ಸ್ಮಾರ್ಟ್ ಸಿಟಿ ಯೋಜನೆ: ಐತಿಹಾಸಿಕ ಟಾಗೋರ್ ಪಾರ್ಕ್‌ನಲ್ಲಿ ₹75 ಲಕ್ಷ ವೆಚ್ಚದ ಬೃಹತ್ ಧ್ವಜಸ್ತಂಭ ಸಿದ್ಧ

(ನ್ಯೂಸ್‌ ಕಡಬ) newskadaba.com,  ಆ.11 : ಮಂಗಳೂರಿನ ಐತಿಹಾಸಿಕ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ನಲ್ಲಿ ₹75 ಲಕ್ಷ ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 14 ಟನ್ ತೂಕದ, 78 ಮೀಟರ್ (ಜಿಐ ಲೋಹದ) ಎತ್ತರದ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ನಡೆಸಲಾಗಿದೆ.

ಮೋಟರೀಕೃತ ಧ್ವಜಾರೋಹಣ ವ್ಯವಸ್ಥೆ, ಮಿಂಚುಬಂಧಕ, ವಿಮಾನಗಳಿಗೆ ಸಂಕೇತ ನೀಡಲು ಕೆಂಪು ಮಾರ್ಗಸೂಚಿ ದೀಪಗಳು ಹಾಗೂ ಬಿರುಸಿನ ಗಾಳಿಗೆ ತಡೆಯಬಲ್ಲ 30×45 ಅಡಿ ಗಾತ್ರದ ವಿಶೇಷ ಪಾಲಿಸ್ಟರ್ ಧ್ವಜ ಅಳವಡಿಸಲಾಗಿದೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಧ್ವಜಾರೋಹಣ ನಡೆದಿದ್ದ ಐತಿಹಾಸಿಕ ಬಾವುಟಗುಡ್ಡೆಗೆ ಈ ಧ್ವಜಸ್ತಂಭ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

Scroll to Top