ರಾಷ್ಟ್ರೀಯ ನ್ಯೂಸ್

ಕಾಸರಗೋಡು: ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 21. ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಿಂದ ವರದಿಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ಬಂದಡ್ಕ ಮಾಲಕುಂಡ ಇಲ್ಲತಿಂಗಲ್ ನಿವಾಸಿ ಸುಜಾತಾ ಎಂಬವರ ಪುತ್ರಿ ಕೆ.ವಿ.ಶರಣ್ಯಾ(17) ಎಂದು ಗುರುತಿಸಲಾಗಿದೆ. ಸುಜಾತಾರವರು ಸೋಮವಾರದಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಶರಣ್ಯಾಳ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು: ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇನ್ಮುಂದೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ ➤ ಕೇಂದ್ರ ಶಿಕ್ಷಣ ಸಚಿವಾಲಯ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.21. ಶಾಲಾ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಿಸುವಂತೆ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ. ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಜೇನುತುಪ್ಪವನ್ನು ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದ್ದು, ಚೇನುತುಪ್ಪದಲ್ಲಿನ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಜೇನು ತುಪ್ಪ ನೀಡಲು ಮುಂದಾಗಿದೆ.  

ಇನ್ಮುಂದೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ ➤ ಕೇಂದ್ರ ಶಿಕ್ಷಣ ಸಚಿವಾಲಯ Read More »

ರಾಷ್ಟ್ರೀಯ ನ್ಯೂಸ್

ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ಮಾರ್ಚ್, 23 ರಂದು ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಮಾಜಿ ಯೋಧರು ಅನುಭವಿಸುತ್ತಿರುವ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಭೆ ನಡೆಯಲಿದೆ. ಅಡ್ವೋಕೇಟ್ ಜನರಲ್ ಮತ್ತು ಸಮಾಜ ಸೇವಕರಾದ ಎಸ್.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಅವರು ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ವಿಚಾರ ವ್ಯಕ್ತಪಡಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-12

ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ Read More »

ರಾಷ್ಟ್ರೀಯ ನ್ಯೂಸ್

ಕೇರಳದ ಮೊದಲ ತೃತೀಯ ಲಿಂಗಿ ವಕೀಲರಾಗಿ ಪದ್ಮಾ ಲಕ್ಷ್ಮಿ ಆಯ್ಕೆ..!

(ನ್ಯೂಸ್ ಕಡಬ) newskadaba.com ತಿರುವನಂತಪುರ, ಮಾ. 21. ಕೇರಳದ ಮೊದಲ ತೃತೀಯ ಲಿಂಗಿ ವಕೀಲರಾಗಿ ಪದ್ಮಾ ಲಕ್ಷ್ಮಿ ಆಯ್ಕೆಯಾಗಿದ್ದಾರೆ. ಇವರು ಕೇರಳ ರಾಜ್ಯದ ಬಾರ್‌ ಕೌನ್ಸಿಲ್‌ ನೊಂದಿಗೆ ವಕೀಲರಾಗಿ ದಾಖಲಾದ ಬಳಿಕ ಈ ಸಾಧನೆ ಮಾಡಿದ ಮೊದಲಿಗರೆನಿಸಿಕೊಂಡಿದ್ದಾರೆ.  

ಕೇರಳದ ಮೊದಲ ತೃತೀಯ ಲಿಂಗಿ ವಕೀಲರಾಗಿ ಪದ್ಮಾ ಲಕ್ಷ್ಮಿ ಆಯ್ಕೆ..! Read More »

ರಾಷ್ಟ್ರೀಯ ನ್ಯೂಸ್

ದೆಹಲಿಯಾದ್ಯಂತ ಭಾರಿ ಮಳೆ ➤ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ದೆಹಲಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಹಲವು ವಿಮಾನಗಳ ಮಾರ್ಗವನ್ನು ಲಕ್ನೋ ಹಾಗೂ ಜೈಪುರಕ್ಕೆ ಬದಲಾಯಿಸಲಾಯಿತು. ಮಳೆಯ ಆರೆಂಜ್ ಅಲರ್ಟ್​ ಘೋಷಿಸಲಾಗಿತ್ತು. ಕೇವಲ 3 ಗಂಟೆಗಳಲ್ಲಿ 6.6 ಮಿ.ಮೀ ಮಳೆ ಸುರಿದಿದೆ. ಮಳೆಯ ಜತೆಗೆ ಬಿರುಗಾಳಿ ಹಾಗೂ ಗುಡುಗು ಕೂಡ ಇತ್ತು ಎನ್ನಲಾಗಿದೆ. ದೆಹಲಿಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಗರಿಷ್ಠ ತಾಪಮಾನವು ಋತುವಿನ ಸರಾಸರಿಗಿಂತ ಮೂರು ಹಂತಗಳನ್ನು 28 ಡಿಗ್ರಿ ಸೆಲ್ಸಿಯಸ್‌ಗೆ ತಂದಿದೆ ಎಂದು ಭಾರತೀಯ ಹವಾಮಾನ

