ರಾಷ್ಟ್ರೀಯ ನ್ಯೂಸ್

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.04. ಕಾಸರಗೋಡು ನಿಲ್ದಾಣದಲ್ಲಿ ರೈಲಿನಿಂದ ಬಂದಿಳಿದ ಚೆರ್ಕಳ ಸಿಟಿಜನ್‌ ನಗರದ ಮೊಹಮ್ಮದ್‌ ಫಾಹಿಸ್‌ (34) ಎಂಬಾತನ ಬ್ಯಾಗ್‌ ತಪಾಸಣೆ ಮಾಡಿದಾಗ 1.300 ಕಿಲೋ ಚಿನ್ನ ಪತ್ತೆಯಾಗಿದ್ದು, ಆತನನ್ನು ಕಸ್ಟಂಸ್‌ ತಂಡ ಬಂಧಿಸಿದೆ. ಚಿನ್ನ ಸಾಗಾಟದ ಬಗ್ಗೆ ಕಾಸರಗೋಡು ಕಸ್ಟಮ್ಸ್ ಯೂನಿಟ್‌ನ ಸೂಪರಿಂಟೆಂಡೆಂಟ್‌ ಪಿ.ಟಿ.ರಾಜೀವ್‌ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ ಅವರು ಮತ್ತು ಕಾಸರಗೋಡು ಕಸ್ಟಮ್ಸ್ ವಿಭಾಗದ ಹೆಡ್‌ ಹವಾಲ್ದಾರ್‌ಗಳಾದ ಆನಂದ ಕೆ. ಚಂದ್ರಶೇಖರ ಕೆ. ಮತ್ತು ವಿಶ್ವನಾಥ ಎಂ. ನೇತೃತ್ವದ ತಂಡ […]

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎನ್‌ಐಎಗೆ ಭಯೋತ್ಪಾದನಾ ದಾಳಿಯ ಬೆದರಿಕೆ ಸಂದೇಶ

(ನ್ಯೂಸ್ ಕಡಬ)newskadaba.com ಮುಂಬೈ, ಫೆ.04. ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲ್ ಸಂದೇಶ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ತಾಲಿಬಾನಿ ಸದಸ್ಯ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯಿಂದ ಮೇಲ್ ಸ್ವೀಕರಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಅಲರ್ಟ್ ಆಗಿರಲು ಎನ್‌ಐಎ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. “ಬೆದರಿಕೆ ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ತಾಲಿಬಾನಿ ಎಂದು ಹೇಳಿಕೊಂಡಿದ್ದಾನೆ. ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಆತ ಹೇಳಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸ್ ಮೂಲಗಳು

ಎನ್‌ಐಎಗೆ ಭಯೋತ್ಪಾದನಾ ದಾಳಿಯ ಬೆದರಿಕೆ ಸಂದೇಶ Read More »

ರಾಷ್ಟ್ರೀಯ ನ್ಯೂಸ್

ಪತ್ನಿಯನ್ನು ಕೊಂದು ಮೃತದೇಹ ಹೊಲದಲ್ಲಿ ಹೂತ ಪತಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.04. ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಶಂಕೆಯಿಂದ ತನ್ನ ಪತ್ನಿಯನ್ನು ಕೊಂದು ಹೊಲದಲ್ಲಿ ಗುಂಡಿ ತೆಗೆದು 30 ಕೆಜಿ ಉಪ್ಪು ಹಾಕಿ ಹೂತು ಅದೇ ಜಾಗದಲ್ಲಿ ರಾಗಿ ಬೇಸಾಯ ಕೂಡ ಮಾಡಿರುವ ಘಟನೆ ನಡೆದಿದೆ. ಆರೋಪಿ ಪತಿ ದಿನೇಶ್ ತನ್ನ ಹೆಂಡತಿ ಅಂಜು ಇದ್ದಕ್ಕಿದ್ದಂತೆ ಎಲ್ಲೋ ಹೋಗಿದ್ದಾಳೆ. ನನಗೆ ಯಾವುದೇ ಸುಳಿವು ನೀಡಿಲ್ಲ ಎಂದು ಭೋಜ್‌ಪುರ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇನ್ನು ದಿನೇಶ್ ದೂರಿನ ಮೇರೆಗೆ, ಗಾಜಿಯಾಬಾದ್‌ನ ಭೋಜ್‌ಪುರ

ಪತ್ನಿಯನ್ನು ಕೊಂದು ಮೃತದೇಹ ಹೊಲದಲ್ಲಿ ಹೂತ ಪತಿ Read More »

