ರಾಷ್ಟ್ರೀಯ ನ್ಯೂಸ್

ಪೂಂಚ್‌: ಬೆಂಕಿ ತಗುಲಿ ಹೊತ್ತಿ ಹುರಿದ ಭಾರತೀಯ ಸೇನಾ ವಾಹನ; ಇಬ್ಬರು ಯೋಧರು ಹುತಾತ್ಮ!

(ನ್ಯೂಸ್ ಕಡಬ) newskadaba.com. ಜಮ್ಮುಕಾಶ್ಮೀರ, ಏ.20. ಪೂಂಜ್ ನಲ್ಲಿ ಬೆಂಕಿ ತಗುಲಿ ಭಾರತೀಯ ಸೇನಾ ವಾಹನ ಹೊತ್ತಿ ಉರಿದು ಇಬ್ಬರು ಸೇನಾ ಯೋಧರು ಹುತಾತ್ಮರಾದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಪೂಂಚ್-ಜಮ್ಮು ಹೆದ್ದಾರಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಟ್ರಕ್‌ನಲ್ಲಿದ್ದ ಇಬ್ಬರು ಯೋಧರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹುತಾತ್ಮರಾಗಿದ್ದಾರೆ. ಆದರೂ ಸೇನೆಯ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ. ಇದರೊಂದಿಗೆ ಯೋಧರ ವಾಹನಕ್ಕೆ ಬೆಂಕಿ ತಗುಲಿದ ಹಿಂದೆ ಭಯೋತ್ಪಾದಕರ ಸಂಚು ಇದೆಯೋ ಅಥವಾ ಅಪಘಾತವೋ ಎಂಬುದು ಇನ್ನೂ ಸ್ಪಷ್ಟವಾಗ […]

ಪೂಂಚ್‌: ಬೆಂಕಿ ತಗುಲಿ ಹೊತ್ತಿ ಹುರಿದ ಭಾರತೀಯ ಸೇನಾ ವಾಹನ; ಇಬ್ಬರು ಯೋಧರು ಹುತಾತ್ಮ! Read More »

ರಾಷ್ಟ್ರೀಯ ನ್ಯೂಸ್

ಅಮೃತ್‌ಪಾಲ್‌ ಪತ್ನಿ ಏರ್‌ಪೋರ್ಟ್‌ ನಲ್ಲಿ ಬಂಧನ

(ನ್ಯೂಸ್ ಕಡಬ)newskadaba.com ಅಮೃತಸರ, ಏ.20. ಪರಾರಿಯಾಗಿರುವ ಖಲಿಸ್ತಾನ್ ಪರ ನಾಯಕ ಅಮೃತ್‌ ಪಾಲ್‌ ಪತ್ನಿ ಕಿರಣದೀಪ್ ಕೌರ್‌ ನ್ನು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಗ್ರೇಷನ್‌ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಿರಣ್‌ದೀಪ್ ಪರಾರಿಯಾಗಲು ಬೆಳಗ್ಗೆ 11.30ಕ್ಕೆ ನಿಲ್ದಾಣಕ್ಕೆ ಬಂದಿದ್ದು, ಮಧ್ಯಾಹ್ನ 1:30ಕ್ಕೆ ಲಂಡನ್ ನ ಬರ್ಮಿಂಗ್ ಹ್ಯಾಮ್ ಗೆ ಪ್ರಯಾಣಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸದ್ಯ ಆಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಖಲಿಸ್ತಾನ್ ಬೆಂಬಲಿಗ ಅಮೃತ್‌ಪಾಲ್‌ ಮಾ.18ರಿಂದ ತಲೆಮರೆಸಿಕೊಂಡಿದ್ದು ವಿವಿಧ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ

ಅಮೃತ್‌ಪಾಲ್‌ ಪತ್ನಿ ಏರ್‌ಪೋರ್ಟ್‌ ನಲ್ಲಿ ಬಂಧನ Read More »

ರಾಷ್ಟ್ರೀಯ ನ್ಯೂಸ್

ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ)newskadaba.com ಭೋಪಾಲ್, ಏ.20. ವ್ಯಕ್ತಿಯೊಬ್ಬರು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ನಡೆದಾಡಲು ಸಾಧ್ಯವಾಗದ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಅತೃಪ್ತರಾಗಿದ್ದರು ಎಂದು ತಿಳಿದುಬಂದಿದೆ. ಅನುಷ್ಕಾ ಗುಪ್ತಾ ಚಿಕಿತ್ಸೆಗಾಗಿ ಮತ್ತು ಜೀವನ ಸಾಗಿಸಲು ತಂದೆ ಪ್ರಮೋದ್ ಅವರ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ. ಅನುಷ್ಕಾ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಹಾಸಿಗೆ ಹಿಡಿದಿದ್ದಾರೆ.

ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಆತ್ಮಹತ್ಯೆಗೆ ಶರಣಾದ ತಂದೆ Read More »

ರಾಷ್ಟ್ರೀಯ ನ್ಯೂಸ್

ಶಿಕ್ಷೆಗೆ ತಡೆ ಅರ್ಜಿ ತಿರಸ್ಕೃತ ➤ ರಾಹುಲ್ ಗಾಂಧಿ ಹೈಕೋರ್ಟ್‌ ಮೊರೆ

(ನ್ಯೂಸ್ ಕಡಬ)newskadaba.com ಸೂರತ್, ಏ.20. ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ಹಾಗೂ ವಯನಾಡು ಮಾಜಿ ಸಂಸದ ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಸೂರತ್‌ನ ಸೆಷನ್ಸ್ ಕೋರ್ಟ್ ನಿರಾಕರಿಸಿರುವ ಹಿನ್ನೆಲೆ ಅವರು ಹೈಕೋರ್ಟ್‌ ಮೊರೆ ಹೋಗಲಿದ್ದಾರೆ ಎಂದು ವರದಿಯಾಗಿದೆ. ಸೂರತ್‌ ಕೋರ್ಟ್‌ನಲ್ಲಿ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ಈ ನಿರ್ಧಾರದ ವಿರುದ್ಧ ರಾಹುಲ್ ಏ.21ರಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಕೆಳ ನ್ಯಾಯಾಲಯದ 2 ವರ್ಷ ಶಿಕ್ಷೆ ತೀರ್ಪಿಗೆ

ಶಿಕ್ಷೆಗೆ ತಡೆ ಅರ್ಜಿ ತಿರಸ್ಕೃತ ➤ ರಾಹುಲ್ ಗಾಂಧಿ ಹೈಕೋರ್ಟ್‌ ಮೊರೆ Read More »

ರಾಷ್ಟ್ರೀಯ ನ್ಯೂಸ್

ಬಂಗಾಳದಲ್ಲಿ ಮತ್ತೆ ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಗೊಂದಲ.!!

(ನ್ಯೂಸ್ ಕಡಬ)Newskadaba.com ಕೋಲ್ಕತ,ಏ.20 “ನಾನು ಬಿಜೆಪಿ ಶಾಸಕನಾಗಿದ್ದು, ಬಿಜೆಪಿಯಲ್ಲೇ ಉಳಿಯಲಿದ್ದೇನೆ. ಟಿಎಂಸಿ ಜತೆ ಮತ್ತೆ ಹೋಗುವುದಿಲ್ಲ. ಈ ಬಗ್ಗೆ ನನಗೆ ಶೇ.100 ವಿಶ್ವಾಸವಿದೆ” ಎಂದು ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ದೆಹಲಿಗೆ ಬಂದಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ” ಎಂದಿದ್ದಾರೆ.  

ಬಂಗಾಳದಲ್ಲಿ ಮತ್ತೆ ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಗೊಂದಲ.!! Read More »

ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿ ವಿರುಧ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ ➤ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿವಜಾ

(ನ್ಯೂಸ್ ಕಡಬ) newskadaba.com.ನವದೆಹಲಿ,ಏ.20. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಹಿನ್ನಡೆಯಾಗಿದೆ.  ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಕೋರ್ಟ್ ವಜಾ ಮಾಡಿ ಆದೇಶ ನೀಡಿದೆ. ಸೂರತ್ ಸೆಷನ್ಸ್ ಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶ ಆರ್  ಪಿ ಮೊಗೇರಾ, ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಿದ್ದರು. ‘ಸರ್ ನೇಮ್ ಮೋದಿ’ ಅಂತಾ ಇರೋರೆಲ್ಲ ಕಳ್ಳರು ಎಂದು ರಾಹುಲ್