ದೆಹಲಿಯಾದ್ಯಂತ ಭಾರಿ ಮಳೆ ➤ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಕೆ Read More »

ರಾಷ್ಟ್ರೀಯ ನ್ಯೂಸ್

ಆಲಿಕಲ್ಲು ಮಳೆ- ಇಂಡಿಗೋ ವಿಮಾನಕ್ಕೆ ಹಾನಿ

(ನ್ಯೂಸ್ ಕಡಬ) newskadaba.com ಹೈದರಾಬಾದ್‌, ಮಾ. 21. ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ಬಂದ ಇಂಡಿಗೋ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಆಲಿಕಲ್ಲು ಮಳೆಗೆ ಸಿಲುಕಿ ಹಾನಿಗೊಂಡ ಘಟನೆ ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾಣಿ ಸಂಭವಿಸಿಲ್ಲ. ವಿಮಾನಕ್ಕೆ ಹಾನಿಯಾಗಿರುವ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಲಿಕಲ್ಲು ಮಳೆಗೆ ವಿಮಾನದ ರೇಡೋಮ್ ಮತ್ತು ವಿಂಡ್‌ ಶೀಲ್ಡ್‌ ಗಳು ಹಾನಿಗೊಳಗಾಗಿರುವ ಕುರಿತು ತಿಳಿದುಬಂದಿದೆ.

ಆಲಿಕಲ್ಲು ಮಳೆ- ಇಂಡಿಗೋ ವಿಮಾನಕ್ಕೆ ಹಾನಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟ ರಜಿನಿಕಾಂತ್‌ ಪುತ್ರಿ ಮನೆಯಲ್ಲಿ ಕಳ್ಳತನ ➤ ಚಾಲಕನ ಮೇಲೆ ಸಂಶಯ

(ನ್ಯೂಸ್ ಕಡಬ) newskadaba.com. ಚೆನ್ನೈ, ಮಾ20.  ಸೂಪರ್‌ ಸ್ಟಾರ್‌ ರಜಿನಿಕಾಂತ್‌ ರವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಲಾಕರ್‌ ನಿಂದ ಚಿನ್ನಾಭರಣ ಕಳುವುವಾದ ಬಗ್ಗೆ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹೋದರಿಯ ಮದುವೆಗೆ ಚಿನ್ನಾಭರಣವನ್ನು ಧರಿಸಿದ ಬಳಿಕ ಅದನ್ನು ಬೇರೆ ಬೇರೆ ನಿವಾಸದಲ್ಲಿ ಐಶ್ವರ್ಯಾ ಅವರು ಲಾಕರ್‌ ನಲ್ಲಿ ಇಟ್ಟಿದ್ದಾರೆ. ಆಗಸ್ಟ್ 21, 2021 ರಲ್ಲಿ ಮಾಜಿ ಪತಿ ಧನುಷ್‌ ಅವರ ನಿವಾಸದಲ್ಲಿ ಲಾಕರ್‌ ಇಟ್ಟಿದ್ದರು. ಸೆಪ್ಟೆಂಬರ್ 2021 ರಲ್ಲಿ ಅದನ್ನು ಚೆನ್ನೈನ ಸೇಂಟ್ ಮೇರಿಸ್

ನಟ ರಜಿನಿಕಾಂತ್‌ ಪುತ್ರಿ ಮನೆಯಲ್ಲಿ ಕಳ್ಳತನ ➤ ಚಾಲಕನ ಮೇಲೆ ಸಂಶಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತರಬೇತಿ ವಿಮಾನ ಪತನ ➤ ಇಬ್ಬರು ಪೈಲಟ್ ಗಳು ಮೃತ್ಯು

