ಕರಾವಳಿ

ಅಂಬ್ಯುಲೆನ್ಸಿಗೆ ದಾರಿ ಬಿಡದೆ ಅಡಚಣೆ: ಬಂಟ್ವಾಳದಲ್ಲಿ ಬೈಕ್ ಸವಾರನ ವಿರುದ್ಧ ಬಂಧನ

(ನ್ಯೂಸ್‌ ಕಡಬ) newskadaba.com,  ಅ. 31 ಬಂಟ್ವಾಳ: ಅಪಘಾತದ ಗಾಯಾಳುಗಳನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಘಟನೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್.ಜಿ. ಸರ್ಕಲ್ ಬಳಿ ನಡೆದಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 30, 2025 ರಂದು ಬಿಸಿಲೆ ಘಾಟ್ನಲ್ಲಿ ಸಂಭವಿಸಿದ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ತುರ್ತು ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. KA-22-C-1382 ನಂಬರಿನ ಅಂಬ್ಯುಲೆನ್ಸ್ ಪುತ್ತೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದಾಗ ಮಧ್ಯಾಹ್ನ ಸುಮಾರು […]

ಅಂಬ್ಯುಲೆನ್ಸಿಗೆ ದಾರಿ ಬಿಡದೆ ಅಡಚಣೆ: ಬಂಟ್ವಾಳದಲ್ಲಿ ಬೈಕ್ ಸವಾರನ ವಿರುದ್ಧ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಪ್ರಭಾಕರ್ ಭಟ್ ವಿರುದ್ಧದ ದ್ವೇಷ ಭಾಷಣ ಪ್ರಕರಣ- ವಿಚಾರಣೆ ನ. 4 ಕ್ಕೆ ಮುಂದೂಡಿಕೆ

(ನ್ಯೂಸ್‌ ಕಡಬ) newskadaba.com,  ಅ..30: ಬೆಂಗಳೂರು: ಪ್ರಚೋದನಕಾರಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಆರ್‌ಎಸ್‌ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರಿಗೆ ಮತ್ತೊಮ್ಮೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಅವರ ವಿರುದ್ಧ ಬಂಧನ ಸೇರಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಹಿಂದೆ ನಿರ್ದೇಶಿಸಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶವನ್ನು ಎತ್ತಿಹಿಡಿದು ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಿದೆ. ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20

ಪುತ್ತೂರು: ಪ್ರಭಾಕರ್ ಭಟ್ ವಿರುದ್ಧದ ದ್ವೇಷ ಭಾಷಣ ಪ್ರಕರಣ- ವಿಚಾರಣೆ ನ. 4 ಕ್ಕೆ ಮುಂದೂಡಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಇಪಿಎಫ್‌ಒ ತಂದ ಹೊಸ ನಿಯಮ; ಕನಿಷ್ಠ ಒಂದು ತಿಂಗಳ ಕಾಲ ಕೆಲಸ ಮಾಡಿದರೂ ಪಿಂಚಣಿ

(ನ್ಯೂಸ್‌ ಕಡಬ) newskadaba.com,  ಅ.30 ನೌಕರರ ಭವಿಷ್ಯ ನಿಧಿ ಸಂಸ್ಥೆ ನೌಕರರ ಪಿಂಚಣಿ ಯೋಜನೆಯ  ನಿಯಮಗಳಲ್ಲಿ ಐತಿಹಾಸಿಕ ಬದಲಾವಣೆಯನ್ನು ಮಾಡಿದೆ. ಈಗ, ಉದ್ಯೋಗಿ ಆರು ತಿಂಗಳ ಮೊದಲು ತಮ್ಮ ಕೆಲಸವನ್ನು ತೊರೆದರೂ ಪಿಂಚಣಿಯಿಂದ ವಂಚಿತರಾಗುವುದಿಲ್ಲ. ಹೊಸ ವ್ಯವಸ್ಥೆಯಡಿಯಲ್ಲಿ, ಕನಿಷ್ಠ ಒಂದು ತಿಂಗಳ ಕಾಲ ಕೆಲಸ ಮಾಡಿದರೂ ಪಿಂಚಣಿ ಪಡೆಯಬಹುದು. ಹಿಂದೆ, ಇಪಿಎಸ್‌ನಲ್ಲಿ ಆರು ತಿಂಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದವರನ್ನು “ಶೂನ್ಯ ಪೂರ್ಣಗೊಂಡ ವರ್ಷಗಳು” ಎಂದು ಪರಿಗಣಿಸಲಾಗುತ್ತಿತ್ತು. ಇದರರ್ಥ ಐದು ತಿಂಗಳ ನಂತರ ರಾಜೀನಾಮೆ ನೀಡಿದ ಉದ್ಯೋಗಿಗಳು ತಮ್ಮ ಪಿಂಚಣಿಯಿಂದ ವಂಚಿತರಾಗುತ್ತಿದ್ದರು.

