ರಾಷ್ಟ್ರೀಯ ನ್ಯೂಸ್

ಕಾಸರಗೋಡು: 67 ಲಕ್ಷ ರೂ. ಹಣ ಸಹಿತ ಓರ್ವ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.14. ಸುಮಾರು 67 ಲಕ್ಷ ರೂ. ಹವಾಲ ಹಣ ಸಹಿತ ಓರ್ವನನ್ನು DYSP ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸಿದೆ. ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹವಾಲ ಹಣ ಪತ್ತೆಯಾಗಿದೆ. ಪುಂಜಾವಿ ಯ ಹಾರಿಸ್ (39) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.  

ಕಾಸರಗೋಡು: 67 ಲಕ್ಷ ರೂ. ಹಣ ಸಹಿತ ಓರ್ವ ಪೊಲೀಸರ ವಶಕ್ಕೆ Read More »

ರಾಷ್ಟ್ರೀಯ ನ್ಯೂಸ್

ಮೋದಿ ಉಪನಾಮ ಪ್ರಕರಣ..! ➤ ಏ. 20ಕ್ಕೆ ತೀರ್ಪು ಪ್ರಕಟ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.14. ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ 2019ರಲ್ಲಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ತೀರ್ಪು ಅನ್ನು ಗುಜರಾತ್ ನ ಸೂರತ್ ನ್ಯಾಯಾಲಯ ಏಪ್ರಿಲ್ 20ರಂದು ಪ್ರಕಟಿಸಲಿದೆ. ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿಯನ್ನ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಮೋದಿ ಉಪನಾಮ ಪ್ರಕರಣ..! ➤ ಏ. 20ಕ್ಕೆ ತೀರ್ಪು ಪ್ರಕಟ Read More »

ರಾಷ್ಟ್ರೀಯ ನ್ಯೂಸ್

ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆ

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಏ.13. ಕಳ್ಳತನದ ಶಂಕೆಯಲ್ಲಿ ಯುವಕನನ್ನು ಕಬ್ಬಿಣದ ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಶಿವಂ ಜೋಹ್ರಿ ಎಂಬ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದು, ವ್ಯಕ್ತಿಯೊಬ್ಬ ಶಿವಂನನ್ನು ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹೊಡೆಯುತ್ತಿರುವ ಮತ್ತು ಇತರರು‌ ನಿಂದಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶಿವಂಗೆ ಕೊಲೆ‌ ಮಾಡಿ ಬಳಿಕ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಬಗ್ಗೆ ಹೇಳಲಾಗಿತ್ತು. ಆದರೆ ಪೊಲೀಸರಿಗೆ ಸಂಶಯ ಬಂದು ತನಿಖೆ ನಡೆಸಿದಾಗ ಥಳಿಸಿ ಹತ್ಯೆ

ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಡಿ ED ತನಿಖೆ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಏ.13. ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ (ಬಿಬಿಸಿ) ಭಾರತದ ಕಚೇರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದೇಶಿ ವಿನಿಯಮ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ತನಿಖೆ ಅರಂಭವಾಗಿದ್ದು, ತನ್ನ ಹಣಕಾಸಿನ ದಾಖಲೆಗಳನ್ನು ಒದಗಿಸುವಂತೆ ಬಿಬಿಸಿ ಇಂಡಿಯಾಕ್ಕೆ ಸೂಚನೆ ನೀಡಲಾಗಿದೆ.

ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಡಿ ED ತನಿಖೆ Read More »

ರಾಷ್ಟ್ರೀಯ ನ್ಯೂಸ್

ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಎನ್’ಕೌಂಟರ್ ನಲ್ಲಿ ಹತ್ಯೆ

(ನ್ಯೂಸ್ ಕಡಬ)newskadaba.com ಲಖನೌ, ಏ.13. ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ನ ಪುತ್ರ ಅಸದ್ ಹಾಗೂ ಅವರ ಸಹಾಯಕ ಗುಲಾಮ್ ನನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಝಾನ್ಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್ಕೌಂಟರ್ ನಡೆಸಿದ್ದು, ಎನ್ಕೌಂಟರ್ ನಲ್ಲಿ ಅಸದ್ ಹಾಗೂ ಆತನ ಸಹಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಎನ್’ಕೌಂಟರ್ ನಲ್ಲಿ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.13. ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದ  ಬಂಡಾಯ ಬಿಸಿ ಕೂಡ ಹೆಚ್ಚಾಗಿದೆ. ಈಗಾಗಲೇ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೂರನೇ ಹಾಗೂ ಅಂತಿಮ ಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ. ಇದರ ನಡುವ ಬಿಜೆಪಿ ಹೈಕಮಾಂಡ್ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಂಜಾಬ್‌ನ ಜಲಂಧರ ಕ್ಷೇತ್ರಕ್ಕೆ ನಡೆಯಲಿರುವ ಲೋಕಸಭಾ ಉಪಚುನಾವಣೆ ಹಾಗೂ ಒಡಿಶಾದ ಝಾರ್ಸುಗುಡ ವಿಧಾನಸಭಾ ಉಪ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ.

ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ Read More »

ರಾಷ್ಟ್ರೀಯ ನ್ಯೂಸ್

ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭ ➤ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಗೆಹ್ಲೋಟ್

(ನ್ಯೂಸ್ ಕಡಬ)newskadaba.com ಜೈಪುರ, ಏ.13. ರಾಜಸ್ತಾನದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿಯವರು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನನ್ನ ಒಳ್ಳೆಯ ಮಿತ್ರ ಮತ್ತು ಪ್ರಧಾನಿಯಾಗಿ ನನ್ನ ಕೆಲಸ ಮಾಡಲು ಬಿಟ್ಟವರು ಎಂದು ಬಣ್ಣಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ಗೆ ಚಾಲನೆ ನೀಡಿದ ಮೋದಿಯವರು ಗೆಹ್ಲೋಟ್ ಜೊತೆಗೆ ಕಾಣಿಸಿಕೊಂಡರು. ರಾಜಸ್ತಾನದ ರೈಲು ಯೋಜನೆಯಾದ್ದರಿಂದ ಇದರಲ್ಲಿ ಅಚ್ಚರಿ ಏನಿಲ್ಲ. ಆದರೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಿ

ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭ ➤ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಗೆಹ್ಲೋಟ್ Read More »

ರಾಷ್ಟ್ರೀಯ ನ್ಯೂಸ್

ಆಟೋ ರಿಕ್ಷಾ ಢಿಕ್ಕಿ ಹೊಡೆದು ಗರ್ಭಿಣಿ ಮೃತ್ಯು

(ನ್ಯೂಸ್ ಕಡಬ)newskadaba.com ಅಂಕೋಲಾ, ಏ.13. ಆಟೊ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಅಂಕೋಲಾದ ಶೋಭಾ ಗೋಪಾಲ(28) ಮೃತಪಟ್ಟವರಾಗಿದ್ದಾರೆ. ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ತನ್ನ ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ರಿಕ್ಷಾ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.  

ಆಟೋ ರಿಕ್ಷಾ ಢಿಕ್ಕಿ ಹೊಡೆದು ಗರ್ಭಿಣಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಬಾಂಬ್ ತಯಾರಿಸುವ ವೇಳೆ ಸ್ಪೋಟಗೊಂಡು ಕೈಗಳನ್ನು ಕಳೆದು ಕೊಂಡ ಯುವಕ

(ನ್ಯೂಸ್ ಕಡಬ)newskadaba.com ತಲಸ್ಸೆರಿ, ಏ.13. ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಯುವಕ ತನ್ನ ಒಂದು ಕೈಯನ್ನು ಕಳೆದುಕೊಂಡಿದ್ದಾನೆ ಮತ್ತು ಇನ್ನೊಂದು ಕೈಗೆ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ತಲಸ್ಸೆರಿಯ ಎರಂಜೋಲಿಪಾಲಂ ಬಳಿ ಈ ಘಟನೆ ನಡೆದಿದೆ. ಬಾಂಬ್ ನಿರ್ಮಾಣದ ವೇಳೆ ಸ್ಫೋಟ ಸಂಭವಿಸಿದ್ದು, ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್ ತಯಾರಿಸುವ ವೇಳೆ ಸ್ಪೋಟಗೊಂಡು ಕೈಗಳನ್ನು ಕಳೆದು ಕೊಂಡ ಯುವಕ Read More »

ರಾಷ್ಟ್ರೀಯ ನ್ಯೂಸ್

ಹಣಕ್ಕಾಗಿ 2 ವರ್ಷದ ಮಗುವನ್ನು ಹತ್ಯೆ ಮಾಡಿ ಚೀಲದಲ್ಲಿ ಬಚ್ಚಿಟ್ಟ ಪಾಪಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.13. ಗ್ರೇಟರ್ ನೋಯ್ಡಾದಲ್ಲಿ ಹಣಕ್ಕಾಗಿ ಎರಡು ವರ್ಷದ ಬಾಲಕಿಯನ್ನು ಕೊಂದು ಚೀಲದಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ರಾಘವೇಂದ್ರನನ್ನು ಇದೀಗ ಬಂಧಿಸಲಾಗಿದೆ. ಆರೋಪಿ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ರಾಘವೇಂದ್ರ ಕೆಲ ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಪತಿ ತನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು 10 ಲಕ್ಷ ರೂ. ಇಟ್ಟಿರುವುದಾಗಿ ಬಾಲಕಿಯ ತಂದೆ ಮಂಜು ಹೇಳುವುದನ್ನು ರಾಘವೇಂದ್ರ

ಹಣಕ್ಕಾಗಿ 2 ವರ್ಷದ ಮಗುವನ್ನು ಹತ್ಯೆ ಮಾಡಿ ಚೀಲದಲ್ಲಿ ಬಚ್ಚಿಟ್ಟ ಪಾಪಿ Read More »

ರಾಷ್ಟ್ರೀಯ ನ್ಯೂಸ್
Scroll to Top