ಕರಾವಳಿ

ಮುಂಗಾರು ಮಳೆ ಕೊರತೆ: ಕರಾವಳಿಯಲ್ಲಿ ಮೀನುಗಾರಿಕೆ ಸ್ತಬ್ಧ, ಬಂಗುಡೆ ಬೆಲೆ ₹400ಕ್ಕೆ ಏರಿಕೆ!

(ನ್ಯೂಸ್‌ ಕಡಬ) newskadaba.com,  ಜೂ.13 ಕರಾವಳಿಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಮೀನುಗಳು ಆಳ ಸಮುದ್ರದಲ್ಲೇ ಉಳಿದಿವೆ. ದಡದತ್ತ ಬರುತ್ತಿಲ್ಲ.ಮಂಗಳೂರಿನಿಂದ ಉಳ್ಳಾಲದವರೆಗೆ ನಾಡದೋಣಿ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಮೀನಿನ ತೀವ್ರ ಕೊರತೆ ಎದುರಾಗಿದೆ.ಗ್ರಾಹಕರ ನೆಚ್ಚಿನ ಬಂಗುಡೆ ಮೀನಿನ ಬೆಲೆ ಕೆಜಿಗೆ 400 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಹವಾಮಾನ ಇಲಾಖೆ ಕಡಿಮೆ ಮಳೆಯ ಮುನ್ಸೂಚನೆ ನೀಡಿದ್ದು, ಪೂರ್ಣ ಪ್ರಮಾಣದ ಮೀನುಗಾರಿಕೆಗೆ ಜುಲೈ 1ರವರೆಗೆ ಕಾಯಬೇಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೆರೆ ರಾಜ್ಯಗಳ ‘ಐಸ್ ಮೀನು’ಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಕರಾವಳಿ ಆರ್ಥಿಕತೆ ಕುಸಿಯುವ […]

ಮುಂಗಾರು ಮಳೆ ಕೊರತೆ: ಕರಾವಳಿಯಲ್ಲಿ ಮೀನುಗಾರಿಕೆ ಸ್ತಬ್ಧ, ಬಂಗುಡೆ ಬೆಲೆ ₹400ಕ್ಕೆ ಏರಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ಮುಂದೆ ದ್ವಿತೀಯ ಪಿಯುಸಿ ಪ್ರವೇಶಾತಿ ವೇಳೆಯೇ ಸಿಇಟಿ ಅರ್ಜಿ ಸಲ್ಲಿಕೆ: ಕೆಇಎ ಹೊಸ ನಿಯಮ

(ನ್ಯೂಸ್‌ ಕಡಬ) newskadaba.com,  ಜೂ.13 : ವಿದ್ಯಾರ್ಥಿಗಳು ಇನ್ಮುಂದೆ ಸಿಇಟಿ ಪರೀಕ್ಷೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು. ಕಾಲೇಜಿನಲ್ಲೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ವಿದ್ಯಾರ್ಥಿಗಳು ನೇರವಾಗಿ ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.ಸಾಮಾನ್ಯವಾಗಿ ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಆರ್​ಡಿ ನಂಬರ್ ಹಾಗೂ ಜಾತಿ ಪ್ರಮಾಣಪತ್ರಗಳಲ್ಲಿ ಆಗುತ್ತಿದ್ದ ತಪ್ಪುಗಳು ಮತ್ತು ಕೌನ್ಸಿಲಿಂಗ್ ವೇಳೆಯ ತೊಂದರೆಗಳು ಇದರಿಂದ ತಪ್ಪಲಿವೆ. ಪಿಯುಸಿ ಪರೀಕ್ಷೆಯ ಸಿದ್ಧತೆಯ

ಇನ್ಮುಂದೆ ದ್ವಿತೀಯ ಪಿಯುಸಿ ಪ್ರವೇಶಾತಿ ವೇಳೆಯೇ ಸಿಇಟಿ ಅರ್ಜಿ ಸಲ್ಲಿಕೆ: ಕೆಇಎ ಹೊಸ ನಿಯಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಕಾಂಬಿಕೆಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ನೀಡಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್!

(ನ್ಯೂಸ್‌ ಕಡಬ) newskadaba.com,  ಜೂ.13 : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಉಡುಪಿಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲಗಳೊಂದಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ವಿಶೇಷ ಕಾಣಿಕೆಯಾಗಿ ಸಮರ್ಪಿಸಿದರು.ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನಡೆದ ಸಂಕಲ್ಪ ಪೂಜೆ ಹಾಗೂ ನಿತ್ಯದ ದೀಪಾರಾಧನೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಮುಖ್ಯಮಂತ್ರಿಗಳ ಭೇಟಿಯ

ಮೂಕಾಂಬಿಕೆಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ನೀಡಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಸಿಟಿ ಬಸ್ ಸಂಚಾರ ಆರಂಭ