ಇಪಿಎಫ್‌ಒ ತಂದ ಹೊಸ ನಿಯಮ; ಕನಿಷ್ಠ ಒಂದು ತಿಂಗಳ ಕಾಲ ಕೆಲಸ ಮಾಡಿದರೂ ಪಿಂಚಣಿ Read More »

ಕರಾವಳಿ

ನ. 28 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ

(ನ್ಯೂಸ್‌ ಕಡಬ) newskadaba.com,  ಅ.30 ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು(ಶುಕ್ರವಾರ) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ . ಮಧ್ಯಾಹ್ನ 12 ಗಂಟೆಗೆ ಶ್ರೀ ಕೃಷ್ಣಮಠಕ್ಕೆ ಆಗಮಿಸಲಿರುವ ಅವರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.ಗೀತಾ ಜಯಂತಿ ಯ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಲಿರುವ “ಲಕ್ಷ ಕಂಠ ಗೀತಾ ಪಾರಾಯಣ-

ನ. 28 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಳಲು ವಾದನದೊಂದಿಗೆ ಬ್ಯಾಕ್ ಸ್ಟ್ರೋಕ್ ಸ್ವಿಮ್ – ದಾಖಲೆ ಬರೆದ ಸಂಗೀತ ಶಿಕ್ಷಕ ರುಬೆನ್ ಜೇಸನ್ ಮಚಾದೊ

(ನ್ಯೂಸ್‌ ಕಡಬ) newskadaba.com,  ಅ.30 ಮಂಗಳೂರು: ಸಂಗೀತ ಶಿಕ್ಷಕ ರುಬೆನ್ ಜೇಸನ್ ಮಚಾದೊ ಅವರು ಮಂಗಳೂರಿನ ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಈಜು ಕೊಳದಲ್ಲಿ ಕೊಳಲನ್ನು ನುಡಿಸುತ್ತಾ ಸುಮಾರು 700 ಮೀಟರ್‌ಗೂ ಅಧಿಕ ದೂರವನ್ನು ಹಿಂದಕ್ಕೆ ಈಜುತ್ತಾ ಸಾಗುವ ಮೂಲಕ ಬ್ಯಾಕ್ ಸ್ಟ್ರೋಕ್ ಸ್ವಿಮ್‌ ಮಾಡುವ ಗೋಲ್ಡನ್ ಬುಕ್ ಆಫ್ ವರ್ಲ್ಡ್ ದಾಖಲೆ ಬರೆದಿದ್ದಾರೆ. 29ರ ಹರೆಯದ ಸಂಗೀತಗಾರ ಮಚಾದೊ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಕೊಳಲು ವಾದನದೊಂದಿಗೆ ಈಜು ಆರಂಭಿಸಿ 5 ಸುತ್ತು

ಕೊಳಲು ವಾದನದೊಂದಿಗೆ ಬ್ಯಾಕ್ ಸ್ಟ್ರೋಕ್ ಸ್ವಿಮ್ – ದಾಖಲೆ ಬರೆದ ಸಂಗೀತ ಶಿಕ್ಷಕ ರುಬೆನ್ ಜೇಸನ್ ಮಚಾದೊ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಅ..30: ರಾಜ್ಯದಲ್ಲಿ ಅ.30ರಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ

