ಕರಾವಳಿ

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಜು.01. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದುದರ ಪರಿಣಾಮ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕಾರು ಢಿಕ್ಕಿ ಹೊಡೆದು ಚರಂಡಿಗೆ ಇಳಿದರೂ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.bi

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ Read More »

ಕರಾವಳಿ

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.30. ಇಲ್ಲಿಗೆ ಸಮೀಪದ ಕರಾಯದ ಕಲ್ಲೇರಿ ಎಂಬಲ್ಲಿ ಕಾರು ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಕಡಬದ ವ್ಯಕ್ತಿ ಓರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ. ಗಾಯಾಳುವನ್ನು ಕಡಬದ ಕಳಾರ ನಿವಾಸಿ ಸಾಯಿಪ್ರಸಾದ್ ಪೈ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ Read More »

ಕರಾವಳಿ

ಜಿಲ್ಲೆಯಲ್ಲಿ ಮತ್ತೆ ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು, ಜೂ.30. ಕಳೆದ ಹಲವಾರು ದಿನಗಳಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂ.30 ನೇ ಮಂಗಳವಾರ ಮಧ್ಯರಾತ್ರಿ 12.00 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಪ್ರಸ್ತಾವನೆಯಂತೆ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಆದೇಶಿಸಿದ್ದರು. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಜು.02 ರವರೆಗೆ ನಿಷೇಧಾಜ್ಞೆಯನ್ನು ಮುಂದುವರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ರವರು ಮಂಗಳವಾರ ಆದೇಶಿಸಿದ್ದಾರೆ. ಅದರಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು

ಜಿಲ್ಲೆಯಲ್ಲಿ ಮತ್ತೆ ನಿಷೇಧಾಜ್ಞೆ ಮುಂದುವರಿಕೆ Read More »

ಕರಾವಳಿ

ಮನೆ ಮಂದಿಯನ್ನು ಬೆದರಿಸಿ ನಗ-ನಗದು ದರೋಡೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಜೂ.30. ಮನೆಯೊಂದರ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ವೃದ್ಧ ದಂಪತಿಯನ್ನು ಬೆದರಿಸಿ ಸುಮಾರು ಒಂದು ಲಕ್ಷ ವೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಇಂದು ಬೆಳಗ್ಗಿನ ಜಾವ ಕೊಣಾಜೆ ಗ್ರಾಮದ ನಡುಪದವಿನಲ್ಲಿ ನಡೆದಿದೆ. ದಸ್ತಾವೇಜು ಬರಹಗಾರರಾಗಿರುವ ನಡುಪದವು ನಿವಾಸಿ ಸದಾಶಿವಯ್ಯ ಎಂಬವರ ಮನೆಯಿಂದ ಈ ದರೋಡೆ ನಡೆದಿದೆ. ಸುಮಾರು 30 ಸಾವಿರ ರೂ. ನಗದು ಹಾಗೂ 20 ಗ್ರಾಮ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳರು ಮನೆಯ

ಮನೆ ಮಂದಿಯನ್ನು ಬೆದರಿಸಿ ನಗ-ನಗದು ದರೋಡೆ Read More »

ಕರಾವಳಿ

ಹದಿಹರೆಯದ ಮಕ್ಕಳು ಹಾದಿ ತಪ್ಪದಂತೆ ಜಾಗ್ರತೆ ವಹಿಸಬೇಕೇ…?

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.30. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಾಹ್ಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಕರೆ ನೀಡಿದ್ದಾರೆ. ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಮಾನಸಿಕ ವಿಭಾಗ) ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು

ಹದಿಹರೆಯದ ಮಕ್ಕಳು ಹಾದಿ ತಪ್ಪದಂತೆ ಜಾಗ್ರತೆ ವಹಿಸಬೇಕೇ…? Read More »

ಕರಾವಳಿ

ಜಿಲ್ಲೆಯ ಪೊಲೀಸರಿಗಿಂತ ಮೊದಲು ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿ: ಹರಿಕೃಷ್ಣ ಬಂಟ್ವಾಳ್ ಕಿಡಿ

(ನ್ಯೂಸ್ ಕಡಬ) newskadaba.com ಜೂ.29. ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಗಲಭೆಗಳು ಮತ್ತು ಕೋಮು ಹಿಂಸಾಚಾರಗಳಿಗೆ ಪೊಲೀಸರನ್ನು ಮಾತ್ರ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಇದರಿಂದ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ. ಎಲ್ಲದಕ್ಕೂ ಮೊದಲು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿದರೆ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಸಂಸ್ಕಾರವೆಂಬುದು ಇದ್ದರೆ, ಈ ಮಣ್ಣಿನ ಸಂಸ್ಕೃತಿ ಗೊತ್ತಿದ್ದರೆ ಕೂಡಲೇ ರಮಾನಾಥ ರೈಯವರನ್ನು