ರಾಷ್ಟ್ರೀಯ ನ್ಯೂಸ್

ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಐವರು ನೂತನ ನ್ಯಾಯಾಧೀಶರ ನೇಮಕ ➤ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.04. ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ನೀಡಿರುವ ಶಿಫಾರಸುಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು ಎಂದು ಸರಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ಎಲ್ಲಾ ಐದು ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಐವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯೆ 32 ಕ್ಕೆ ಏರಲಿದೆ. ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಾಧೀಶರು ಅಲ್ಲಿರಬಹುದು. ಪ್ರಸ್ತುತ ಇವರ ಸಂಖ್ಯೆ 27 ಇದೆ. ನ್ಯಾಯಾಧೀಶರ ನೇಮಕಾತಿ ವಿಳಂಬಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ

ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಐವರು ನೂತನ ನ್ಯಾಯಾಧೀಶರ ನೇಮಕ ➤ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್
crime, arrest, suspected

‘ಬಾಲ್ಯವಿವಾಹವಾದ 1,800 ಮಂದಿ ಅರೆಸ್ಟ್’

(ನ್ಯೂಸ್ ಕಡಬ)newskadaba.com ಅಸ್ಸಾಂ, ಫೆ.03. ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ರಾಜ್ಯದಲ್ಲಿ ಈವರೆಗೆ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಟಲು ಸರ್ಕಾರ ಬದ್ದವಾಗಿದೆ. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ವಹಿಸಬೇಕೆಂದು ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದೆ. ಇಲ್ಲಿವರೆಗೆ ಬಾಲ್ಯವಿವಾಹವಾದ 1,800 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.  

‘ಬಾಲ್ಯವಿವಾಹವಾದ 1,800 ಮಂದಿ ಅರೆಸ್ಟ್’ Read More »

ರಾಷ್ಟ್ರೀಯ ನ್ಯೂಸ್

ಮಕ್ಕಳಿಬ್ಬರಿಗೆ ಢಿಕ್ಕಿಯಾಗಿ ನೂರಾರು ಮೀಟರ್ ಎಳೆದೊಯ್ದ ರೈಲು ➤ ಓರ್ವ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಜರ್ಮನಿ, ಫೆ.03. ಮಕ್ಕಳಿಬ್ಬರಿಗೆ ರೈಲು ಢಿಕ್ಕಿ ಹೊಡೆದು ಸುಮಾರು ನೂರಕ್ಕೂ ಹೆಚ್ಚು ಮೀಟರ್‌ವರೆಗೆ ಎಳೆದೊಯ್ದ ಹೃದಯ ವಿದ್ರಾವಕ ಘಟನೆ ಜರ್ಮನಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಗು ಮೃತಪಟ್ಟಿದ್ದು, ಮತ್ತೊಬ್ಬ ಮಗು ಗಂಭೀರ ಗಾಯಗೊಂಡಿದೆ. ನಿಲ್ದಾಣಗಳೆರಡರ ನಡುವೆ ಅಪಘಾತ ಸಂಭವಿಸಿದೆ. ಸರಕು ಸಾಗಣೆ ರೈಲು ಮಕ್ಕಳಿಬ್ಬರಿಗೆ ಢಿಕ್ಕಿಯಾಗಿದೆ. ಆದರೆ ಮಕ್ಕಳು ಹಳಿ ಮೇಲೆ ಹೋಗಿದ್ದರೇ ಅಥವಾ ಢಿಕ್ಕಿ ಹೊಡೆಯಲು ಇತರ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನಾ ಸ್ಥಳದಲ್ಲಿ

ಮಕ್ಕಳಿಬ್ಬರಿಗೆ ಢಿಕ್ಕಿಯಾಗಿ ನೂರಾರು ಮೀಟರ್ ಎಳೆದೊಯ್ದ ರೈಲು ➤ ಓರ್ವ ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡ್ರಗ್ಸ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಬಿಎಸ್ಎಫ್

(ನ್ಯೂಸ್ ಕಡಬ)newskadaba.com ಅಮೃತಸರ, ಫೆ.03. ಮಾದಕ ದ್ರವ್ಯವನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ವೇಳೆ ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ಅಮೃತಸರ ಸೆಕ್ಟರ್‌ನ ಗಡಿ ಪೋಸ್ಟ್ ಹಿಂಭಾಗದ ಕಕ್ಕರ್ ಬಳಿ ಮಾನವ ರಹಿತ ವೈಮಾನಿಕ ವಾಹನವು ಕೆಳಗಿಳಿದಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಗಡಿ ಬೇಲಿ ಮತ್ತು ಶೂನ್ಯ ರೇಖೆಯ ನಡುವೆ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ವಾಡ್‌ಕಾಪ್ಟರ್‌ನೊಂದಿಗೆ ಶಂಕಿತ ಹೆರಾಯಿನ್ ಹೊಂದಿರುವ ಮೂರು

