ಕರಾವಳಿ

ಅಪಘಾತ: ಸುಳ್ಯದ ಹಳೇಗೇಟು ಬಳಿ ಬೊಲೆರೋ-ಜೀತೋ ವಾಹನಗಳ ನಡುವೆ ಡಿಕ್ಕಿ

(ನ್ಯೂಸ್‌ ಕಡಬ) newskadaba.com,  ಆ.13 ಸುಳ್ಯ: ನಗರದ ಹಳೇಗೇಟು ಬಳಿ ಅರಣ್ಯ ಇಲಾಖೆಗೆ ಸೇರಿದ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಸುಳ್ಯದಿಂದ ಪೈಚಾರ್ ಕಡೆಗೆ ತೆರಳುತ್ತಿದ್ದ ಅರಣ್ಯ ಇಲಾಖೆಯ ಬೊಲೆರೋ ವಾಹನ ಹಾಗೂ ಮಡಿಕೇರಿ ಕಡೆಗೆ ಸಂಚರಿಸುತ್ತಿದ್ದ ಮಹೀಂದ್ರ ಜೀತೋ ವಾಹನಗಳ ನಡುವೆ ಮಾರ್ಗಮಧ್ಯೆ ಈ ಅಪಘಾತ ನಡೆದಿದೆ. ಘಟನೆ ತಿಳಿಯುತ್ತಿದ್ದಂತೆ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಪೊಲೀಸರು […]

ಅಪಘಾತ: ಸುಳ್ಯದ ಹಳೇಗೇಟು ಬಳಿ ಬೊಲೆರೋ-ಜೀತೋ ವಾಹನಗಳ ನಡುವೆ ಡಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೈoಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಆಟಿದ ಪೊರ್ಲು ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com,  ಆ.13 ಕಡಬ :ಸೈoಟ್  ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆದ ಆಟಿದ ಪೊರ್ಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಇಂತಹ ಕಾರ್ಯಕ್ರಮ ಗಳನ್ನು ಆಚರಿಸುವುದರ ಮೂಲಕ ನಮ್ಮ ತುಳುನಾಡಿನ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಸೈoಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪಾವ್ಲ್ ಪ್ರಕಾಶ್ ಡಿ ಸೋಜಾ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ಉಮೇಶ್

ಸೈoಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಆಟಿದ ಪೊರ್ಲು ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗಾರ ಪ್ರಿಯರಿಗೆ ಶಾಕ್: ಇಂದು ಚಿನ್ನದ ದರ ಮತ್ತೆ ಜಂಪ್!

(ನ್ಯೂಸ್‌ ಕಡಬ) newskadaba.com,  ಆ.12 :  ಬೆಂಗಳೂರು ಸೇರಿದಂತೆ ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.   🟡 22 ಕ್ಯಾರಟ್ ಚಿನ್ನದ ದರ 1 ಗ್ರಾಂ: ₹14,195 (₹95 ಏರಿಕೆ), 8 ಗ್ರಾಂ: ₹1,13,560, 10 ಗ್ರಾಂ: ₹1,41,950, 100 ಗ್ರಾಂ: ₹14,19,500 ಕ್ಯಾರಟ್ ಚಿನ್ನದ ದರ (ಅಪರಂಜಿ / ಅಪರ ಶುದ್ಧ ಚಿನ್ನ): 1 ಗ್ರಾಂ: ₹15,486 (₹104 ಏರಿಕೆ), 8 ಗ್ರಾಂ:

ಬಂಗಾರ ಪ್ರಿಯರಿಗೆ ಶಾಕ್: ಇಂದು ಚಿನ್ನದ ದರ ಮತ್ತೆ ಜಂಪ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

SBI ನೇಮಕಾತಿ 2026: 9,124 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ!

(ನ್ಯೂಸ್‌ ಕಡಬ) newskadaba.com,  ಆ.12 :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಖಾಲಿ ಇರುವ 9,124 ಜೂನಿಯರ್ ಅಸೋಸಿಯೇಟ್ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.ವೇತನ ಶ್ರೇಣಿ ಪ್ರತಿ ತಿಂಗಳಿಗೆ ₹24,050 ರಿಂದ ₹64,480.. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.ಕನಿಷ್ಠ 20 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರಬಾರದು.OBC / BC ಅಭ್ಯರ್ಥಿಗಳಿಗೆ 3

SBI ನೇಮಕಾತಿ 2026: 9,124 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರತಿ ಮನೆಯಲ್ಲೂ ‘ಹರ್ ಘರ್ ತಿರಂಗಾ’ ಸಂಭ್ರಮಿಸಿ: ಪ್ರಧಾನಿ ಮೋದಿ ಕರೆ

