ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ



(ನ್ಯೂಸ್ ಕಡಬ) newskadaba.com ಜು. 21. ಸರ್ಕಾರದ ಆದೇಶದಂತೆ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡು ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ಮಂಡಳಿ/ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ನೌಕರರುಗಳು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು ಅಲ್ಲದೇ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.
ಅದರಂತೆ ರೂರಲ್ ರಿಸೋರ್ಸಸ್ ಡೆವಲಪ್‍ ಮೆಂಟ್ ಅಸೋಸಿಯೇಷನ್ ಸಂಘದವರು ಮಂಗಳೂರಿನಲ್ಲಿ ದೈನಂದಿನ ಬಳಕೆಯ ಖಾದಿ ಉಡುಪುಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದು, ಜುಲೈ 27 ರಿಂದ  ಆಗಸ್ಟ್ 1 ರವರೆಗೆ  ನಗರದ ಮಿನಿ ವಿಧಾನಸೌಧ  ಆವರಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಮಾರಾಟ ಮಾಡಲಾಗುತ್ತದೆ.
ಆದ್ದರಿಂದ ಈ ನಿಟ್ಟಿನಲ್ಲಿ ಅಧಿಕಾರಿ/ಸಿಬ್ಬಂದಿ ವರ್ಗದವರು ಮೇಲ್ಕಂಡ ವಿಳಾಸಕ್ಕೆ ಭೇಟಿ ನೀಡಿ ಖಾದಿ ಉಡುಪುಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







error: Content is protected !!
Scroll to Top