ಡ್ರಗ್ಸ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಬಿಎಸ್ಎಫ್ Read More »

ರಾಷ್ಟ್ರೀಯ ನ್ಯೂಸ್

ಮಹಾರಾಷ್ಟ್ರ ಸರ್ಕಾರಿ ಬಸ್‌ ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ

(ನ್ಯೂಸ್ ಕಡಬ)newskadaba.com ಲಾತೂರ್‌, ಫೆ.03. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ಅನಾಮಿಕರು ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ ಆಗಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಲಾತೂರು ಬಳಿಕ ಔರಾದ ಶಹಾಜಾನಿ ನಿಲ್ದಾಣದಿಂದ ನಿಲ್ಲಿಸಲಾಗಿದ್ದ ಬಸ್ಸು ಇದ್ದಕ್ಕಿದ್ದಂತೆ ನಾಪತ್ತೆ ಆಗಿತ್ತು. ಬಳಿಕ ಈ ಬಸ್ಸು 14 ಕಿ.ಮೀ. ದೂರದ ಕರ್ನಾಟಕದ ಕೇಸರ್‌ ಜವಳಗಾ ಗ್ರಾಮದ ಬಳಿ ಪತ್ತೆ ಆಗಿದೆ. ಯಾರೋ ಅಪರಿಚಿತ ವ್ಯಕ್ತಿ ಇದನ್ನು ಚಲಾಯಿಸಿಕೊಂಡು ಬಂದು, ಜವಳಗಾ ಗ್ರಾಮದಲ್ಲಿ ನಿಲ್ಲಿಸಿ ಹೋಗಿದ್ದಾನೆ. ಯಾರು ಇದನ್ನು ಮಾಡಿದ್ದು, ಏಕೆ

ಮಹಾರಾಷ್ಟ್ರ ಸರ್ಕಾರಿ ಬಸ್‌ ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವೇಶ್ಯಾವಾಟಿಕೆ ಕೇಸ್ ನ ಆರೋಪಿಯನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ !

(ನ್ಯೂಸ್ ಕಡಬ)newskadaba.com ಮೇಘಾಲಯ, ಫೆ.03. ದಕ್ಷಿಣ ತುರಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ವರದಿಯಾಗಿದೆ. ತುರಾದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಮರಕ್ ಅವರ ಫಾರ್ಮ್‌ಹೌಸ್‌ನಲ್ಲಿ 6 ಮಂದಿ ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.  

ವೇಶ್ಯಾವಾಟಿಕೆ ಕೇಸ್ ನ ಆರೋಪಿಯನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ! Read More »

ರಾಷ್ಟ್ರೀಯ ನ್ಯೂಸ್

100, 200, 500 ರೂಪಾಯಿ ನೋಟು ಗಳ ಕುರಿತು ‘RBI’ನಿಂದ ಮಹತ್ವದ ಮಾಹಿತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.03. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಟುಗಳನ್ನ ನೀಡಲಾಗುತ್ತದೆ. ಆದ್ರೆ, ನೋಟು ಅಮಾನ್ಯೀಕರಣದ ನಂತ್ರ ದೇಶಾದ್ಯಂತ, ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿದ್ದು, ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕೊಡುಗೆಯನ್ನ ತಂದಿದ್ದು, ಇದರಲ್ಲಿ ಹೊಚ್ಚ ಹೊಸ ನೋಟುಗಳನ್ನ ಪಡೆಯಬಹುದು ಎಂದು ವರದಿಯಾಗಿದೆ. PNB ತನ್ನ ಅಧಿಕೃತ ಟ್ವೀಟ್ ನಲ್ಲಿ ಹಳೆಯ ಅಥವಾ ವಿಕೃತ ನೋಟುಗಳನ್ನ ಬದಲಾಯಿಸಲು ಬಯಸಿದ್ರೆ, ಈ ಕೆಲಸವನ್ನ ಸುಲಭವಾಗಿ ಮಾಡಬಹುದು ಎಂದು ಬರೆದಿದೆ.

100, 200, 500 ರೂಪಾಯಿ ನೋಟು ಗಳ ಕುರಿತು ‘RBI’ನಿಂದ ಮಹತ್ವದ ಮಾಹಿತಿ Read More »

ರಾಷ್ಟ್ರೀಯ ನ್ಯೂಸ್
Scroll to Top