ಕರಾವಳಿ

ಅಡುಗೆ ಮನೆಗೆ ಮಸಾಲೆ ಬಿಸಿ: ದರದಲ್ಲಿ ಭಾರಿ ಜಿಗಿತ!

(ನ್ಯೂಸ್‌ ಕಡಬ) newskadaba.com,  ಜು.27 ಅಕ್ಕಿ, ತುಪ್ಪ ಸೇರಿದಂತೆ ನಿತ್ಯಬಳಕೆಯ ದಿನಸಿ ವಸ್ತುಗಳ ದರ ಏರಿಕೆಯ ಬೆನ್ನಲ್ಲೇ, ಇದೀಗ ಅಡುಗೆಗೆ ಬಳಸುವ ಪ್ರಮುಖ ಮಸಾಲೆ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು, ಕೆಲವು ಮಸಾಲೆ ಬೆಳೆಗಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಸರಬರಾಜು ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಏಲಕ್ಕಿ ದರ ಪ್ರತಿ ಕೆ.ಜಿ.ಗೆ ₹3,800 ರಿಂದ ₹4,300 ಕ್ಕೆ ಏರಿಕೆಯಾಗಿದ್ದರೆ, ಲವಂಗದ ಬೆಲೆ […]

ಅಡುಗೆ ಮನೆಗೆ ಮಸಾಲೆ ಬಿಸಿ: ದರದಲ್ಲಿ ಭಾರಿ ಜಿಗಿತ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರತಿಭಟನೆ ಎಂಬ ಕಾರಣಕ್ಕೇ ಲಾಠಿಚಾರ್ಜ್ ಸರಿಯಲ್ಲ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಜು.27:   ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಆಂದೋಲನ ನಡೆಸುವುದು ಪ್ರಜೆಗಳ ಮೂಲಭೂತ ಹಕ್ಕು. ಕೇವಲ ಪ್ರತಿಭಟನೆ ಎಂಬ ಕಾರಣಕ್ಕಾಗಿಯೇ ಲಾಠಿಚಾರ್ಜ್ ಮಾಡಲು ಬರುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ

ಪ್ರತಿಭಟನೆ ಎಂಬ ಕಾರಣಕ್ಕೇ ಲಾಠಿಚಾರ್ಜ್ ಸರಿಯಲ್ಲ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದಿನ ಚಿನ್ನ, ಬೆಳ್ಳಿ ದರ: ಮತ್ತೆ ದುಬಾರಿಯಾಯ್ತು ಬಂಗಾರ!

(ನ್ಯೂಸ್‌ ಕಡಬ) newskadaba.com,  ಜು.27:   22 ಕ್ಯಾರಟ್‌ ಚಿನ್ನ: ಗ್ರಾಂಗೆ 85 ರೂ. ಏರಿಕೆ ಕಂಡುಬಂದಿದೆ. 1 ಗ್ರಾಂ: ₹13,370,  8 ಗ್ರಾಂ: ₹1,06,960, 10 ಗ್ರಾಂ: ₹1,33,700, 100 ಗ್ರಾಂ: ₹13,37,000 ಕ್ಯಾರಟ್‌ (ಅಪರಂಜಿ) ಚಿನ್ನ: ಗ್ರಾಂಗೆ 96 ರೂ. ಏರಿಕೆಯಾಗಿದೆ. 1 ಗ್ರಾಂ: ₹14,589,  8 ಗ್ರಾಂ: ₹1,16,712 ,10 ಗ್ರಾಂ: ₹1,45,890 , 100 ಗ್ರಾಂ: ₹14,58,900 ಬೆಳ್ಳಿ ದರ ವಿವರ: ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಮುಂದುವರಿದಿದೆ. 1

ಇಂದಿನ ಚಿನ್ನ, ಬೆಳ್ಳಿ ದರ: ಮತ್ತೆ ದುಬಾರಿಯಾಯ್ತು ಬಂಗಾರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಎಕ್ಸ್‌ಪ್ರೆಸ್ ಬಸ್!

