(ನ್ಯೂಸ್ ಕಡಬ) newskadaba.com, ಆ.11 : ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಕೋಟ್ಯಂತರ ಸದಸ್ಯರಿಗೆ ಆನ್ಲೈನ್ ಹಾಗೂ ಸೈಬರ್ ವಂಚನೆಗಳ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.ವಂಚಕರು ನಕಲಿ ಲಿಂಕ್, SMS, WhatsApp ಮತ್ತು ಇ-ಮೇಲ್ ಮೂಲಕ “ಖಾತೆ ಬಂದ್ ಆಗುತ್ತದೆ” ಅಥವಾ “KYC ಅಪ್ಡೇಟ್ ಮಾಡಿ” ಎಂದು ಹೆದರಿಸಿ ಮಾಹಿತಿ ಕದಿಯುತ್ತಿದ್ದಾರೆ.
ನಕಲಿ ವೆಬ್ಸೈಟ್ಗಳ ಮೂಲಕ ನಿಮ್ಮ UAN, OTP, ಆಧಾರ್, PAN ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ.EPFO ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳು ಕರೆ ಮಾಡಿ OTP ಅಥವಾ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ.
SMS ಅಥವಾ WhatsApp ನಲ್ಲಿ ಬರುವ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. URL ಕಾಗುಣಿತವನ್ನು ಸರಿಯಾಗಿ ಗಮನಿಸಿ.PF ಖಾತೆಗೆ ಸಂಬಂಧಿಸಿದ ಯಾವುದೇ ಸೇವೆಗಾಗಿ ನೇರವಾಗಿ EPFO ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.





