ರಾಷ್ಟ್ರೀಯ ನ್ಯೂಸ್

ಲಿಫ್ಟ್ ಕೇಬಲ್ ತುಂಡಾಗಿ ಮೂವರು ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಮಾ. 18.  ಆಂಧ್ರಪ್ರದೇಶದ ವಿಜಯವಾಡ ಶಾಖೋತ್ಪನ ವಿದ್ಯುತ್ ಸ್ಥಾವರ (ವಿಟಿಪಿಎಸ್) ನಲ್ಲಿ ಎಲಿವೇಟರ್ ಕೇಬಲ್ ತುಂಡಾಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವಿಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇನ್ನು ಅಪಘಾತ ಸಂಭವಿಸಿದಾಗ 8 ಜನರು ಲಿಫ್ಟ್‌ನಲ್ಲಿ ಇದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಲಿಫ್ಟ್ ಕೇಬಲ್ ತುಂಡಾಗಿ ಮೂವರು ಕಾರ್ಮಿಕರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್ ➤ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ        

(ನ್ಯೂಸ್ ಕಡಬ) newskadaba.com ಮಾ. 18. ಮಹಿಳೆಯೊಬ್ಬರು ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಿಂದ ಪಾರಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸ್ಕೂಬಾ ಡೈವಿಂಗ್ ಮಾಡಲು ಸಮುದ್ರಕ್ಕೆ ಹಾರಲು ಪ್ರಯತ್ನಿಸುವ ವೇಳೆ ದಿಡೀರನೆ ಶಾರ್ಕ್ ಪ್ರತ್ಯಕ್ಷಗೊಂಡು ಬಾಯ್ತೆರೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ಮಹಿಳೆ ಡೈವಿಂಗ್ ಮಾಡದೆ ಹಿಂದೆ ಸರಿದಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದು ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.  

ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್ ➤ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ         Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲೇ ಮೊದಲ ಬಾರಿಗೆ ಎರಡು ತೋಳುಗಳ ಕಸಿ ಯಶಸ್ವಿ

(ನ್ಯೂಸ್ ಕಡಬ) newskadaba.com ಜೈಪುರ, ಮಾ. 18. ಎರಡೂ ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡಿರುವ ಘಟನೆ ವರದಿಯಾಗಿದ್ದು, ಇದು ಏಷ್ಯಾದಲ್ಲೇ ಮೊದಲಾಗಿದೆ. ರಾಜಸ್ಥಾನದ ಅಜ್ಮೀರ್‌ ಮೂಲದ ಪ್ರೇಮಾ ರಾಮ್(33) ಎಂಬವರು ಎರಡೂ ತೋಳುಗಳ ಕಸಿಗೆ ಒಳಗಾದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದು, ಸತತ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ

ಭಾರತದಲ್ಲೇ ಮೊದಲ ಬಾರಿಗೆ ಎರಡು ತೋಳುಗಳ ಕಸಿ ಯಶಸ್ವಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ಲಕ್ನೋ, ಮಾ. 18. ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯನ್ನು ಶಾಪಿಂಗ್ ಮಾಲ್‌ ಗೆ ಕರೆದೊಯ್ದ ಆರೋಪದ ಮೇಲೆ ನಾಲ್ಕು ಜನ ಪೊಲೀಸರನ್ನು ಅಮಾನತುಗೊಳಿಸಿದ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ. ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಎಸ್‌ಐ ರಾಮ್‌ ಸೇವಕ್ ಮತ್ತು ಕಾನ್‌ಸ್ಟೆಬಲ್‌ ಗಳಾದ ಅನುಜ್ ಧಾಮ, ನಿತಿನ್ ರಾಣಾ ಮತ್ತು ರಾಮಚಂದ್ರ ಪ್ರಜಾಪತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಲಕ್ನೋ ಪೊಲೀಸ್ ಕಮಿಷನರೇಟ್ ತಿಳಿಸಿದೆ.

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು Read More »

ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ➤ ಒಂದೇ ದಿನ 800 ಕೇಸ್ ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 18. ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಶುರುವಾಗಿದ್ದು, ಒಂದೇ ದಿನ 796 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ದೇಶದಲ್ಲಿ ಒಂದೇ ದಿನ 796 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಒಬ್ಬರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,000 ಗಡಿ ದಾಟಿದ್ದು, ಇದು 109 ದಿನದ ಗರಿಷ್ಠ ಪ್ರಕರಣಗಳಾಗಿವೆ. ದೇಶದಲ್ಲಿ ಈವರೆಗೂ

ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ➤ ಒಂದೇ ದಿನ 800 ಕೇಸ್ ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದ ಬಳಿಕ ಹೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ

(ನ್ಯೂಸ್ ಕಡಬ) newskadaba.com ಕೇರಳ, ಮಾ.18. ಸಾಮಾನ್ಯವಾಗಿ ಯಾರೇ ಆದರೂ ಲಾಟರಿಯಲ್ಲಿ ಬಂಪರ್​ ಬಹುಮಾನ ಬಂದರೆ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದರೂ ಹೆದರಿ ಪೊಲೀಸ್ ಠಾಣೆಗೆ ಧಾವಿಸಿದ್ದು ರಕ್ಷಣೆ ನೀಡುವಂತೆ ಕೋರಿಕೊಂಡಿದ್ದಾನೆ ಎನ್ನಲಾಗಿದೆ. ಈತನಿಗೆ ಕೇರಳದ ಸ್ತ್ರೀಶಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಬಂಪರ್ ಬಹುಮಾನ ಒಲಿದಿತ್ತು. ಬಹಳಷ್ಟು ಸಮಯದಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದರೂ ಈತ ಗೆದ್ದಿರಲಿಲ್ಲ. ಆದರೆ ಈ ಸಲ ಬಂಪರ್ ಬಹುಮಾನ ಗೆದ್ದ ತಕ್ಷಣ ಈತ ಮುವತ್ತುಫುಜ

ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದ ಬಳಿಕ ಹೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ Read More »

ರಾಷ್ಟ್ರೀಯ ನ್ಯೂಸ್

30 ನಗರಗಳೊಂದಿಗೆ ‘ಸಿಸ್ಟರ್ ಸಿಟಿ’ ಒಪ್ಪಂದ ಮಾಡಿಕೊಂಡ ನಿತ್ಯಾನಂದ

(ನ್ಯೂಸ್ ಕಡಬ) newskadaba.com ನವದೆಹಲಿ. ಮಾ 18. ವಿವಾದಿತ ಗುರು ನಿತ್ಯಾನಂದ, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳ ಆರೋಪದ ಬಳಿಕ ಭಾರತದಿಂದ ಪರಾರಿಯಾಗಿ ದಕ್ಷಿಣ ಅಮೆರಿಕದ ದ್ವೀಪಗಳಲ್ಲಿ ನೆಲೆಸಿದ್ದು, ಆ ಪ್ರದೇಶವನ್ನು ಕೈಲಾಸ ದೇಶವೆಂದು ಘೋಷಿಸಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ ಆ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆಯಲ್ಲಿ ಭಾಗವಹಿಸಿ ಭಾರತದ ವಿರುದ್ಧ ಭಾಷಣ ಮಾಡಿದ್ದರು. ಆದರೆ, ವಿಶ್ವಸಂಸ್ಥೆಯ ಪ್ರತಿನಿಧಿಗಳು ಕೈಲಾಸ ದೇಶವನ್ನು ವಿಶ್ವಸಂಸ್ಥೆಯಿಂದ ಗುರುತಿಸಲಾಗಿಲ್ಲ ಮತ್ತು ಅವರ ಅಭಿಪ್ರಾಯಗಳನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದೀಗ ಮತ್ತೊಮ್ಮೆ ನಿತ್ಯಾನಂದ ಕೈಲಾಸ

30 ನಗರಗಳೊಂದಿಗೆ ‘ಸಿಸ್ಟರ್ ಸಿಟಿ’ ಒಪ್ಪಂದ ಮಾಡಿಕೊಂಡ ನಿತ್ಯಾನಂದ Read More »

ರಾಷ್ಟ್ರೀಯ ನ್ಯೂಸ್

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ..!

(ನ್ಯೂಸ್ ಕಡಬ)newskadaba.com  ಲಕ್ನೋ, ಮಾ.17. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದ ಅಪರಾಧಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ವ್ಯಕ್ತಿಯು 9 ವರ್ಷದ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ. ಗಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆ ನಡೆದ ಸುಮಾರು 6 ತಿಂಗಳ ನಂತರ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ..! Read More »

ರಾಷ್ಟ್ರೀಯ ನ್ಯೂಸ್

ಮತ್ತೆ ದಾಖಲೆಯತ್ತ ಚಿನ್ನದ ಬೆಲೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 17. ಒಂದೂವರೆ ತಿಂಗಳ ಹಿಂದೆ 58,900 ರೂ. ಸಮೀಪ ತಲುಪಿದ್ದ ಚಿನ್ನದ ದರ ಮತ್ತೆ ಏರಿಕೆ ಮೂಲಕ ದಾಖಲೆ ಬರೆಯುತ್ತಿದೆ. ಆಗಸ್ಟ್ 2022 ರಲ್ಲಿ ಚಿನ್ನವು 56,200 ರೂ. ವರೆಗೆ ಮುಟ್ಟಿತು. ಫೆಬ್ರವರಿ ನಂತರ ಚಿನ್ನ 55,000 ರೂ.ಗೆ ಇಳಿದಿತ್ತು. ಆದರೆ ಈಗ ಕಳೆದ ಕೆಲವು ದಿನಗಳಿಂದ ಮತ್ತೆ ಏರಿಕೆ ನಡೆಯುತ್ತಿದೆ. ಬೆಳ್ಳಿ ಕೂಡ 2023 ಫೆಬ್ರವರಿ 2 ರಂದು 71,500 ಮಟ್ಟವನ್ನು ತಲುಪಿತು. ನಂತರ ಪ್ರತಿ ಕೆಜಿಗೆ 10,000

ಮತ್ತೆ ದಾಖಲೆಯತ್ತ ಚಿನ್ನದ ಬೆಲೆ Read More »

ರಾಷ್ಟ್ರೀಯ ನ್ಯೂಸ್

ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿ 10 ರೂ. ನೀಡಿದ ಅಜ್ಜ

(ನ್ಯೂಸ್ ಕಡಬ) newskadaba.com ಗೋರಖ್‌ಪುರ, ಮಾ. 17. 60 ವರ್ಷದ ವೃದ್ದನೋರ್ವ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿ ಬಳಿಕ ವಿಚಾರವನ್ನು ಯಾರೊಂದಿಗೂ ಹೇಳದಂತೆ ಬಾಯಿ ಮುಚ್ಚಿಸಲು 10 ರೂ ನೋಟನ್ನು ನೀಡಿದ ವಿಚಿತ್ರ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ 60 ವರ್ಷದ ವ್ಯಕ್ತಿಯನ್ನು ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸರು ಬಂಧಿಸಿದ್ದಾರೆ.   ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಅಜ್ಜ, ಸೊಸೆಯನ್ನು ಮನೆಗೆ ಹೋಗುವಂತೆ ಹೇಳಿ, ಮೊಮ್ಮಗಳನ್ನು ಕೊಡಲಿ ತರಲು

ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿ 10 ರೂ. ನೀಡಿದ ಅಜ್ಜ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top