(ನ್ಯೂಸ್‌ ಕಡಬ) newskadaba.com,  ಆ.12 ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಡಿಯೋ ಸಂದೇಶದ ಮೂಲಕ ಶುಭಾಶಯ ತಿಳಿಸಿದ್ದು, ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದ ಪ್ರಧಾನಿಯವರು, ಪ್ರತಿಯೊಬ್ಬರೂ ತಮ್ಮ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿ, ರಾಷ್ಟ್ರೀಯ ಸಂಭ್ರಮದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿ ಹಾಗೂ

ಪ್ರತಿ ಮನೆಯಲ್ಲೂ ‘ಹರ್ ಘರ್ ತಿರಂಗಾ’ ಸಂಭ್ರಮಿಸಿ: ಪ್ರಧಾನಿ ಮೋದಿ ಕರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆ. 14ರಂದು ವಿಧಾನಸಭೆ ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಚುನಾವಣೆ

(ನ್ಯೂಸ್‌ ಕಡಬ) newskadaba.com,  ಆ.12: ರಾಜ್ಯ ವಿಧಾನಮಂಡಲದ ಸ್ಪೀಕರ್ ಹಾಗೂ ಸಭಾಪತಿ ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 14ರಂದು ಚುನಾವಣೆ ನಡೆಯಲಿದೆ.   ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸ್ಪಷ್ಟ ಸಂಖ್ಯಾಬಲ ಹೊಂದಿರುವುದರಿಂದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆಯಿದ್ದು, ಅವಿರೋಧ ಆಯ್ಕೆ ನಡೆಯುವ ಲಕ್ಷಣಗಳಿವೆ. ಕೊನೆಯ ಕ್ಷಣದ ಬದಲಾವಣೆಗಳಾಗದಿದ್ದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಹಾಗೂ ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆಯಾಗುವ ಸಾಧ್ಯತೆಯಿದೆ.  

ಆ. 14ರಂದು ವಿಧಾನಸಭೆ ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಚುನಾವಣೆ Read More »

ಕರಾವಳಿ

ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ‘ವಂದೇ ಮಾತರಂ’ ಗಾಯನ

(ನ್ಯೂಸ್‌ ಕಡಬ) newskadaba.com,  ಆ.11 ನವದೆಹಲಿ: ಮುಂಬರುವ ಆ ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಅಂಗಳದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ‘ವಂದೇ ಮಾತರಂ’ ಗೀತೆಯನ್ನು ಗಾಯನ ಮಾಡಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೆಂಪುಕೋಟೆಯ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಬಳಿಕ ರಾಷ್ಟ್ರಗೀತೆ ‘ಜನಗಣಮನ’ ಪ್ರಸ್ತುತಗೊಳ್ಳಲಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಾಂಪ್ರದಾಯಿಕ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಪರಿಕಲ್ಪನೆ (ಥೀಮ್)

ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ‘ವಂದೇ ಮಾತರಂ’ ಗಾಯನ Read More »

ಕರಾವಳಿ, ಕರ್ನಾಟಕ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಶಾಲಾ ಬಸ್ – 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುರಕ್ಷಿತ

(ನ್ಯೂಸ್‌ ಕಡಬ) newskadaba.com,  ಆ.11 : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಘಟನೆ ನಡೆದಾಗ ಬಸ್‌ನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿದ್ದು, ಶಾಲಾ ಬಸ್‌ಗೆ ಜಖಂಗೊಂಡಿದೆ. ಅಪಘಾತದ ನಂತರ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಶಾಲಾ ಬಸ್ – 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುರಕ್ಷಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ. 11. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆಶ್ವಿ ಶೆಟ್ಟಿ ಹಾಗೂ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಗೌತಮ ಪ್ರಸಾದ ಹಾಗೂ ಅದ್ವಿತ್ ಆಯ್ಕೆಯಾಗಿದ್ದಾರೆ. ಕುಮಾರಿ ಸಾನ್ವಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್

EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು!

(ನ್ಯೂಸ್‌ ಕಡಬ) newskadaba.com,  ಆ.11 : ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಕೋಟ್ಯಂತರ ಸದಸ್ಯರಿಗೆ ಆನ್‌ಲೈನ್ ಹಾಗೂ ಸೈಬರ್ ವಂಚನೆಗಳ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.ವಂಚಕರು ನಕಲಿ ಲಿಂಕ್, SMS, WhatsApp ಮತ್ತು ಇ-ಮೇಲ್ ಮೂಲಕ “ಖಾತೆ ಬಂದ್ ಆಗುತ್ತದೆ” ಅಥವಾ “KYC ಅಪ್‌ಡೇಟ್ ಮಾಡಿ” ಎಂದು ಹೆದರಿಸಿ ಮಾಹಿತಿ ಕದಿಯುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳ ಮೂಲಕ ನಿಮ್ಮ UAN, OTP, ಆಧಾರ್, PAN ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ.EPFO ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳು

EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು! Read More »

ಕರಾವಳಿ
Scroll to Top