ಕರಾವಳಿ

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ

(ನ್ಯೂಸ್ ಕಡಬ) newskadaba.com ಕಡಬ, ಜು.28. ಮರ್ದಾಳದಿಂದ ಕೊಣಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಸದಾಗಿ ಅಳವಡಿಸಿರುವ ಮೈಲುಗಲ್ಲಿನಲ್ಲಿ ಕಿ.ಮೀ. ನಮೂದಿಸುವಾಗ ಎಡವಟ್ಟು ಮಾಡಲಾಗಿದೆ. ಮರ್ದಾಳ-ಕೊಣಾಜೆ ರಸ್ತೆಯು “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ ಬ್ರಾಂತಿಕಟ್ಟೆಯಿಂದ ಸುಳ್ಯ ತನಕ ಡಾಮರೀಕರಣಗೊಂಡಿದ್ದು ಇದೀಗ ನೂತನವಾಗಿ ಅಳವಡಿಸಲಾದ ಮೈಲುಗಲ್ಲು ತಪ್ಪು ಮಾಹಿತಿ ನೀಡುವಂತಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕೊಣಾಜೆ ರಸ್ತೆಗೆ ತಿರುಗುವಲ್ಲಿ ಐತ್ತೂರು 3 ಕಿ.ಮೀ. ಎಂದು ಬರೆಯಲಾಗಿದೆ. ಅಲ್ಲಿ ಬೆತ್ತೋಡಿ 3. ಕಿ.ಮೀ ಎಂದಾಗಬೇಕು ಹಾಗೂ ಸುಳ್ಯ ಸಮೀಪ ಐತ್ತೂರು 3. ಕಿ.ಮೀ […]

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ Read More »

ಕರಾವಳಿ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜು.28. ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಯ ಗಾಣದಕೊಟ್ಟಿಗೆ ಎಂಬಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಸ್ವಹಿತಕ್ಕಾಗಿ ತಡೆಹಿಡಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತು ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿ ಗಾಣದಕೊಟ್ಟಿಗೆ ನಿವಾಸಿಗಳು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಅವರಿಗೆ ಲಿಖಿತ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಿಯಾಡಳಿತ ಅಧೀನದ ಈ ರಸ್ತೆಯನ್ನು ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಉಪಯೋಗಿಸುತ್ತಿವೆ. ಈ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು Read More »

ಕರಾವಳಿ

ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾ.ಪಂ. ನೌಕರರಿಂದ ಧನ ಸಹಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.28. ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್‍ನಲ್ಲಿ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಪುಷ್ಪಾವತಿ ಎಂಬಾಕೆಯು ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು 10 ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬು ಗರ್ಭಿಣಿಯಾಗಿದ್ದ ಅವರಿಗೆ ವಾರದ ಹಿಂದೆ ವಿಪರೀತ ಜ್ವರ ಬಂದ ಕಾರಣ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದು ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಹಾಗೂ ಪುಷ್ಪಾವತಿಯವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಲಾಗಿತ್ತು. ರಾಜ್ಯ ಸರಕಾರದ ಪಂಚಾಯತ್

ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾ.ಪಂ. ನೌಕರರಿಂದ ಧನ ಸಹಾಯ Read More »

ಕರಾವಳಿ

ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಳಿನೆಲೆ ವಲಯದ ವತಿಯಿಂದ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು.28. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿಳಿನೆಲೆ ವಲಯದ, 102ನೇ ನೆಕ್ಕಿಲಾಡಿ ಓಕ್ಕೂಟದ ವತಿಯಿಂದ ಶ್ರಿ ಕ್ಷೇತ್ರ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನ ಹೊಸಮ್ಮ ದೇವಿ ಹಾಗೂ ಪರಿವಾರ ದೈವಸ್ಥಾನದಲ್ಲಿ ವನವಹೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಳಿನೆಲೆ ವಲಯ ಮೆಲ್ವಿಚಾರಕರಾದ ರಾಜು ಗೌಡ, ಬಿಳಿನೆಲೆ ಪ್ರಗತಿ ಬಂದು, ಸ್ವಸಹಾಯ ಸಂಘಗಳ ವಲಯಾಧ್ಯಕ್ಷರಾದ ಭವಾನಿ ಶಂಕರ್ ಬಿ., ಸೇವಾ ಪ್ರತಿನಿಧಿ ಸತಿಶ್.ಎ., ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಕೆದಿಲಾಯ,

ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಳಿನೆಲೆ ವಲಯದ ವತಿಯಿಂದ ವನ ಮಹೋತ್ಸವ Read More »

ಕರಾವಳಿ

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 27. ಬೈಕ್ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಗರದ ನಂತೂರ್ ಜಂಕ್ಷನ್‍ನಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಮಂಗಳೂರಿನಲ್ಲಿ ಸಹಕಾರ ಇಲಾಖೆಯಲ್ಲಿ ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿರುವ  ಮಹೇಶ್ವರಪ್ಪ ಎಂಬವರ ಏಕೈಕ ಪುತ್ರಿ ನಗರದ ಪ.ಪೂ.ಕಾಲೇಜೊಂದರ ದ್ವಿತೀಯ ವರ್ಷದ ವಿದ್ಯಾರ್ಥಿನಿ ಬಿಂದು (18) ಎಂದು ಗುರುತಿಸಲಾಗಿದೆ. ಈ ಕೆ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದ್ದು, ಬಿಂದು ತೀವ್ರ

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆಯ ಸುತ್ತ ಸಂಶಯದ ಹುತ್ತ ► ಕಾವ್ಯಳನ್ನು ಕೊಲೆ ಮಾಡಲಾಗಿದೆಯೆಂದು ಆರೋಪಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜು.27. ನ್ಯಾಶನಲ್ ಲೆವಲ್ ಬ್ಯಾಡ್ಮಿಂಟನ್ ಚಾಂಪಿಯನ್ ವಿದ್ಯಾರ್ಥಿನಿಯೊಬ್ಬಳು ವಾರದ ಹಿಂದೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಹೊಸ ತಿರುವನ್ನು ಪಡೆದುಕೊಂಡಿದೆ. ಇದು ಆತ್ಮಹತ್ಯೆಯಲ್ಲ ಇದು ಒಂದು ಕೊಲೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ. ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಳೆ ಎಂದು ಶಾಲೆಯಿಂದ ಮನೆಯವರಿಗೆ ತಿಳಿಸಲಾಗಿತ್ತು. ಆದರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇದೀಗ ಹೆತ್ತವರು ಕಾವ್ಯ

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆಯ ಸುತ್ತ ಸಂಶಯದ ಹುತ್ತ ► ಕಾವ್ಯಳನ್ನು ಕೊಲೆ ಮಾಡಲಾಗಿದೆಯೆಂದು ಆರೋಪಿಸಿದ ಪೋಷಕರು Read More »

ಕರಾವಳಿ

ಕೋಡಿಂಬಾಳ: ಮರ ಬಿದ್ದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇಲ್ಲಿಗೆ ಸಮೀಪದ ಕೋಡಿಂಬಾಳ ಎಂಬಲ್ಲಿ ಮನೆಯ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾನಿಯಾದ ಘಟನೆ ಗುರುವಾರದಂದು ನಡೆದಿದೆ. ಕೋಡಿಂಬಾಳ ಪೆಲತ್ತೋಡಿ ನಿವಾಸಿ ಭವಾನಿ ಎಂಬವರ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಗೇರು ಮರ ಬಿದ್ದ ಪರಿಣಾಮ ಮೇಲ್ಚಾವಣಿ ಕುಸಿದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಪಾರ ನಷ್ಟವುಂಟಾಗಿದೆ ಎಂದು ತಿಳಿದುಬಂದಿದೆ.

