂಚನೆ                             Read More »

ರಾಷ್ಟ್ರೀಯ ನ್ಯೂಸ್

ಕೆಮ್ಮಿನ ಸಿರಪ್ ನಿಂದ ಮಕ್ಕಳ ಮೃತ್ಯು   ➤ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆಯ ಅಮಾನತು 

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ. 31. ಕೆಮ್ಮಿನ ಸಿರಪ್ ನಿಂದ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆಯ ಸದಸ್ಯತ್ವವನ್ನು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್‌) ಅಮಾನತು ಮಾಡಿದೆ ಎಂದು ತಿಳಿದುಬಂದಿದೆ. ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್‌) ಮ್ಯಾರಿಯೊನ್ ಬಯೊಟೆಕ್‌ ನ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಮ್ಯಾರಿಯೊನ್‌ ಬಯೊಟೆಕ್‌ ನ ಔಷಧ ನೀಡಲಾಗಿದ್ದ ಉಜ್ಬೇಕಿಸ್ತಾನದ 18 ಮಕ್ಕಳು ಮೃತಪಟ್ಟ ಬಗ್ಗೆ ವಿವರಣೆ ನೀಡದೇ ಇದ್ದುದಕ್ಕೆ ಮಂಡಳಿಯು ಈ

ಕೆಮ್ಮಿನ ಸಿರಪ್ ನಿಂದ ಮಕ್ಕಳ ಮೃತ್ಯು   ➤ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆಯ ಅಮಾನತು  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಕಲಿ ಮದ್ಯ ದುರಂತ- 80 ಮಂದಿ ಬಲಿ  ➤ ಪ್ರಮುಖ ಆರೋಪಿ ಅರೆಸ್ಟ್                          

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 31. ನಕಲಿ ಮದ್ಯ ಸೇವಿಸಿ 80 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದ ಕುರಿತು ಬಿಹಾರದ ಸರನ್ ಜಿಲ್ಲೆಯ ಚಪ್ರಾದಲ್ಲಿ ನಡೆದಿದೆ. ಈ ತಿಂಗಳ ಆರಂಭದಲ್ಲಿ ಕನಿಷ್ಠ 78 ಜನರು ಮತ್ತು 38 ಜನರು ನಕಲಿ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡಿದ್ದು, ದೆಹಲಿ ಪೊಲೀಸ್ ಅಪರಾಧ ವಿಭಾಗದ ಪ್ರಕಾರ, ಮಶ್ರಕ್‌ ಠಾಣೆಯಲ್ಲಿ ಮತ್ತು ಸರನ್ ಜಿಲ್ಲೆಯ ಇಸುಪುರ್ ಠಾಣೆಯಲ್ಲಿ ದಾಖಲಾದ ಎರಡು

ನಕಲಿ ಮದ್ಯ ದುರಂತ- 80 ಮಂದಿ ಬಲಿ  ➤ ಪ್ರಮುಖ ಆರೋಪಿ ಅರೆಸ್ಟ್                           Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಕಿಯ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ಹಾಕಿದ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಲಖನೌ, ಡಿ. 31. 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಕೊಳವೆ ಬಾವಿಗೆ ತಳ್ಳಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ ಘಟನೆ ಮೌ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರದಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಬಂಧಿಸಿದ್ದು, ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ. ಕಸ ಎಸೆಯಲು ಹೋದಾಗ ಮನೆಯಿಂದ ಸುಮಾರು 200 ಮೀಟರ್ ದೂರದ ಕೊಳವೆ ಬಾವಿಯಲ್ಲಿ, ಕೈ- ಕಾಲುಗಳಿಗೆ ಹಗ್ಗ ಕಟ್ಟಿ ಹಾಗೂ ಬಾಯಿಗೆ ಬಟ್ಟೆ ತುರುಕಿದ ಸ್ಥಿತಿಯಲ್ಲಿ

ಬಾಲಕಿಯ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ಹಾಕಿದ ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣನವರ ಕಾರು ಅಪಘಾತ ➤ 6 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಚಿಕ್ಕೋಡಿ, ಡಿ. 31. ಮಾಜಿ ಶಾಸಕ, ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣ ಪ್ರಯಾಣಿಸುತ್ತಿದ್ದ ಕಾರೊಂದು ಬೆಳಗಾವಿಯ ಅಥಣಿ ಪಟ್ಟಣದ ಹೊರವಲಯದಲ್ಲಿ ಅಪಘಾತಕ್ಕೀಡಾದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ವಿಜಯಪುರದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಕ್ಕೆ ಮಾಜಿ ಶಾಸಕರು ಸೇರಿದಂತೆ 6 ಜನರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯ ಟೈಯರ್ ಬ್ಲಾಸ್ಟ್ ಆಗಿ ಕಾರಿನ ಮೇಲೆ ಟೈಯರ್ ಬಿದ್ದ ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ

ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣನವರ ಕಾರು ಅಪಘಾತ ➤ 6 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕ್ಯಾಂಟೀನ್ ನಲ್ಲಿ ಊಟ ಸೇವನೆ ➤ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ             

(ನ್ಯೂಸ್ ಕಡಬ) newskadaba.com ನಾಸಿಕ್, ಡಿ. 31. ವಿಷಾಹಾರ ಸೇವನೆ ಮಾಡಿ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ತಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನ ಇಗತ್ ಪುರಿ ತಾಲೂಕಿನ ಧರ್ಮಗಾಂವ್ ನಲ್ಲಿರುವ ಎಸ್ಎಂಬಿಟಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಂಭವಿಸಿದೆ. ವಿದ್ಯಾರ್ಥಿಗಳು ವಾಕರಿಕೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಕ್ಯಾಂಟೀನ್ ನಲ್ಲಿ ಊಟ ಸೇವನೆ ಮಾಡಿದ್ದಾರೆ. ಊಟದ

ಕ್ಯಾಂಟೀನ್ ನಲ್ಲಿ ಊಟ ಸೇವನೆ ➤ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ              Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಸ್ಫೋಟ ➤ ನಾಲ್ವರು ಮೃತ್ಯು..!

(ನ್ಯೂಸ್ ಕಡಬ) newskadaba.com ಚೆನ್ನೈ, ಡಿ. 31. ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಸ್ಫೋಟಗೊಂಡ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಚೆನ್ನೈನ ನಾಮಕ್ಕಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ತಿಲ್ಲೈ ಕುಮಾರ್, ಅವರ ತಾಯಿ ಸೆಲ್ವಿ (57) ಮತ್ತು ಪತ್ನಿ ಪ್ರಿಯಾ (27) ಎಂದು ಗುರುತಿಸಲಾಗಿದೆ. ಪರವಾನಗಿ ಹೊಂದಿರುವ ತಿಲ್ಲೈ ಕುಮಾರ್ (37) ಎಂಬಾತ ತನ್ನ ಮನೆಯಲ್ಲಿ ಪಟಾಕಿಯನ್ನು ಸಂಗ್ರಹಿಸಿಟ್ಟಿದ್ದ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದವರು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಸ್ಫೋಟ ➤ ನಾಲ್ವರು ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top