ಪ್ರಧಾನಿ ಮೋದಿ ವಿರುಧ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ ➤ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿವಜಾ Read More »

ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!   ➤ ‘ಕಲಿಯುವಾಗಲೇ ಗಳಿಸಿರಿ’ ಯೋಜನೆ ಜಾರಿ!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.20 ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಕೆಲಸ ನೀಡಲಾಗುವುದು. ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ ನೀಡಲಾಗುತ್ತದೆ. ವಾರಕ್ಕೆ 20 ಗಂಟೆ ಉದ್ಯೋಗ ಕಲ್ಪಿಸುವ ಕುರಿತಂತೆ ಯುಜಿಸಿ ಕರಡು ವರದಿ ಬಿಡುಗಡೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಗಳಿಸಿರಿ ಎಂಬ ಯೋಜನೆಯನ್ನು ಜಾರಿ ಮಾಡಲು ಯುಜಿಸಿ ಮುಂದಾಗಿದೆ.    

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!   ➤ ‘ಕಲಿಯುವಾಗಲೇ ಗಳಿಸಿರಿ’ ಯೋಜನೆ ಜಾರಿ! Read More »

ರಾಷ್ಟ್ರೀಯ ನ್ಯೂಸ್

ಚೀನಾ ಗಡಿಯಲ್ಲಿ ಅಲರ್ಟ್ ಆಗಿರಿ ➤ ಭೂಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸೂಚನೆ

(ನ್ಯೂಸ್ ಕಡಬ) newskadaba.com. ಹೊಸದಿಲ್ಲಿ, ಏ.20. ನೆರೆಯ ಚೀನಾ ಗಡಿಯಲ್ಲಿ ಗಸ್ತು ಹೆಚ್ಚಿಸುವ ಮೂಲಕ ಹೆಚ್ಚಿನ ನಿಗಾ ವಹಿಸಿ ಎಂದು ಕೇಂದ್ರ ಸರಕಾರ, ಭೂಸೇನಾಪಡೆಗೆ ಸೂಚನೆ ನೀಡಿದೆ. ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂಥದ್ದೊಂದು ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಚೀನಾಗೆ ಹೊಂದಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ ಎಂದು ಗುಪ್ತಚರ ವರದಿ ಹಿನ್ನೆಲೆಯಲ್ಲಿ ಸಚಿವರ ಈ ಸೂಚನೆ ಮಹತ್ವ ಪಡೆದಿದೆ.  ‘ಉತ್ತರ ವಲಯದಲ್ಲಿ ಚೀನಾದ

ಚೀನಾ ಗಡಿಯಲ್ಲಿ ಅಲರ್ಟ್ ಆಗಿರಿ ➤ ಭೂಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಯಪಲ್ ಕಂಪನಿ ಸಿಇಒ ಕುಕ್..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.20 ಆಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದರು. ಆಯಪಲ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ರಿಟೇಲ್ ಮಳಿಗೆಯನ್ನು ಆರಂಭಿಸಿದೆ. ‘ಬೆಚ್ಚನೆಯ ಸ್ವಾಗತಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು,ದೇಶದಾದ್ಯಂತ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ಕುಕ್ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.  

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಯಪಲ್ ಕಂಪನಿ ಸಿಇಒ ಕುಕ್..! Read More »

ರಾಷ್ಟ್ರೀಯ ನ್ಯೂಸ್

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.20ಹೈಕೋರ್ಟಿಗೆ ಏಪ್ರಿಲ್ 24 ರಿಂದ ಮೇ 20ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತದೆ. ತುರ್ತು ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿನ ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿಯ ವಿಭಾಗಿಯ ಮತ್ತು ಏಕ ಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ     *’ಹೈಕೋರ್ಟ್’ ಗೆ ಏಪ್ರಿಲ್ 24 ರಿಂದ ಮೇ 20 ರ ವರೆಗೆ ಬೇಸಿಗೆ ರಜೆ!*  

Read More »

ರಾಷ್ಟ್ರೀಯ ನ್ಯೂಸ್
Scroll to Top