ಕೋಡಿಂಬಾಳ: ಮರ ಬಿದ್ದು ಮನೆಗೆ ಹಾನಿ Read More »

ಕರಾವಳಿ

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಕಡಬದಿಂದ ಕೊಣಾಜೆಗೆ ತೆರಳುವ ಸರಕಾರಿ ಬಸ್ಸನ್ನು ಸ್ಥಗಿತಗೊಳಿಸಿ ಹಠಾತ್ತನೆ ಪುತ್ತೂರಿಗೆ ಕಳುಹಿಸಿದರ ಪರಿಣಾಮ ವಿದ್ಯಾರ್ಥಿಗಳು ವಾಹನ ಸೌಕರ್ಯವಿಲ್ಲದೆ ಕಂಗೆಟ್ಟು ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಗುರುವಾರ ಸಂಜೆ ನಡೆಯಿತು. ನಾಗರ ಪಂಚಮಿ ಆದುದರಿಂದ ಶಾಲೆಗಳಿಗೆ ರಜೆಯಿರಬಹುದೆಂದು ಭಾವಿಸಿ ಸುಬ್ರಹ್ಮಣ್ಯದಿಂದ ಕಡಬಕ್ಕೆ ಆಗಮಿಸಿ ಕೊಣಾಜೆಗೆ ತೆರಳಬೇಕಿದ್ದ ಬಸ್ಸಿನ ಚಾಲಕ – ನಿರ್ವಾಹಕರು ನೇರವಾಗಿ ಪುತ್ತೂರಿಗೆ ತೆರಳುವ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದರು. ಹಠಾತ್ತನೆ ಬಸ್ ಸ್ಥಗಿತಗೊಳಿಸಿದ್ದರಿಂದಾಗಿ ಆತಂಕಗೊಂಡ ವಿದ್ಯಾರ್ಥಿಗಳು

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ Read More »

ಕರಾವಳಿ

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.27. ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿಯನ್ನು ಕಡಬ ಪೊಲೀಸರು ಫೋಕ್ಸೋ ಕಾಯ್ದೆಯಡಿ ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಆರೋಪಿಯನ್ನು 102ನೇ ನೆಕ್ಕಿಲಾಡಿ ಗ್ರಾಮದ ಸಾಲೆತ್ತಡ್ಕ ನಿವಾಸಿ ಅಂದ್ರು ಎಂಬವರ ಪುತ್ರ ಯಶು ಯಾನೆ ಯಶೋಧರ ಎಂದು ಗುರುತಿಸಲಾಗಿದ್ದು, ಈತ ಎಪ್ರಿಲ್ ತಿಂಗಳಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ‌. ಪ್ರಸಕ್ತ ವರ್ಷದಲ್ಲಿ ಶಾಲೆಗೆ ತೆರಳಿದ ವಿದ್ಯಾರ್ಥಿನಿ ಮಂಕಾಗಿರುವುದನ್ನು ಕಂಡು ವಿಚಾರಿಸಿದ ಶಿಕ್ಷಕಿ

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ Read More »

ಕರಾವಳಿ

ಸುಳ್ಯ: ವ್ಯಕ್ತಿಯ ಕಲ್ಲಿನಿಂದ ಜಜ್ಜಿ ಕೊಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು.27. ಅಪರಿಚಿತ ವ್ಯಕ್ತಿಯೋರ್ವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರದಂದು ಬೆಳಕಿಗೆ ಬಂದಿದೆ. ಸುಳ್ಯದ ಪಾಲುಬಿದ್ದ ಕಟ್ಟಡವೊಂದರಲ್ಲಿ ಮಲಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಸ್ಥಿತಿಯಲ್ಲಿ ಕಂಡು ಬಂದಿದೆ. ಬುಧವಾರ ರಾತ್ರಿ ಮಲಗಿದ್ದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ನೀರಿನ ಬಾಟಲ್ ಹಾಗೂ ತಿನ್ನಲೆಂದು ಬೇಕರಿಯಿಂದ ತಂದಿದ್ದ ಶ್ಯಾವಿಗೆಯ ಪ್ಯಾಕೆಟನ್ನು ತೆರೆದ ಸ್ಥಿತಿಯಲ್ಲಿ ಇಡಲಾಗಿದ್ದು, ಯಾವ ಉದ್ದೇಶಕ್ಕಾಗಿ ಕೊಲೆಗೈಯಲಾಗಿದೆ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ

ಸುಳ್ಯ: ವ್ಯಕ್ತಿಯ ಕಲ್ಲಿನಿಂದ ಜಜ್ಜಿ ಕೊಲೆ Read More »

ಕರಾವಳಿ
Scroll to Top