ಜಿಲ್ಲೆಯ ಪೊಲೀಸರಿಗಿಂತ ಮೊದಲು ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿ: ಹರಿಕೃಷ್ಣ ಬಂಟ್ವಾಳ್ ಕಿಡಿ

(ನ್ಯೂಸ್ ಕಡಬ) newskadaba.com ಜೂ.29. ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಗಲಭೆಗಳು ಮತ್ತು ಕೋಮು ಹಿಂಸಾಚಾರಗಳಿಗೆ ಪೊಲೀಸರನ್ನು ಮಾತ್ರ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಇದರಿಂದ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ. ಎಲ್ಲದಕ್ಕೂ ಮೊದಲು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿದರೆ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಸಂಸ್ಕಾರವೆಂಬುದು ಇದ್ದರೆ, ಈ ಮಣ್ಣಿನ ಸಂಸ್ಕೃತಿ ಗೊತ್ತಿದ್ದರೆ ಕೂಡಲೇ ರಮಾನಾಥ ರೈಯವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದ್ದಾರೆ.

Scroll to Top