(ನ್ಯೂಸ್‌ ಕಡಬ) newskadaba.com,  ಜೂ.13 : ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ನಗರ ಬಸ್ ಸೇವೆಗಳನ್ನು ಆರಂಭಿಸಿದೆ. ಕಟೀಲು ಮಾರ್ಗ: ಬೆಳಗ್ಗೆ 06:55, 10:45 (ಸುರತ್ಕಲ್, ಕಾಟಿಪಳ್ಳ ಮಾರ್ಗ).ಬೊಕ್ಕಪಟ್ಣ ಮಾರ್ಗ: ಬೆಳಗ್ಗೆ 08:45 ರಿಂದ ಸಂಜೆ 06:30 ರವರೆಗೆ ಒಟ್ಟು 7 ಟ್ರಿಪ್‌ಗಳು (ಕಂಕನಾಡಿ, ಲಾಲ್‌ಬಾಗ್ ಮಾರ್ಗ). ಸ್ಟೇಟ್ ಬ್ಯಾಂಕ್ ಮಾರ್ಗ: ಮಧ್ಯಾಹ್ನ 01:00 ರಿಂದ ಸಂಜೆ 05:00 ರವರೆಗೆ ಒಟ್ಟು 5 ಟ್ರಿಪ್‌ಗಳು (ನಂತೂರು, ಕದ್ರಿ ಮಾರ್ಗ).ಕೊಡಿಕಲ್ ಮಾರ್ಗ: ಬೆಳಗ್ಗೆ 08:00

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಸಿಟಿ ಬಸ್ ಸಂಚಾರ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ ತಿರುಪತಿ ಮಾದರಿಯಲ್ಲಿ ‘ಶೀಘ್ರ ದರ್ಶನ’ ಪ್ಯಾಕೇಜ್ ಆರಂಭಿಸಿದ KSTDC!

(ನ್ಯೂಸ್‌ ಕಡಬ) newskadaba.com,  ಜೂ.13 : ರಾಜಧಾನಿ ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಹಸ್ರಾರು ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಿಹಿ ಸುದ್ದಿ ನೀಡಿದೆ. ಧರ್ಮಸ್ಥಳದಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು, ತಿರುಪತಿ ಮಾದರಿಯಲ್ಲಿ ‘ಶೀಘ್ರ ದರ್ಶನ’ ಸೌಲಭ್ಯ ಒಳಗೊಂಡ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಇಂದಿನಿಂದ ಜಾರಿಗೆ ತರಲಾಗಿದೆ. ಧರ್ಮಸ್ಥಳ (ಮಂಜುನಾಥ ಸ್ವಾಮಿ ದೇವಸ್ಥಾನ), ಕುಕ್ಕೆ ಸುಬ್ರಹ್ಮಣ್ಯ ಮತ್ತು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ.2 ದಿನಗಳು ಮತ್ತು 1 ರಾತ್ರಿ

ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ ತಿರುಪತಿ ಮಾದರಿಯಲ್ಲಿ ‘ಶೀಘ್ರ ದರ್ಶನ’ ಪ್ಯಾಕೇಜ್ ಆರಂಭಿಸಿದ KSTDC! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಂದ್: ಜಾಗತಿಕವಾಗಿ ಮೆಟಾ ಸರ್ವರ್ ಡೌನ್!

(ನ್ಯೂಸ್‌ ಕಡಬ) newskadaba.com,  ಜೂ.13 ಬೆಂಗಳೂರು: ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಆ್ಯಪ್‌ಗಳು ಜಾಗತಿಕವಾಗಿ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ ಎಂದು ವೆಬ್‌ಸೈಟ್‌ಗಳ ಸ್ಥಿತಿಗತಿ ಟ್ರ್ಯಾಕ್ ಮಾಡುವ ‘ಡೌನ್‌ಡಿಟೆಕ್ಟರ್’ ದೃಢಪಡಿಸಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಲಕ್ಷಾಂತರ ಬಳಕೆದಾರರ ಖಾತೆಗಳು ತಾವಾಗಿಯೇ ಲಾಗ್ ಔಟ್ ಆಗಿದ್ದು, ಮರಳಿ ಲಾಗಿನ್ ಮಾಡಲು ಯತ್ನಿಸಿದಾಗ “ಸೆಷನ್ ಎಕ್ಸ್‌ಪೈರ್ಡ್” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಫೀಡ್ ರಿಫ್ರೆಶ್ ಹಾಗೂ ಪೋಸ್ಟ್ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ತಾಂತ್ರಿಕ ದೋಷವಾಗಿದ್ದು,

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಂದ್: ಜಾಗತಿಕವಾಗಿ ಮೆಟಾ ಸರ್ವರ್ ಡೌನ್! Read More »

