ರಾಷ್ಟ್ರೀಯ ನ್ಯೂಸ್

ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥನಾಗಿ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಕೇರಳ, ಏ.19. ಐಸ್ ಕ್ರೀಂ ತಿಂದ ಬಳಿಕ ವಾಂತಿ-ಭೇದಿಯಿಂದ ಬಳಲಿದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಅರಿಕ್ಕುಲಂ‌ನಿವಾಸಿ ಮೊಹಮ್ಮದ್ ಅಲಿ ಅವರ ಪುತ್ರ ಹಸನ್ ರಿಫಾಯಿ(12)ಮೃತ ಬಾಲಕ ಎಂದು ತಿಳಿದುಬಂದಿದೆ. ರಿಫಾಯಿ 6ನೇ ತರಗತಿಯ ಬಾಲಕನಾಗಿದ್ದು ಆದಿತ್ಯವಾರ ಸಂಜೆ ಐಸ್ ಕ್ರೀಂ ತಿಂದಿದ್ದಾನೆ. ಬಳಿಕ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.  

ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥನಾಗಿ ಬಾಲಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಇಸ್ರೋದಿಂದ ಏ.22ಕ್ಕೆ ಉಪಗ್ರಹ ಉಡಾವಣೆ

(ನ್ಯೂಸ್ ಕಡಬ)newskadaba.com ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ವಾಣಿಜ್ಯ ಉಡಾವಣೆಗೆ ಸಜ್ಜಾಗುತ್ತಿದೆ. ಇಸ್ರೋ ಸಂಸ್ಥೆಯು ತನ್ನ ಹೊಸ ಪಿಎಸ್‌ಎಲ್‌ವಿ ರಾಕೆಟ್‌ನೊಂದಿಗೆ ಏ.22ರಂದು ಸಿಂಗಾಪುರದ ಭೂ ವೀಕ್ಷಣಾ TeLEOS-02 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ರಾಕೆಟ್ ಅನ್ನು ವಿಶೇಷವಾಗಿ ಸಂಯೋಜಿಸಲಾಗಿದೆ. ಪಿಎಸ್‌ಎಲ್‌ವಿ ಮೂಲಕ ಇದುವರೆಗೆ 33 ದೇಶಗಳ ಒಟ್ಟು 297 ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಹೊಸ ರಾಕೆಟ್ 44ಮೀ. ಎತ್ತರ & 2.8ಮೀ. ವ್ಯಾಸ ಹೊಂದಿದೆ. ಇದು ನಾಲ್ಕು ಹಂತಗಳನ್ನು ಹೊಂದಿದ್ದು, ರಾಕೆಟ್‌

ಇಸ್ರೋದಿಂದ ಏ.22ಕ್ಕೆ ಉಪಗ್ರಹ ಉಡಾವಣೆ Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.19  ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. 2024ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟ ಕೇಂದ್ರ ಸರ್ಕಾರ ಮುಂದಿನ ಮುಂಗಾರು ಸಂಸತ್ ಅಧಿವೇಶನದಲ್ಲಿ ಮಹತ್ವಾಕಾಂಕ್ಷಿಯ ಸಮಾನ ನಾಗರಿಕ ಸಂಹಿತೆ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಮ್ಮ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಬದ್ಧವಾಗಿದ್ದು, ಅದಕ್ಕೆ ಸೂಕ್ತ ಸಮಯ ಬರಬೇಕು.

ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ..! Read More »

ರಾಷ್ಟ್ರೀಯ ನ್ಯೂಸ್

ಚುನಾವಣೆಯಲ್ಲಿ ಸ್ಪರ್ಧೆಗೆ ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದು ಬಿಜೆಪಿ ಯುವನಾಯಕ ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಏ.18. ಪುರಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ‌ ಎಂದು ಬಿಜೆಪಿ‌ ಸ್ಥಳೀಯ ನಾಯಕ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಉತ್ತರಪ್ರದೇಶದಲ್ಲಿ ಪುರಸೆಭೆಯ ಕೆಲ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ದೀಪಕ್ ಸೈನಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಕಳೆದ ಪುರಸಭೆ ಚುನಾವಣೆಯಲ್ಲಿ 19ನೇ ವಯಸ್ಸಿನಲ್ಲಿ ಬಿಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸಿ ಗೆದ್ದಿದ್ದರು. ಪಕ್ಷಕ್ಕಾಗಿ ದುಡಿದಿದ್ದ ಅವರು ಟಿಕೆಟ್ ಸಿಗದಿದ್ದಕ್ಕೆ ಮನನೊಂದು ವಿಷ ಸೇವಿಸಿ ಜೀವನ ಅಂತ್ಯಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.  