(ನ್ಯೂಸ್ ಕಡಬ) newskadaba.com ಭೋಪಾಲ್, ಮಾ. 19. ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌‌ಗಳು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಹಿಮಾಚಲ ಪ್ರದೇಶದ ಕ್ಯಾಪ್ಟನ್ ಮೋಹಿತ್ ಠಾಕೂರ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಗುಜರಾಥ್‌ನ ವಿ.ಮಹೇಶ್ವರಿ ಎಂದು ಗುರುತಿಸಲಾಗಿದೆ. ನ್ಯಾಷನಲ್ ಫ್ಲೈಯಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಗೆ ಸೇರಿದ ಡೈಮಂಡ್ ಡಿಎ-40 ತರಬೇತಿ ವಿಮಾನ ಮಹಾರಷ್ಟ್ರದ ಗೋಂದಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ಸುಮಾರು 40 ಕಿಲೋಮೀಟರ್ ದೂರದ ಬಾಲಾಘಾಟ್‌ನ

ತರಬೇತಿ ವಿಮಾನ ಪತನ ➤ ಇಬ್ಬರು ಪೈಲಟ್ ಗಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ➤ ನಟಿ ಸಖತ್ ಟ್ರೋಲ್

(ನ್ಯೂಸ್ ಕಡಬ) newskadaba.com.ಮುಂಬೈ, ಮಾ.18. ಇತ್ತೀಚಿಗಷ್ಟೇ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನರಾಗಿದ್ದರು. ತಾಯಿ ಕಳೆದುಕೊಂಡ ದುಃಖದಲ್ಲಿ ನಟಿ ಭಾವುಕ ಪೋಸ್ಟ್ ಮಾಡಿದ್ರು. ಇದೀಗ ಕೊನೆ ಕಾರ್ಯದ ವೇಳೆ ಲಿಪ್​ಸ್ಟಿಕ್ ಧರಿಸಿದ್ದ ಫೋಟೋಗಳು ವೈರಲ್ ಆಗಿದೆ. ತಾಯಿಯ ಸಾವು ಮಾಧುರಿ ದೀಕ್ಷಿತ್ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿದೆ. ತಾಯಿ ಬಗ್ಗೆ ಮಾಧುರಿ ದೀಕ್ಷಿತ್ ಭಾವುಕ ವಿದಾಯ ಹೇಳಿದ್ರು. ಆದ್ರೆ ಅಂತ್ಯಕ್ರಿಯೆ ವೇಳೆ ಮಾಧುರಿ ದೀಕ್ಷಿತ್ ವೈಟ್ ಸಲ್ವಾರ್ ಧರಿಸಿ, ಲಿಪ್ ಸ್ಟಿಕ್ ಹಾಕಿ

ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ➤ ನಟಿ ಸಖತ್ ಟ್ರೋಲ್ Read More »

ರಾಷ್ಟ್ರೀಯ ನ್ಯೂಸ್

ಉದ್ಯೋಗ ಪಡೆಯಲು ಪತಿಯನ್ನೇ ಕೊಲೆ ಮಾಡಿ ಫ್ಯಾನ್ ಗೆ ನೇತು ಹಾಕಿದ ಮಹಿಳೆ..!

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಮಾ. 18. ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆಗೈದು, ಮೃತದೇಹವನ್ನು ಫ್ಯಾನ್ ಗೆ ನೇತು ಹಾಕಿರುವ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಂ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದವರನ್ನು ರಾಜೀವ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಪತ್ನಿ ಅನಿತಾ ಕುಮಾರಿ ಅಲಿಯಾಸ್ ಅನಿತಾ ಸಿಂಗ್ ಕೊಲೆ ಆರೋಪಿ. ಈಕೆ ತನ್ನ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಪತಿಯನ್ನು ಕೊಂದಿದ್ದು, ಪ್ರಕರಣದಲ್ಲಿ ತಪ್ಪಿತಸ್ಥಳೆಂದು ಕಂಡುಕೊಂಡ ನಂತರ ಜಾರ್ಖಂಡ್ ನ್ಯಾಯಾಲಯವು ಅನಿತಾ ಸಿಂಗ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಉದ್ಯೋಗ ಪಡೆಯಲು ಪತಿಯನ್ನೇ ಕೊಲೆ ಮಾಡಿ ಫ್ಯಾನ್ ಗೆ ನೇತು ಹಾಕಿದ ಮಹಿಳೆ..! Read More »

ರಾಷ್ಟ್ರೀಯ ನ್ಯೂಸ್
Scroll to Top