ಜಿಲ್ಲೆಯ ಪೊಲೀಸರಿಗಿಂತ ಮೊದಲು ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿ: ಹರಿಕೃಷ್ಣ ಬಂಟ್ವಾಳ್ ಕಿಡಿ Read More »

ಕರಾವಳಿ

ಕಡಬ: ವ್ಯಕ್ತಿ ಕಾಣೆ – ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.29. ಠಾಣಾ ವ್ಯಾಪ್ತಿಯ ಅಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ದುಗ್ಗಣ್ಣ ಗೌಡ ಎಂಬವರ ಪುತ್ರ ಉಮ್ಮಣ್ಣ ಗೌಡ(54) ಬುಧವಾರದಂದು ಕಡಬಕ್ಕೆಂದು ಮನೆಯಿಂದ ತೆರಳಿದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮನೆಯವರು ಸಂಬಂಧಿಕರ ಮನೆಯಲ್ಲೆಲ್ಲಾ ವಿಚಾರಿಸಿದ್ದು, ಪತ್ತೆಯಾಗದೆ ಇರುವುದರಿಂದ ಉಮ್ಮಣ್ಣ ಗೌಡರ ತಮ್ಮ ಉಮೇಶ್ ಗೌಡ ಗುರುವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾದವರ ಚಹರೆ: 5’6″ ಎತ್ತರವಾಗಿದ್ದು, ಸಪೂರ ಶರೀರ, ಬಿಳಿ ತಲೆಗೂದಲನ್ನು ಹೊಂದಿರುತ್ತಾರೆ. ಎಣ್ಣಿ ಕಪ್ಪು ಮೈಬಣ್ಣ ಹೊಂದಿದ್ದು,

ಕಡಬ: ವ್ಯಕ್ತಿ ಕಾಣೆ – ದೂರು Read More »

ಕರಾವಳಿ

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಕೋರೆ ಮಾಲಿಕನೋರ್ವನ ಮೇಲೆ ರೌಡಿ ಬ್ಲೇಡ್ ಸಾದಿಕ್ ಹಾಗೂ ತಂಡ ದಾಳಿ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ಬುಧವಾರ ಸಂಜೆ ನಡೆದಿದೆ. ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಕಾರಿನಲ್ಲಿ ಬಂದ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬ್ಲೇಡ್ ಸಾದಿಕ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಆತನ ಐವರು ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದಾರೆ. ಗಾಯಾಳು ಖಾದರ್ ನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್ Read More »

ಕರಾವಳಿ

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.28. ಪ್ರವಾಸಕ್ಕೆಂದು ಬಂದಿದ್ದ ತುಮಕೂರು ಮೂಲದ ಇಬ್ಬರು ಯುವಕರು ಸಮುದ್ರ ಸ್ನಾನಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾದ ಘಟನೆ ಉಳ್ಳಾಲದ ಮೊಗವೀರಪಟ್ನದಲ್ಲಿ ಇಂದು ಬೆಳಗ್ಗೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಗಳಾದ ಅಯಾಝ್(19) ಹಾಗೂ ಶಾರೂಕ್(19) ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾದವರಾಗಿದ್ದಾರೆ. ಉಳ್ಳಾಲ ದರ್ಗಾಕ್ಕೆ ಆಗಮಿಸಿದ್ದ ಇವರು ಸ್ನಾನಕ್ಕೆಂದು ಸಮುದ್ರಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾದರೆನ್ನಲಾಗಿದೆ. ಇದೇ ವೇಳೆ ಸಮುದ್ರಪಾಲಾಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಅವರನ್ನು

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು Read More »

ಕರಾವಳಿ

ಬೆಳಂದೂರು ಕಾಲೇಜು ಹೋರಾಟಗಾರ ಸಿ.ಪಿ. ಜಯರಾಮ ಗೌಡ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಪುತ್ತೂರು ತಾಲೂಕು ಚಾರ್ವಾಕ ಗ್ರಾಮದ ಅರುವ ನಿವಾಸಿ ಸಿ.ಪಿ.ಜಯರಾಮ ಗೌಡರು ಬುಧವಾರದಂದು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದು, ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐಯ ಸಂಚಾಲಕರೂ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಮಿತಿಯ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಸಿ.ಪಿ.ಜಯರಾಮ ಗೌಡರು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು.

ಬೆಳಂದೂರು ಕಾಲೇಜು ಹೋರಾಟಗಾರ ಸಿ.ಪಿ. ಜಯರಾಮ ಗೌಡ ಇನ್ನಿಲ್ಲ Read More »

ಕರಾವಳಿ
Scroll to Top