ಕರಾವಳಿ

ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

(ನ್ಯೂಸ್‌ ಕಡಬ) newskadaba.com,  ಅ.04 : ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರ ವಿರುದ್ಧ ಶತ್ರು ದೇಶದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮೇ.7 ರಂದು ಆಪರೇಷನ್‌ ಸಿಂಧೂರ ಎನ್ನುವ ಕಾರ್ಯಾಚರಣೆ ನಡೆಸಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಸಂಪೂರ್ಣ ನಾಶಗೊಳಿಸಿತ್ತು. ಈ ಘಟನೆ ನಂತರ ಉಭಯ ದೇಶಗಳ ನಡುವೆ ವಿಷಮ ಸ್ಥಿತಿ ಇದೆ. ಹೀಗಿರುವಾಗಲೂ ಪಾಕಿಸ್ತಾನದ ಕುಟಂಬವೊಂದು ಭಾರತೀಯ ರಾಷ್ಟ್ರಗೀತೆ ಹಾಡಿದ ವಿಡಿಯೊವೊಂದು […]

ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ! Read More »

ಕರಾವಳಿ

“ಹಸಿರು ನಡಿಗೆ ಸ್ವಚ್ಛತೆಯೆಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರವಾರದಿಂದ ಮಂಗಳೂರಿನವರೆಗೆ 300 ಕಿ.ಮೀ ಪಾದಯಾತ್ರೆ ಪೂರ್ಣಗೊಳಿಸಿದ ನಾಗರಾಜ್ ಬಜಾಲ್

(ನ್ಯೂಸ್ ಕಡಬ) newskadaba.com, ಅ.05: “ಹಸಿರು ನಡಿಗೆ – ಪ್ರತಿ ಹೆಜ್ಜೆ ಸ್ವಚ್ಛತೆಯೆಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾರವಾರದಿಂದ ಮಂಗಳೂರಿನವರೆಗೆ ಏಕಾಂಗಿಯಾಗಿ ಪಾದಯಾತ್ರೆ ನಡೆಸಿದ ಹಸಿರು ದಳದ ಪರಿಸರ ಪ್ರೇಮಿ ನಾಗರಾಜ್ ಬಜಾಲ್ ಇದೀಗ ಮಂಗಳೂರಿಗೆ ತಲುಪಿದ್ದಾರೆ. ಉಳ್ಳಾಲ ನೇತ್ರಾವತಿ ಸೇತುವೆ ಮತ್ತು ಅಡ್ಯಾರ್ ಪ್ರದೇಶದಲ್ಲಿ “ಎಲ್ಲೆಂದರಲ್ಲಿ ಕಸ ಎಸೆಯಬೇಡಿ” ಎಂಬ ಫ್ಲೆಕ್ಸ್ ಕಾರ್ಡ್ ಹಿಡಿದು ಏಕಾಂಗಿಯಾಗಿ ನಿಂತು ಹಿಂದೆ ಗಮನ ಸೆಳೆದಿದ್ದ ನಾಗರಾಜ್ ಬಜಾಲ್,

“ಹಸಿರು ನಡಿಗೆ ಸ್ವಚ್ಛತೆಯೆಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರವಾರದಿಂದ ಮಂಗಳೂರಿನವರೆಗೆ 300 ಕಿ.ಮೀ ಪಾದಯಾತ್ರೆ ಪೂರ್ಣಗೊಳಿಸಿದ ನಾಗರಾಜ್ ಬಜಾಲ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪುತ್ತೂರಿನಲ್ಲಿ ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ ಚಂದ್ರಪ್ರಭಾ ಗೌಡ!

