ಕರಾವಳಿ

ಪಿಲಿಕುಳ: ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ

(ನ್ಯೂಸ್ ಕಡಬ) newskadaba.com ಜು. 21. ಚಂದ್ರಯಾನದಲ್ಲಿ ಭಾರತವು, ಪ್ರಪಂಚದ ಯಾವುದೇ ದೇಶಗಳು ಮಾಡದಿರುವ ವಿಶಿಷ್ಟ  ಮೈಲಿಗಲ್ಲನ್ನು ಸಾಧಿಸಿದೆ. ಇದು ದೇಶದ ವೈಜ್ಞಾನಿಕ ಪ್ರಗತಿಯ ಸಂಕೇತವಾಗಿದ್ದು, ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಆಸಕ್ತಿ ಹಾಗೂ ಸ್ಫೂರ್ತಿಯನ್ನು ಹೆಚ್ಚಿಸಿದೆ ಎಂದು ಇಸ್ರೋ ಮಾಜಿ ವಿಜ್ಞಾನಿ ಡಾ. ಪಿ. ಜಿ. ದಿವಾಕರ್ ಹೇಳಿದರು. ಅವರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಯುವ ವಿಜ್ಞಾನಿಗಳಾದ ನೀವೆಲ್ಲರೂ ಸ್ಪಷ್ಟವಾದ […]

ಪಿಲಿಕುಳ: ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ Read More »

ಕರಾವಳಿ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 21. 2026-27ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡುವ ಯೋಜನೆಗಳು ಚಾಲ್ತಿಯಲ್ಲಿದ್ದು, ವಿವಿಧ ಕಾರ್ಯಕ್ರಮಗಳಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಕಲವ್ಯ ಪ್ರಶಸ್ತಿ-2025, ಜೀವಮಾನ ಸಾಧನೆ ಪ್ರಶಸ್ತಿ -2025, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ-2025, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ-2025, ಗುರಿ-ಒಲಂಪಿಕ್ ಪದಕ- 2026-27, ನಗದು ಪುರಸ್ಕಾರ- 2025, ಶೈಕ್ಷಣಿಕ ಶುಲ್ಕ ಮರು ಪಾವತಿ- 2026-27, ಕ್ರೀಡಾ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ Read More »

ಕರಾವಳಿ

ಎಸ್.ಸಿ/ಎಸ್.ಟಿ ಪದವೀಧರರಿಗೆ ಡಿಜಿಟಲ್ ಮಾಧ್ಯಮ ಸ್ಥಾಪಿಸಲು ಧನ ಸಹಾಯ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 21. ಪತ್ರಿಕೋದ್ಯಮ ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರು ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಮವನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿಯನ್ನು ಪಡೆಯಲು ಉರ್ವಸ್ಟೋರ್ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ (ದೂರವಾಣಿ ಸಂಖ್ಯೆ: 0824-2451237 & 9480843030) ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ

ಎಸ್.ಸಿ/ಎಸ್.ಟಿ ಪದವೀಧರರಿಗೆ ಡಿಜಿಟಲ್ ಮಾಧ್ಯಮ ಸ್ಥಾಪಿಸಲು ಧನ ಸಹಾಯ- ಅರ್ಜಿ ಆಹ್ವಾನ Read More »

ಕರಾವಳಿ

ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ

(ನ್ಯೂಸ್ ಕಡಬ) newskadaba.com ಜು. 21. ಸರ್ಕಾರದ ಆದೇಶದಂತೆ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡು ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ಮಂಡಳಿ/ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ನೌಕರರುಗಳು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು ಅಲ್ಲದೇ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಅದರಂತೆ ರೂರಲ್ ರಿಸೋರ್ಸಸ್ ಡೆವಲಪ್‍ ಮೆಂಟ್

ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ Read More »

