ರಾಷ್ಟ್ರೀಯ ನ್ಯೂಸ್

ಕಾಸರಗೋಡು: ವಾಸ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.13. ಪೊಲೀಸ್ ಸಿಬ್ಬಂದಿಯೋರ್ವರು ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕೊಲ್ಲಂ ಮೂಲದ ಬೈಜು(54) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆ ಯಲ್ಲಿ ಪೊಲೀಸ್ ಸಿಬ್ಬಂದಿಗಳು ವಾಸಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತಲುಪಿ ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.  

ಕಾಸರಗೋಡು: ವಾಸ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.13. ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕರೋರ್ವರು ಮೃತಪಟ್ಟ ದಾರುಣ ಘಟನೆ ಚಿತ್ತಾರಿಕಾಲ್ ನಲ್ಲಿ ನಡೆದಿದೆ. ಚಿತ್ತಾರಿಕಾಲ್ ಕಂಬಲ್ಲೂರಿನ ಬಿಟೋ ಜೋಸೆಫ್ (35) ಮೃತಪಟ್ಟವರು. ಸಂಬಂಧಿಕ ರೋರ್ವರ ಮನೆಯಲ್ಲಿ ಈ ಘಟನೆ ನಡೆದಿದೆ. ಪೈಂಟಿಂಗ್ ಕೆಲಸದ ಸಂದರ್ಭದಲ್ಲಿ ಜೋಸೆ ಫ್ ರವರ ಮೇಲೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಮನೆಯವರು ಹಾಗೂ ಪರಿಸರವಾಸಿಗಳು ಪರಿಯಾರಂ ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುರುಷರ ‘IPL 2023 ಪಂದ್ಯಾವಳಿ’ಯ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com  ನವೆದಹಲಿ, ಏ.12. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ವೇಳಾಪಟ್ಟಿ ಇಂದು ಪ್ರಕಟಗೊಂಡಿದೆ. ಮಾರ್ಚ್ 31 ರಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಂದ್ಯಾವಳಿಯ 16 ನೇ ಆವೃತ್ತಿಯು ಮಾರ್ಚ್ 31 ರಂದು ಪ್ರಾರಂಭವಾಗುತ್ತದೆ ಮತ್ತು ಕೊನೆಯ ಲೀಗ್ ಪಂದ್ಯವು ಮೇ 21 ರಂದು ನಡೆಯಲಿದೆ. 18 ಡಬಲ್ ಹೆಡರ್ ಸೇರಿದಂತೆ ಒಟ್ಟು 70 ಲೀಗ್

ಪುರುಷರ ‘IPL 2023 ಪಂದ್ಯಾವಳಿ’ಯ ವೇಳಾಪಟ್ಟಿ ಪ್ರಕಟ Read More »

ರಾಷ್ಟ್ರೀಯ ನ್ಯೂಸ್

ಟೆಸ್ಟ್ ಪಂದ್ಯದಲ್ಲಿ ‘ಶತಕ’ ಸಿಡಿಸಿದ ‘ವಿರಾಟ್ ಕೊಹ್ಲಿ’

(ನ್ಯೂಸ್ ಕಡಬ)newskadaba.com  ಅಹಮದಾಬಾದ್, ಏ.12. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಭಾರಿಸಿದ್ದಾರೆ. ಮೂರು ವರ್ಷಗಳ ಬಳಿಕ ಕೋಹ್ಲಿ 100 ರನ್ ಗಳನ್ನು ಸಿಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಏಷ್ಯಾ ಕಪ್ 2022ರಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಶತಕ ದಾಖಲಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 3 ವರ್ಷಗಳ ನಂತರ 100 ರನ್

ಟೆಸ್ಟ್ ಪಂದ್ಯದಲ್ಲಿ ‘ಶತಕ’ ಸಿಡಿಸಿದ ‘ವಿರಾಟ್ ಕೊಹ್ಲಿ’ Read More »