ಕರಾವಳಿ, ಕರ್ನಾಟಕ, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್

ಇನ್ಮುಂದೆ ಕ್ಯಾನ್ ಅಥವಾ ಬ್ಯಾರೆಲ್‌ಗಳಲ್ಲಿ ಡೀಸೆಲ್ ಸಿಗಲ್ಲ! ಬಂಕ್‌ಗಳಲ್ಲಿ ನಿಯಮ ಕಠಿಣ

(ನ್ಯೂಸ್‌ ಕಡಬ) newskadaba.com,  ಜೂ.13: ಇನ್ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಖರೀದಿಸಲು ಅವಕಾಶ.ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ರಿಟೇಲ್ ಬಂಕ್‌ಗಳಲ್ಲಿ ಇಂಧನ ಖರೀದಿಸುವಂತಿಲ್ಲ; ಅವರು ಅಧಿಕೃತ ಬೃಹತ್ ಮಾರಾಟ ಕೇಂದ್ರಗಳಿಂದಲೇ ಖರೀದಿಸಬೇಕು. ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್ ಬೆಲೆ ₹95.20 ಇದ್ದರೆ, ಬೃಹತ್ ಮಾರಾಟ ಕೇಂದ್ರಗಳಲ್ಲಿ ₹134.50 ಇದೆ. ಈ ಬೆಲೆ ವ್ಯತ್ಯಾಸದಿಂದಾಗಿ ಬಂಕ್‌ಗಳಲ್ಲಿ ಆಗುತ್ತಿದ್ದ ದುರುಪಯೋಗ ತಡೆಯಲು ಈ ಕ್ರಮ.ಡೀಸೆಲ್ ಅನ್ನು ನೇರವಾಗಿ ವಾಹನದ ಟ್ಯಾಂಕ್‌ಗೆ

ಇನ್ಮುಂದೆ ಕ್ಯಾನ್ ಅಥವಾ ಬ್ಯಾರೆಲ್‌ಗಳಲ್ಲಿ ಡೀಸೆಲ್ ಸಿಗಲ್ಲ! ಬಂಕ್‌ಗಳಲ್ಲಿ ನಿಯಮ ಕಠಿಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಲ್ಲೂರಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಉಡುಪಿಯಲ್ಲಿ ಹೈ ಅಲರ್ಟ್, ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ!

(ನ್ಯೂಸ್‌ ಕಡಬ) newskadaba.com,ಜೂ.12 ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಯತ್ನ. ಮೇಕೆದಾಟು ಜಲಾಶಯ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಕಾರ್ಯಕರ್ತರು.ಉಡುಪಿ ಜಿಲ್ಲೆಯ ಉದ್ಯಾವರದ ಬಳಿ ಜಮಾಯಿಸಿದ್ದ 20ಕ್ಕೂ ಹೆಚ್ಚು ಕೆಆರ್‌ವಿ ಕಾರ್ಯಕರ್ತರನ್ನು ಸ್ಥಳಕ್ಕೆ ಬರುವ ಮುನ್ನವೇ ತಡೆದು, ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು. ಉಡುಪಿ ಜಿಲ್ಲಾದ್ಯಂತ ಹಾಗೂ ಸಿಎಂ ಸಂಚರಿಸುವ ಮಾರ್ಗದಲ್ಲಿ

ಕೊಲ್ಲೂರಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಉಡುಪಿಯಲ್ಲಿ ಹೈ ಅಲರ್ಟ್, ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಿರಿಯ ನಟ ದೊಡ್ಡಣ್ಣ ನಿಧನ ವಾರ್ತೆ ಸುಳ್ಳು: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ “ನಾನು ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ನಂಬಬೇಡಿ”

(ನ್ಯೂಸ್‌ ಕಡಬ) newskadaba.com,ಜೂ.12 ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ವತಃ ದೊಡ್ಡಣ್ಣ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, “ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಮತ್ತು ನೆಮ್ಮದಿಯಾಗಿದ್ದೇನೆ. ಬೆಳಗ್ಗಿನಿಂದಲೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆತಂಕದಿಂದ ಕರೆ ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹಬ್ಬಿಸಿದ ಅವಿವೇಕಿಗಳನ್ನು ಸುಮ್ಮನೆ ಬಿಡುವುದಿಲ್ಲ; ಅವರನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ಕೊಡಿಸುತ್ತೇನೆ”

ಹಿರಿಯ ನಟ ದೊಡ್ಡಣ್ಣ ನಿಧನ ವಾರ್ತೆ ಸುಳ್ಳು: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ “ನಾನು ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ನಂಬಬೇಡಿ” Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ತಮಿಳುನಾಡು ಸಿಎಂ ವಿಜಯ್‌ಗೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ಭರ್ಜರಿ ಸ್ವಾಗತ

(ನ್ಯೂಸ್‌ ಕಡಬ) newskadaba.com,ಜೂ.12 ಬಂಟ್ವಾಳ:ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಮಧ್ಯಾಹ್ನ 1:40ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಿಎಂ ಆದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿಳಿದ ತಮ್ಮ ನೆಚ್ಚಿನ ನಾಯಕನನ್ನು ನೋಡಲು ವಿಮಾನ ನಿಲ್ದಾಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳ ಹರ್ಷೋದ್ಗಾರ, ಶಿಳ್ಳೆ ಹಾಗೂ ಚಪ್ಪಾಳೆಗಳ ಸ್ವಾಗತಕ್ಕೆ ನಗುಮುಖದಿಂದಲೇ ಕೈಬೀಸಿ ಪ್ರತಿಕ್ರಿಯಿಸಿದ ವಿಜಯ್, ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು.

ತಮಿಳುನಾಡು ಸಿಎಂ ವಿಜಯ್‌ಗೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ಭರ್ಜರಿ ಸ್ವಾಗತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top