(ನ್ಯೂಸ್ ಕಡಬ) newskadaba.com, ಮೇ.07: ಅಪಾಯಕಾರಿ ಮರ ಕಡಿದು, ತೆಗೆದುಕೊಂಡು ಹೋಗದೆ ಬರೆಯ ಮೇಲೆ ಬಿಟ್ಟು ಹೋಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಎಡವಟ್ಟಿನ ಪರಿಣಾಮ ಇಂದು ಮುಂಜಾನೆ ಮರ ಜಾರಿ ಮನೆಯ ಅಂಗಳದಲ್ಲಿರುವ ಕೋಳಿಗೂಡಿನ ಮೇಲೆ ಬಿದ್ದ ಹಾಗೂ ಗೂಡಿನೊಳಗಿದ್ದ ಕೋಳಿಗಳು ಜಖಂ ಗೊಂಡಿರುವ ಘಟನೆ ಅಜ್ಜಾವರ ಗ್ರಾಮದ ಕಾಂತಮಂಗಲದಿಂದ ವರದಿಯಾಗಿದೆ.
ಕಾಂತಮಂಗಲ ಕೊರಂಬಡ್ಕ ನಿವಾಸಿ ಮೇರಿ ಡಿಸೋಜಾ ಎಂಬವರ ಮನೆಯ ಹಿಂಬದಿಯ ಬರೆಯ ಮೇಲೆ ಇದ್ದ ಹಲಸಿನ ಮರವೊಂದು ಅಪಾಯದಲ್ಲಿದ್ದು ಅದನ್ನು ಕಡಿಯಬೇಕೆಂದು ಪಂಚಾಯತ್ ಗೆ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಮನವಿಯ ಮೇರೆಗೆ 2025 ರಲ್ಲಿ ಅರಣ್ಯ ಇಲಾಖೆಯವರು ಬಂದು ಮರ ಕಡಿದಿದ್ದರು.
ಮಳೆಗಾಲವಾದ್ದರಿಂದ ಮರ ಇಳಿಸಲು ಕಷ್ಟಸಾಧ್ಯವಾದ ಪರಿಣಾಮ ಮರವನ್ನು ಅಲ್ಲೇ ಬಿಟ್ಟು ಹೋದರು. ಪರಿಣಾಮ ಮರ ಒಣಗಿದ ಪರಿಣಾಮ. ಮೇ.7ರಂದು ಮಳೆ ಬಂದ ಪರಿಣಾಮ ಆ ಒಣಗಿದ ಮರ ಜಾರಿಬಂದು ಮೇರಿ ಡಿಸೋಜಾರವರ ಅಂಗಳಕ್ಕೆ ಬಿದ್ದಿದೆ. ಸುಮಾರು 20 ಅಡಿಗೂ ಎತ್ತರದ ಬರೆಯಿಂದ ಜಾರಿದ ಮರ ಅಂಗಳದಲ್ಲಿದ್ದ ಕೋಳಿ ಗೂಡಿನ ಮೇಲೆ ಬಿದ್ದಿದೆ. ಗೂಡಿನಲ್ಲಿ ಕೋಳಿಗಳಿದ್ದು ಗೂಡು ಹಾಗೂ ಕೋಳಿಗಳು ಮರದಡಿಗೆ ಸಿಲುಕಿ ಜಖಂಗೊಂಡಿದೆ.