(ನ್ಯೂಸ್‌ ಕಡಬ) newskadaba.com,  ಜು.27  : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಸೂರಲ್ಪಾಡಿ ಸಮೀಪ ನಿರ್ಮಾಣ ಹಂತದಲ್ಲಿರುವ ಟೋಲ್ ಪ್ಲಾಜಾ ಬಳಿ ಖಾಸಗಿ ಎಕ್ಸ್‌ಪ್ರೆಸ್ ಬಸ್ಸ್‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಿಮೆಂಟ್ ತಡೆಗೋಡೆಗೆ (ಡಿವೈಡರ್) ಡಿಕ್ಕಿಯಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದು, ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರ್ಕಳದಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್‌ಗೆ ಎದುರಾಗಿ ಏಕಾಏಕಿ ಎಡಭಾಗಕ್ಕೆ ತಿರುಗಿದ ಟಿಪ್ಪರ್ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ನಿಯಂತ್ರಣ ತಪ್ಪಿದೆ. ಅಪಘಾತದ

ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಎಕ್ಸ್‌ಪ್ರೆಸ್ ಬಸ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಣಿಯೂರು ನಕಲಿ ನೋಟು ಜಾಲ: ಆರೋಪಿಗಳ ಬಾಡಿಗೆ ಮನೆ ಮೇಲೂ ಪೊಲೀಸ್ ದಾಳಿ, ಪ್ರಿಂಟರ್-ರಾಸಾಯನಿಕ ಜಪ್ತಿ

(ನ್ಯೂಸ್‌ ಕಡಬ) newskadaba.com,  ಜು.27  : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಪತ್ತೆಯಾದ ನಕಲಿ ನೋಟು ಮುದ್ರಣ ಜಾಲದ ತನಿಖೆ ಮುಂದುವರಿದಿದ್ದು, ಪೊಲೀಸರು ಆರೋಪಿಗಳ ಬಾಡಿಗೆ ಮನೆಗೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.ನ್ಯಾಯಾಲಯದ ಅನುಮತಿ ಪಡೆದ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ತಂಡವು, ತಲೆಮರೆಸಿಕೊಂಡಿರುವ ಅಬ್ದುಲ್ ಶಕೀಲ್ ಮತ್ತು ಬಂಧಿತ ಆರೋಪಿ ಸಂದೀಪ್ ಪುಂಡಲೀಕ್ ಶೋಳಂಬಿ ವಾಸವಾಗಿದ್ದ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲಿನ ಬಾಡಿಗೆ ಮನೆಯಲ್ಲಿ ತಪಾಸಣೆ ನಡೆಸಿದೆ. ಶೋಧದ ವೇಳೆ ಸಂದೀಪ್

ಕಣಿಯೂರು ನಕಲಿ ನೋಟು ಜಾಲ: ಆರೋಪಿಗಳ ಬಾಡಿಗೆ ಮನೆ ಮೇಲೂ ಪೊಲೀಸ್ ದಾಳಿ, ಪ್ರಿಂಟರ್-ರಾಸಾಯನಿಕ ಜಪ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫಿಟ್ನೆಸ್, ವಿಮೆ ಇಲ್ಲದ ವಾಹನದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ: ಕಲ್ಲಡ್ಕ ಶ್ರೀರಾಮ ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆ

(ನ್ಯೂಸ್‌ ಕಡಬ) newskadaba.com,  ಜು.27  ಬಂಟ್ವಾಳ : ತಾಲೂಕಿನ ಬರಿಮಾರ್‌ನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು 6 ವರ್ಷದ ಎಲ್ ಕೆ ಜಿ ವಿದ್ಯಾರ್ಥಿನಿ ಮೃತಪಟ್ಟಿರುವ ಹಾಗೂ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ದುರಂತ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಘಟನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದ ಆಡಳಿತ ಮಂಡಳಿಯ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ವಾಹನಕ್ಕೆ ಅಗತ್ಯವಿರುವ ಫಿಟ್ನೆಸ್

ಫಿಟ್ನೆಸ್, ವಿಮೆ ಇಲ್ಲದ ವಾಹನದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ: ಕಲ್ಲಡ್ಕ ಶ್ರೀರಾಮ ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ: 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ!