ಕರಾವಳಿ

ತಮ್ಮನ ಕೊಲೆ ಮಾಡಿ ಪೊದೆಯಲ್ಲಿ ಅಡಗಿದ್ದ ಅಣ್ಣ

(ನ್ಯೂಸ್‌ ಕಡಬ) newskadaba.com,  ಜು .21 ಮಂಗಳೂರು: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಚಾರಕ್ಕೆ ಉಂಟಾದ ಜಗಳದಿಂದಾಗಿ ಮಲಗಿದ್ದ ಸ್ವಂತ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ, ಪ್ರಸ್ತುತ ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಸೋಮನಾಥ (21) ಎಂದು ಗುರುತಿಸಲಾಗಿದೆ. ಜುಲೈ 19ರಂದು ರಾತ್ರಿ ಸುಮಾರು 11:00 ಗಂಟೆಗೆ ಕಿರಿಯ ಸಹೋದರ ಮಲ್ಲಿಕಾರ್ಜುನ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಣ್ಣ ಸೋಮನಾಥ ಅದನ್ನು ವಿರೋಧಿಸಿದ್ದಾನೆ. ಈ

ತಮ್ಮನ ಕೊಲೆ ಮಾಡಿ ಪೊದೆಯಲ್ಲಿ ಅಡಗಿದ್ದ ಅಣ್ಣ Read More »

ಕರಾವಳಿ

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ನೀರಿಗೆ ಬಿದ್ದ ಮಹಿಳೆಯ ರಕ್ಷಣೆ; ಸ್ಥಳೀಯ ಮೀನುಗಾರರ ಸಮಯಪ್ರಜ್ಞೆಗೆ ಮೆಚ್ಚುಗೆ

(ನ್ಯೂಸ್‌ ಕಡಬ) newskadaba.com,  ಜು .21: ನಗರದ ಮೀನುಗಾರಿಕಾ ಬಂದರಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾಕ್ ಸಮೀಪ ಆಕಸ್ಮಿಕವಾಗಿ ನೀರಿಗೆ ಬಿದ್ದ ಮಹಿಳೆಯೊಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಮಂಗಳೂರು ನಗರದ ಮೀನುಗಾರಿಕಾ ಬಂದರ್. ಮಹಿಳೆ ನೀರಿಗೆ ಬಿದ್ದ ತಕ್ಷಣವೇ ಸ್ಪಂದಿಸಿದ ಸ್ಥಳೀಯ ಮೀನುಗಾರರು, ತಡಮಾಡದೆ ಸಮುದ್ರಕ್ಕಿಳಿದು ಕೆಲವೇ ಕ್ಷಣಗಳಲ್ಲಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಮೀನುಗಾರರ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಮಹಿಳೆ ನೀರಿಗೆ ಬಿದ್ದದ್ದು ಆಕಸ್ಮಿಕವೇ ಅಥವಾ ಇತರ ಕಾರಣಗಳಿವೆಯೇ ಎಂಬ ಕುರಿತು ಪರಿಶೀಲನೆ

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ನೀರಿಗೆ ಬಿದ್ದ ಮಹಿಳೆಯ ರಕ್ಷಣೆ; ಸ್ಥಳೀಯ ಮೀನುಗಾರರ ಸಮಯಪ್ರಜ್ಞೆಗೆ ಮೆಚ್ಚುಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆ- ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ ನಿಯಮ 377ರಡಿ ತಿದ್ದುಪಡಿಗೆ ಒತ್ತಾಯ