ಚುನಾವಣೆಯಲ್ಲಿ ಸ್ಪರ್ಧೆಗೆ ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದು ಬಿಜೆಪಿ ಯುವನಾಯಕ ಆತ್ಮಹತ್ಯೆ..! Read More »

ರಾಷ್ಟ್ರೀಯ ನ್ಯೂಸ್

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ..!   ➤ ದೂರು ದಾಖಲು!

(ನ್ಯೂಸ್ ಕಡಬ)com ಪಾಟ್ನಾ,ಏ.18 ಪಾಟ್ನಾದ ಮನೇರ್ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ಬಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಮನೇರ್‌ನಲ್ಲಿರುವ ಕೊಯಿಲ್‌ವಾರ್ ಸೇತುವೆಯ ಬಳಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ತೆರಳಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿ ಸೇರಿ ಒಟ್ಟು ಮೂವರು ಅಧಿಕಾರಿಗಳಿಗೆ ಅಲ್ಲಿದ್ದ ಜನರು ಬೆದರಿಕೆಯನ್ನು ಹಾಕಿದ್ದಾರೆ. ಇದಾದ ಬಳಿಕ ಅವರೊಂದಿಗೆ ವಾಗ್ವಾದ ನಡೆಸಿ

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ..!   ➤ ದೂರು ದಾಖಲು! Read More »

ರಾಷ್ಟ್ರೀಯ ನ್ಯೂಸ್

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಷೇರು ಮಾರುಕಟ್ಟೆ..! ➤ಹೂಡಿಕೆದಾರರಿಗೆ ಆಘಾತ!!  

(ನ್ಯೂಸ್ ಕಡಬ)Newskadaba.com ಮುಂಬೈ,ಏ.18 ಒಂಬತ್ತು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಬಾಂಬೆ ಷೇರು ಪೇಟೆಯ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿತ ಅನುಭವಿಸಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಹಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳ, ತಂತ್ರಜ್ಞಾನ ಮತ್ತು ದೂರಸಂಪರ್ಕ ಕಂಪೆನಿಗಳ ಷೇರುಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಬಿಎಸ್‌ಇ ಸೂಚ್ಯಂಕ ಮಧ್ಯಂತರದಲ್ಲಿ 988.53 ಪಾಯಿಂಟ್ಸ್‌ ಇಳಿಕೆಯಾಗಿತ್ತು. ಆದರೆ ದಿನಾಂತ್ಯಕ್ಕೆ 520.25 ಪಾಯಿಂಟ್ಸ್‌ಗಳಿಗೆ ಮುಕ್ತಾಯವಾಗಿ, 59,910.75ರಲ್ಲಿ ಸೂಚ್ಯಂಕ ಮುಕ್ತಾಯವಾಯಿತು.    

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಷೇರು ಮಾರುಕಟ್ಟೆ..! ➤ಹೂಡಿಕೆದಾರರಿಗೆ ಆಘಾತ!!   Read More »

ರಾಷ್ಟ್ರೀಯ ನ್ಯೂಸ್

ಮೃತ ಗಂಡನ ಪೋಷಕರಿಗೆ ಸೊಸೆ ಜೀವನಾಂಶ ಕೊಡಬೇಕಾಗಿಲ್ಲ..! ➤ಮಹತ್ವದ ಆದೇಶ ಹೊರಡಿಸಿದ ‘ಹೈಕೋರ್ಟ್’.!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.18 ಮೃತ ಗಂಡನ ಪೋಷಕರಿಗೆ ಸೊಸೆ ಜೀವನಾಂಶ ಕೊಡಬೇಕಾಗಿಲ್ಲ ಎಂದು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ಪ್ರಕರಣವೊಂದರಲ್ಲಿ ತನ್ನ ಆದೇಶದಲ್ಲಿ ಈ ಆದೇಶ ನೀಡಿದೆ. ಶೋಭಾ ತಿಡ್ಕೆ ಎಂಬ 38 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯಲ್ಲಿ ಪೀಠ ಈ ಆದೇಶ ನೀಡಿದೆ. ಸ್ಥಳೀಯ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದರು.ಶೋಭಾ ತಿಡ್ಕೆ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಕಿಶೋರ್ ಸಂತ ಅವರ ಏಕ ಪೀಠವು ಈ ಆದೇಶವನ್ನು ನೀಡಿತು.