(ನ್ಯೂಸ್‌ ಕಡಬ) newskadaba.com,  ಜು.27 : ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರಿಗೆ ಸತತ 3ನೇ ಚಿನ್ನದ ಪದಕವಾಗಿದೆ. ಮಣಿಪುರದ ಕ್ರೀಡಾಪಟು ಚಾನು ಅವರು ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡೂ ವಿಭಾಗಗಳಲ್ಲಿ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ. 85 ಕೆಜಿ (ಕಾಮನ್‌ವೆಲ್ತ್ ಮತ್ತು ಗೇಮ್ಸ್ ದಾಖಲೆ), 

ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ: 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ನಾಪತ್ತೆಯಾಗಿದ್ದ ಮಹಿಳೆ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ, ಪೊಲೀಸ್ ತನಿಖೆ ಚುರುಕು

(ನ್ಯೂಸ್‌ ಕಡಬ) newskadaba.com,  ಜು.27 : ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಪುತ್ತೂರಿನ ಪಡ್ನೂರು ಗ್ರಾಮದ ಅಜೇಯನಗರದ ನಿವಾಸಿಯಾಗಿರುವ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಗ್ರಂಥಪಾಲಕಿ ವಿಜಯಾ ಟಿ. (60) .. ಇವರ ಮೃತದೇಹ ಬಂಟ್ವಾಳ ತಾಲೂಕಿನ ಶಂಭೂರು ಸಮೀಪದ ನೇತ್ರಾವತಿ ನದಿ ಅಣೆಕಟ್ಟಿನಲ್ಲಿ ಶನಿವಾರ ಪತ್ತೆಯಾಗಿದೆ.ಗುರುವಾರ ಬೆಳಿಗ್ಗೆ ಪುತ್ತೂರು ಪಟ್ಟಣಕ್ಕೆ ತೆರಳಿದ್ದ ಇವರು ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ

ಪುತ್ತೂರು: ನಾಪತ್ತೆಯಾಗಿದ್ದ ಮಹಿಳೆ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ, ಪೊಲೀಸ್ ತನಿಖೆ ಚುರುಕು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ

(ನ್ಯೂಸ್‌ ಕಡಬ) newskadaba.com,  ಜು.27  ಕಡಬ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಕಚೇರಿಯಲ್ಲಿ ತಾಲೂಕು ಭಜನಾ ಪರಿಷತ್ತಿನ ವಿಶೇಷ ಸಭೆ ಭಾನುವಾರ ನಡೆಯಿತು.ರಾಜ್ಯ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಭಜನಾ ಪರಿಷತ್ತಿನ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ಭಜನಾ ಪರಿಷತ್ತಿನ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದು, ಕಡಬ ತಾಲೂಕು ಭಜನಾ ಪರಿಷತ್ತು ರಾಜ್ಯದಲ್ಲೇ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪದವಿ, ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ

(ನ್ಯೂಸ್‌ ಕಡಬ) newskadaba.com,  ಜು.27: ಯುವಜನರಲ್ಲಿ ಹೆಚ್‌ಐವಿ ಸೋಂಕು ಹೆಚ್ಚಾಗುತ್ತಿರುವ ಆತಂಕಕಾರಿ ವರದಿಗಳ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಕರ್ನಾಟಕ ಆರೋಗ್ಯ ಇಲಾಖೆ ನಿರ್ಧರಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ವರದಿಗಳ ಪ್ರಕಾರ, ಹೆಚ್‌ಐವಿ ಬಾಧಿತರ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 2.60 ಲಕ್ಷ ಸೋಂಕಿತರಿದ್ದು, ಅದರಲ್ಲಿ 54,000 ಮಂದಿಗೆ ತಮಗೆ ಸೋಂಕು ತಗಲಿರುವುದರ ಬಗ್ಗೆ ಅರಿವೇ ಇಲ್ಲ.18ರಿಂದ 35 ವರ್ಷದ ಯುವ

ಪದವಿ, ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top