(ನ್ಯೂಸ್‌ ಕಡಬ) newskadaba.com,  ಅ.04 ಪುತ್ತೂರು: ನಗರದಲ್ಲೊಂದು ಭೀಕರ ಅಪಘಾತ, ನಜ್ಜುಗುಜ್ಜಾದ ಆಟೋ ರಿಕ್ಷಾ, ಗಂಭೀರ ಗಾಯಗೊಂಡ ಆರು ಜನ. ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ್ರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿತ್ತು. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ ನಜ್ಜುಗುಜ್ಜಾಗಿ ಒಳಗಿದ್ದ ಕೆಲವರು ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಮಾತೃಹೃದಯದ ಮಹಾತ್ಕಾರ್ಯಕ್ಕೆ ಜನರು ಶಾಭಾಶ್‌ ಎನ್ನುತ್ತಿದ್ದಾರೆ.. ಘಟನೆ : ಅ.31ರಂದು ಶುಕ್ರವಾರ ಸಂಜೆ 4.30ಕ್ಕೆ ಪುತ್ತೂರು ಹೊರವಲಯದ ಪರ್ಪುಂಜ ಬಳಿ ರಿಕ್ಷಾ-

ಪುತ್ತೂರಿನಲ್ಲಿ ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ ಚಂದ್ರಪ್ರಭಾ ಗೌಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಕಾಪು ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ಪತ್ನಿ ಭೇಟಿ

(ನ್ಯೂಸ್‌ ಕಡಬ) newskadaba.com,  ನ.03: ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ (Devisha Shetty) ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತುಅಭಿವೃದ್ಧಿ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು. ದೇವಸ್ಥಾನದ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ ಕೊಟ್ಟಿದ್ದರು. ಆ ಕಂಬದ ಮುಂದೆ ದೇವಿಶಾ

ಉಡುಪಿ: ಕಾಪು ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ಪತ್ನಿ ಭೇಟಿ Read More »

ಕರಾವಳಿ, ಕರ್ನಾಟಕ

ಕಡಬ | ಮೀನು ಮಾರಾಟ ವಿಚಾರದಲ್ಲಿ ಹೊಡೆದಾಟ: ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.03 ಕಡಬ: ಮೀನು ಮಾರಾಟದ ವಿಚಾರವಾಗಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ. ಈ ಬಗ್ಗೆ ವೈರಲ್ ವೀಡಿಯೊ ಆಧರಿಸಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತೆಕಟ್ಟೆ ಬಳಿಯ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮೀನು ಮಾರಾಟದ ವಿಚಾರವಾಗಿ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಹೊಡೆದಾಟದ

ಕಡಬ | ಮೀನು ಮಾರಾಟ ವಿಚಾರದಲ್ಲಿ ಹೊಡೆದಾಟ: ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳ: ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ

(ನ್ಯೂಸ್‌ ಕಡಬ) newskadaba.com,  ನ.03: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಸಮೀಪ ಇಬ್ಬರು ರೈತರನ್ನು ಬಲಿ ಪಡೆದಿದ್ದ ಕಾಡಾನೆಯನ್ನು, ಅರಣ್ಯ ಇಲಾಖೆಯು ಎರಡು ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಕೊನೆಗೂ ಸೆರೆಹಿಡಿಯಲಾಗಿದೆ. ಈ ಆನೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಭಗವತಿ ಶಿಬಿರದ ಸಮೀಪದ ಅರಣ್ಯದಲ್ಲಿ ಅಡಗಿತ್ತು. ಮಂಗಳೂರು ಅರಣ್ಯ ವಿಭಾಗ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಬೃಹತ್ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗು ಜಿಲ್ಲೆಯ ದುಬಾರೆ ಮತ್ತು

ಕಾರ್ಕಳ: ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ Read More »

ಕರಾವಳಿ, ಕರ್ನಾಟಕ

ಪುತ್ತೂರು| ಕಾರು-ಆಟೋ ನಡುವೆ ಭೀಕರ ಅಪಘಾತ: ನಾಲ್ಕೂವರೆ ವರ್ಷದ ಮಗು ಸಹಿತ ಇಬ್ಬರು ಸಾವು

(ನ್ಯೂಸ್‌ ಕಡಬ) newskadaba.com,  ನ.03 ಪುತ್ತೂರು : ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿಯಲ್ಲಿ ಶನಿವಾರ(ನ.01)  ಸಂಜೆ ಕಾರು ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ರಾತ್ರಿ ಮಗುವಿನ ಅಜ್ಜಿ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬನ್ನೂರು ನಿವಾಸಿ ಹನೀಫ್ ಅವರ ಮಗಳು ಶಾಝ್ವಾ ಫಾತಿಮಾ (4 ವರ್ಷ 6 ತಿಂಗಳು) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು

ಪುತ್ತೂರು| ಕಾರು-ಆಟೋ ನಡುವೆ ಭೀಕರ ಅಪಘಾತ: ನಾಲ್ಕೂವರೆ ವರ್ಷದ ಮಗು ಸಹಿತ ಇಬ್ಬರು ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ದಾಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ

(ನ್ಯೂಸ್‌ ಕಡಬ) newskadaba.com,  ನ.01 : ಅಕ್ಟೋಬರ್ 29 ರಂದು ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಪ್ರತಿದಿನ ರಾತ್ರಿ 7:30 ರ ಸುಮಾರಿಗೆ ನಿಲ್ದಾಣ ತಲುಪಬೇಕಿತ್ತು.ದಿನನಿತ್ಯದಂತೆ ಕಾಣಿಯೂರು ನಿಲ್ದಾಣಕ್ಕೆ ಆಗಮಿಸಬೇಕಿದ್ದ ರೈಲನ್ನು, ಲೋಕೋ ಪೈಲಟ್ (ಚಾಲಕ) ಅತಿಯಾದ ವೇಗದಲ್ಲಿ ಚಲಾಯಿಸಿದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಅನ್ನು ದಾಟಿ, ನಿಲ್ದಾಣದ ಆಚೆ ಭಾಗದಲ್ಲಿ ನಿಂತಿತು. ರೈಲು ಸರಿಯಾದ ಸ್ಥಳದಲ್ಲಿ ನಿಲ್ಲದ ಕಾರಣ, ರೈಲಿನಿಂದ ಇಳಿಯಬೇಕಿದ್ದ ಪ್ರಯಾಣಿಕರು ತೀವ್ರ ಅನಾನುಕೂಲಕ್ಕೆ ಒಳಗಾದರು. ಮುಖ್ಯವಾಗಿ ರಾತ್ರಿಯ ಸಮಯವಾಗಿದ್ದರಿಂದ,

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ದಾಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್ಐಎ

(ನ್ಯೂಸ್‌ ಕಡಬ) newskadaba.com,  ಅ..31: ಬರ್ಬರವಾಗಿ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967, ಭಾರತೀಯ ನ್ಯಾಯಸಂಹಿತಾ 2023 ಮತ್ತು ಶಸಾ್ತ್ರಸ್ತ್ರ ಕಾಯಿದೆ, 1959ರ ವಿವಿಧ ವಿಭಾಗಗಳಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 2025ರ ಮೇ ತಿಂಗಳಿನಲ್ಲಿ ಸುಹಾಸ್‌‍ ಶೆಟ್ಟಿಯನ್ನು ಮಾರಕಾಯುಧಗಳಿಂದ ಶಸ್ತ್ರಸಜ್ಜಿತವಾದ ಏಳು ಮಂದಿ ಬರ್ಭರವಾಗಿ ಹತ್ಯೆ ಮಾಡಿದ್ದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್ಐಎ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳದ ಪಾಣೆಮಂಗಳೂರು ಬಳಿ ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ

(ನ್ಯೂಸ್‌ ಕಡಬ) newskadaba.com,  ಅ. 31 ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಆಟೋ ರಿಕ್ಷಾವನ್ನು ನಿಲ್ಲಿಸಿ ಕಾಣೆಯಾಗಿದ್ದ ಚಾಲಕನ ಮೃತದೇಹ ಗುರುವಾರ ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ ಮೃತರನ್ನು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ, ಪೀಟರ್ ಲೋಬೋ (52) ಎಂದು ಗುರುತಿಸಲಾಗಿದೆ.ಪೀಟರ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು ಮತ್ತು ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಾನು ಯಾರನ್ನು ಅವಲಂಬಿಸುವಂತೆ ಆಗಬಾರದೆಂದು ತೀರ್ಮಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೀಟರ್ ಲೋಬೋ ಅವರ ಪತ್ನಿ ಅನಿತಾ ಲೋಬೊ

ಬಂಟ್ವಾಳದ ಪಾಣೆಮಂಗಳೂರು ಬಳಿ ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top