ಮೃತ ಗಂಡನ ಪೋಷಕರಿಗೆ ಸೊಸೆ ಜೀವನಾಂಶ ಕೊಡಬೇಕಾಗಿಲ್ಲ..! ➤ಮಹತ್ವದ ಆದೇಶ ಹೊರಡಿಸಿದ ‘ಹೈಕೋರ್ಟ್’.! Read More »

ರಾಷ್ಟ್ರೀಯ ನ್ಯೂಸ್

ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು!

(ನ್ಯೂಸ್ ಕಡಬ)Newskadaba.com ಮಹಾರಾಷ್ಟ್ರ,ಏ.18  ‘ಸಮಾಜ ಸುಧಾರಕ ಅಪ್ಪಾಸಾಹೇಬ್‌ ಧರ್ಮಾಧಿಕಾರಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ‍ಪ್ರಶಸ್ತಿ ಪ್ರದಾನ ಮಾಡಲು ಮಹಾರಾಷ್ಟ್ರ ಸರ್ಕಾರ ಆಯೋಜಿಸಿದ್ದ ಸಮಾರಂಭದ ವೇಳೆ ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಮತ್ತೆ ಇಬ್ಬರು ಅಸುನೀಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಾರ್‌ಘರ್‌ ಪ್ರದೇಶದಲ್ಲಿ ನಡೆದಿದ್ದ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು ಈ ವೇಳೆ 11 ಜನ ಮೃತಪಟ್ಟಿದ್ದರು.’ಕಾಮೋಟೆಯಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಎಂಟು

ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು! Read More »

ರಾಷ್ಟ್ರೀಯ ನ್ಯೂಸ್

ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ, ಏ.18. ಹೇರಳವಾದ ನದಿ, ತೊರೆ, ಹಿನ್ನೀರು ಹಾಗೂ ಉತ್ತಮ ಪ್ರಮಾಣದ ಮಳೆಯು ಕೇರಳವನ್ನು ಹಚ್ಚ ಹಸಿರನ್ನಾಗಿರಿಸಿದರೂ, ಈ ರಾಜ್ಯದ ಅನೇಕ ಭಾಗಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕಾಗಿಯೇ ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ ಘೋಷಿಸಲಾಗಿದೆ. ರಾಜ್ಯದ 15 ಬ್ಲಾಕ್ ಪಂಚಾಯತ್ ಗಳ 94 ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್ ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ

ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ Read More »

ರಾಷ್ಟ್ರೀಯ ನ್ಯೂಸ್

ದೆಹಲಿ ಮೇಯರ್- ಉಪಮೇಯರ್ ಚುನಾವಣೆ ➤ ಅಭ್ಯರ್ಥಿಗಳನ್ನು ಘೋಷಿಸಿದ ಆಪ್

(ನ್ಯೂಸ್ ಕಡಬ) newskadaba.com. ನವದೆಹಲಿ, ಏ.17. ಏಪ್ರಿಲ್​ 26ರಂದು ದೆಹಲಿ ಮುನ್ಸಿಪಾಲ್​ ಕೌನ್ಸಿಲ್​​(MCD)ನ ಮೇಯರ್​, ಉಪಮೇಯರ್​ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಆಮ್​ ಆದ್ಮಿ ಪಕ್ಷ ತನ್ನ ಹುರಿಯಾಳುಗಳನ್ನು ಘೋಷಿಸಿದೆ. ಹಾಲಿ ಮೇಯರ್​ ಶೆಲ್ಲಿ ಓಬೆರಾಯ್​ ಹಾಗೂ ಉಪಮೇಯರ್​ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಅಭ್ಯರ್ಥಿಗಳೆಂದು ಎಎಪಿ ನಾಯಕ ಸಂಜಯ್​ ಸಿಂಗ್ ಘೋಷಿಸಿದ್ಧಾರೆ.  ಈ ಕುರಿತು ಮಾತನಾಡಿದ ಸಂಜಯ್​ ಸಿಂಗ್​ ನಾವು ಮೇಯರ್ ಹಾಗೂ ಉಪಮೇಯರ್​ ಚುನಾವಣೆಗೆ ಶೆಲ್ಲಿ ಒಬೆರಾಯ್​ ಹಾಗೂ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಆಯ್ಕೆ

ದೆಹಲಿ ಮೇಯರ್- ಉಪಮೇಯರ್ ಚುನಾವಣೆ ➤ ಅಭ್ಯರ್ಥಿಗಳನ್ನು ಘೋಷಿಸಿದ ಆಪ್ Read More »

ರಾಷ್ಟ್ರೀಯ ನ್ಯೂಸ್
Scroll to Top