(ನ್ಯೂಸ್ ಕಡಬ) newskadaba.com ಜು. 20. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕು ಹಾಗೂ ತೋಟಗಾರಿಕಾ ಮಿಷನ್ (MIDH) ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ನಿಯಮ 377ರಡಿ ಒತ್ತಾಯಿಸಿದ್ದಾರೆ.   ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಬರುವ ವಿವಿಧ ರೋಗಗಳಿಂದ ತೀವ್ರವಾಗಿ ಹಾನಿಗೊಳಗಾಗುತ್ತಿವೆ. ಈ ರೋಗಗಳ ನಿವಾರಣೆಗೆ ರೋಗ ನಿರ್ಣಯ, ತೋಟದ ನೈರ್ಮಲ್ಯ, ಪೋಷಕಾಂಶಗಳ ಪೂರೈಕೆ, ಸೂಕ್ತ ಡ್ರೈನೇಜ್ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ವ್ಯಾಪಕವಾಗಿ ಬಾಧಿತಗೊಂಡ ತೋಟಗಳಲ್ಲಿ ರೀಪ್ಲಾಂಟೇಷನ್ ಮಾಡುವಂತಹ ಪೂರ್ಣ ಪ್ರಮಾಣದ ವೈಜ್ಞಾನಿಕ ನಿಯಂತ್ರಣ ಅಥವಾ ಚಿಕಿತ್ಸಾ ಕ್ರಮಗಳ ಅಗತ್ಯವಿದೆ. ಸದ್ಯ

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆ- ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ ನಿಯಮ 377ರಡಿ ತಿದ್ದುಪಡಿಗೆ ಒತ್ತಾಯ Read More »

ಕರಾವಳಿ, ಕರ್ನಾಟಕ

ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾಗ ದುರಂತ

(ನ್ಯೂಸ್‌ ಕಡಬ) newskadaba.com,  ಜು .21:ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯ ಬಳಿ ಮಂಗಳವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಹಾಪ್‌ಕಾಮ್ಸ್ ಜನರಲ್ ಮ್ಯಾನೇಜರ್ (ಜಿಎಂ) ರವಿ ಶೆಟ್ಟಿ (43) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ನೇಹಿತರೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ದರ್ಶನಕ್ಕೆ ತೆರಳುತ್ತಿದ್ದ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಕಾರಿನಲ್ಲಿದ್ದ ಮಂಗಳೂರಿನ ಪ್ರದೀಪ್ ಆಳ್ವಾ, ಪುರುಷೋತ್ತಮ ಭಂಡಾರಿ ಹಾಗೂ ಸಿಎ ಸುದೇಶ್ ರೈ ಗಂಭೀರವಾಗಿ

ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾಗ ದುರಂತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಕೋಟ್ಯಂತರ ರೂ. ವಂಚಿಸಿದ ಖದೀಮೆ!

(ನ್ಯೂಸ್‌ ಕಡಬ) newskadaba.com,  ಜು .21 ಬೆಳ್ತಂಗಡಿ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹87 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಆರೋಪಿ: ಅನಿಷಾ ಪಾಲನ್ನ (35)2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಸೈಟ್‌ ಮೂಲಕ ಪರಿಚಯವಾಗಿ, ಬಳಿಕ ಇನ್‌ಸ್ಟಾಗ್ರಾಂ ಹಾಗೂ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಮದುವೆಯಾಗುವುದಾಗಿ ನಂಬಿಸಿದ ಆರೋಪಿ, ವಿವಿಧ ಕಾರಣಗಳನ್ನು ನೀಡಿ ಹಂತ-ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳ ಮೂಲಕ ಒಟ್ಟು ₹87,22,710 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ಪಡೆದ ಬಳಿಕ

ಬೆಳ್ತಂಗಡಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಕೋಟ್ಯಂತರ ರೂ. ವಂಚಿಸಿದ ಖದೀಮೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ- ಬಂಧನ

(ನ್ಯೂಸ್‌ ಕಡಬ) newskadaba.com ಜು. 21. ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಬಾಲಕಿ ಗರ್ಭಿಣಿಯಾಗಿರುವ ಪ್ರಕರಣದ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತನನ್ನು ಉಪ್ಪಿನಂಗಡಿ ನಿವಾಸಿ ಶುಭರಾಜ್ ಎಂದು ಪೊಲೀಸರು ಗುರುತಿಸಲಾಗಿದೆ. ವರದಿಯ ಪ್ರಕಾರ, ಬೆಳ್ತಂಗಡಿಯ 16 ವರ್ಷದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ಆರೋಪಿಯು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ- ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top