ರಾಷ್ಟ್ರೀಯ ನ್ಯೂಸ್

‘RCB’ ತಂಡಕ್ಕೆ ಭಾರೀ ಹೊಡೆತ ➤ IPL ಪಂದ್ಯಾವಳಿಯಿಂದ ಹೊರಗುಳಿದ ಸ್ಟಾರ್ ಆಟಗಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.12. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ತಂಡದ ಸ್ಟಾರ್ ದೇಶೀಯ ಪ್ರತಿಭೆ ರಜತ್ ಪಾಟಿದಾರ್ ಅವರು ಅಕಿಲ್ಸ್ ಹೀಲ್ ಗಾಯದ ಕಾರಣದಿಂದಾಗಿ ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ಈ ಮೊದಲು ಅವರು ಋತುವಿನ ಉತ್ತರಾರ್ಧದಲ್ಲಿ ಕೆಲವು ಪಂದ್ಯಗಳಿಗೆ ತಂಡದ ಭಾಗವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಫ್ರಾಂಚೈಸ್ ಅವರು ಪಂದ್ಯಾವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ.

‘RCB’ ತಂಡಕ್ಕೆ ಭಾರೀ ಹೊಡೆತ ➤ IPL ಪಂದ್ಯಾವಳಿಯಿಂದ ಹೊರಗುಳಿದ ಸ್ಟಾರ್ ಆಟಗಾರ Read More »

ರಾಷ್ಟ್ರೀಯ ನ್ಯೂಸ್

ಆಸ್ತಿಗಾಗಿ ಅತ್ತೆ ಮಾವನನ್ನೇ ಹತ್ಯೆ ಮಾಡಿದ ಪಾಪಿ ಸೊಸೆ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.12. ಅತ್ತೆ – ಮಾವ ಎಂದರೆ ಸೊಸೆಗೆ ಎರಡನೇ ತಾಯಿ ಹಾಗೂ ತಂದೆ, ಆದರೆ ಆಸ್ತಿಯಾಸೆಗಾಗಿ ಸ್ವಂತ ಅತ್ತೆ – ಮಾವನನ್ನೇ ಸೊಸೆ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವರದಿಯಾಗಿದೆ. ಇಬ್ಬರು ಸಹಚರರ ನೆರವಿನೊಂದಿಗೆ ವೃದ್ಧ ದಂಪತಿಯನ್ನು ಅವರ ಸೊಸೆ ಮೋನಿಕಾ ದೆಹಲಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 70 ರ ಹರೆಯದ ಇಬ್ಬರು ಹಿರಿಯ ನಾಗರಿಕರು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ತಮ್ಮ ಮಗ, ಸೊಸೆ ಮತ್ತು

ಆಸ್ತಿಗಾಗಿ ಅತ್ತೆ ಮಾವನನ್ನೇ ಹತ್ಯೆ ಮಾಡಿದ ಪಾಪಿ ಸೊಸೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ʻಅರ್ಜುನ ಪ್ರಶಸ್ತಿʼ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ʻಸಲೀಂ ದುರಾನಿʼ ಇನ್ನಿಲ್ಲ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.12. ಭಾರತದ ಮಾಜಿ ಆಲ್‌ ರೌಂಡರ್ ಸಲೀಂ ದುರಾನಿ (88) ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಲೀಂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವರ್ಷದ ಜನವರಿಯಲ್ಲಿ ನೆಲಕ್ಕೆ ಬಿದ್ದ ಕಾರಣ ಅವರ ತೊಡೆಯ ಮೂಳೆ ಮುರಿತದ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ʻಅರ್ಜುನ ಪ್ರಶಸ್ತಿʼ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ʻಸಲೀಂ ದುರಾನಿʼ ಇನ್ನಿಲ್ಲ Read More »