ಇಂದಿನ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಲಂಡನ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ – ಇಬ್ಬರ ಬಂಧನ

(ನ್ಯೂಸ್‌ ಕಡಬ) newskadaba.com,  ಅ..30: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ಹಲವಾರು ಮಂದಿ ಯನ್ನು ನಂಬಿಸಿ ಅವರಿಂದ ಹಣವನ್ನು ಪಡೆದುಕೊಂಡು ಬಳಿಕ ಉದ್ಯೋಗ ಕೊಡಿಸದೆ ವಂಚಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರ್ರಕೃತಿ ಯು (34) ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ 1

ಮಂಗಳೂರು : ಲಂಡನ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ – ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಮದುವೆ ವಾಹನ ಪಲ್ಟಿ 22 ಕ್ಕೂ ಅಧಿಕ ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು

(ನ್ಯೂಸ್‌ ಕಡಬ) newskadaba.com,  ಅ.30 ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದ ಸಭಾಭವನದಲ್ಲಿ ನಡೆಯಬೇಕಿದ್ದ ವಿವಾಹ ಸಮಾರಂಭಕ್ಕೆ ಆಗಮಿಸುತ್ತಿದ್ದ ಮದುವೆ ವಾಹನವೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ, ವ್ಯಾನ್‌ನಲ್ಲಿದ್ದ ಹಲವು ಮಂದಿಗೆ ಗಂಭೀರ ಗಾಯಗಳಾದ ಘಟನೆ ಇಂದು ವರದಿಯಾಗಿದೆ. ಘಟನೆ ಬಿಲ್ಲೆ ತಿರುವು ಎಂಬ ಪ್ರದೇಶದಲ್ಲಿ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ಅಪಘಾತಕ್ಕೀಡಾದ ವಾಹನವು ಕೂಡುರಸ್ತೆ ವನಗೂರುನ ಯುವಕ ಹಾಗೂ ಏನೆಕಲ್ಲಿನ ವಧುವಿನ ಮದುವೆಗೆ ವರನ ಕಡೆಯವರನ್ನು ಹೊತ್ತು ತರುತ್ತಿತ್ತು ಎನ್ನಲಾಗಿದೆ.

ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಮದುವೆ ವಾಹನ ಪಲ್ಟಿ 22 ಕ್ಕೂ ಅಧಿಕ ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ ಶ್ರೀಕೃಷ್ಣ ಸನ್ನಿಧಾನಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್‌ ಕಡಬ) newskadaba.com,  ಅ..29: ಉಡುಪಿ: ಕನಕದಾಸರಿಗೆ ಶ್ರೀಕೃಷ್ಣನೊಲಿದ ದಿವ್ಯ ತಾಣ, ಕರ್ನಾಟಕ ಕರಾವಳಿಯ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠ ಪ್ರವೇಶಿಸಿ, ಪೊಡವಿಯೊಡೆಯ ಶ್ರೀಕೃಷ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಸ್ವಾಗತಕ್ಕೆ ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದು, ಶಿಸ್ತು ಬದ್ದ ಭದ್ರತೆಯ ತಯಾರಿಯನ್ನುಈಗಾಗಲೇ ಪೊಲೀಸ್ ವ್ಯವಸ್ಥೆ ನಡೆಸುತ್ತಿದೆ ಎನ್ನುವ ವಿಷಯ ತಿಳಿದು ಬಂದಿದೆ. ಮೋದಿ ಅವರ ಈ

ಉಡುಪಿ ಶ್ರೀಕೃಷ್ಣ ಸನ್ನಿಧಾನಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳದ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಅ.29 ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು , ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ತಕ್ತವಾಗಿದೆ. ಮಾರ್ನಬೈಲು ನಿವಾಸಿ ಪ್ರೀತಂ ಲೋಬೋ ಎಂಬವರು ಕಾಣೆಯಾಗಿರುವ ವ್ಯಕ್ತಿ. ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ತನ್ನ ಬ್ಯಾಟರಿ ಚಾಲಿತ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ರಿಕ್ಷಾದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಂಟ್ವಾಳದ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಣ್ಮರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top