ರಾಷ್ಟ್ರೀಯ ನ್ಯೂಸ್

ಅಮುಲ್‌ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಸ್ಪರ್ಧಿಸಲು ಅಲ್ಲ ‘ಸಹಬಾಳ್ವೆ’ ನಡೆಸಲು.!   ➤ ಅಮುಲ್‌ ಎಂಡಿ ಜಯನ್‌ ಮೆಹ್ತಾ ಹೇಳಿಕೆ!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.11  ಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮುಲ್‌ ಪ್ರವೇಶಿಸುತ್ತಿರುವುದು ನಂದಿನಿ ಬ್ರಾಂಡ್‌ನೊಂದಿಗೆ ಸ್ಪರ್ಧಿಸಲು ಅಲ್ಲ ಬದಲಿಗೆ ಸಹಬಾಳ್ವೆ ನಡೆಸಲು ಎಂದು ಜಯನ್‌ ಮೆಹ್ತಾ ಹೇಳಿದ್ದಾರೆ. ಇನ್ನೂ 10 ವರ್ಷಗಳವರೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವೇ ಇಲ್ಲ ಎಂದು ಅಮುಲ್‌ ಬ್ರ್ಯಾಂಡ್‌ನ್ನು ಮುನ್ನಡೆಸುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.  

ಅಮುಲ್‌ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಸ್ಪರ್ಧಿಸಲು ಅಲ್ಲ ‘ಸಹಬಾಳ್ವೆ’ ನಡೆಸಲು.!   ➤ ಅಮುಲ್‌ ಎಂಡಿ ಜಯನ್‌ ಮೆಹ್ತಾ ಹೇಳಿಕೆ! Read More »

ರಾಷ್ಟ್ರೀಯ ನ್ಯೂಸ್

ರಾಜಸ್ಥಾನದ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼಗೆ ಚಾಲನೆ 

(ನ್ಯೂಸ್ ಕಡಬ)newskadaba.com  ನವದೆಹಲಿ, ಏ.11. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜಸ್ಥಾನದ ಜೈಪುರ ಮತ್ತು ದೆಹಲಿ ಕ್ಯಾಂಟ್ ನಡುವೆ ಸಂಚರಿಸಲಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಸೇವೆಯು ಏಪ್ರಿಲ್ 13 ರಿಂದ ಪ್ರಾರಂಭವಾಗಲಿದೆ. ಇದು ಜೈಪುರ, ಅಲ್ವಾರ್ ಮತ್ತು ಗುರ್‌ಗಾಂವ್‌ನಲ್ಲಿ ನಿಲುಗಡೆಗಳೊಂದಿಗೆ ಅಜ್ಮೀರ್ ಮತ್ತು ದೆಹಲಿ ಕ್ಯಾಂಟ್ ನಡುವೆ ಕಾರ್ಯನಿರ್ವಹಿಸುತ್ತದೆ.  

ರಾಜಸ್ಥಾನದ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼಗೆ ಚಾಲನೆ  Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ..!   ➤ ಹವಾಮಾನ ಇಲಾಖೆ ಮುನ್ಸೂಚನೆ.!

(ನ್ಯೂಸ್ ಕಡಬ)Newskadaba.com  ನವದೆಹಲಿ,ಏ.11 ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈಮೆಟ್ ನೀಡಿದೆ. ‘ಲಾ ನಿನಾ’ ಪರಿಸ್ಥಿತಿಗಳ ಅಂತ್ಯ ಮತ್ತು ‘ಎಲ್ ನಿನೊ’ಹಿಡಿತ ಸಾಧಿಸುವ ಸಾಧ್ಯತೆಯ ಕಾರಣದಿಂದಾಗಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆ ಬೀಳಲಿದೆ. ಖಾಸಗಿ ಹವಾಮಾನ ಮುನ್ಸೂಚನೆ ನೀಡಿದ ಒಂದು ದಿನದ ನಂತರ ಕೇಂದ್ರ ಸರ್ಕಾರದ ಮುನ್ಸೂಚನೆಯು ಬಂದಿದೆ.ಇನ್ನು ಭಾರತದಲ್ಲಿ ಎಲ್ ನಿನೋ ಮತ್ತು ಮಾನ್ಸೂನ್ ಮಳೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ

ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ..!   ➤ ಹವಾಮಾನ ಇಲಾಖೆ ಮುನ್ಸೂಚನೆ.! Read More »

ರಾಷ್ಟ್ರೀಯ ನ್ಯೂಸ್
Scroll to Top